HOME » NEWS » National-international » YES BANK CRISIS WILL HIT UPI PHONEPE FLIPKART SWIGGY PVR AND MORE GET AFFECTED LG

YES Bank Crisis: ಯೆಸ್ ಬ್ಯಾಂಕ್ ಬಿಕ್ಕಟ್ಟು; ಫೋನ್ ಪೇಗೆ ಸಂಕಷ್ಟ; ಸ್ವಿಗ್ಗಿ, ಫ್ಲಿಪ್​ಕಾರ್ಟ್ ವಹಿವಾಟಿಗೂ ತೊಂದರೆ; ಗೂಗಲ್ ಪೇ, ಪೇಟಿಎಂ ಅಬಾಧಿತ

YES Bank: ಫೋನ್​ ಪೇ ಮಾತ್ರವಲ್ಲದೇ ಸ್ವಿಗ್ಗಿ, ಫ್ಲಿಪ್​ಕಾರ್ಟ್​​, ಮೇಕ್​​ಮೈಟ್ರಿಪ್​, ಏರ್​ಟೆಲ್​, ಜಬಾಂಗ್​, ಮಿಂತ್ರಾ, ಪಿವಿಆರ್​, ಕ್ಲಿಯರ್​ಟ್ರಿಪ್​, ರೆಡ್​​ಬಸ್ ಮತ್ತು ಹಂಗರ್​ಬಾಕ್ಸ್​​​​ ಇನ್ನೂ ಮೊದಲಾದ ಆ್ಯಪ್​ಗಳ ಮೇಲೂ ಸಹ ಪರಿಣಾಮ ಬೀರಬಹುದು. ಏಕೆಂದರೆ ಈ ಎಲ್ಲಾ ಆ್ಯಪ್​​ಗಳಿಗೂ ಯೆಸ್​ ಬ್ಯಾಂಕ್ ಯುಪಿಐ (Unified Payments Interface)​​ ಪಾಲುದಾರ ಆಗಿದೆ. ಗ್ರಾಹಕರು ಈ ಯಾವುದೇ ಆ್ಯಪ್​ ಬಳಸಿ ಶಾಪಿಂಗ್ ಮಾಡುತ್ತಿದ್ದರೆ , ಡಿಜಿಟಲ್​​ ವಹಿವಾಟು ನಡೆಸುತ್ತಿದ್ದರೆ ಅಥವಾ ಬಿಲ್​ ಪಾವತಿ ಮಾಡುತ್ತಿದ್ದರೆ ತೊಂದರೆ ಎದುರಿಸಬೇಕಾಗುತ್ತದೆ.

Latha CG | news18-kannada
Updated:March 6, 2020, 4:04 PM IST
YES Bank Crisis: ಯೆಸ್ ಬ್ಯಾಂಕ್ ಬಿಕ್ಕಟ್ಟು; ಫೋನ್ ಪೇಗೆ ಸಂಕಷ್ಟ; ಸ್ವಿಗ್ಗಿ, ಫ್ಲಿಪ್​ಕಾರ್ಟ್ ವಹಿವಾಟಿಗೂ ತೊಂದರೆ; ಗೂಗಲ್ ಪೇ, ಪೇಟಿಎಂ ಅಬಾಧಿತ
ಯೆಸ್​ ಬ್ಯಾಂಕ್​-ಫೋನ್ ಪೇ
  • Share this:
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್​ ಬ್ಯಾಂಕ್​ ಆಡಳಿತ ಮಂಡಳಿಯನ್ನು ಭಾರತೀಯ ರಿಸರ್ವ್​ ಬ್ಯಾಂಕ್​ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಮಾತ್ರವಲ್ಲದೇ ಯೆಸ್​ ಬ್ಯಾಂಕ್​ ಗ್ರಾಹಕರು ತಮ್ಮ ಖಾತೆಯಿಂದ 50 ಸಾವಿರದವರೆಗೆ ಮಾತ್ರ ಹಣ ಹಿಂಪಡೆಯಲು ಗರಿಷ್ಠ ಮಿತಿ ವಿಧಿಸಿದೆ.

ಖಾಸಗಿ ವಲಯದ ಯೆಸ್​ ಬ್ಯಾಂಕ್​ ಕೆಟ್ಟ ಸಾಲಗಳಿಂದ ದಿವಾಳಿತನಕ್ಕೆ ಸಿಲುಕಿದೆ. ಯೆಸ್​ ಬ್ಯಾಂಕ್​ ಸಂಕಷ್ಟದಲ್ಲಿರುವುದು ಅದರಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಮಾತ್ರ ಶಾಕಿಂಗ್ ಸುದ್ದಿ ಅಲ್ಲ. ಬದಲಾಗಿ ಫೋನ್​​ ಪೇಗೂ ಈಗ ತೊಂದರೆ ಎದುರಾಗಿದೆ. ಫೋನ್​ ಪೇ ಯೆಸ್​ ಬ್ಯಾಂಕ್​ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಈಗ ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವ ಯೆಸ್​ ಬ್ಯಾಂಕ್​ ಮೇಲೆ ಆರ್​ಬಿಐ ನಿಷೇಧ ಹೇರಿದ ಬಳಿಕ ಫೋನ್​ ಪೇ ಸೌಲಭ್ಯಗಳು ಸಿಗುತ್ತಿಲ್ಲ.

ಈ ಬಗ್ಗೆ ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಪೋನ್​ ಪೇ ಸಹ ಸಂಸ್ಥಾಪಕ ಮತ್ತು ಸಿಇಒ ಸಮೀರ್ ನಿಗಮ್, "ಪ್ರೀತಿಯ ಫೋನ್​ ಪೇ ಗ್ರಾಹಕರೇ, ದೀರ್ಘ ಅಡಚಣೆಗಾಗಿ ನಾವು ವಿಷಾದಿಸುತ್ತೇವೆ. ನಮ್ಮ ಪಾಲುದಾರ ಬ್ಯಾಂಕ್​ (ಯೆಸ್​ ಬ್ಯಾಂಕ್)​​ನ್ನು ಆರ್​ಬಿಐ ನಿಷೇಧಿಸಿದೆ. ಮರಳಿ ಸೇವೆಗಳನ್ನು ಮುಂದುವರೆಸಲು ನಮ್ಮ ತಂಡವು ಬಿಡುವಿಲ್ಲದೇ ಕೆಲಸ ಮಾಡುತ್ತಿದೆ. ಕೆಲವೇ ಗಂಟೆಗಳಲ್ಲಿ ಕಾರ್ಯನಿರ್ವಹಿಸುವ ಭರವಸೆ ಇದೆ" ಎಂದು ಹೇಳಿದ್ದಾರೆ.

YES Bank Crisis: ಗಾಬರಿ ಬಿದ್ದ ಜನರ ಪರದಾಟ; ಬೆಂಗಳೂರಿನ ವಿವಿಧ ಯೆಸ್ ಬ್ಯಾಂಕ್, ಎಟಿಎಂಗಳಲ್ಲಿ ಉದ್ದುದ್ದ ಕ್ಯೂ

ಫೋನ್​ ಪೇ ಮಾತ್ರವಲ್ಲದೇ ಸ್ವಿಗ್ಗಿ, ಫ್ಲಿಪ್​ಕಾರ್ಟ್​​, ಮೇಕ್​​ಮೈಟ್ರಿಪ್​, ಏರ್​ಟೆಲ್​, ಜಬಾಂಗ್​, ಮಿಂತ್ರಾ, ಪಿವಿಆರ್​, ಕ್ಲಿಯರ್​ಟ್ರಿಪ್​, ರೆಡ್​​ಬಸ್ ಮತ್ತು ಹಂಗರ್​ಬಾಕ್ಸ್​​​​ ಇನ್ನೂ ಮೊದಲಾದ ಆ್ಯಪ್​ಗಳ ಮೇಲೂ ಸಹ ಪರಿಣಾಮ ಬೀರಬಹುದು. ಏಕೆಂದರೆ ಈ ಎಲ್ಲಾ ಆ್ಯಪ್​​ಗಳಿಗೂ ಯೆಸ್​ ಬ್ಯಾಂಕ್ ಯುಪಿಐ (Unified Payments Interface)​​ ಪಾಲುದಾರ ಆಗಿದೆ. ಗ್ರಾಹಕರು ಈ ಯಾವುದೇ ಆ್ಯಪ್​ ಬಳಸಿ ಶಾಪಿಂಗ್ ಮಾಡುತ್ತಿದ್ದರೆ , ಡಿಜಿಟಲ್​​ ವಹಿವಾಟು ನಡೆಸುತ್ತಿದ್ದರೆ ಅಥವಾ ಬಿಲ್​ ಪಾವತಿ ಮಾಡುತ್ತಿದ್ದರೆ ತೊಂದರೆ ಎದುರಿಸಬೇಕಾಗುತ್ತದೆ.

ಗೂಗಲ್​ ಪೇ ಮತ್ತು ಟ್ರೂ ಕಾಲರ್ ಆ್ಯಪ್​ಗಳು ಮಾತ್ರ ಭಾರತದಲ್ಲಿ ವಿವಿಧ ಯುಪಿಐ ಪಾಲುದಾರರನ್ನು ಹೊಂದಿವೆ. ಗೂಗಲ್​ ಪೇ ಆಕ್ಸಿಸ್​ ಬ್ಯಾಂಕ್​, ಎಚ್​ಡಿಎಫ್​ಸಿ ಬ್ಯಾಂಕ್​, ಐಸಿಐಸಿಐ ಬ್ಯಾಂಕ್​​ ಮತ್ತು ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ ಜೊತೆ ಯುಪಿಐ ಸೇವೆಯನ್ನು ಪಡೆಯುತ್ತದೆ. ಟ್ರೂ ಕಾಲರ್​ ಐಸಿಐಸಿಐ ಮತ್ತು ಬ್ಯಾಂಕ್​ ಆಫ್​ ಬರೋಡ ಜೊತೆ ಯುಪಿಐ ಸೇವೆಯನ್ನು ಪಡೆಯುತ್ತದೆ. ಇನ್ನು, ಹೊಸದಾಗಿ ಪರಿಚಯವಾಗಿರುವ ವಾಟ್ಸ್​​​ಆ್ಯಪ್​ ಪೇ ​ ಸೇವೆ ಐಸಿಐಸಿಐ ಬ್ಯಾಂಕ್​ನ ಯುಪಿಐ ಸೇವೆಯನ್ನು ಬಳಸಿಕೊಳ್ಳುತ್ತಿದೆ.

YES Bank Crisis | ಹಣ ಸುರಕ್ಷಿತವಾಗಿದೆ; ಹೂಡಿಕೆದಾರರಿಗೆ ಭರವಸೆ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
First published: March 6, 2020, 4:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories