ಯೆಸ್​ ಬ್ಯಾಂಕ್ ಮೇಲಿನ ನಿರ್ಬಂಧ ಹಿಂಪಡೆಯಲಿರುವ ಆರ್​ಬಿಐ; ಇಂದಿನಿಂದ ಎಲ್ಲ ಶಾಖೆಗಳಲ್ಲೂ ಕೆಲಸ ಆರಂಭ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಯೆಸ್​ ಬ್ಯಾಂಕ್​ನ ಪ್ರತಿ ಷೇರಿಗೆ 10 ರೂಪಾಯಿಯಂತೆ ಒಟ್ಟು 725 ಕೋಟಿ ಷೇರುಗಳನ್ನು ಖರೀದಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಯೆಸ್​ ಬ್ಯಾಂಕ್​ ಷೇರು ಮೌಲ್ಯ ಶೇ. 58 ಏರಿಕೆಯಾಗಿ ಚೇತರಿಕೆ ಕಂಡಿತ್ತು.

ಯೆಸ್​ ಬ್ಯಾಂಕ್​

ಯೆಸ್​ ಬ್ಯಾಂಕ್​

 • Share this:
  ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಯೆಸ್​ ಬ್ಯಾಂಕ್ ಇಂದಿನಿಂದ ಕಾರ್ಯಾರಂಭ ಮಾಡಲಿದೆ. ಬ್ಯಾಂಕ್​ ಎಲ್ಲ ಶಾಖೆಗಳು ಮತ್ತು ಎಟಿಎಂಗಳು ತೆರೆಯಲಿವೆ. ಬ್ಯಾಂಕ್​ ಮೇಲೆ ಆರ್​ಬಿಐ ಹೇರಿದ್ದ ನಿರ್ಬಂಧವನ್ನು ಹಿಂಪಡೆಯಲಿದೆ.

  ಬ್ಯಾಂಕಿನ ಎಲ್ಲ ಸೇವೆಗಳು ಇಂದು ಸಂಜೆ 6ರಿಂದ ಆರಂಭವಾಗಲಿವೆ. ಮಾರ್ಚ್ 19ರಿಂದ ನಮ್ಮ 1,132 ಶಾಖೆಗಳಲ್ಲಿ ಯಾವುದೇ ಶಾಖೆಗೆ ಭೇಟಿ ನೀಡಿ, ಸೇವೆ ಪಡೆಯಿರಿ. ನಮ್ಮ ಎಲ್ಲ ಡಿಜಿಟಲ್ ಸೇವೆಗಳು ಹಾಗೂ ಪ್ಲಾಟ್​ಫಾರ್ಮ್​ಗಳೂ ಸೇವೆಗೆ ತೆರೆದುಕೊಳ್ಳಲಿವೆ ಎಂದು ಯೆಸ್​ ಬ್ಯಾಂಕ್​ ಸಿಇಒ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

  ಯೋಜನೆಯಂತೆ ಶೇ.49ರಷ್ಟು ಷೇರು ಖರೀದಿಸಲಿರುವ ಎಸ್​ಬಿಐ ಮೂರು ವರ್ಷಗಳವರೆಗೆ ಷೇರುಪಾಲನ್ನು ಶೇ.26ಕ್ಕಿಂತಲೂ ಕೆಳಗೆ ಇಳಿಸುವಂತಿಲ್ಲ. ಇತರೆ ಹೂಡಿಕೆದಾರರು ಮತ್ತು ಹಾಲಿ ಷೇರುದಾರರು ಬ್ಯಾಂಕ್​ನಲ್ಲಿ ಶೇ.75ರಷ್ಟು ಷೇರುಪಾಲನ್ನು ಮೂರು ವರ್ಷಗಳ ಅವಧಿಗೆ (ಲಾಕ್ ಇನ್​ ಪರಿಯಡ್) ತೆಗೆಯುವಂತಿಲ್ಲ. 100ಕ್ಕಿಂತಲೂ ಕಡಿಮೆ ಷೇರು ಹೊಂದಿರುವವರಿಗೆ ಇದು ಅನ್ವಯವಾಗುವುದಿಲ್ಲ.

  ಇದನ್ನು ಓದಿ: ಯೆಸ್ ಬ್ಯಾಂಕ್ ಹಗರಣ: ಅನಿಲ್ ಅಂಬಾನಿಗೆ ಇಡಿ ಸಮನ್ಸ್

  ಯೆಸ್​ ಬ್ಯಾಂಕ್​ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಬ್ಯಾಂಕ್ ವಹಿವಾಟನ್ನು ಆರ್​ಬಿಐ ಮುಟ್ಟುಗೊಲು ಹಾಕಿಕೊಂಡು ಸೂಪರ್​ಸಿಡ್​ ಮಾಡಿತ್ತು. ಈ ವೇಳೆ​ ಸಹಾಯಕ್ಕೆ ಬಂದ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಯೆಸ್​ ಬ್ಯಾಂಕ್​ನ ಪ್ರತಿ ಷೇರಿಗೆ 10 ರೂಪಾಯಿಯಂತೆ ಒಟ್ಟು 725 ಕೋಟಿ ಷೇರುಗಳನ್ನು ಖರೀದಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಯೆಸ್​ ಬ್ಯಾಂಕ್​ ಷೇರು ಮೌಲ್ಯ ಶೇ. 58 ಏರಿಕೆಯಾಗಿ ಚೇತರಿಕೆ ಕಂಡಿತ್ತು. ಬ್ಯಾಂಕ್ ಚೇತರಿಕೆಗೆ ಆರ್​ಬಿಐ ಬ್ಯಾಂಕ್ ಪುನಶ್ಚೇತನ ಕರಡು ನೀತಿಯನ್ನು ಜಾರಿಗೆ ತಂದಿತ್ತು. ಇದೀಗ ಬ್ಯಾಂಕ್ ಅಲ್ಪಪ್ರಮಾಣದಲ್ಲಿ ಚೇತರಿಸಿಕೊಂಡಿದ್ದು, ಇಂದಿನಿಂದ ವಹಿವಾಟು ಆರಂಭಿಸಲಿದೆ.
  First published: