ಪೂರ್ಣ ಹಣದೊಂದಿಗೆ ನಾಳೆಯಿಂದ ವಹಿವಾಟು ಆರಂಭಿಸಲಿವೆ ಯೆಸ್ ಬ್ಯಾಂಕ್​ ಎಟಿಎಂ, ಶಾಖೆಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಯೆಸ್​ ಬ್ಯಾಂಕ್​ನ ಪ್ರತಿ ಷೇರಿಗೆ 10 ರೂಪಾಯಿಯಂತೆ ಒಟ್ಟು 725 ಕೋಟಿ ಷೇರುಗಳನ್ನು ಖರೀದಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಯೆಸ್​ ಬ್ಯಾಂಕ್​ ಷೇರು ಮೌಲ್ಯ ಶೇ. 58 ಏರಿಕೆಯಾಗಿ ಚೇತರಿಕೆ ಕಂಡಿತ್ತು.

ಯೆಸ್​ ಬ್ಯಾಂಕ್​

ಯೆಸ್​ ಬ್ಯಾಂಕ್​

 • Share this:
  ನವದೆಹಲಿ: ಆರ್ಥಿಕ ಸಂಕಷ್ಟ ಸುಳಿಗೆ ಸಿಲುಕಿರುವ ಯೆಸ್​ ಬ್ಯಾಂಕ್​ನ ಎಲ್ಲ ಎಟಿಎಂಗಳು ಮತ್ತು ಶಾಖೆಗಳು ನಾಳೆಯಿಂದ ಪುನರಾರಂಭಗೊಳ್ಳಲಿವೆ ಎಂದು ಬ್ಯಾಂಕ್​ ಇಂದು ಘೋಷಿಸಿದೆ.

  ಎಲ್ಲ ಎಟಿಎಂಗಳಲ್ಲೂ ಪೂರ್ಣ ಹಣ ಇರಲಿದೆ. ಎಲ್ಲ ಶಾಖೆಗಳಿಗೂ ಹಣ ಸಾಕಷ್ಟು ಹಣ ಪೂರೈಕೆ ಮಾಡಲಾಗಿದೆ ಎಂದು ಯೆಸ್​ ಬ್ಯಾಂಕ್ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

  ಯೆಸ್​ ಬ್ಯಾಂಕ್​ನಿಂದ 50 ಸಾವಿರ ಹಣ ಹಿಂಪಡೆಯುವಿಕೆಗೆ ಆರ್​ಬಿಐ ಮಾರ್ಚ್ 5ರಂದು ವಿಧಿಸಿದ್ದ ನಿರ್ಬಂಧ ನಾಳೆ ಆರು ಗಂಟೆಯಿಂದ ತೆರವಾಗಲಿದೆ. ನಾಳೆ ಸಂಜೆಯೊಳಗೆ ಬ್ಯಾಂಕ್​ ಮೇಲೆ ವಿಧಿಸಿರುವ ಸಂಪೂರ್ಣ ನಿರ್ಬಂಧ ಸಡಿಲಿಕೆಯಾಗಲಿದೆ. ನಮ್ಮ ಎಲ್ಲಾ ಗ್ರಾಹಕರು ಸಂಪೂರ್ಣ ಬ್ಯಾಂಕಿಂಗ್ ಸೇವೆಯನ್ನು ಆನಂದಿಸಬಹುದು ಎಂದು ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

  ಇದನ್ನು ಓದಿ: ಯೆಸ್ ಬ್ಯಾಂಕ್ ಗ್ರಾಹಕರಿಗೆ ನಿರಾಳ; ಬುಧವಾರದಿಂದ ಮತ್ತೆ ಕಾರ್ಯಾರಂಭ ಮಾಡಲಿದೆ ಬ್ಯಾಂಕ್

  ಯೆಸ್​ ಬ್ಯಾಂಕ್​ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಬ್ಯಾಂಕ್ ವಹಿವಾಟನ್ನು ಆರ್​ಬಿಐ ಮುಟ್ಟುಗೊಲು ಹಾಕಿಕೊಂಡು ಸೂಪರ್​ಸಿಡ್​ ಮಾಡಿತ್ತು. ಈ ವೇಳೆ​ ಸಹಾಯಕ್ಕೆ ಬಂದ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಯೆಸ್​ ಬ್ಯಾಂಕ್​ನ ಪ್ರತಿ ಷೇರಿಗೆ 10 ರೂಪಾಯಿಯಂತೆ ಒಟ್ಟು 725 ಕೋಟಿ ಷೇರುಗಳನ್ನು ಖರೀದಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಯೆಸ್​ ಬ್ಯಾಂಕ್​ ಷೇರು ಮೌಲ್ಯ ಶೇ. 58 ಏರಿಕೆಯಾಗಿ ಚೇತರಿಕೆ ಕಂಡಿತ್ತು. ಬ್ಯಾಂಕ್ ಚೇತರಿಕೆಗೆ ಆರ್​ಬಿಐ ಬ್ಯಾಂಕ್ ಪುನಶ್ಚೇತನ ಕರಡು ನೀತಿಯನ್ನು ಜಾರಿಗೆ ತಂದಿತ್ತು. ಇದೀಗ ಬ್ಯಾಂಕ್ ಅಲ್ಪಪ್ರಮಾಣದಲ್ಲಿ ಚೇತರಿಸಿಕೊಂಡಿದ್ದು, ನಾಳೆಯಿಂದ ವಹಿವಾಟು ಆರಂಭಿಸಲಿದೆ.
  First published: