Queen Elizabeth II: ರಾಣಿಯ ಆತ್ಮಶಾಂತಿಗೆ ಮೆಕ್ಕಾ ತೀರ್ಥಯಾತ್ರೆ ಕೈಗೊಂಡ ವ್ಯಕ್ತಿ ಅರೆಸ್ಟ್!

ಎಲಿಜಬೆತ್ II ಆತ್ಮಶಾಂತಿಗಾಗಿ ಉಮ್ರಾ ಯಾತ್ರೆ ಮಾಡಲು ಮುಸ್ಲಿಮರ ಪವಿತ್ರ ನಗರವಾದ ಮೆಕ್ಕಾಕ್ಕೆ ಪ್ರಯಾಣಿಸಿರುವುದಾಗಿ ಹೇಳಿಕೊಂಡ ವ್ಯಕ್ತಿಯನ್ನು ಸೌದಿ ಅಧಿಕಾರಿಗಳು ಬಂಧಿಸಿದ್ದಾರೆ. ಮಕ್ಕಾದ ಗ್ರ್ಯಾಂಡ್ ಮಸೀದಿಯ ಅಂಗಳದಲ್ಲಿ ಯೆಮೆನ್ ನಿವಾಸಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಸೌದಿ ಸಾರ್ವಜನಿಕ ಭದ್ರತಾ ನಿರ್ದೇಶನಾಲಯ ಮಂಗಳವಾರ ಪ್ರಕಟಿಸಿದೆ.

ಉಮ್ರಾ ಯಾತ್ರೆ ಕೈಗೊಂಡ ವ್ಯಕ್ತಿಯ ಬಂಧನ

ಉಮ್ರಾ ಯಾತ್ರೆ ಕೈಗೊಂಡ ವ್ಯಕ್ತಿಯ ಬಂಧನ

  • Share this:
ದಿವಂಗತ ರಾಣಿ ಎಲಿಜಬೆತ್ II (Queen Elizabeth II) ಆತ್ಮಶಾಂತಿಗಾಗಿ ಉಮ್ರಾ ಯಾತ್ರೆ ಮಾಡಲು ಮುಸ್ಲಿಮರ ಪವಿತ್ರ ನಗರವಾದ ಮೆಕ್ಕಾಕ್ಕೆ (Mecca) ಪ್ರಯಾಣಿಸಿರುವುದಾಗಿ ಹೇಳಿಕೊಂಡ ವ್ಯಕ್ತಿಯನ್ನು ಸೌದಿ ಅಧಿಕಾರಿಗಳು ಬಂಧಿಸಿದ್ದಾರೆ. ಮಕ್ಕಾದ ಗ್ರ್ಯಾಂಡ್ ಮಸೀದಿಯ ಅಂಗಳದಲ್ಲಿ ಯೆಮೆನ್ (Yemen) ನಿವಾಸಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಸೌದಿ ಸಾರ್ವಜನಿಕ ಭದ್ರತಾ ನಿರ್ದೇಶನಾಲಯ ಮಂಗಳವಾರ ಪ್ರಕಟಿಸಿದೆ. ಸೌದಿ ಸಾರ್ವಜನಿಕ ಭದ್ರತಾ ನಿರ್ದೇಶನಾಲಯವು ಟ್ವಿಟ್ಟರ್ ನಲ್ಲಿ ಈ ಬಗ್ಗೆ ತಿಳಿಸಿದೆ. ಉಮ್ರಾ ಮತ್ತು ಸೂಚನೆಗಳನ್ನು ಉಲ್ಲಂಘಿಸಿ, ಗ್ರ್ಯಾಂಡ್ ಮಸೀದಿಯೊಳಗೆ (Grand Mosque) ಬ್ಯಾನರ್ ಹಿಡಿದುಕೊಂಡು ಬಂದ ವ್ಯಕ್ತಿಯ ವಿಡಿಯೋ ಕ್ಲಿಪ್ ಗಳನ್ನು ನೋಡಿದ ನಂತರ ಗ್ರ್ಯಾಂಡ್ ಮಸೀದಿಯ ಭದ್ರತೆಗಾಗಿ ಯಾತ್ರಿಕನನ್ನು ವಿಶೇಷ ಪಡೆ ಬಂಧಿಸಿದೆ ಎಂದು ಇಲಾಖೆ ಟ್ವೀಟ್‌ (Tweet) ಮಾಡಿದೆ.

ನಿಯಮ ಉಲ್ಲಂಘಿಸಿದ್ದಕ್ಕೆ ಕ್ರಮ
ಯೆಮೆನ್ ಪ್ರಜೆಯಾದ ವ್ಯಕ್ತಿ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಇಸ್ಲಾಂ ಧರ್ಮದ ಪವಿತ್ರ ತಾಣವಾದ ಮೆಕ್ಕಾದಲ್ಲಿನ ಗ್ರ್ಯಾಂಡ್ ಮಸೀದಿಯಲ್ಲಿ ದಿವಂಗತ ರಾಣಿ ಎಲಿಜಬೆತ್ II ಆತ್ಮಶಾಂತಿಗಾಗಿ ಉಮ್ರಾ ಯಾತ್ರೆ ಕೈಗೊಂಡಿದ್ದೇನೆ ಎಂಬ ಬ್ಯಾನರ್‌ ಅನ್ನು ಪ್ರದರ್ಶಿಸುವ ವಿಡಿಯೋವನ್ನು ಹರಿ ಬಿಟ್ಟಿದ್ದನು. ಈ ವಿಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಕೂಡ ಆಯಿತು ಮತ್ತು ಆತನ ಬಂಧನಕ್ಕೆ ಒತ್ತಾಯಿಸಲಾಯಿತು.
ಸೌದಿ ಅರೇಬಿಯಾವು ಮೆಕ್ಕಾಗೆ ಯಾತ್ರಿಕರು ಬ್ಯಾನರ್‌ಗಳನ್ನು ಅಥವಾ ಘೋಷಣೆಗಳನ್ನು ಹಾಕುವುದನ್ನು ನಿಷೇಧಿಸಿದೆ. ಹೀಗಾಗಿ ಈ ನಿಯಮಗಳನ್ವಯ ಬ್ಯಾನರ್‌ ಹಿಡಿದು ಬಂದಿದ್ದ ಯೆಮನ್‌ ವ್ಯಕ್ತಿಯನ್ನು ಬಂಧಿಸಲಾಗಿದೆ.ವಿಡಿಯೋ ಕ್ಲಿಪ್‌ನಲ್ಲಿ, ಯೆಮೆನ್ ನಿವಾಸಿಯು ಇಹ್ರಾಮ್ ಧರಿಸಿ ಮತ್ತು ಅರೇಬಿಕ್ ಮತ್ತು ಇಂಗ್ಲಿಷ್‌ನಲ್ಲಿ 'ರಾಣಿ ಎಲಿಜಬೆತ್ II ರ ಆತ್ಮಕ್ಕಾಗಿ ಉಮ್ರಾ' ಎಂದು ಬರೆಯುವ ಬಟ್ಟೆಯ ಬ್ಯಾನರ್‌ ಹಿಡಿದು ಪ್ರದರ್ಶಿಸಿದ್ದಾನೆ. ಅಲ್ಲದೇ ವಿಡಿಯೋದಲ್ಲಿ ಮಾತನಾಡಿದ ವ್ಯಕ್ತಿ ರಾಣಿ ಎಲಿಜಬೆತ್ IIರ ಆತ್ಮಶಾಂತಿಗಾಗಿ ಉಮ್ರಾ ಯಾತ್ರೆ ಕೈಗೊಂಡಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಸ್ವರ್ಗವಾಸಿಯಾಗಲೆಂದು ಬಯಸುತ್ತೇನೆ ಎಂದು ವಿಡಿಯೋದಲ್ಲಿ ಮಾತನಾಡಿದ್ದನು.

ಇದನ್ನೂ ಓದಿ: Queen Elizabeth II: ಆ ಕಾರಣದಿಂದ ಮೂರು ದಶಕದ ಹಿಂದೆಯೇ ತಯಾರಾಗಿತ್ತು ರಾಣಿಯ ಶವಪೆಟ್ಟಿಗೆ! 

ಇಲ್ಲಿ ಸತ್ತ ಮುಸ್ಲಿಮರ ಪರವಾಗಿ ಉಮ್ರಾ ಮಾಡುವುದು ಸ್ವೀಕಾರಾರ್ಹವಾಗಿದ್ದರೂ, ಇದು ರಾಣಿಯಂತಹ ಮುಸ್ಲಿಮೇತರರಿಗೆ ಅನ್ವಯಿಸುವುದಿಲ್ಲ, ಅವರು ಚರ್ಚ್ ಆಫ್ ಇಂಗ್ಲೆಂಡ್‌ನ ಸರ್ವೋಚ್ಚ ಗವರ್ನರ್ ಆಗಿದ್ದರೂ ಸಹ ಮಸೀದಿಗೆ ಸಂಬಂಧಿಸಿದ ನಿಯಮಗಳಡಿ ಇದು ವಿರುದ್ಧವಾಗಿದೆ.

ವ್ಯಾಪಕ ವಿವಾದವ ಸೃಷ್ಟಿಸಿದ ಉಮ್ರಾ ಯಾತ್ರೆ
ಈ ಘಟನೆಯು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕ ವಿವಾದವನ್ನು ಹುಟ್ಟುಹಾಕಿತು ಮತ್ತು ಹ್ಯಾಶ್‌ಟ್ಯಾಗ್ ಮೂಲಕ ವೈರಲ್‌ ಕೂಡ ಆಗಿತ್ತು. ಈ ಸಮಯದಲ್ಲಿ ಟ್ವೀಟರ್‌ಗಳು ರಾಣಿಯ ಆತ್ಮಕ್ಕಾಗಿ ಉಮ್ರಾ ಮಾಡಿದ ನಿವಾಸಿಯನ್ನು ಬಂಧಿಸುವಂತೆ ಒತ್ತಾಯಿಸಿದರು, ಪವಿತ್ರ ಸ್ಥಳಗಳು ರಾಜಕೀಯ ವಿಮರ್ಶೆಗೆ ಅಖಾಡವಲ್ಲ, ಕೂಡಲೇ ಆತನನ್ನು ಬಂಧಿಸಿ ಶಿಕ್ಷೆ ನೀಡಿ ಎಂದು ನೆಟ್ಟಿಗರು ಆಗ್ರಹಿಸಿದರು. ನಂತರ ಪೊಲೀಸರು ವ್ಯಕ್ತಿಯನ್ನು ಬಂಧಿಸಿ ಕಸ್ಟಡಿಗೆ ನೀಡಿದರು. ವಿವಾದಾತ್ಮಕ ವಿಡಿಯೋ ಕ್ಲಿಪ್ ಅನ್ನು ಒಳಗೊಂಡಿರುವ ಘಟನೆಯ ಕುರಿತು ಮುಸುಕಾದ ಬ್ಯಾನರ್‌ ಫೋಟೋಗಳ ಜೊತೆ ಸುದ್ದಿಯನ್ನು ಪ್ರಸಾರ ಮಾಡಲಾಯಿತು.

ಇದನ್ನೂ ಓದಿ:  King Charles III: ಬ್ರಿಟನ್ ರಾಜನಾದ ಚಾರ್ಲ್ಸ್, ರಾಜಮನೆತನದಿಂದ ಅಧಿಕೃತ ಘೋಷಣೆ

ಇನ್ನೂ ಉಮ್ರಾವು ಯಾವುದೇ ಸಮಯದಲ್ಲಿ ಕೈಗೊಳ್ಳಬಹುದಾದ ಮುಸ್ಲಿಮರ ತೀರ್ಥಯಾತ್ರೆಯಾಗಿದೆ. ಇದು ಹಜ್‌ಗಿಂತ ಭಿನ್ನವಾಗಿದ್ದು, ವರ್ಷಕೊಮ್ಮೆ ನಡೆಯುತ್ತದೆ. ಸಾಮಾನ್ಯವಾಗಿ ಜಗತ್ತಿನಾದ್ಯಂತ ಲಕ್ಷಾಂತರ ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಗುರುವಾರ, ಸೆಪ್ಟೆಂಬರ್ 8 ರಂದು, ಬ್ರಿಟನ್‌ನ ಅತ್ಯಂತ ದೀರ್ಘಾವಧಿ ರಾಣಿ ಎನಿಸಿದ್ದ ಕ್ವೀನ್ ಎಲಿಜಬೆತ್ II ಅವರು 96ನೇ ವಯಸ್ಸಿನಲ್ಲಿ ಗುರುವಾರ ನಿಧನರಾರದು. ಬ್ರಿಟನ್‌ನ ಬಲ್‌ಮೋರಾಲ್‌ನಲ್ಲಿ ಸೂಕ್ತ ವೈದ್ಯಕೀಯ ನಿಗಾದಡಿ ಇದ್ದ ರಾಣಿ ಎಲಿಜಬೆತ್- II ಅವರು ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಜೀವನ ಪ್ರಯಾಣವನ್ನು ಕೊನೆಗೊಳಿಸಿದರು
Published by:Ashwini Prabhu
First published: