ರಾತ್ರೋರಾತ್ರಿ ಫೇಮಸ್ ಆದ ಮತಗಟ್ಟೆ ಅಧಿಕಾರಿ: ಹಳದಿ ಸೀರೆಯಲ್ಲಿ ಮಿಂಚಿದ ಈ ಸುಂದರಿ ಯಾರು?

ಕಚೇರಿಗೆ ಸುಂದರವಾಗಿ ರೆಡಿಯಾಗಿ ಬರುವುದು ನನ್ನ ಅಭ್ಯಾಸ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕ್ತಿರುತ್ತೇನೆ ಎಂಬುದಾಗಿಯೂ ರೀನಾ ಹೇಳಿಕೊಂಡಿದ್ದಾರೆ.

Reena Dwivedi

Reena Dwivedi

  • News18
  • Last Updated :
  • Share this:
ಲಕ್ನೋ(ಮೇ.14): ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಆಕರ್ಷಕ ಯುವತಿಯರು ರಾತ್ರೋರಾತ್ರಿ ಫೇಮಸ್ ಆಗುತ್ತಿರುತ್ತಾರೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆಯೇ ಮತಗಟ್ಟೆ ಮಹಿಳಾ ಅಧಿಕಾರಿ. ಲೋಕಸಭಾ ಚುನಾವಣೆ ಮತದಾನದ ವೇಳೆ ಹಳದಿ ಸೀರೆಯುಟ್ಟ ಈ ಮಹಿಳೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರೋ ಸುಂದರಿ.

ಫೇಸ್ಬುಕ್, ವಾಟ್ಸಪ್, ಇನ್ಸ್ಟ್ರಾಗ್ರಾಮ್ ಸೇರಿದಂತೆ ಟಿಕ್ ಟಾಕ್ ನಲ್ಲಿ ಕೂಡ ಮಹಿಳೆ ಪ್ರಸಿದ್ಧಿ ಪಡೆಯುತ್ತಿದ್ದಾರೆ. ಈಕೆ ಹೆಸರು ರೀನಾ ದ್ವಿವೇದಿ. ಮೂಲತಃ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆ ನಿವಾಸಿಯಾದ ಇವರು ಹೇಗೆ ಫೇಮಸ್​​ ಆದ್ರು ಎಂಬುದನ್ನು ಮಾಧ್ಯಮವೊಂದರ ಜೊತೆ ಬಿಚ್ಚಿಟ್ಟಿದ್ಧಾರೆ.

"ನಾನು ಲಕ್ನೋದ ಪಿಡಬ್ಲ್ಯೂಡಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. 2004ರಲ್ಲಿ ಅದೇ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಸಂಜಯ್ ಎಂಬುವರನ್ನು ಮದುವೆಯಾಗಿದ್ದೇನೆ. ಈಗ ನನಗೆ 13 ವರ್ಷದ ಮಗ ಇದ್ದಾನೆ. ಬಾಲ್ಯದಿಂದಲೂ ಫಿಟ್‌ನೆಸ್​ಗೆ ಮಹತ್ವ ನೀಡುತ್ತಿದ್ದೇನೆ. ನನ್ನ ಬಟ್ಟೆಗಳನ್ನು ಆಲೋಚನೆ ಮಾಡಿ ಆಯ್ಕೆ ಮಾಡುತ್ತೇನೆ. ಹಾಗಾಗಿಯೇ ನಾನು ಸುಂದರವಾಗಿ ಕಾಣ್ತೇನೆ ಎನ್ನುತ್ತಾರೆ ರೀನಾ.

ಇದನ್ನೂ ಓದಿ: 'ಸುಧಾರಿತ ಜೀವನಕ್ಕಾಗಿ 6 ದಿನ, ಆರು ಸಲ ಲೈಂಗಿಕ ಕ್ರಿಯೆ ನಡೆಸಿ'; ಅಲಿಬಾಬ ಜಾಕ್​​ ಮಾ ಸಲಹೆ

ಕಚೇರಿಗೆ ಸುಂದರವಾಗಿ ರೆಡಿಯಾಗಿ ಬರುವುದು ನನ್ನ ಅಭ್ಯಾಸ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕ್ತಿರುತ್ತೇನೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ. ಅಲ್ಲದೇ ಇವರಿಗೆ ಭೋಜ್‌ಪುರಿ ಚಿತ್ರದಲ್ಲೂ ನಟಿಸಲು ಅವಕಾಶ ಸಿಕ್ಕಿತ್ತಂತೆ. ಆದರೆ, ಮಗನ ವಿದ್ಯಾಭ್ಯಾಸಕ್ಕಾಗಿ ಆಫರ್ ತಿರಸ್ಕರಿಸಿದ್ದೇನೆ ಎಂದಿದ್ದಾರೆ.
First published: