ಕೋವಿಡ್​ ಪ್ರಕರಣದಲ್ಲಿ ಏರಿಕೆ; ದೆಹಲಿಯಲ್ಲಿ Yellow alert ಜಾರಿ; ಏನಿದು ಹಳದಿ ಎಚ್ಚರಿಕೆ?

ರಾಜ್ಯದಲ್ಲಿ ನಿಯಂತ್ರಣಕ್ಕೆ ಬಂದಿದ್ದ ಸೋಂಕು ಈಗ ಮತ್ತೆ ಉಲ್ಬಣಗೊಂಡಿದೆ. ಕೋವಿಡ್ -19 ಪಾಸಿಟಿವಿಟಿ ದರವು ಶೇಕಡಾ 0.5 ಕ್ಕಿಂತ ಹೆಚ್ಚಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ (ಡಿ. 28):  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ( Covid Case raises in Delhi)ಕೋವಿಡ್​ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೆ ಇದೆ. ಇದರ ಜೊತೆಗೆ ಓಮೈಕ್ರಾನ್ ಪ್ರಕರಣಗಳು ದಾಖಲಾಗುತ್ತಿದೆ. ಈ ಹಿನ್ನಲೆ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಯೆಲ್ಲೋ ಅಲರ್ಟ್ (Yellow alert)​ ಘೋಷಣೆ ಮಾಡಿದ್ದಾರೆ. ಈ ಸಂಬಂಧ ಇಂದು ಮಾತನಾಡಿರುವ ಅವರು, ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ಈ ಕ್ರಮಕ್ಕೆ ಮುಂದಾಗಲಾಗಿದೆ. ನಿರ್ಬಂಧಿತ ಮತ್ತು ವಿನಾಯಿತಿ ಪಡೆದ ಚಟುವಟಿಕೆಗಳ ಹೊರತುಪಡಿಸಿದ ರಾಜ್ಯದಲ್ಲಿ ಸಂಪೂರ್ಣ ಆದೇಶವು ಅನುಸರಿಸುತ್ತದೆ. ರಾಜ್ಯದಲ್ಲಿ ನಿಯಂತ್ರಣಕ್ಕೆ ಬಂದಿದ್ದ ಸೋಂಕು ಈಗ ಮತ್ತೆ ಉಲ್ಬಣಗೊಂಡಿದೆ. ಕೋವಿಡ್ -19 ಪಾಸಿಟಿವಿಟಿ ದರವು ಶೇಕಡಾ 0.5 ಕ್ಕಿಂತ ಹೆಚ್ಚಿದೆ

  ಏನಿದು ಯೆಲ್ಲೋ ಅಲರ್ಟ್​​
  ಕೋವಿಡ್ ಪಾಸಿಟಿವಿಟಿ ದರವು ಸತತ ಎರಡು ದಿನಗಳಲ್ಲಿ ಶೇಕಡಾ 0.5 ಕ್ಕಿಂತ ಹೆಚ್ಚಾದಾಗ ಈ ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ.  ಸೋಂಕು ತಡೆಯುವ ನಿಟ್ಟಿನಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಜೊತೆಗೆ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗುವುದು. ಅನಿವಾರ್ಯವಲ್ಲದ ವಸ್ತುಗಳ ಅಂಗಡಿಗಳನ್ನು ಪರ್ಯಾಯ ದಿನ ತೆರೆಯುವುದು. ಮೆಟ್ರೋ ರೈಲುಗಳು ಮತ್ತು ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಅರ್ಧದಷ್ಟು ಆಸನ ಸಾಮರ್ಥ್ಯದಲ್ಲಿ ಕೆಲವು ನಿರ್ಬಂಧಗಳ ಅನುಸರ ಸಂಚಾರ ನಡೆಸಲಿದೆ.  ರಾಜ್ಯದಲ್ಲಿ ಈಗಾಗಲೇ ಸೋಮವಾರದಿಂದಲೇ ನಗರದಲ್ಲಿ ರಾತ್ರಿ ಕರ್ಫ್ಯೂ ನಿರ್ಬಂಧ ಹೇರಲಾಗಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಸಂಪೂರ್ಣ ಸಂಚಾರಕ್ಕೆ ನಿರ್ಬಂಧ ಇರಲಿದೆ. ಮುಂದಿನ ಆದೇಶದವರೆಗೂ ಇದು ಮುಂದುವರೆಯಲಿದೆ.

  ಏನಿರತ್ತೆ ಏನಿರಲ್ಲ

  • ಬೆಸ-ಸಮ ನಿಯಮದ ಅಡಿಯಲ್ಲಿ, ಅಗತ್ಯವಲ್ಲದ ಸೇವೆಗಳು ಅಥವಾ ಸರಕುಗಳನ್ನು ಹೊಂದಿರುವ ಅಂಗಡಿಗಳು ಮತ್ತು ಮಾಲ್‌ಗಳು ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತವೆ

  • ನಿರ್ಮಾಣ ಕಾರ್ಯವು ಮುಂದುವರಿಯುತ್ತದೆಯಾದರೂ, ಉದ್ಯಮವು ಎಂದಿನಂತೆ ಕಾರ್ಯ ನಿರ್ವಹಿಸಲಿದೆ

  • ಸಿನಿಮಾ ಹಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳನ್ನು ಮುಚ್ಚಲಾಗುವುದು

  • ಬ್ಯಾಂಕ್ವೆಟ್ ಹಾಲ್, ಸಭಾಂಗಣ ಮುಚ್ಚಲಾಗುವುದು

  • ಹೋಟೆಲ್‌ಗಳು ತೆರೆದಿರುತ್ತವೆ ಆದರೆ ಹೋಟೆಲ್‌ನ ಒಳಗೆ ಔತಣಕೂಟಗಳು ಮತ್ತು ಕಾನ್ಫರೆನ್ಸ್ ಹಾಲ್‌ಗಳು ಮುಚ್ಚಲ್ಪಡುತ್ತವೆ.

  • ಸಲೂನ್‌ಗಳು ಮತ್ತು ಬ್ಯೂಟಿ ಪಾರ್ಲರ್‌ಗಳು ತೆರೆದಿರುತ್ತವೆ

  • ಸ್ಪಾಗಳು, ಜಿಮ್‌ಗಳು, ಯೋಗ ಸಂಸ್ಥೆಗಳು ಮತ್ತು ಮನರಂಜನಾ ಉದ್ಯಾನವನಗಳು ಮುಚ್ಚಲ್ಪಡುತ್ತವೆ


  ಇದನ್ನು ಓದಿ: ಹದಿಯರೆಯದ ಮಕ್ಕಳಿಗೆ ಲಸಿಕೆ, ವಯಸ್ಕರಿಗೆ ಬೂಸ್ಟರ್; ಡಿಸೆಂಬರ್ 30 ರೊಳಗೆ ನಿರ್ಧಾರ

  ಪರಿಸ್ಥಿತಿ ಎದುರಿಸಲು ಸಿದ್ಧ ಎಂದ ಸಿಎಂ
  ಈ ಸಂಬಂಧ ಮಾತನಾಡಿದ ಸಿಎಂ ಅರವಿಂದ್​ ಕೇಜ್ರಿವಾಲ್​, ಯೆಲ್ಲೋ ಅಲರ್ಟ್​ ಸಂಬಂಧ ಸವಿವರ ಮಾಹಿತಿಯ ನಿಬಂಧನೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಅಲ್ಲದೇ, ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳವನ್ನು ಎದುರಿಸಲು ನಾವು ಮೊದಲಿಗಿಂತ 10 ಪಟ್ಟು ಹೆಚ್ಚು ಸಿದ್ಧರಾಗಿದ್ದೇವೆ. ದಾಖಲಾಗುತ್ತಿರುವಕೋವಿಡ್ ಪ್ರಕರಣಗಳು ಸೌಮ್ಯ ಲಕ್ಷಣ ಹೊಂದಿದೆ. ಕೋವಿಡ್​​ ಸಂಖ್ಯೆಯಲ್ಲಿ ಏರಿಕೆಯಾಗಿದ್ದರೂ ಆಮ್ಲಜನಕದ ಬಳಕೆ ಅಥವಾ ವೆಂಟಿಲೇಟರ್‌ಗಳ ಬಳಕೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ತಿಳಿಸಿದ್ದಾರೆ.

  ಇದನ್ನು ಓದಿ: ಮೂರನೇ ಅಲೆ‌ ಭಯದ ನಡುವೆ 3 ಸ್ವದೇಶಿ ಡೋಸ್​​ಗಳಿಗೆ CDSCO ಒಪ್ಪಿಗೆ

  ಕೋವಿಡ್ ನಿಯಮ ಪಾಲನೆಗೆ ಮನವಿ 
  ಇದೇ ವೇಳೆ ರಾಜ್ಯದ ಜನರು ತಪ್ಪದೇ ಮಾಸ್ಕ್​ ಧರಿಸಬೇಕು, ಸಾಮಾಜಿಕ ಅಂತರ ಪಾಲನೆ ಮಾಡಿ ಕೋವಿಡ್​ ನಿಯಮಾವಳಿ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

  ಸೋಮವಾರ, ದೆಹಲಿಯಲ್ಲಿ 331 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ದು ಜೂನ್ 9 ರ ಬಳಿಕ ದಾಖಲಾದ ಅತಿ ಹೆಚ್ಚು ಪ್ರಕರಣ ಇದಾಗಿದೆ. ಜೊತೆಗೆ ಕೋವಿಡ್​ನಿಂದ ಒಂದು ಸಾವು ಸಂಭವಿಸಿದೆ. ಧನಾತ್ಮಕ ದರವು ಶೇಕಡಾ 0.68 ಕ್ಕೆ ಏರಿದೆ ಎಂದು ನಗರ ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಲಾಗಿದೆ.

  ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (GRAP) ಧನಾತ್ಮಕ ದರವು ಹೊಸ ಕೋವಿಡ್ ಪ್ರಕರಣಗಳು ಮತ್ತು ಆಮ್ಲಜನಕ ಹಾಸಿಗೆಗಳ ಸಂಖ್ಯೆಯನ್ನು ಆಧರಿಸಿದೆ. ಇದರಲ್ಲಿ ನಾಲ್ಕು ಹಂತಗಳಿವೆ. ಮೊದಲನೆಯದು ಹಳದಿ, ಅಂಬರ್, ಕಿತ್ತಳೆ ಮತ್ತು ಕೆಂಪು ಆಗಿದೆ.
  Published by:Seema R
  First published: