ಬಿಜೆಪಿಗೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಿಗಬಹುದು; ಆದರೆ, ಕಾಶ್ಮೀರಿಗಳ ಮನಸು ಗೆಲ್ಲಲಾಗಲ್ಲ: ಯಶವಂತ್ ಸಿನ್ಹ ಟೀಕೆ

ಕಾಶ್ಮೀರದಲ್ಲಿ ಕೇಂದ್ರ ತೆಗೆದುಕೊಂಡ ನಿರ್ಧಾರದಿಂದ 1984ರಲ್ಲಿ ರಾಜೀವ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಾಧಿಸಿದ ರೀತಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಬಹುದು ಅಷ್ಟೇ ಎಂದು ಯಶವಂತ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

news18
Updated:August 6, 2019, 6:10 PM IST
ಬಿಜೆಪಿಗೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಿಗಬಹುದು; ಆದರೆ, ಕಾಶ್ಮೀರಿಗಳ ಮನಸು ಗೆಲ್ಲಲಾಗಲ್ಲ: ಯಶವಂತ್ ಸಿನ್ಹ ಟೀಕೆ
ಯಶವಂತ್ ಸಿನ್ಹಾ
news18
Updated: August 6, 2019, 6:10 PM IST
ನವದೆಹಲಿ(ಆ. 06): ಜಮ್ಮು-ಕಾಶ್ಮೀರಿಗಳ ವಿಶೇಷಾಧಿಕಾರ ರದ್ದು ಮಾಡಿದ ಕೇಂದ್ರದ ಕ್ರಮವನ್ನು ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಟೀಕಿಸಿದ್ದಾರೆ. 370ನೇ ವಿಧಿ ರದ್ದು ಮಾಡಿದ್ದು ಕೇವಲ ರಾಜಕೀಯ ಕ್ರಮವಷ್ಟೇ. ಇದರಿಂದ ಕಾಶ್ಮೀರದ ಸಮಸ್ಯೆ ಬಗೆಹರಿಯುವುದಿಲ್ಲ ಎಂದವರು ಅಭಿಪ್ರಾಯಪಟ್ಟಿದ್ಧಾರೆ.

ಕೇಂದ್ರದ ಈ ನಿರ್ಧಾರವು ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ತಂದುಕೊಡುತ್ತದೆ. ಆದರೆ, ಜಮ್ಮು ಮತ್ತು ಕಾಶ್ಮೀರದ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಯಶವಂತ್ ಸಿನ್ಹಾ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪಾಲಿಗೆ ಮುಸ್ಲಿಮರು ಪ್ರತ್ಯೇಕತಾವಾದಿಗಳು; ಮೋದಿ ವಿರುದ್ಧ ಫಾರೂಕ್ ಅಬ್ದುಲ್ಲಾ ಕಿಡಿ

ಇಂದಿರಾ ಗಾಂಧಿ ಹತ್ಯೆ ಬಳಿಕ 1984ರಲ್ಲಿ ರಾಜೀವ್ ಗಾಂಧಿ ನೇತೃತ್ವದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 567 ಸ್ಥಾನಗಳ ಪೈಕಿ 426 ಕ್ಷೇತ್ರಗಳನ್ನ ಗೆದ್ದಿತ್ತು. ಬಿಜೆಪಿಗೂ ಅಂಥ ದೊಡ್ಡಮಟ್ಟದಲ್ಲಿ ಚುನಾವಣೆಯಲ್ಲಿ ಗೆಲುವು ಸಿಗಬಹುದು ಎಂಬುದು ಯಶವಂತ್ ಸಿನ್ಹಾ ಅವರ ಅಂದಾಜು.

“370ನೇ ವಿಧಿ ಮತ್ತು 35ಎ ವಿಧಿಯನ್ನ ಸಂವಿಧಾನದಿಂದ ಕಿತ್ತುಹಾಕಿದ ಕೇಂದ್ರ ಸರ್ಕಾರದ ಕ್ರಮ ಕೇವಲ ರಾಜಕೀಯ ಉದ್ದೇಶದಿಂದ ಕೂಡಿದ್ದು ಮಾತ್ರವೇ. ಕೆಲ ಪ್ರಮುಖ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ಬರುತ್ತಿವೆ. ಇವುಗಳನ್ನು ಗೆಲ್ಲುವ ಸಲುವಾಗಿ ಮೋದಿ ಸರ್ಕಾರ ಇಂಥ ನಿರ್ಧಾರ ಕೈಗೊಂಡಿದೆ” ಎಂದು ಖಾಸಗಿ ಸುದ್ದಿಸಂಸ್ಥೆಯೊಂದಿಗೆ ನಡೆದ ಸಂದರ್ಶನದಲ್ಲಿ ಯಶವಂತ್ ಸಿನ್ಹಾ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಚೀನಾ ಆಕ್ರಮಿತ ಪ್ರದೇಶವೂ ಭಾರತದ ಭಾಗವೇ: ಅಮಿತ್ ಶಾ

ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು ಮೋದಿ ಮತ್ತು ಶಾ ನೇತೃತ್ವದ ಬಿಜೆಪಿಯ ಕಟುಟೀಕಾಕಾರರಾಗಿ ಪರಿಣಮಿಸಿದ್ಧಾರೆ.
Loading...

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:August 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...