ತೆಲುಗು ಮತ್ತು ತಮಿಳು ಚಲನ ಚಿತ್ರ ನಟಿ ಮತ್ತು ಮಾಡೆಲ್ ಯಾಶಿಕಾ ಆನಂದ್ ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಜೊತೆಗೆ ಈಸ್ಟ್ ಕೋಸ್ಟ್ ರೋಡ್ (ಇಸಿಆರ್) ನಲ್ಲಿ ತೆಗೆಸಿಕೊಂಡ ಸೆಲ್ಫಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬ ವೈರಲ್ ಆಗಿದೆ.
ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ಸೈಕ್ಲಿಂಗ್ ಹೋಗುವುದು ಎಂದರೆ ತುಂಬಾ ಅಚ್ಚುಮೆಚ್ಚು. ಹಾಗಾಗಿಅವರು ಈಸಿಆರ್ನಲ್ಲಿ ಭಾನುವಾರ ಮುಂಜಾನೆತಮ್ಮ ಸೈಕ್ಲಿಂಗ್ ಪಾರ್ಟ್ನರ್ಸ್ ಜೊತೆಗೆ ಸೈಕ್ಲಿಂಗ್ ತೆರಳಿದ್ದಾಗ ಅಲ್ಲಿ ಚಲನಚಿತ್ರ ನಟಿ ಯಾಶಿಕಾ ಸಹ ಬಂದಿದ್ದು ಅಲ್ಲಿಯೇ ಸ್ಟಾಲಿನ್ ಜೊತೆಗೆ ಒಂದು ಸೆಲ್ಫಿ ತೆಗೆಸಿಕೊಂಡು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಯಾಶಿಕಾ - ಸ್ಟಾಲಿನ್ ಸೆಲ್ಫಿಯು ತುಂಬಾ ವೈರಲ್ ಆಗಿದೆ.
ಕ್ರೀಡಾ ಉತ್ಸಾಹಿಯಾಗಿರುವ ಎಂ ಕೆ ಸ್ಟಾಲಿನ್ ಅವರು ತಮಗೆ ಸಮಯ ಸಿಕ್ಕಾಗಲೆಲ್ಲಾ ನಿಲಂಕರಾಯ್ ಯಿಂದ ಮಹಾಬಲಿಪುರಂ ವರೆಗೂ ಸೈಕ್ಲಿಂಗ್ ಹೋಗುತ್ತಿರುತ್ತಾರೆ. ನಿನ್ನೆ ಅವರು ಎಂಜಿಎಂ ಅಮ್ಯೂಸ್ಮೆಂಟ್ ಪಾರ್ಕ್ ಇಂದ ಮಾಮಲ್ಲಪುರಂ ವರೆಗೂ ತಮ್ಮ ಸ್ನೇಹಿತರೊಡನೇ ಜೊತೆಗೂಡಿ ಸೈಕ್ಲಿಂಗ್ ಮಾಡಿದರು. ಸೆಲ್ಫಿ ಕ್ಲಿಕ್ಕಿಸಿ ಕೊಂಡ ನಂತರ, ನಾವು ಕೋವಲಂ ಹತ್ತಿರ ಸ್ಟಾಲಿನ್ ಅವರು ಸೈಕ್ಲಿಂಗ್ ಮಾಡುವುದನ್ನು ನೋಡಿ ಮುಂದೆ ಹೋಗಿ ಯೂ-ಟರ್ನ್ ಮಾಡಿಕೊಂಡು ಅವರನ್ನು ಭೇಟಿಯಾಗಲು ಹೋದೆವು. ನಾವು ಬಂದಿದ್ದನ್ನು ಗಮನಿಸಿ ಅವರು ಸಹ ನಮ್ಮ ಜೊತೆಗೆ ಮಾತನಾಡಿದರು. ನಂತರ ನಾನು ಸೆಲ್ಫಿಗೆ ಅವರನ್ನು ಕೇಳಿಕೊಂಡಾಗ ಅವರು ತಕ್ಷಣವೇ ಒಪ್ಪಿಕೊಂಡು ನಮ್ಮ ಜೊತೆಗೆ ಸೆಲ್ಫಿ ತೆಗೆಸಿಕೊಂಡರು ಎಂದು ಯಾಶಿಕಾ ಹೇಳಿದರು.
ಇದನ್ನೂ ಓದಿ: Marriage Proposal on the Soccer Pitch: ಆಟದ ಮೈದಾನದಲ್ಲೇ ಪ್ರೇಮ ನಿವೇದನೆ ಮಾಡಿದ ಫುಟ್ ಬಾಲ್ ಆಟಗಾರ..!
ಸೆಲ್ಫಿಯಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಕಪ್ಪು ಮತ್ತು ಕೆಂಪು ಬಣ್ಣದ ಕ್ರೀಡಾ ದಿರಿಸು ಹಾಕಿದ್ದು ಗ್ಲಾಸ್ ಮತ್ತು ಹೆಲ್ಮಟ್ ಅನ್ನು ಧರಿಸಿ ಸೈಕಲ್ ಮೇಲೆ ಕುಳಿತ್ತಿರುವುದನ್ನು ಕಾಣಬಹುದಾಗಿದೆ. ಯಾಶಿಕಾ ಕಪ್ಪು ಟ್ಯಾಂಕ್ ಟಾಪ್ ಧರಿಸಿದ್ದು, ತಾವು ಮುಖಕ್ಕೆ ಹಾಕಿಕೊಂಡ ಮಾಸ್ಕ್ ಕೆಳಗೆ ಇಳಿಸಿರುವುದನ್ನು ಸಹ ಸೆಲ್ಫಿಯಲ್ಲಿ ಕಾಣ ಬಹುದಾಗಿದೆ. ಈಗಾಗಲೇ ಯಾಶಿಕಾ ‘ಮುಕುತಿ ಅಮ್ಮನ್’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ ಮತ್ತು ಸದ್ಯಕ್ಕೆ ಇವರ ಬಳಿ ನಾಲ್ಕು ಚಿತ್ರಗಳು ಇವೆ.
ಸ್ಟಾಲಿನ್ ಅವರು ಚುನಾವಣೆ ಮುಗಿಯುವವರೆಗೂ ಸೈಕ್ಲಿಂಗ್ ಮಾಡಿರಲಿಲ್ಲ. ಅವರು ಚುನಾವಣೆ ನಂತರ ಮತ್ತೆ ಸೈಕ್ಲಿಂಗ್ ಹವ್ಯಾಸವನ್ನು ಮುಂದುವರೆಸಿದ್ದಾರೆ. ಭಾನುವಾರ ಅವರು ಸೈಕ್ಲಿಂಗ್ ಮಾಡುತ್ತಾ ನೆರೆದಿರುವ ಜನರಿಗೆ ನೋಡಿ ಮುಗುಳ್ನಗುತ್ತಾ ಕೈ ಬೀಸುತ್ತಾ ಕೆಲವು ಜನರಿಗೆ ಕೈ ಕಲುಕಿ ಮಾತಾನಾಡಿಸಿದರು. ಸೈಕ್ಲಿಂಗ್ ಮಾಡುತ್ತಾ ಮಧ್ಯದಲ್ಲಿ ಮೂರು ಕಡೆಯಲ್ಲಿ ನಿಲ್ಲಿಸಿ ಜನರೊಡನೆ ಸೆಲ್ಫಿ ತೆಗೆಸಿಕೊಂಡರು ಮತ್ತು ಸ್ವಲ್ಪ ಹೊತ್ತು ಅವರೊಂದಿಗೆ ಮಾತನಾಡಿದರು.
ಇದನ್ನೂ ಓದಿ: ಗೋವಾ ಬೀಚ್ನಲ್ಲಿ ಕಡಲೆ ಮಾರುತ್ತಿದ್ದ ಕನ್ನಡಿಗ ಹುಡುಗ ಬ್ರಿಟನ್ ಸೇನೆ ಸೇರಿದ ರೋಚಕ ಕಥೆ
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
- ಶ್ರೀನಿವಾಸ ರೆಡ್ಡಿ, ಏಜೆನ್ಸಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ