Xi Jinping Health: ಸೆರೆಬ್ರಲ್ ಅನ್ಯೂರಿಸಂನಿಂದ ಬಳಲುತ್ತಿದ್ದಾರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್​; ಏನಿದು ಖಾಯಿಲೆ?

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಪಾಯಕಾರಿ ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕ್ಸಿ ಜಿನ್‌ಪಿಂಗ್ ಅವರು ಪ್ರಸ್ತುತ ಮೆದುಳಿನ ಗಂಭೀರ ಕಾಯಿಲೆಯಾದ ಸೆರೆಬ್ರಲ್ ಅನ್ಯೂರಿಸಮ್‌ನಿಂದ ಬಳಲುತ್ತಿದ್ದು, 2021ರ ಕೊನೆಯಲ್ಲಿ ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ವರದಿಗಳು ತಿಳಿಸಿವೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

 • Share this:
  ಬೀಜಿಂಗ್ : ಚೀನಾದ (China) ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅಪಾಯಕಾರಿ ಮೆದುಳಿನ ಕಾಯಿಲೆಯಿಂದ (Brain Disease) ಬಳಲುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕ್ಸಿ ಜಿನ್‌ಪಿಂಗ್ ಅವರು ಪ್ರಸ್ತುತ ಮೆದುಳಿನ ಗಂಭೀರ ಕಾಯಿಲೆಯಾದ ಸೆರೆಬ್ರಲ್ ಅನ್ಯೂರಿಸಮ್‌ನಿಂದ (Cerebral Aneurysm) ಬಳಲುತ್ತಿದ್ದು, 2021ರ ಕೊನೆಯಲ್ಲಿ ಆಸ್ಪತ್ರೆಗೆ (Hospital) ದಾಖಲಾಗಬೇಕಾಯಿತು ಎಂದು ವರದಿಗಳು ತಿಳಿಸಿವೆ. ಕಾಯಿಲೆಯಿಂದ ಗುಣಮುಖರಾಗಲು ವೈದ್ಯರು ಶಸ್ತ್ರಚಿಕಿತ್ಸೆಗೆ (Surgery) ಸಲಹೆ ನೀಡಿದ್ದರು ಆದರೆ ಜಿನ್‌ಪಿಂಗ್ ಶಸ್ತ್ರಚಿಕಿತ್ಸೆಗೆ ಹೋಗುವುದಕ್ಕಿಂತ ಹೆಚ್ಚಾಗಿ ಚೀನಾದ ಸಾಂಪ್ರದಾಯಿಕ ಔಷಧಿಗಳ (Traditional Medicines) ಮೂಲಕ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

  ವಿದೇಶಿ ನಾಯಕರನ್ನು ಭೇಟಿಯಾಗಲು ನಿರಾಕರಣೆ
  ವರದಿಯ ಪ್ರಕಾರ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕಳೆದ ಹಲವಾರು ತಿಂಗಳುಗಳಿಂದ ಇದರಿಂದ ಬಳಲುತ್ತಿದ್ದಾರೆ. ಈ ಕಾರಣದಿಂದಾಗಿ, ಅವರನ್ನು ಡಿಸೆಂಬರ್ 2021ರಲ್ಲಿ ಆಸ್ಪತ್ರೆಗೆ ಸೇರಿಸಬೇಕಾಯಿತು. ಜಿನ್‌ಪಿಂಗ್ ಆರೋಗ್ಯದ ಬಗ್ಗೆ ಈಗಾಗಲೇ ಊಹಾಪೋಹಗಳಿದ್ದು, ಅನಾರೋಗ್ಯದ ಸುದ್ದಿ ಹಲವು ಬಾರಿ ಮುನ್ನೆಲೆಗೆ ಬಂದಿದೆ. ಬೀಜಿಂಗ್‌ನಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್‌ನಿಂದ ಹಿಡಿದು ಯಾವುದೇ ವಿದೇಶಿ ನಾಯಕರನ್ನು ಭೇಟಿಯಾಗಲು ಅಧ್ಯಕ್ಷರು ನಿರಾಕರಿಸಿದಾಗ ಊಹಾಪೋಹಗಳು ಹೆಚ್ಚು ಗಟ್ಟಿಯಾದವು.

  ಅನಾರೋಗ್ಯದ ಲಕ್ಷಣ ಇತ್ತು
  ಮಾರ್ಚ್ 2019ರಲ್ಲಿ, ಇಟಲಿಗೆ ಕ್ಸಿ ಅವರ ಭೇಟಿಯ ಸಮಯದಲ್ಲಿ, ಅವರ ನಡಿಗೆಯು ಗಮನಾರ್ಹವಾದ ಕುಂಟುವಿಕೆಯೊಂದಿಗೆ ನಡೆನುಡಿಯು ಅಸಾಮಾನ್ಯವಾಗಿರುವುದು ಕಂಡುಬಂದಿತ್ತು. ನಂತರ ಫ್ರಾನ್ಸ್‌ನ ಪ್ರವಾಸದ ಸಮಯದಲ್ಲೂ ಅವರ ನಡವಳಿಕೆ ಸಹಜವಾಗಿರಲಿಲ್ಲ. ಅಂತೆಯೇ, 2020ರ ಅಕ್ಟೋಬರ್‌ನಲ್ಲಿ ಶೆನ್‌ಜೆನ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವಾಗ, ಅವರ ನೋಟ, ನಿಧಾನವಾದ ಮಾತು ಮತ್ತು ಕೆಮ್ಮಿನ ಲಕ್ಷಣಗಳು ಮತ್ತೆ ಅವರ ಅನಾರೋಗ್ಯದ ಬಗೆಗೆ ಪುಷ್ಠಿ ನೀಡಿತು.

  ಸೆರೆಬ್ರಲ್ ಅಥವಾ ಮೆದುಳಿನ ಅನ್ಯೂರಿಸಮ್‌ ಎಂದರೇನು?
  ಮೆದುಳಿನಲ್ಲಿನ ರಕ್ತನಾಳವು ಒಂದು ಬದಿಯಿಂದ ಉಬ್ಬುವುದು, ದುರ್ಬಲಗೊಳ್ಳುವುದನ್ನು ಸೆರೆಬ್ರಲ್ ಅಥವಾ ಬ್ರೈನ್ ಅನ್ಯೂರಿಸಂ ಎಂದು ಕರೆಯಲಾಗುತ್ತದೆ. ಈ ರೋಗವು ಮೆದುಳಿನ ಯಾವುದೇ ಭಾಗದಲ್ಲಿ ಮತ್ತು ಯಾವುದೇ ವಯಸ್ಸಿನ ವ್ಯಕ್ತಿಗೆ ಸಂಭವಿಸಬಹುದು.

  ಇದನ್ನೂ ಓದಿ: Testicular Cancer: ಎತ್ತರ ಜಾಸ್ತಿ ಇದ್ದರೆ ಕಾಡುತ್ತೆ ಈ ಭಯಾನಕ ಕಾಯಿಲೆ, ಹೈಟ್ ಜಾಸ್ತಿ ಇದ್ದಷ್ಟು ರಿಸ್ಕ್ ಹೆಚ್ಚು

  ಸೆರೆಬ್ರಲ್ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ವಿಶೇಷವಾಗಿ ಅಧಿಕ ರಕ್ತದೊತ್ತಡ, ದುರ್ಬಲಗೊಂಡ ನರಗಳು, ಸೋಂಕು, ಗಾಯ ಮತ್ತು ಮಿದುಳಿನ ಹಾನಿ ಅಥವಾ ಗೆಡ್ಡೆಗಳನ್ನು ಹೊಂದಿರುವ ಜನರು ಈ ಕಾಯಿಲೆಗೆ ಹೆಚ್ಚು ಒಳಗಾಗುತ್ತಾರೆ. ತಲೆತಿರುಗುವಿಕೆ, ದೌರ್ಬಲ್ಯ ಮತ್ತು ಅಸ್ವಸ್ಥತೆ, ಮಾನಸಿಕ ಅಸ್ವಸ್ಥತೆ, ದುರ್ಬಲ ದೃಷ್ಟಿ, ಶ್ರವಣ, ಮಾತು ಮತ್ತು ನಡವಳಿಕೆಯಲ್ಲಿ ಬದಲಾವಣೆ, ಇವು ರೋಗದ ಗುಣ ಲಕ್ಷಣಗಳಾಗಿವೆ.

  ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಚೀನಾ
  COVID-19 ಮತ್ತು ತನ್ನದೇ ಆದ ಕಟ್ಟುನಿಟ್ಟಿನ ಲಾಕ್‌ಡೌನ್‌ಗಳಿಂದಾಗಿ ಚೀನಾ ಇತ್ತೀಚೆಗೆ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಅಧ್ಯಕ್ಷರ ಅನಾರೋಗ್ಯದ ಈ ವರದಿ ಬಂದಿದೆ. ತೈಲ ಮತ್ತು ಅನಿಲದ ಬೆಲೆ ಏರಿಕೆ ಮತ್ತು ಉಕ್ರೇನ್ ಸಂಘರ್ಷದಿಂದ ಉಂಟಾದ ಪೂರೈಕೆ ಸರಪಳಿಯ ಅಡ್ಡಿಯಿಂದಾಗಿ ದೇಶವು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

  ಸರ್ವಾನುಮತದ ಮೂಲಕ ಸಭೆಗೆ ಪ್ರತಿನಿಧಿಯಾಗಿ ಆಯ್ಕೆ
  68ರ ಹರೆಯದ ಕ್ಸಿ ಜಿನ್‌ಪಿಂಗ್ ಅವರು ಮಾವೋ ನಂತರದ ಅವಧಿಯಲ್ಲಿ ಚೀನಾದ ಅಧ್ಯಕ್ಷರಾಗಿ ಅಭೂತಪೂರ್ವ ಮೂರನೇ ಅವಧಿಗೆ ಗಮನಹರಿಸಿದ್ದಾರೆ, ಇದು ನವೆಂಬರ್‌ನಲ್ಲಿ ನಡೆಯಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ 20ನೇ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಜಾರಿಗೆ ಬರಲಿದೆ. ಕ್ಸಿ ಅವರನ್ನು ಸರ್ವಾನುಮತದ ಮೂಲಕ ಸಭೆಗೆ ಪ್ರತಿನಿಧಿಯಾಗಿ ಆಯ್ಕೆ ಮಾಡಲಾಗಿದೆ.

  ಈ ವರ್ಷದ ಕೊನೆಯಲ್ಲಿ ಮೂರನೇ ಐದು ವರ್ಷಗಳ ಅವಧಿಗೆ ಮರು ಚುನಾಯಿಸಲು ಕ್ಸಿ ತಯಾರಿ ನಡೆಸುತ್ತಿರುವಾಗ, ಅವರು ತಮ್ಮ ಆಳ್ವಿಕೆಯ ಅಡಿಯಲ್ಲಿ ಚೀನಾವನ್ನು ಹೆಚ್ಚು ಸಮೃದ್ಧ, ಪ್ರಭಾವಶಾಲಿ ಮತ್ತು ಸ್ಥಿರವೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆ.

  ಇದನ್ನೂ ಓದಿ : Child Obesity: ಮಕ್ಕಳಲ್ಲಿ ಹೆಚ್ಚುತ್ತಿರುವ ತೂಕ ಮುಂದೆ ಈ ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಚ್ಚರ!

  ಕೆಲವು ತಿಂಗಳ ಹಿಂದೆ ಟೆಕ್ ಬೆಹೆಮೊತ್‌ಗಳು ಮತ್ತು ಶ್ರೀಮಂತ ಸೆಲೆಬ್ರಿಟಿಗಳ ಮೇಲೆ ದಂಡವನ್ನು ವಿಧಿಸುವ "ಸಾಮಾನ್ಯ ಸಮೃದ್ಧಿ"ಯ ಹೊಸ ಯುಗವನ್ನು ಉಗ್ರವಾಗಿ ಪ್ರಚಾರ ಮಾಡುತ್ತಿದ್ದ ದೇಶದ ಅಧಿಕಾರಿಗಳು ಇದೀಗ ಆರ್ಥಿಕತೆಯನ್ನು ಸ್ಥಿರವಾಗಿ ಮತ್ತು ಬೆಳೆಯುವತ್ತ ತಮ್ಮ ಗಮನವನ್ನು ಹರಿಸಿದ್ದಾರೆ.
  Published by:Ashwini Prabhu
  First published: