ಬೀಜಿಂಗ್: ಕ್ಸಿ ಜಿನ್ಪಿಂಗ್ 3ನೇ ಬಾರಿಗೆ ಚೀನಾದ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಮೇಲೆ ಕ್ಸಿ ಜಿನ್ಪಿಂಗ್ ನಿಯಂತ್ರಣವನ್ನು ಭದ್ರಪಡಿಸಿಕೊಂಡ ಒಂದೇ ವಾರದಲ್ಲಿ ಅವರು ಮತ್ತೆ ಚೀನಾದಲ್ಲಿ ಸರ್ವಾಧಿಕಾರತ್ವ ಸಾಧಿಸಿದ್ದಾರೆ. ಅಧ್ಯಕ್ಷ ಕ್ಸಿ ಜಿನ್ಪಿಂಗ್ (Xi Jinping) ಅವರನ್ನು ಮುಂದಿನ ಐದು ವರ್ಷಗಳ ಅವಧಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ. ಅಂದರೆ ಮಾರ್ಚ್ನಲ್ಲಿ ನಡೆಯಲಿರುವ ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನ (National People Congress) ವಾರ್ಷಿಕ ಸಭೆಯಲ್ಲಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಚೀನಾದ ನಾಯಕನಾಗಿ ಐತಿಹಾಸಿಕ ಮೂರನೇ ಅವಧಿಗೆ ಆಯ್ಕೆಯಾದ ನಂತರ ನಂತರ ಶ್ರದ್ಧೆಯಿಂದ ಕೆಲಸ ಮಾಡುವುದಾಗಿ ಕ್ಸಿ ಜಿನ್ಪಿಂಗ್ ಭಾನುವಾರ ಪ್ರತಿಜ್ಞೆ ಮಾಡಿದ್ದಾರೆ.
ಧನ್ಯವಾದ ತಿಳಿಸಿದ ಕ್ಸಿ ಜಿನ್ಪಿಂಗ್
"ನೀವು ನಮ್ಮ ಮೇಲೆ ಇಟ್ಟಿರುವ ನಂಬಿಕೆಗಾಗಿ ನಾನು ಇಡೀ ಪಕ್ಷಕ್ಕೆ ಪ್ರಾಮಾಣಿಕವಾಗಿ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಅವರು ಬೀಜಿಂಗ್ನ ಗ್ರೇಟ್ ಹಾಲ್ ಆಫ್ ದಿ ಪೀಪಲ್ನಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಶ್ರದ್ಧೆಯಿಂದ ಕೆಲಸ ಮಾಡುವ ಭರವಸೆ
ಪಕ್ಷ ಮತ್ತು ನಮ್ಮ ಜನರು ಇಟ್ಟಿರುವ ನಂಬಿಕೆಗೆ ಅರ್ಹರೆಂದು ಸಾಬೀತುಪಡಿಸಲು ಕರ್ತವ್ಯಗಳ ನಿರ್ವಹಣೆಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು.
ಇದನ್ನೂ ಓದಿ: Britain Economy: ಬ್ರಿಟನ್ ಬಿಕ್ಕಟ್ಟು: ಜೀವನ ವೆಚ್ಚ ನಿಭಾಯಿಸಲು ಊಟ ಬಿಡುತ್ತಿರುವ ಜನಸಾಮಾನ್ಯರು!
ಕ್ಸಿ ಜಿನ್ಪಿಂಗ್ ಅವರು ಚೀನಾದ ಮಿಲಿಟರಿ ಮುಖ್ಯಸ್ಥರಾಗಿ ಭಾನುವಾರ ಪುನಃ ನೇಮಕಗೊಂಡಿದ್ದಾರೆ ಎಂದು ಅಲ್ಲಿಯ ಮಾಧ್ಯಮಗಳು ವರದಿ ಮಾಡಿವೆ. ಚೀನಾದ ಕಮ್ಯುನಿಸ್ಟ್ ಪಕ್ಷದ 20ನೇ ಕೇಂದ್ರ ಸಮಿತಿಯ ಮೊದಲ ಸರ್ವಸದಸ್ಯರ ಅಧಿವೇಶನದಲ್ಲಿ ಕ್ಸಿ ಆಯ್ಕೆಯಾದರು ಎಂದು ವರದಿಯಾಗಿದೆ. ಅಧಿವೇಶನದಲ್ಲಿ CPC ಕೇಂದ್ರೀಯ ಸೇನಾ ಆಯೋಗದ ಅಧ್ಯಕ್ಷರಾಗಿಯೂ ಅವರನ್ನು ಹೆಸರಿಸಲಾಯಿತು" ಎಂದು ಕ್ಸಿನ್ಹುವಾ ಎಂಬ ಮಾಧ್ಯಮ ವರದಿ ಮಾಡಿದೆ.
ನೇ ಬಾರಿ ಅಧ್ಯಕ್ಷರಾಗೋ ತಯಾರಿ, ಚೀನಾದಲ್ಲಿ ತನ್ನ ತಾಕತ್ತು ಹೆಚ್ಚಿಸಿದ್ದು ಹೇಗೆ ಕ್ಸಿ ಜಿನ್ಪಿಂಗ್?
8ನೇ ಕಾಂಗ್ರೆಸ್ ನಲ್ಲಿ ಕಮ್ಯುನಿಸ್ಟ್ ಪಕ್ಷದ (Communist Party) ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರೀಯ ಸೇನಾ ಆಯೋಗದ ಅಧ್ಯಕ್ಷರಾಗಿದ್ದ ಜಿನ್ ಪಿಂಗ್ ಕಾಲಕ್ರಮೇಣ ಪಕ್ಷದ ಮೇಲೆ ಬಿಗಿ ಹಿಡಿತ ಸಾಧಿಸಿದ್ದಾರೆ. ಅವರು ಚೀನಾವನ್ನು ಸಾಮೂಹಿಕ ನಾಯಕತ್ವದ ಸಂಪ್ರದಾಯದಿಂದ ಹೊರತರುವ ಸಂಕೀರ್ಣವಾದ ಕೆಲಸವನ್ನು ಮಾಡಿದರು, ಕೆಲವೊಮ್ಮೆ ಸಂಪೂರ್ಣ ತಂತ್ರಗಳಿಂದ ಮತ್ತು ಕೆಲವೊಮ್ಮೆ ಸಂಯಮದಿಂದ, ರಾಜಕೀಯದ ಎಲ್ಲಾ ತಂತ್ರಗಳಿಂದ ಅವರು ಇಂತಹುದ್ದೊಂದು ಕಾರ್ಯ ಸಾಧಿಸಿದ್ದಾರೆ.
ಇದನ್ನೂ ಓದಿ: Explained: 3ನೇ ಬಾರಿ ಅಧ್ಯಕ್ಷರಾಗೋ ತಯಾರಿ, ಚೀನಾದಲ್ಲಿ ತನ್ನ ತಾಕತ್ತು ಹೆಚ್ಚಿಸಿದ್ದು ಹೇಗೆ ಕ್ಸಿ ಜಿನ್ಪಿಂಗ್?
ನೋಡ ನೋಡುತ್ತಿದ್ದಂತೆಯೇ ಕ್ಸಿ ಜಿನ್ಪಿಂಗ್ ಅಷ್ಟು ಬಲಶಾಲಿಯಾಗಿದ್ದು ಹೇಗೆ? ಇಲ್ಲಿದೆ ನೋಡಿ ದೇಶದ ಶಕ್ತಿಯನ್ನು ತಮಗೆ ಸಮನಾರ್ಥಕವಾಗಿಸಲು ಕ್ಸಿ ಜಿನ್ಪಿಂಗ್ ತೆಗೆದುಕೊಂಡ ಹತ್ತು ನಡೆಗಳು ಹೀಗಿವೆ ನೋಡಿ.
ವಿಶ್ವಾಸಘಾತುಕ, ಭ್ರಷ್ಟ ಅಧಿಕಾರಿಗಳಿಗೆ ಗೇಟ್ಪಾಸ್
ಮೊದಲು ಅಧಿಕಾರ ವಹಿಸಿಕೊಂಡ ನಂತರ, ಜಿನ್ಪಿಂಗ್ ಅವರು ವಿಶ್ವಾಸಘಾತುಕ, ಭ್ರಷ್ಟ ಅಥವಾ ನಿಷ್ಪರಿಣಾಮಕಾರಿ ಎಂದು ಪರಿಗಣಿಸಲ್ಪಟ್ಟ ಅಧಿಕಾರಿಗಳನ್ನು ತೆಗೆದುಹಾಕಲು ಬೃಹತ್ ಅಭಿಯಾನವನ್ನು ಪ್ರಾರಂಭಿಸಿದರು. ಆ ಖಾಲಿ ಸ್ಥಾನಗಳಲ್ಲಿ ಮಿತ್ರರನ್ನು ತುಂಬುವ ಮೂಲಕ ಜಿನ್ಪಿಂಗ್ ತಮ್ಮ ಶಕ್ತಿಯ ನೆಲೆಯನ್ನು ನಿರ್ಮಿಸಿದರು. ರಾಯಿಟರ್ಸ್ ವರದಿಯ ಪ್ರಕಾರ, ಜಿನ್ಪಿಂಗ್ ಅವರ ಅಧಿಕಾರಾವಧಿಯಲ್ಲಿ ಇದುವರೆಗೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ