• Home
 • »
 • News
 • »
 • national-international
 • »
 • ಚುನಾವಣಾ ಫಲಿತಾಂಶಗಳಲ್ಲಿ ಸೋಲು, ಕೋವಿಡ್ ನಿರ್ವಹಣೆಯಲ್ಲೂ ವೈಫಲ್ಯ; ಆರ್​ಎಸ್​ಎಸ್​-ಬಿಜೆಪಿಯಲ್ಲಿ ಮನೆಮಾಡಿದ ಆತಂಕ

ಚುನಾವಣಾ ಫಲಿತಾಂಶಗಳಲ್ಲಿ ಸೋಲು, ಕೋವಿಡ್ ನಿರ್ವಹಣೆಯಲ್ಲೂ ವೈಫಲ್ಯ; ಆರ್​ಎಸ್​ಎಸ್​-ಬಿಜೆಪಿಯಲ್ಲಿ ಮನೆಮಾಡಿದ ಆತಂಕ

ನರೇಂದ್ರ ಮೋದಿ, ಜೆಪಿ ನಡ್ಡಾ, ಅಮಿತ್ ಶಾ.

ನರೇಂದ್ರ ಮೋದಿ, ಜೆಪಿ ನಡ್ಡಾ, ಅಮಿತ್ ಶಾ.

ಪ್ರಧಾನಿ ಮೋದಿಯವರ ಅಧಿಕಾರದ ಏಳು ವರ್ಷಗಳಲ್ಲಿ, ಸಾರ್ವಜನಿಕ ಗ್ರಹಿಕೆ ಮತ್ತು ಚುನಾವಣಾ ಫಲಿತಾಂಶಗಳು ಎಂದಿಗೂ ಪ್ರಬಲವಾದ ಸಂಘ ಪರಿವಾರವನ್ನು ಈ ಮಟ್ಟಿಗೆ ಕೆರಳಿಸಿರಲಿಲ್ಲ. ತನ್ನ ಮತಬ್ಯಾಂಕ್ ಕೋವಿಡ್ ಅಲೆಗೆ ಜರ್ಜರಿತವಾಗಿದೆ ಎಂದು ಬಿಜೆಪಿ ಮತ್ತು ಸಂಘ ಪರಿವಾರ ಮನಗಂಡಿವೆ.

 • Share this:

  ತಮಿಳುನಾಡು, ಕೇರಳ ರಾಜ್ಯದ ವಿಧಾನ ಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕು ಹಾಗೂ ಪಶ್ಚಿಮ ಬಂಗಾಳದಲ್ಲಿ ಸ್ವತಂತ್ರ್ಯ ಸರ್ಕಾರವನ್ನು ರಚಿಸಬೇಕು ಎಂಬ ಮಹತ್ವಾಕಾಂಕ್ಷೆ ಬಿಜೆಪಿ ಮತ್ತು ಆರ್​ಎಸ್​ಎಸ್​ ನಾಯಕರಿಗೆ ಇತ್ತು. ಆದರೆ, ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ವಿಫಲತೆಯನ್ನು ಅನುಭವಿಸಿದೆ. ಅಲ್ಲದೆ,  ಬಿಜೆಪಿಯ ಪ್ರಮುಖ ಬೆಂಬಲಿಗರ ಪಟ್ಟಿಯಲ್ಲಿರುವ ಬಹುತೇಕ ಎಲ್ಲರೂ ಮಾರಣಾಂತಿಕ ಸಾಂಕ್ರಾಮಿಕ ರೋಗದಿಂದ ಬಾಧಿತರಾಗಿದ್ದಾರೆ ಎಂಬ ಅಂಶವೂ ಸಹ ಚುನಾವಣಾ ಫಲಿತಾಂಶಗಳಲ್ಲಿ ವ್ಯಕ್ತವಾಗಿದೆ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಉನ್ನತ ನಾಯಕರಲ್ಲಿ ಆಕ್ರೋಶ ಮತ್ತು ಕಳವಳ ಮೂಡಿಸಿವೆ ಎಂಬ ವಿಚಾರ ಬಲ್ಲ ಮೂಲಗಳಿಂದ ತಿಳಿದುಬಂದಿದೆ.


  ತನ್ನ ಎಲ್ಲಾ ವಿಫಲತೆಗಳನ್ನು ಮರೆಮಾಚಲು ಸರ್ಕಾರವು ಕೋವಿಡ್‌ನ ಮೊರೆ ಹೋಗಿದ್ದು ತಪ್ಪು ಎಂಬ ಅಭಿಪ್ರಾಯಗಳು ಪಕ್ಷ ಮತ್ತು ಆರ್‌ಎಸ್‌ಎಸ್‌ಗಳಲ್ಲಿ ಕೇಳಿ ಬರುತ್ತಿವೆ. ಕೋವಿಡ್‌ನ ಭೀಕರ ಎರಡನೇ ಅಲೆಯಲ್ಲಿನ ವಿನಾಶದ ಪ್ರಮಾಣ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ಅದು ಸೃಷ್ಟಿಸಿರುವ ಅಸಮಾಧಾನ ಮತ್ತು ಕೋಪಗಳು ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡಿದೆ ಎಂದು ಮೂಲಗಳು ತಿಳಿಸಿವೆ.


  ಪ್ರಧಾನಿ ಮೋದಿಯವರ ಅಧಿಕಾರದ ಏಳು ವರ್ಷಗಳಲ್ಲಿ, ಸಾರ್ವಜನಿಕ ಗ್ರಹಿಕೆ ಮತ್ತು ಚುನಾವಣಾ ಫಲಿತಾಂಶಗಳು ಎಂದಿಗೂ ಪ್ರಬಲವಾದ “ಸಂಘ ಪರಿವಾರ”ವನ್ನು ಈ ಮಟ್ಟಿಗೆ ಕೆರಳಿಸಿರಲಿಲ್ಲ. ತನ್ನ ಮತಬ್ಯಾಂಕ್ ಕೋವಿಡ್ ಅಲೆಗೆ ಜರ್ಜರಿತವಾಗಿದೆ ಎಂದು ಬಿಜೆಪಿ ಮತ್ತು ಸಂಘ ಪರಿವಾರ ಮನಗಂಡಿವೆ. ಮಧ್ಯಮ ವರ್ಗದವರು ಹೆಚ್ಚು ಹಾನಿಗೊಳಗಾಗಿದ್ದಾರೆ ಮತ್ತು ಈಗ ವೈರಸ್ ಹಳ್ಳಿಗಳಿಗೆ ಹರಡುತ್ತಿದೆ. ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಅದು ವ್ಯಾಪಕ ತೊಂದರೆ ಸೃಷ್ಟಿಸಿದೆ ಎಂಬ ಅಂಶ ಈ ಕಳವಳಕ್ಕೆ ಕಾರಣ ಎಂದು ವರದಿಯಾಗಿದೆ.


  "ನೀವು ಯಾರನ್ನಾದರೂ ಕಳೆದುಕೊಂಡರೆ, ದುಃಖ ಮತ್ತು ಕೋಪವು ದೀರ್ಘಕಾಲದವರೆಗೆ ಉಳಿಯಲಿದೆ ಮತ್ತು ಅದು ಯಾವುದೇ ರೂಪದಲ್ಲಿ ವ್ಯಕ್ತವಾಗುತ್ತದೆ" ಎಂದು ಸಂಘ ಪರಿವಾರದ ನಾಯಕರೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ. ಭವಿಷ್ಯದ ಚುನಾವಣೆಯಲ್ಲಿ ಬಿಜೆಪಿಗೆ ಈ ಸಾಂಕ್ರಾಮಿಕ ದೊಡ್ಡ ಹಿನ್ನಡೆ ಮಾಡಬಹುದು ಎಂಬ ಆತಂಕ ಅನೇಕ ಉನ್ನತ ನಾಯಕರಲ್ಲಿ ಕಂಡು ಬರುತ್ತಿದೆ.


  ಮುಂದಿನ ಲೋಕಸಭಾ ಚುನಾವಣೆಗೆ (2024) ಇನ್ನೂ ಮೂರು ವರ್ಷಗಳು ಉಳಿದಿರುವಾಗ, ಪ್ರಧಾನಿ ಮೋದಿ ಮೂರನೇ ಅವಧಿಗೆ ಪ್ರಯತ್ನಿಸಲಿದ್ದರೆ, ಉತ್ತರ ಪ್ರದೇಶದಂತಹ ರಾಜ್ಯಗಳು ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿವೆ. ಉತ್ತರಪ್ರದೇಶದ ಪಂಚಾಯತ್ ಚುನಾವಣೆಯ ಫಲಿತಾಂಶಗಳು ಕೂಡ ಬಿಜೆಪಿ ಚಿಂತಿತವಾಗುವಂತೆ ಮಾಡಿದೆ.


  ಈ ತರಹದ ಅಸಮಾಧಾನವು ಈಗ ಮುನ್ನೆಲೆಗೆ ಬಂದಿದೆ. ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ, ಆಮ್ಲಜನಕದ ಕೊರತೆ, ವೈದ್ಯಕೀಯ ಸಲಕರಣೆಗಳ ಬ್ಲ್ಯಾಕ್ ಮಾರ್ಕೆಟ್ ಮತ್ತು ತಮ್ಮ ಕ್ಷೇತ್ರ ಬರೇಲಿಯಲ್ಲಿ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿಕೊಳ್ಳುವ ವಿಳಂಬ ಕುರಿತಾಗಿ ಬರೆದ ಪತ್ರ ಈಗ ವೈರಲ್ ಆಗಿದೆ.


  ಯಾವುದೇ ಹಾನಿ ನಿಯಂತ್ರಣಕ್ಕೆ ಒಂದು ಬದಲಾವಣೆಯ ಅಗತ್ಯವಿರುತ್ತದೆ ಎಂಬ ಬಲವಾದ ನಂಬಿಕೆ ಇದೆ ಎಂದು ಪರಿವಾರ ಮತ್ತು ಪಕ್ಷದ ನಾಯಕರು ಹೇಳುತ್ತಾರೆ. ಇದರಲ್ಲಿ ಕೆಲವು ಮಂತ್ರಿಗಳನ್ನು ತೆಗೆದು, ಹೊಸ ಮುಖಗಳಿಗೆ ದಾರಿ ಮಾಡಿಕೊಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


  ಕೋವಿಡ್ ತುರ್ತುಸ್ಥಿತಿಯು ಆರೋಗ್ಯದ ಮೂಲಸೌಕರ್ಯ ಮತ್ತು ಸರ್ಕಾರದ ಸಿದ್ಧತೆಯ ವೈಫಲ್ಯವನ್ನು ಬಹಿರಂಗಪಡಿಸಿದೆ ಎಂದು ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಹೇಳುತ್ತದೆ.


  ಆರೋಗ್ಯವು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂಬ ವಾದ ನಿಲ್ಲಲಾರದು. ಏಕೆಂದರೆ ಇದು ಕಳೆದ ವರ್ಷದಿಂದ ಕೋವಿಡ್ ವಿರುದ್ಧದ ಹೋರಾಟವನ್ನು ಕೇಂದ್ರವೇ ಮುನ್ನಡೆಸಿದೆ ಎಂಬುದು ಜನರಿಗೆ ಗೊತ್ತಿದೆ ಮತ್ತು ವೈಫಲ್ಯಕ್ಕೆ ಕೇಂದ್ರವೇ ಕಾರಣ ಎಂಬುದು ಜನರ ಅರಿವಿಗೆ ಬಂದಿದೆ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕೆಲವು ನಾಯಕರು ಹೇಳುತ್ತಾರೆ.


  "ಜನರು ಕೇಂದ್ರ ನಾಯಕತ್ವದಿಂದ ನಿರಾಶೆಗೊಂಡಿದ್ದಾರೆ ಮತ್ತು ಪ್ರಸ್ತುತ ಪರಿಸ್ಥಿತಿಗೆ ಯಾವುದೇ ಕ್ರಮಗಳ ಕೊರತೆಯನ್ನು ಅವರು ದೂಷಿಸುತ್ತ, ಕೇಂದ್ರವನ್ನು ಶಪಿಸುತ್ತಿದ್ದಾರೆ. ಈ ಸಂದರ್ಭ ಈಗ ನಮ್ಮ ನಿಯಂತ್ರಣ ದಾಟಿ ಹೋಗಿದೆ" ಎಂದು ಮೂಲಗಳು ತಿಳಿಸಿವೆ.


  ಕೋವಿಡ್ ಪ್ರಕರಣಗಳು ದೇಶದಲ್ಲಿ ಉಲ್ಬಣ ಕಾಣುತ್ತಿರುವಾಗ, ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿಯವರ ಅಭಿಯಾನವು 'ತಪ್ಪು ಸಂದೇಶ' ವನ್ನು ಕಳುಹಿಸಿದೆ ಎಂದು ಹಿರಿಯ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಉನ್ನತ ನಾಯಕರು ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮಾಡುತ್ತಿದ್ದರು ಮತ್ತು ಮಾಸ್ಕ್ ಧರಿಸದೇ ಬೃಹತ್ ರ‍್ಯಾಲಿ ಮತ್ತು ರೋಡ್ ಶೋಗಳಿಗೆ ಹಾಜರಾಗಿದ್ದರು, ಸಾರ್ವಜನಿಕ ಸುರಕ್ಷತೆಗಿಂತ ಮತಗಳಿಗೆ ಆದ್ಯತೆ ನೀಡುತ್ತಿದ್ದರು. ಇದು ಜಾಗತಿಕ ಮಾಧ್ಯಮಗಳಲ್ಲಿ ಕೂಡ ಬಿತ್ತರವಾಗಿ ಬಿಜೆಪಿ ಬಗ್ಗೆ ಕೆಟ್ಟ ಚಿತ್ರಣ ಮೂಡಲು ಕಾರಣವಾಗಿದೆ ಎಂದು ಅನೇಕ ನಾಯಕರು ಈಗ ಹೇಳುತ್ತಿದ್ದಾರೆ.


  ಹೀಗೆ ಆಕ್ರೋಶ ಮತ್ತು ತಳಮಳಗಳನ್ನು ವ್ಯಕ್ತಪಡಿಸುವ ಇಂತಹ ನಾಯಕರು ಸರ್ಕಾರದೊಳಗಿನ ಸಂವಹನದ ಕೊರತೆಯನ್ನು ದೂರುತ್ತಾರೆ. "ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಮೂರನೇ ಅಲೆ ಬಗ್ಗೆ ನಮಗೆ ಎಚ್ಚರಿಕೆ ನೀಡುತ್ತಾರೆ. ಆದರೆ ಅವರು ಎರಡನೇ ಅಲೆಯ ಬಗ್ಗೆ ಎಂದಿಗೂ ಮಾತನಾಡಲಿಲ್ಲ" ಎಂದು ಒಬ್ಬ ನಾಯಕ ವಾಗ್ದಾಳಿ ನಡೆಸಿದರು.


  ಬಿಜೆಪಿಯ ‘ಪ್ರಸಿದ್ಧ’ ಸಂಘಟನಾ ಶಕ್ತಿಗಳು ಮತ್ತು ಯಂತ್ರೋಪಕರಣಗಳು ಈ ಸಂದರ್ಭದದಲ್ಲಿ ಜನರ ನಡುವೆ ಕಾಣಲೇ ಇಲ್ಲ. ಕಳೆದ ವರ್ಷ ಪಕ್ಷದ ಸಂಘಟನೆಯು ಲಾಕ್‌ಡೌನ್ ಸಮಯದಲ್ಲಿ ಆಹಾರ ಪ್ಯಾಕೆಟ್‌ಗಳು ಮತ್ತು ಇತರ ಪರಿಹಾರಗಳನ್ನು ಏರ್ಪಡಿಸಿದ್ದಕ್ಕಿಂತ ಭಿನ್ನವಾಗಿ ಅವರು ಈ ಬಾರಿ ಜನರಿಗೆ ಯಾವ ಸಹಾಯವನ್ನು ನೀಡುತ್ತಿಲ್ಲ ಎಂದು ಪಕ್ಷದ ಆಂತರಿಕ ಮೂಲಗಳು ಹೇಳುತ್ತಿವೆ.


  ವಿಚಿತ್ರ ಮತ್ತು ಕಾರ್ಯಸಾಧುವಲ್ಲದ ನಿಯಮಗಳು ಮತ್ತು ನಿಬಂಧನೆಗಳಲ್ಲಿ ಸಿಲುಕಿರುವ ಲಸಿಕಾ ಅಭಿಯಾನ' ಕೂಡ ಸರ್ಕಾರದ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹಲವು ನಾಯಕರು ಆರೋಪಿಸಿದ್ದಾರೆ.


  ಒಂದನೇ ಅಲೆ ನಂತರ ಅವಕಾಶವಿತ್ತು, ಸಮಯವಿತ್ತು. ಆಗ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿತ್ತು ಎಂದು ನಾಯಕರು ಗಮನ ಸೆಳೆದಿದ್ದಾರೆ. ಆದರೆ ಸರ್ಕಾರದಲ್ಲಿರುವವರು ಕೇಂದ್ರದ ಕೋವಿಡ್ ನಿರ್ವಹಣೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಎರಡನೇ ಅಲೆಯ ಪರಿಮಾಣದ ಬಗ್ಗೆ ಹೆಚ್ಚಿನ ಎಚ್ಚರಿಕೆ ಇರಲಿಲ್ಲ’ ಎಂದು ಅವರು ಹೇಳುತ್ತಾರೆ. “ಎರಡನೇ ಅಲೆ ಎದುರಿಸಲು ಸರ್ಕಾರ ಸಿದ್ಧವಾಗಿರಲಿಲ್ಲ ಎಂಬುದು ಸತ್ಯ, ಆದರೆ ಈಗ ಎಲ್ಲಾ ಕೈಗಳು ನಿಯಂತ್ರಣ ತಪ್ಪಿವೆ’ ಎಂದು ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ.


  "ಆಮ್ಲಜನಕದ ಪೂರೈಕೆಯನ್ನು ಬಲಪಡಿಸಲಾಗುತ್ತಿದೆ. ವ್ಯಾಕ್ಸಿನೇಷನ್ ಅಭಿಯಾನ ಸುಗಮವಾಗಿರಲಿದೆ. ನಮ್ಮ ಲಸಿಕೆ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ನಾವು ಹೆಚ್ಚಿನ ಲಸಿಕೆಗಳನ್ನು ಪಡೆಯುತ್ತೇವೆ" ಎಂದು ಕೆಲವು ನಾಯಕರು ಆಶಾಭಾವ ಹೊಂದಿದ್ದಾರೆ. ಪ್ರಧಾನಿ ವೈಯಕ್ತಿಕವಾಗಿ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಕೆಲವರು ಸಮಾಧಾನದ ಮಾತು ಆಡುತ್ತಿದ್ದಾರೆ.


  ಪ್ರಧಾನಿ ಮೋದಿ ಪರಿಸ್ಥಿತಿಯ ತೀವ್ರತೆ ತಮ್ಮ ಗಮನಕ್ಕೆ ಬಂದ ಕೂಡಲೇ ಅವರ ಬಂಗಾಳ ಚುನಾವಣಾ ಪ್ರಚಾರದ ಅಭಿಯಾನವನ್ನು ಮೊಟಕುಗೊಳಿಸಿದರು ಎಂದು ಕೆಲವು ನಾಯಕರು ಹೇಳುತ್ತಾರೆ. ಗಂಗಾ ನದಿಯ ದಡದಲ್ಲಿ ನಡೆಯುತ್ತಿದ್ದ ಕುಂಭಮೇಳ ಕೊರೋನಾ ಸೂಪರ್ ಸ್ಪ್ರೆಡರ್ ಆಗುತ್ತಿದೆ ಎಂದು ಅರಿವಾದಾಗ ಮೋದಿ, ಕುಂಭಮೇಳ ಸಾಂಕೇತಿಕವಾಗಿ ನಡೆಯಲಿ ಎಂದು ಹೇಳಿದರು ಎಂದು ಕೆಲವು ನಾಯಕರು ಮೋದಿಯವರ ಸಮರ್ಥನೆ ಮಾಡುತ್ತಾರೆ.


  ಜನರು ಕೋಪಗೊಂಡಿದ್ದಾರೆ ಮತ್ತು ನೋವಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ, ಆದರೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸರ್ಕಾರ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ಈ ಕೆಲಸದಲ್ಲಿ ಬಿಜೆಪಿ ಆಡಳಿತದ ರಾಜ್ಯಗಳು ಮುಂಚೂಣಿಯಲ್ಲಿವೆ” ಎಂದು ಮತ್ತೊಬ್ಬ ನಾಯಕರು ಹೇಳುತ್ತಾರೆ. ಉದಾಹರಣೆಗೆ, ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಕೋವಿಡ್ ಟ್ರೇಸಿಂಗ್ ಮಾಡಲು, ಪರೀಕ್ಷಿಸಲು ಮತ್ತು ಚಿಕಿತ್ಸೆ ನೀಡಲು ಹಳ್ಳಿಗಳಲ್ಲಿ ವಿಶೇಷ ಚಾಲನೆ ನೀಡಿದೆ ಎಂದು ಅವರು ವಾದಿಸುತ್ತಾರೆ.


  ಇದನ್ನೂ ಓದಿ: Mamata Banerjee: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 43 ಟಿಎಂಸಿ ನಾಯಕರು; ಇಂದೇ ಮೊದಲ ಕ್ಯಾಬಿನೆಟ್ ಸಭೆ ಕರೆದ ಮಮತಾ ಬ್ಯಾನರ್ಜಿ


  ಬಿಕ್ಕಟ್ಟಿನ ಈ ಸಮಯದಲ್ಲಿ ವಿರೋಧ ಪಕ್ಷದ ಆಡಳಿತದ ರಾಜ್ಯಗಳು “ರಾಜಕೀಯ ಮಾಡುತ್ತಿವೆ” ಮತ್ತು ತಮ್ಮ ವೈಫಲ್ಯವನ್ನು ಕೇಂದ್ರದ ಮೇಲೆ ಹೇರುತ್ತಿವೆ ಎಂದು ಮೋದಿ ಬೆಂಬಲಿಗ ನಾಯಕರು ಆರೋಪಿಸುತ್ತಾರೆ. ಈ ಸಂದರ್ಭದಲ್ಲಿ ಅವರು, ದೆಹಲಿ ಮತ್ತು ಮಹಾರಾಷ್ಟ್ರ ಸರ್ಕಾರಗಳನ್ನು ದೂಷಿಸುತ್ತಾರೆ.


  "ಸಾರ್ವಜನಿಕ ಆರೋಗ್ಯವು ರಾಜ್ಯ ವಿಷಯವಾಗಿದ್ದರೂ, ಸಾಂಕ್ರಾಮಿಕ ರೋಗಕ್ಕೆ ರಾಷ್ಟ್ರ ಮಟ್ಟದ ಸಮನ್ವಯ ಮತ್ತು ಗಣನೀಯ ಸಂಪನ್ಮೂಲಗಳು ಬೇಕಾಗಿರುವುದರಿಂದ ಕೇಂದ್ರ ಸರ್ಕಾರವು ಕೋವಿಡ್ ನಿರ್ವಹಣೆಯಲ್ಲಿ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಅಂಕಣದಲ್ಲಿ ಬರೆದಿದ್ದಾರೆ.

  Published by:MAshok Kumar
  First published: