ಪೌರತ್ವ ಕಾಯ್ದೆ ಕಿಚ್ಚು: ಗೋಲ್ಡ್​​ ಮೆಡಲ್​ ತಿರಸ್ಕರಿಸಿದ ಪಾಂಡಿಚೇರಿ ಯುನಿವರ್ಸಿಟಿ ಟಾಪರ್​​

ಸಭಾಂಗಣದ ಹೊರಗಿನಂದಲೇ ರಾಷ್ಟ್ರಪತಿಯವರ ಭಾಷಣವನ್ನು ಕೇಳಿದೆ. ಅವರು ನನ್ನನ್ನು ಯಾಕೆ ಹೊರಗೆ ಕಳಿಸಿದರು ಎಂಬುದು ನನಗೆ ಗೊತ್ತಿಲ್ಲ. ಬಹುಶಃ ನಾನು ಪೌರತ್ವ ಮಸೂದೆ ಕಾಯ್ದೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾದ ಹಿನ್ನೆಲೆ ಈ ರೀತಿ ಮಾಡಿರಬಹುದು ಎಂದು ರಬೀಹಾ ಹೇಳಿದ್ದಾರೆ.

  • Share this:
ಚೆನ್ನೈ(ಡಿ.24): ಪಾಂಡಿಚೇರಿ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪ್ರಮಾಣಪತ್ರ ನೀಡುವಾಗ, ವಿದ್ಯಾರ್ಥಿನಿಯನ್ನು ಒಳಗೆ ಬಿಡದ ಹಿನ್ನೆಲೆ ಬಳಿಕ ಆಕೆ ಚಿನ್ನದ ಪದಕವನ್ನು ತಿರಸ್ಕರಿದ್ದಾರೆ.

ಚಿನ್ನದ ಪದಕ ವಿಜೇತೆ ರಬೀಹಾ ಅಬ್ದುರೆಹಿಮ್​​​ ಪಾಂಡಿಚೇರಿ ವಿಶ್ವವಿದ್ಯಾಲಯದಲ್ಲಿ ಸಂವಹನ ಮಾಧ್ಯಮ ವಿಭಾಗದ ವಿದ್ಯಾರ್ಥಿನಿ. ರಾಷ್ಟ್ರೀಯ ಪೌರತ್ವ ಮಸೂದೆ ಕಾಯ್ದೆ ವಿರೋಧಿಸಿ ಧ್ವನಿ ಎತ್ತಿದ ಹಿನ್ನೆಲೆ, ಸೂಪರಿಂಡೆಂಟ್​ ಪೊಲೀಸ್ (ಎಸ್​ಪಿ) ಆಕೆಯನ್ನು ಘಟಿಕೋತ್ಸವ ಸಮಾರಂಭದಿಂದ ಹೊರಗೆ ಬರುವಂತೆ ಹೇಳಿದರು. ಸಂವಹನ ಮಾಧ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಟಾಪರ್​ ಆಗಿರುವ ರಬೀಹಾ, ನಾನು ಒಂದು ಗಂಟೆಗೂ ಹೆಚ್ಚು ಸಮಯ ಘಟಿಕೋತ್ಸವ ಸಭಾಂಗಣದಿಂದ ಹೊರಗೆ ಕಾಯುತ್ತಿದ್ದೆ ಎಂದು ಹೇಳಿದ್ದಾರೆ.

ಸಿಎಎ, ಎನ್​ಆರ್​ಸಿ ವಿರೋಧಿಸಿ ಇಂದು ಚಿಕ್ಕಬಳ್ಳಾಪುರ ಬಂದ್​; ರಾಮನಗರದಲ್ಲೂ ಬೃಹತ್​ ಪ್ರತಿಭಟನೆ

ಸಭಾಂಗಣದ ಹೊರಗಿನಂದಲೇ ರಾಷ್ಟ್ರಪತಿಯವರ ಭಾಷಣವನ್ನು ಕೇಳಿದೆ. ಅವರು ನನ್ನನ್ನು ಯಾಕೆ ಹೊರಗೆ ಕಳಿಸಿದರು ಎಂಬುದು ನನಗೆ ಗೊತ್ತಿಲ್ಲ. ಬಹುಶಃ ನಾನು ಪೌರತ್ವ ಮಸೂದೆ ಕಾಯ್ದೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾದ ಹಿನ್ನೆಲೆ ಈ ರೀತಿ ಮಾಡಿರಬಹುದು ಎಂದು ರಬೀಹಾ ಹೇಳಿದ್ದಾರೆ.ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಲು ನನಗೆ ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಪೊಲೀಸ್​ ಅಧಿಕಾರಿಗಳನ್ನು ಕೇಳಿದಾಗ, ನಮಗೆ ಇದರ ಬಗ್ಗೆ ಖಚಿತತೆ ಇಲ್ಲ. ಎಸ್​​ಪಿ ಹೇಳಿದ ರೀತಿಯಲ್ಲಿ ಮಾಡಿದ್ದೇವೆ ಎಂದರು.

ರಾಷ್ಟ್ರಪತಿ ರಾಮನಾಥ ಕೋವಿಂದ ಘಟಿಕೋತ್ಸವ ಸಮಾರಂಭದಿಂದ ನಿರ್ಮಿಸಿದ ಬಳಿಕ, ರಬೀಹಾ ಅವರನ್ನು ಸಭಾಂಗಣದ ಒಳಗೆ ಬಿಡಲಾಯಿತು. ಪ್ರಮಾಣಪತ್ರವನ್ನು ಸ್ವೀಕರಿಸಿದ ರಬೀಹಾ, ಪ್ರತಿಭಟನೆಯ ಸಂಕೇತವಾಗಿ ಚಿನ್ನದ ಪದಕವನ್ನು ತಿರಸ್ಕರಿಸಿದರು."ಇದು ನನಗೆ ಮತ್ತು ನನ್ನ ಸಮುದಾಯಕ್ಕೆ ಆದ ದೊಡ್ಡ ಅವಮಾನ. ಚಿನ್ನದ ಪದಕವನ್ನು ತಿರಸ್ಕರಿಸಿದ ನನ್ನ ನಡೆ ಕೇಂದ್ರ ಸರ್ಕಾರಕ್ಕೆ ಒಂದು ಸಂದೇಶ ನೀಡುತ್ತದೆ ,"ಎಂದು ಭರವಸೆ ವ್ಯಕ್ತಪಡಿಸಿದರು.

ಜಾರ್ಖಂಡ್ ಚುನಾವಣೆ: ಬಿಜೆಪಿಗೆ ಮುಖಭಂಗ; ಜೆಎಂಎಂ ಹಾಗೂ ಮಿತ್ರರಿಗೆ ಗೆಲುವಿನ ನಗೆ

"ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂಕೇತವಾಗಿ ನಾನು ಚಿನ್ನದ ಪದಕವನ್ನು ತಿರಸ್ಕಾರ ಮಾಡಿದ್ದೇನೆ. ಇದು ನನಗೆ ಮತ್ತು ಸದ್ಯ ಪ್ರತಿಭಟನೆ ನಡೆಸುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಆದ ಅವಮಾನ. ಇದು ನಾನು ಪ್ರತಿಭಟನೆ ಮಾಡುತ್ತಿರುವ ಮಾರ್ಗವಾಗಿದೆ ಮತ್ತು ಭಾರತದ ಎಲ್ಲಾ ವಿದ್ಯಾರ್ಥಿಗಳ ಒಗ್ಗಟ್ಟಾಗಿದೆ. ಪ್ರತಿಯೊಬ್ಬ ಹುಡುಗ, ಹುಡುಗಿ, ಮುಸ್ಲಿಮ್, ಹಿಂದು ಮತ್ತು ಪ್ರತಿಯೊಬ್ಬ ಭಾರತೀಯನೂ ಕೂಡ ಪೌರತ್ವ ಮಸೂದೆ ಕಾಯ್ದೆ ಮತ್ತು ಪೌರತ್ವ ನೋಂದಣಿ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ," ಎಂದು ರಬೀಹಾ ನ್ಯೂಸ್​ 18ಗೆ ತಿಳಿಸಿದ್ದಾರೆ.

Published by:Latha CG
First published: