ಅಬ್ಬಬ್ಬಾ. . . .ಇದು ವಿಶ್ವದ ಅತ್ಯಂತ ದೊಡ್ಡ ಮರಳಿನ ಅರಮನೆಯಂತೆ!

ಈ ಮರಳಿನ ಅರಮನೆ ನಿಖರವಾದ ಎತ್ತರ 21.16 ಮೀಟರ್. ಈ ಹಿಂದೆ ಅಂದರೆ, 2019ರಲ್ಲಿ ಜರ್ಮನಿಯಲ್ಲಿ ನಿರ್ಮಿಸಲಾಗಿದ್ದ ಮರಳಿನ ಅರಮನೆಗಿಂತ 3 ಮೀಟರ್ ಅಧಿಕ ಎತ್ತರ ಹೊಂದಿದೆ.

ಮರಳಿನ ಅರಮನೆ

ಮರಳಿನ ಅರಮನೆ

  • Share this:
ಜಗತ್ತಿನ ಯಾವುದೇ ಮೂಲೆಯಲ್ಲೇ ಆಗಲಿ, ಮಕ್ಕಳನ್ನು ಸಮುದ್ರ ತೀರದ ಮರಳಿನಲ್ಲಿ ಆಡಲು ಬಿಟ್ಟರೆ ಏನು ಮಾಡುತ್ತಾರೆ? ಮರಳಿನಲ್ಲಿ ತಮ್ಮ ಕಲ್ಪನೆಯ ಆಕೃತಿಗಳನ್ನು ಮಾಡುತ್ತಾರೆ. ಅದರಲ್ಲೂ ಮರಳಿನಲ್ಲಿ ಅರಮನೆ ಕಟ್ಟದವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಆದರೆ ಡೆನ್ಮಾರ್ಕ್‌ನಲ್ಲಿ  ಒಂದು ಮರಳಿನ ಅರಮನೆ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದು, ಅದರ ಫೋಟೋ ತಗೆದುಕೊಳ್ಳಲು ಜನ ನಾಮುಂದು ತಾ ಮುಂದು ಎಂದು ಮುಗಿಬೀಳುತ್ತಿದ್ದಾರೆ. ಸಮುದ್ರದ ಅಲೆಗೆ ಕೊಚ್ಚಿ ಹೋಗುವ ಮರಳಿನ ಅರಮನೆಯಲ್ಲಿ ಅಂತದ್ದೇನಪ್ಪಾ ವಿಶೇಷ ಇದೆ ಅಂತೀರಾ? ಖಂಡಿತಾ ವಿಶೇಷ ಇದೆ. ಏಕೆಂದರೆ ಅದು ವಿಶ್ವದ ಅತ್ಯಂತ ದೊಡ್ಡ ಮರಳಿನ ಅರಮನೆಯಂತೆ! 5,000 ಟನ್ ಮರಳನ್ನು ಬಳಸಿ ನಿರ್ಮಿಸಲಾದ ಈ ಮರಳಿನ ಅರಮನೆಯ ಎತ್ತರ 20 ಮೀಟರ್‌ಗಿಂತಲೂ ಹೆಚ್ಚಿದೆಯಂತೆ.

ಈ ಮರಳಿನ ಅರಮನೆ ನಿಖರವಾದ ಎತ್ತರ 21.16 ಮೀಟರ್. ಈ ಹಿಂದೆ ಅಂದರೆ, 2019ರಲ್ಲಿ ಜರ್ಮನಿಯಲ್ಲಿ ನಿರ್ಮಿಸಲಾಗಿದ್ದ ಮರಳಿನ ಅರಮನೆಗಿಂತ 3 ಮೀಟರ್ ಅಧಿಕ ಎತ್ತರ ಹೊಂದಿದೆ.
ದ ಗಾರ್ಡಿಯನ್‍ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಸಂಕೀರ್ಣವಾದ ಅಲಂಕಾರವುಳ್ಳ ಮರಳಿನ ಅರಮನೆಯ ರಚನೆಯು ಚಿಕ್ಕ ಸಮುದ್ರ ತೀರದ ಪಟ್ಟಣ ಬ್ಲೋಕುಸ್‍ನಲ್ಲಿರುವ ಪಿರಮಿಡ್‍ನ್ನು ಹೋಲುತ್ತದೆಯಂತೆ. ತಮ್ಮ ಪಟ್ಟಣದ ಸ್ಥಳೀಯ ವೈಶಿಷ್ಟ್ಯವನ್ನು ಮರಳಿನ ಅರಮನೆ ರೂಪದಲ್ಲಿ ನಿರ್ಮಿಸಿರುವುದು ಬ್ಲೋಕುಸ್ ಪಟ್ಟಣದ ಜನರಿಗೆ ಸಂತಸ ತಂದಿದೆ.

ಇದನ್ನೂ ಓದಿ: Sunny Leone: ಮತ್ತೆ ಸ್ಯಾಂಡಲ್​ವುಡ್​ ಕದ ತಟ್ಟಿದ ಸನ್ನಿ ಲಿಯೋನ್​: ಒಂದು ಹಾಡಿಗೆ ಮಾದಕ ತಾರೆ ಪಡೆದ ಸಂಭಾವನೆ ಎಷ್ಟು ಗೊತ್ತಾ..?

ವಿಶ್ವದ 30 ಅತ್ಯಂತ ಪರಿಣಿತ ಶಿಲ್ಪಿಗಳ ಸಹಾಯದೊಂದಿಗೆ ವೆಲ್‍ಫ್ರೈಡ್ ಸ್ಟಿಜ್‍ಗೆರ್ ಎಂಬ ಡಚ್ ಮರಳಿನ ಅರಮನೆ ಕಲಾಕೃತಿ ರಚನೆಕಾರ ಇದನ್ನು ನಿರ್ಮಿಸಿದ್ದಾರೆ. ಕೊರೋನಾ ವೈರಸ್ ವಿಶ್ವದಾದ್ಯಂತ ಹೊಂದಿದ್ದ ಶಕ್ತಿಯನ್ನು ಈ ಅರಮನೆ ಪ್ರತಿನಿಧಿಸಬೇಕೆಂದು ತಾವು ಬಯಸಿದ್ದಾಗಿ ವೆಲ್‍ಫ್ರೆಡ್ ಹೇಳಿದ್ದಾರೆ.

ಸುಮಾರು ಒಂದು ವರ್ಷದ ಹಿಂದೆ ಈ ಮರಳಿನ ಅರಮನೆಯ ನಿರ್ಮಾಣ ಆರಂಭವಾಯಿತು. ಈ ಮರಳು ಅರಮನೆಯ ಮೇಲ್ಭಾಗದಲ್ಲಿ ಇರುವ ವೈರಸ್ ಆಕೃತಿಯು ಕೋವಿಡ್ ಸಾಂಕ್ರಾಮಿಕದಿಂದ ಪ್ರೇರಿತವಾಗಿದೆ. ಅದು ವಿಶ್ವೆದೆಲ್ಲೆಡೆ ಜನರ ಬದುಕನ್ನು ಆಳುತ್ತಿದೆ. ನಾವೇನು ಮಾಡಬೇಕು ಎಂಬುದನ್ನು ಅದು ತಿಳಿಸುತ್ತಿದೆ. . . . ಕುಟುಂಬದಿಂದ ದೂರವಿರಿ ಮತ್ತು ಒಳ್ಳೆಯ ಜಾಗಗಳಿಗೆ ಹೋಗಬೇಡಿ, ಚಟುವಟಿಕೆಗಳನ್ನು ಮಾಡಬೇಡಿ, ಮನೆಯಲ್ಲಿಯೇ ಇರಿ ಎಂದು ಅದು ಹೇಳುತ್ತಿದೆ ಎಂದು ಕಲಾವಿದ ವೆಲ್‍ಫ್ರೈಡ್ ಸ್ಟಿಜ್‍ಗೆರ್ ದ ಗಾರ್ಡಿಯನ್‍ಗೆ ಹೇಳಿದ್ದಾರೆ.

ಇದನ್ನೂ ಓದಿ: Duniya Vijay: ಕೊರೋನಾದಿಂದ ಚೇತರಿಸಿಕೊಂಡಿದ್ದ ದುನಿಯಾ ವಿಜಯ್​ ತಾಯಿ ವಿಧಿವಶ..!

ಇದನ್ನು ಕೇವಲ ಮರಳಿನಿಂದ ಕಟ್ಟಲಾಗಿದೇಯೇ? ಇಲ್ಲ. ಈ ಕಲಾಕೃತಿಯಲ್ಲಿರುವ ಮರಳಿನಲ್ಲಿ ಹತ್ತು ಶೇಕಡಾ ಜೇಡಿ ಮಣ್ಣು ಮತ್ತು ಒಂದು ಪದರದಷ್ಟು ಅಂಟು ಕೂಡ ಬಳಸಲಾಗಿದೆ. ತೀವ್ರ ಚಳಿ ಮತ್ತು ಜೋರಾಗಿ ಬೀಸುವ ಗಾಳಿಯ ವಾತಾವರಣದಲ್ಲಿ ಈ ಮರಳಿನ ಅರಮನೆ ಭದ್ರವಾಗಿ ಉಳಿಯಲಿ ಎಂಬ ಕಾರಣಕ್ಕಾಗಿ ಅವುಗಳನ್ನು ಬಳಸಲಾಗಿದೆ. ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಸುಮಾರಿಗೆ ಈ ಮರಳಿನ ಅರಮನೆ ಪೂರ್ಣಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Anitha E
First published: