5 ತಿಂಗಳಿಗೆ ಜನಿಸಿದ ಮಗು ಬದುಕಿದ್ದೇ ಪವಾಡ; ಕಳೆದ ವರ್ಷ ಸೇಬಿನ ತೂಕದಷ್ಟಿದ್ದ ಮಗು ಈಗ ಎಷ್ಟು ಕೆ.ಜಿ ಇದೆ ಗೊತ್ತಾ?

ಅವಧಿಗಿಂತ 4 ತಿಂಗಳು ಮುಂಚೆ ಜನಿಸಿದ ಮಗು ಸುಮಾರು 400 ಗ್ರಾಂ ಇರುತ್ತೆ ಎಂದು ವೈದ್ಯರು ನಿರೀಕ್ಷಿಸಿದ್ದರು. ಆದರೆ ಕೇವಲ 212 ಗ್ರಾಂ ಇತ್ತು.

ವಿಶ್ವದ ಅತ್ಯಂತ ಸಣ್ಣ ಗಾತ್ರದ ಮಗು

ವಿಶ್ವದ ಅತ್ಯಂತ ಸಣ್ಣ ಗಾತ್ರದ ಮಗು

 • Share this:
  ಕೆಲವು ಗರ್ಭಿಣಿಯರಿಗೆ ಅವಧಿ ಪೂರ್ವ ಹೆರಿಯಾಗುವುದು ಸಹಜ. ಕೆಲ ಆರೋಗ್ಯ ಸಮಸ್ಯೆ ಅಥವಾ ಇತರೆ ಕಾರಣಗಳಿಂದ 9 ತಿಂಗಳಿಗೆ ಜನಿಸುವ ಮಗು 7 ಅಥವಾ 8 ನೇ ತಿಂಗಳಿಗೆ ಹುಟ್ಟುತ್ತದೆ. ಆಗ ನಿಗದಿತ ಅವಧಿಗೂ ಮುನ್ನ ಹುಟ್ಟಿದ ಮಕ್ಕಳನ್ನು ಸ್ವಲ್ಪ ಹೆಚ್ಚಾಗಿ ವಿಶೇಷ ಆರೈಕೆ ಮಾಡಬೇಕಾಗುತ್ತದೆ. ಮಗು 7 ಅಥವಾ 8ನೇ ತಿಂಗಳಿಗೆ ಜನಿಸುವುದನ್ನು ನಾವೆಲ್ಲರೂ ನೋಡಿದ್ದೇವೆ, ಕೇಳಿದ್ದೇವೆ. ಅದಕ್ಕೂ ಮುಂಚೆ ಜನಿಸಿದರೆ ಆ ಮಗು ಬದುಕುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಆದರೆ ಸಿಂಗಾಪೂರ್​ನಲ್ಲಿ ಕಳೆದ ವರ್ಷ ಒಬ್ಬ ತಾಯಿಗೆ 5 ತಿಂಗಳಿಗೆ ಮಗು ಜನಿಸಿತ್ತು. ಆಕೆ ಬೇಗನೇ ಅಂದರೆ 25 ವಾರಗಳಿಗೆ ಅವಧಿಪೂರ್ವ ಮಗವಿಗೆ ಜನ್ಮ ನೀಡಿದ್ದಳು. ಆಗ ಮಗು ಕೇವಲ ಒಂದು ಸೇಬಿನ ತೂಕವಿತ್ತು. ಅಂದರೆ 212 ಗ್ರಾಂ ತೂಕವಿತ್ತು. ಸತತ 13 ತಿಂಗಳ ನಿರಂತರ ಆರೈಕೆ ಮತ್ತು ಪೋಷಣೆಯಿಂದಾಗಿ ಈಗ ಮನೆ ಸೇರಿದೆ. ಈ ಮಗು ಹುಟ್ಟಿದಾಗ ‘ವಿಶ್ವದ ಅತ್ಯಂತ ಸಣ್ಣ ಮಗು‘ ಎಂದು ಹೇಳಲಾಗಿತ್ತು.

  ಕ್ವೆಕ್​ ಯು ಜ್ಸೌನ್​ ಕಳೆದ 2020 ಜೂನ್​ 9ರಂದು ಜನಿಸಿತ್ತು. ವರದಿಗಳ ಪ್ರಕಾರ, ತಾಯಿಗೆ ಕೇವಲ 25 ವಾರಗಳಿಗೆ ಹೆರಿಗೆಯಾಗಿತ್ತು. ಹೀಗಾಗಿ ಆ ಮಗುವನ್ನು ಆಸ್ಪತ್ರೆ ಸಿಬ್ಬಂದಿ ವಿಶೇಷ ಕಾಳಜಿಯೊಂದಿಗೆ ಇರಿಸಿದ್ದರು. ಆಸ್ಪತ್ರೆ ಮೂಲಗಳ ಪ್ರಕಾರ, ತಾಯಿ ಯು ಜ್ಸೌನ್​ಗೆ ಪ್ರಿ-ಎಕ್ಲಾಂಪ್ಸಿಯಾ ಸಮಸ್ಯೆ ಇರುವುದು ತಿಳಿದ ಬಳಿಕ, ವೈದ್ಯರು ತುರ್ತಾಗಿ ಸಿಜೇರಿಯನ್(ಸಿ-ಸೆಕ್ಷನ್) ಮಾಡಿ ಮಗುವನ್ನು ಹೊರ ತೆಗೆದಿದ್ದರು. ಮಗು ಜನಿಸಿದಾಗ ಗಾತ್ರದಲ್ಲಿ ತುಂಬಾ ಸಣ್ಣದಾಗಿತ್ತು. ಹೀಗಾಗಿ ಮಗುವನ್ನು ನವಜಾತ ಶಿಶುಗಳ ಆರೈಕೆ ವಿಭಾಗದಲ್ಲಿ ಇರಿಸಿ ಜಾಗ್ರತೆ ವಹಿಸಲಾಗಿತ್ತು.

  ಇದನ್ನೂ ಓದಿ:Kodagu Rains: ಕೊಡಗಿನಲ್ಲಿ ಭಾರೀ ಮಳೆಗೆ ಬಿರುಕು ಬಿಟ್ಟ ಸೇತುವೆಗಳು; ಹಲವೆಡೆ ಗುಡ್ಡ ಕುಸಿತ, ಆತಂಕದಲ್ಲಿ ಜನರು

  ಅಷ್ಟು ಸಣ್ಣ ಗಾತ್ರದ ಮಗು ಜನಿಸಿದ್ದನ್ನು ನೋಡಿ ಇಡೀ ಆಸ್ಪತ್ರೆ ಸಿಬ್ಬಂದಿಯೇ ಶಾಕ್ ಆಗಿದ್ದರು. ನನ್ನ 22 ವರ್ಷದ ವೈದ್ಯ ವೃತ್ತಿ ಸೇವೆಯಲ್ಲಿ ಇಂತಹ ಕೇಸ್ ನೋಡಿಯೇ ಇಲ್ಲ. ಇಷ್ಟೊಂದು ಚಿಕ್ಕ ಮಗು ಜನಿಸಿದ್ದನ್ನು ನೋಡಿದ್ದು ಇದೇ ಮೊದಲು ಎಂದು ವೈದ್ಯರೊಬ್ಬರು ಹೇಳಿದ್ದಾರೆ.

  ಅವಧಿಗಿಂತ 4 ತಿಂಗಳು ಮುಂಚೆ ಜನಿಸಿದ ಮಗು ಸುಮಾರು 400 ಗ್ರಾಂ ಇರುತ್ತೆ ಎಂದು ವೈದ್ಯರು ನಿರೀಕ್ಷಿಸಿದ್ದರು. ಆದರೆ ಕೇವಲ 212 ಗ್ರಾಂ ಇತ್ತು. ಸುಮಾರು 13 ತಿಂಗಳ ಆರೈಕೆ ನಂತರ 2021ರ ಜುಲೈ 9ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಈಗ ಮಗು ಆರೋಗ್ಯವಾಗಿದ್ದು, 6.3 ಕೆ.ಜಿ ಇದೆ.

  ಇದನ್ನೂ ಓದಿ:Coronavirus Bengaluru: ಬೆಂಗಳೂರಿನಲ್ಲಿ 160 ಮೈಕ್ರೋ ಕಂಟೈನ್ಮೆಂಟ್​ ಝೋನ್​ಗಳು, ಕ್ವಾರಂಟೈನ್​ನಲ್ಲಿ 5860 ಮಂದಿ

  ಸಾಮಾನ್ಯವಾಗಿ ಎಲ್ಲಾ ಗರ್ಭಿಣಿಯರಿಗೆ 37 ಅಥವಾ 38 ವಾರಗಳಿಗೆ ಹೆರಿಗೆಯಾಗುತ್ತದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Latha CG
  First published: