ಸದಾ ಗಿಜಿಗಿಡುವ ಜೀವನದಲ್ಲಿ ಒಂದಿಷ್ಟು ಸೈಲೆನ್ಸ್, ಶಾಂತತೆ ಸಿಕ್ಕರೆ ಎಷ್ಟೋ ಮನಸ್ಸಿಗೆ ನಿರಾಳ. ಹೊರಗಡೆ ಹೋದರೆ ವಾಹನಗಳ ಸದ್ದು, ಮನೆಗೆ ಬಂದರೆ ಟಿವಿ, ಫೋನ್ ಸದ್ದು ಹೀಗೆ ಎಲ್ಲಾ ಕಡೆ ಶಬ್ದ. ಜಗತ್ತಿನಲ್ಲಿ ಶಬ್ದ ಮಾಲಿನ್ಯ ಕೂಡ ದೊಡ್ಡ ಪಿಡುಗಾಗಿ ಕಾಡುತ್ತಿದೆ. ಶಾಂತತೆ, ನಿಶ್ಯಬ್ದತೆಯನ್ನು ಅನುಭವಿಸಲು ಕೆಲವರು ಧ್ಯಾನ, ಯೋಗ ಮಂದಿರಗಳಿಗೆ ತೆರಳುತ್ತಾರೆ. ಅಲ್ಪ-ಸ್ವಲ್ಪ ಲೈಬ್ರರಿಯಲ್ಲೂ ಕೂಡ ಈ ಶಾಂತತೆಯನ್ನು ನೋಡಬಹುದು. ಆದರೆ ಅಮೆರಿಕಾದಲ್ಲಿ (America) ಒಂದು ಜಾಗವಿದೆ. ಅದರ ವಿಶೇಷತೆಯನ್ನು ನೀವು ಕೇಳಿದರೆ ನಿಮಗೂ ಒಮ್ಮೆ ಅಲ್ಲಿಗೆ ಹೋಗಿ ಬರಬೇಕು ಎಂದೆನಿಸುತ್ತದೆ.
ಮೈಕ್ರೋಸಾಫ್ಟ್ ಕಚೇರಿಯಲ್ಲಿದೆ ನಿಶಬ್ದ ಸ್ಥಳ
ಹೌದು, ಗಿಜಿಗಿಡುವ ಜನರಿಂದ ದೂರ ಉಳಿದು ನಿಶಬ್ದತೆ, ಶಾಂತತೆಯನ್ನು ಅನುಭವಿಸಲು ಯುಎಸ್‌ನಲ್ಲಿ ವಿಶೇಷ ಸ್ಥಳವಿದೆ. ಎಷ್ಟರ ಮಟ್ಟಿಗೆ ಇಲ್ಲಿ ಪಿನ್-ಡ್ರಾಪ್ ಸೈಲೆನ್ಸ್ ಇದೆ ಎಂದರೇ, ಈ ಕೊಠಡಿಯಲ್ಲಿ ಕುಳಿತುಕೊಂಡರೆ ನಿಮ್ಮ ಹೃದಯದ ಬಡಿತ ಅಷ್ಟೇ ಯಾಕೆ ನಿಮ್ಮ ರಕ್ತದ ಹರಿವಿನ ಶಬ್ದ ಕೂಡ ಕೇಳುತ್ತದೆಯಂತೆ! ಇಂತಹದ್ದೊಂದು ವಿಶೇಷ ಜಾಗವಿರುವುದು ಯುಎಸ್ನ ವಾಷಿಂಗ್ಟ್‌ನ್ನ ಮೈಕ್ರೋಸಾಫ್ಟ್ ಕಚೇರಿಯಲ್ಲಿ.
ಈ ಕೊಠಡಿಯಲ್ಲಿದ್ದರೆ ನಿಮ್ಮ ಹೃದಯದ ಬಡಿತ ನಿಮಗೆ ಸ್ಪಷ್ಟವಾಗಿ ಕೇಳುತ್ತದೆ
ನೀವೂ ಕೂಡ ಶಾಂತತೆಯನ್ನು ಬಯಸುತ್ತಿದ್ದರೆ ಇಲ್ಲಿಗೆ ಹೋಗಿ ಬರಬಹುದು ನೋಡಿ. ಮೈಕ್ರೋಸಾಫ್ಟ್ ಕೇಂದ್ರ ಕಚೇರಿಯಲ್ಲಿರುವ ಈ ಕೊಠಡಿಯನ್ನು ಭೂಮಿಯ ಮೇಲಿನ ಅತ್ಯಂತ ಶಾಂತ ಸ್ಥಳವೆಂದು ಪರಿಗಣಿಸಲಾಗಿದೆ. ಇಲ್ಲಿ ಯಾವುದೇ ಶಬ್ದವಾಗಲೀ ಅಥವಾ ಯಾವುದೇ ಕಂಪನವಾಗಲೀ ಇಲ್ಲಿ ಕುಳಿತವರಿಗೆ ಕೇಳುವುದಿಲ್ಲವಂತೆ. ಸೂಜಿ ಬಿದ್ದರೆ ಕೇಳುವುದರ ಜೊತೆಗೆ ನಮ್ಮ ಹೃದಯದ ಬಡಿತವೇ ನಮಗೆ ಇಲ್ಲಿ ಕುಳಿತುಕೊಂಡರೆ ಕೇಳುವಷ್ಟು ಕೊಠಡಿ ಶಾಂತವಾಗಿದೆಯಂತೆ.
ಆನೆಕೊಯಿಕ್ ಚೇಂಬರ್
2015 ರಲ್ಲಿ ಟೆಕ್ ದೈತ್ಯ ಮೈಕ್ರೋಸಾಫ್ಟ್ ವಿಶ್ವದ ಅತ್ಯಂತ ಶಾಂತವಾದ ಈ ಕೋಣೆಯನ್ನು ನಿರ್ಮಿಸಿತು. ಆನೆಕೊಯಿಕ್ ಚೇಂಬರ್ ಎಂದು ಕರೆಯಲ್ಪಡುವ ಈ ಕೊಠಡಿಯು ವಾಷಿಂಗ್ಟನ್‌ನ ರೆಡ್‌ಮಂಡ್‌ನ ರೆಡ್‌ಮಂಡ್ ಕ್ಯಾಂಪಸ್‌ನಲ್ಲಿರುವ ಮೈಕ್ರೋಸಾಫ್ಟ್ ಪ್ರಧಾನ ಕಚೇರಿಯಲ್ಲಿದೆ. ಈ ಕೊಠಡಿಯನ್ನು ನಿರ್ಮಿಸಲು ಎರಡು ವರ್ಷಗಳನ್ನು ತೆಗೆದುಕೊಳ್ಳಲಾಗಿದೆ.
ಗಿನ್ನಿಸ್ ಪುಟ ಸೇರಿರುವ ಆನೆಕೊಯಿಕ್ ಚೇಂಬರ್
ಅತ್ಯಂತ ಶಾಂತವಾದ ಈ ಕೋಣೆ ಗಿನ್ನಿಸ್ ವಿಶ್ವ ದಾಖಲೆಗಳಲ್ಲಿ ಸಹ ದಾಖಲಾಗಿದೆ. ಈ ಕೊಠಡಿಯ ಶಬ್ದವನ್ನು ಮೈನಸ್ 20.3 ಡೆಸಿಬಲ್‌ನಲ್ಲಿ ಅಳೆಯಲಾಗಿದೆ. ಇಲ್ಲಿ ಯಾರೂ ಒಂದು ಗಂಟೆಗಿಂತ ಹೆಚ್ಚು ಕಾಲ ಇರುವಂತಿಲ್ಲ ಎಂಬ ನಿಯಮ ಕೂಡ ಇದೆ ಅಂತೆ.
ಹೇಗೆ ಈ ಕೋಣೆಯನ್ನು ನಿರ್ಮಿಸಲಾಗಿದೆ?
ವರದಿಯ ಪ್ರಕಾರ ವಿಜ್ಞಾನಿಗಳು ಈ ಕೊಠಡಿಯನ್ನು ಕಂಪನ-ನಿರೋಧಕವಾಗಿಸಿದ್ದಾರೆ. ಕಾಂಕ್ರಿಟ್ ಮತ್ತು ಉಕ್ಕಿನ 6 ಘನ ಗೋಡೆಗಳ ಒಳಗೆ ಇದನ್ನು ನಿರ್ಮಿಸಲಾಗಿದೆ, ಈ ಕೋಣೆಯ ಪ್ರತಿ ಗೋಡೆಯು 1 ಅಡಿ ದಪ್ಪವಾಗಿದೆ.
ಇದನ್ನೂ ಓದಿ: Left your Phone: ನಿಮ್ಮ ಸ್ಮಾರ್ಟ್ಫೋನ್ ಕಳೆದು ಹೋಗಿದ್ಯಾ? ತಕ್ಷಣ ಈ ಟ್ರಿಕ್ಸ್ ಬಳಸಿ
ಆದ್ದರಿಂದ ಹೊರಗಿನ ಧ್ವನಿ ಈ ಕೊಠಡಿಯೊಳಗೆ ಸುಳಿಯುವುದೇ ಇಲ್ಲ. ಕೋಣೆಯ ಉದ್ದ, ಅಗಲ ಮತ್ತು ಎತ್ತರವು 21 ಅಡಿಗಳಾಗಿದ್ದು, ಕೋಣೆಯ ಗೋಡೆಗಳು, ನೆಲ ಮತ್ತು ಸೀಲಿಂಗ್ ಫೈಬರ್ಗ್ಲಾಸ್ನಿಂದ ಮಾಡಲ್ಪಟ್ಟಿರುವುದರಿಂದ ಧ್ವನಿಯು ಸಹ ಪ್ರತಿಧ್ವನಿಸುವುದಿಲ್ಲ. ಈವರೆಗೂ ಈ ಕೊಠಡಿಯಲ್ಲಿ ಯಾರಿಗೂ ಸಹ ಒಂದು ಗಂಟೆಯನ್ನು ಕಳೆಯಲು ಆಗಿಲ್ಲವಂತೆ. ಹೆಚ್ಚು ಹೊತ್ತು ಇದ್ದರೆ ಆ ನಿಶ್ಯಬ್ದತೆ ಜನರನ್ನು ಇನ್ನಿಲ್ಲದ ಅವಸ್ಥೆಗೆ ಕಳುಹಿಸುತ್ತದೆ ಎನ್ನುತ್ತವೆ ವರದಿಗಳು.
ಇದನ್ನೂ ಓದಿ: Poco X5 Pro: ಸ್ಮಾರ್ಟ್ಫೋನ್ ಯುಗದಲ್ಲಿ ಸಂಚಲನ ಮೂಡಿಸಲು ರೆಡಿಯಾಗಿದೆ ಪೋಕೋ ಎಕ್ಸ್ 5 ಪ್ರೋ ಸ್ಮಾರ್ಟ್ಫೋನ್!
ಕೊಠಡಿಯ ವಿನ್ಯಾಸಕರು ಹೇಳಿದ್ದೇನು?
ಮೈಕ್ರೋಸಾಫ್ಟ್‌ನ ವಾಕ್ ಮತ್ತು ಶ್ರವಣ ವಿಜ್ಞಾನಿ ಮತ್ತು ಆನೆಕೊಯಿಕ್ ಚೇಂಬರ್‌ನ ಪ್ರಧಾನ ವಿನ್ಯಾಸಕರಾದ ಹುಂಡ್ರಾಜ್ ಗೋಪಾಲ್ ಮಾತನಾಡಿ, ಹೊರಗಿನ ಯಾವ ಶಬ್ದವು ಒಳ ನುಸುಳದೇ ಇರುವುದರಿಂದ, ಸೂಕ್ಷ್ಮವಾದ ಶಬ್ದ ಸಹ ಈ ಕೊಠಡಿಯಲ್ಲಿ ನಮ್ಮ ಕಿವಿಗೆ ಬೀಳುತ್ತದೆ ಎಂದು ವಿವರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ