• Home
  • »
  • News
  • »
  • national-international
  • »
  • Oldest Doctor: ಗಿನ್ನಿಸ್ ದಾಖಲೆ ಬರೆದ ವಿಶ್ವದ ಅತ್ಯಂತ ಹಿರಿಯ ವೈದ್ಯ!

Oldest Doctor: ಗಿನ್ನಿಸ್ ದಾಖಲೆ ಬರೆದ ವಿಶ್ವದ ಅತ್ಯಂತ ಹಿರಿಯ ವೈದ್ಯ!

ಡಾ. ಹೊವಾರ್ಡ್ ಟಕರ್

ಡಾ. ಹೊವಾರ್ಡ್ ಟಕರ್

ಇಲ್ಲೊಬ್ಬ ಅಪರೂಪ ವ್ಯಕ್ತಿತ್ವ ಇರುವ ಹಿರಿಯ ಜೀವದ ಬಗ್ಗೆ ನಾವಿಂದು ವಿಶೇಷ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ. ಹಾಗಿದ್ರೆ ಏನ್‌ ಆ ವಿಶೇಷ ಎಂಬ ಕುತುಹೂಲ ನಿಮಗಿದ್ದರೆ ಮುಂದೆ ಓದಿ.

  • Share this:

ʼಕಾಡು ಬಾ ಅನ್ನುತ್ತೆ, ನಾಡು ಹೋಗು ಅನ್ನುತ್ತೆʼ ಅನ್ನೊ ಗಾದೆ ಮಾತು ಆಗಾಗ ನಮ್ಮ ಮನೆಯಲ್ಲಿರುವ (Home) ಹಿರಿಯ ಜೀವಗಳಿಂದ ಕೇಳಿರುತ್ತೇವೆ. ಅನೇಕ ಹಿರಿ ಜೀವಗಳು ತಮ್ಮ ಈ ಇಳಿ ವಯಸ್ಸಿನಲ್ಲಿ ಮಂಡಿನೋವು, ಬೆನ್ನುನೋವು, ಶುಗರ್‌, ಬಿಪಿ, ಹೀಗೆ ಅನೇಕ ರೋಗಗಳಿಂದ (Disease) ತಾತ್ಕಾಲಿಕವಾಗಿ ಮುಕ್ತರಾಗಲು ಊಟ ಆದ ಮೇಲೆ ಯಾವ ಟ್ಲಾಬೆಟ್‌ ತಗೋಬೇಕು, ರಾತ್ರಿ ನಿದ್ದೆನೆ (Sleep)ಸರಿ ಬರಲ್ಲ, ಹೀಗೆ ಈ ತರಹದ ಕೆಲಸಗಳಲ್ಲಿ ಬ್ಯುಸಿ ಆಗಿರ್ತಾರೆ. ಆದರೆ ಇಲ್ಲೊಬ್ಬ ಅಪರೂಪ ವ್ಯಕ್ತಿತ್ವ ಇರುವ ಹಿರಿಯ ಜೀವದ ಬಗ್ಗೆ ನಾವಿಂದು ವಿಶೇಷ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ. ಹಾಗಿದ್ರೆ ಏನ್‌ ಆ ವಿಶೇಷ ಎಂಬ ಕುತುಹೂಲ ನಿಮಗಿದ್ದರೆ ಮುಂದೆ ಓದಿ.


ಅತಿ ಹಿರಿಯ ವೈದ್ಯ
ಅತಿ ಹಿರಿಯ ವೈದ್ಯರೊಬ್ಬರು ತಮ್ಮ ವೈದ್ಯ ವೃತ್ತಿಯಲ್ಲಿ ಮಾಡಿರುವ ಅಗಾಧವಾದ ಸಾಧನೆಯಿಂದ ಗಿನ್ನೆಸ್‌ ದಾಖಲೆಯನ್ನು ಮಾಡಿದ್ದಾರೆ. ಹಿರಿಯ ವಯಸ್ಸು ಅಂದ್ರೆ ಕೇವಲ 60 ಅಥವಾ 70 ಅನ್ಕೊಬೇಡಿ. ಯಾಕೆಂದರೆ ಈ ಹಿರಿಯ ವೈದ್ಯರ ವಯಸ್ಸು ಈಗ ಬರೋಬ್ಬರಿ 100 ವರ್ಷ ಎಂಬುದು ಆಶ್ಚರ್ಯ ತರಿಸುವ ವಿಷಯವಾಗಿದೆ. ತಮ್ಮ 100 ನೇ ಇಳಿ ವಯಸ್ಸಿನಲ್ಲಿಯೂ ವೈದ್ಯ ವೃತ್ತಿಯನ್ನು ಇನ್ನೂ ಪ್ರಾಕ್ಟಿಸ್‌ ಮಾಡುತ್ತಿದ್ದಾರೆ ಎಂದ್ರೆ ಅವರಿಗೆ ತಮ್ಮ ಕೆಲಸದ ಮೇಲೆ ಇರುವ ಪ್ರೀತಿ ಎಂತಹುದು ಎಂದು ಗೊತ್ತಾಗುತ್ತೆ.


ಇದನ್ನೂ ಓದಿ:  Viral News: ಗಂಡನ ಜೀವ ಉಳಿಸೋಕೆ 70ರಲ್ಲೂ ತನ್ನ ಕಿಡ್ನಿ ದಾನ ಮಾಡಿದ ಹೆಂಡ್ತಿ! ಇಂಥ ಪತ್ನಿ ಎಷ್ಟು ಜನಕ್ಕೆ ಸಿಗ್ತಾರೆ ಹೇಳಿ


ಓಹಿಯೋದಲ್ಲಿ 100 ನೇ ವರ್ಷದ ತಮ್ಮ ಇಳಿ ವಯಸ್ಸಿನಲ್ಲಿ ವ್ಯಕ್ತಿಯೊಬ್ಬರು ಗಿನ್ನೆಸ್ ದಾಖಲೆಯನ್ನು ಮಾಡಿದ್ದಾರೆ. ಇವರು ಅತ್ಯಂತ ಹಿರಿಯ ಪ್ರಾಕ್ಟಿಸ್‌ ವೈದ್ಯರಾಗಿದ್ದಾರೆ. ಅಂದ್ರೆ ಇಂದಿಗೂ ತಮ್ಮ ವೃತ್ತಿಜೀವನದಿಂದ ನಿವೃತ್ತಿ ಹೊಂದುವ ಯಾವ ಆಸೆಯೂ ಅವರಿಗಿಲ್ಲ ಎಂದು ಅವರ ಕೆಲಸದಿಂದಲೇ ತಿಳಿಯುತ್ತದೆ.


100 ನೇ ಹುಟ್ಟುಹಬ್ಬ ಆಚರಿಸಿಕೊಂಡ ವೈದ್ಯ 
ಕ್ಲೀವ್‌ಲ್ಯಾಂಡ್‌ನ ಡಾ. ಹೊವಾರ್ಡ್ ಟಕರ್ ಅವರು ಫೆಬ್ರವರಿ 2021 ರಲ್ಲಿ, ತಮ್ಮ 98 ನೇ ವರ್ಷ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಹಿರಿಯ ಪ್ರ್ಯಾಕ್ಟಿಸಿಂಗ್ ವೈದ್ಯರಾಗಿ ಮನ್ನಣೆಯನ್ನು ಪಡೆದರು. ಇವರು ಇನ್ನೂ ನಿವೃತ್ತಿ ಹೊಂದುವ ಉದ್ದೇಶವನ್ನು ಹೊಂದಿಲ್ಲ. ವಿಶೇಷವೆಂದರೆ, 89 ವರ್ಷ ವಯಸ್ಸಿನ ಅವರ ಪತ್ನಿ ಸ್ಯೂ ಕೂಡ ಇನ್ನೂ ಪ್ರ್ಯಾಕ್ಟಿಸ್‌ ಮಾಡುತ್ತಿರುವ ಮನೋವಿಶ್ಲೇಷಕ ವೈದ್ಯರಾಗಿದ್ದಾರೆ.


ಡಾ. ಹೊವಾರ್ಡ್ ಟಕರ್ ಅವರು ಜುಲೈನಲ್ಲಿ ತಮ್ಮ 100 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಂತರ, ಅವರು COVID-19 ಸೋಂಕಿಗೆ ಒಳಪಟ್ಟಿದ್ದರು ಎಂದು ಸಹೋದ್ಯೋಗಿ ವೈದ್ಯರು ಹಂಚಿಕೊಂಡಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ ಸಂಸ್ಥೆ ಜೊತೆ ಮಾತನಾಡುವಾಗ, "ನಾನು ಈ ಗಿನ್ನೆಸ್ ವಿಶ್ವ ದಾಖಲೆಯ ಶೀರ್ಷಿಕೆಯನ್ನು ಒಂದು ವಿಶಿಷ್ಟ ಗೌರವವೆಂದು ಪರಿಗಣಿಸುತ್ತೇನೆ ಮತ್ತು ಇದು ನನ್ನ ವೃತ್ತಿಯಲ್ಲಿ ಸುದೀರ್ಘ, ತೃಪ್ತಿ ಮತ್ತು ಸಂತೋಷದ ಜೀವನದಲ್ಲಿ ಮತ್ತೊಂದು ಸಾಧನೆ ಎಂದು ತಿಳಿಯುತ್ತೇನೆ" ಎಂದು ಅವರು ಹೇಳಿದರು.


ಅವರ ಈ ಕೆಲಸದ ಬಗ್ಗೆ ಏನು ಹೇಳಿದ್ದಾರೆ ನೋಡಿ!
"ನಾನು 1947 ರಲ್ಲಿ ಹೇಗೆ ವೈದ್ಯ ವೃತ್ತಿಯ ಪ್ರಾಕ್ಟಿಸ್‌ ಅನ್ನು ಆರಂಭಿಸಿದೇನೊ, ಹಾಗೆಯೇ ಈಗಲೂ ಕೂಡ ನಾನು ಅದೇ ವಿಧಾನವನ್ನು ಅನುಸರಿಸುತ್ತಿದ್ದೇನೆ. ಪ್ರತಿದಿನವೂ ನಾನು ಏನಾದರೂ ಹೊಸದನ್ನು ಕಲಿಯುತ್ತಲೇ ಇದ್ದೇನೆ. ಇದಕ್ಕೆ ಬೆಂಬಲವಾಗಿರುವ ನನ್ನ ಸಹೋದ್ಯೋಗಿಗಳು ಮತ್ತು ಕುಟುಂಬದವರಿಗೆ ನಾನು ಧನ್ಯವಾದಗಳನ್ನು ಸಹ ಹೇಳುತ್ತೇನೆ. ಏಕೆಂದರೆ ಅವರಿಂದಲೂ ಸಹ ನಾನು ಬಹಳಷ್ಟು ಕಲಿತಿದ್ದೇನೆ” ಎಂದು ಭಾವಪರವಶರಾಗಿ ಹೇಳಿದರು.


ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರೆಂದು ಪಟ್ಟಿ ಮಾಡಲಾದ ವ್ಯಕ್ತಿಗಳಲ್ಲಿ ಸ್ಥಾನ ಪಡೆದ ಕ್ಷೌರಿಕನು ಮರಣವನ್ನು ಹೊಂದಿದ ಸುದ್ದಿಯನ್ನು ಹೋವಾರ್ಡ್‌ ಅವರು ಓದಿದ್ದರು. ಇದರಿಂದ ಅವರು ನಾನು ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿ ನಾನ್ಯಾಕೆ ಅರ್ಜಿ ಸಲ್ಲಿಸಬಾರದು ಎಂದು ಕೊಂಡು, ಅತ್ಯಂತ ಹಿರಿಯ ಪ್ರ್ಯಾಕ್ಟಿಸಿಂಗ್ ವೈದ್ಯ ಎಂಬ ಶೀರ್ಷಿಕೆಗೆ ಅರ್ಜಿ ಸಲ್ಲಿಸಲು ಈ ಘಟನೆ ಪ್ರೇರಣೆ ಆಯಿತು ಎಂದು ಅವರೇ ಹೇಳುತ್ತಾರೆ.


ಇದನ್ನೂ ಓದಿ: Viral Story: ಹೆಬ್ಬಾವಿನ ಹೊಟ್ಟೆಯಿಂದ ಜೀವಂತವಾಗಿ ಬದುಕಿ ಬಂದ ಮಹಿಳೆ!  


ಡಾ. ಹೊವಾರ್ಡ್‌ ಅವರ ಮೊಮ್ಮಗ ಆಸ್ಟಿನ್ ಅವರು ಗಿನ್ನೆಸ್ ವಿಶ್ವ ದಾಖಲೆಗೆ ಔಪಚಾರಿಕ ಅರ್ಜಿಯನ್ನು ಸಲ್ಲಿಸಲು ಸಹಾಯ ಮಾಡಿದರು. ಯಾವಾಗ ಇವರು ಗಿನ್ನೆಸ್‌ ದಾಖಲೆಗೆ ಆಯ್ಕೆಯಾದರೋ, ಆಗ ಅವರು ಸಾಕಷ್ಟು ಖುಷಿ ಪಟ್ಟರು. ಅದರ ಜೊತೆಗೆ ವೈದ್ಯರ ಪ್ರೀತಿಪಾತ್ರರು ಭಾವಪರವಶರಾಗಿದ್ದರು.

Published by:Ashwini Prabhu
First published: