Kane Tanaka: ರೈಟ್ ಸಹೋದರ ವಿಮಾನ ಹಾರಾಟ ನೋಡಿದ್ದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ನಿಧನ!

ಕೇನ್ ತನ್ನ ಜೀವನದುದ್ದಕ್ಕೂ ಹಲವಾರು ಮೈಲಿಗಲ್ಲುಗಳನ್ನು ಪ್ರವೇಶಿಸಿರುವ ದಿಟ್ಟ ಮಹಿಳೆ. ತನಕಾ ಅವರು ನರ್ಸಿಂಗ್ ಹೋಮ್‌ನಲ್ಲಿ ವಾಸಿಸುತ್ತಿದ್ದರು. ಅಲ್ಲಿ ಅವರು ಬೋರ್ಡ್ ಆಟಗಳನ್ನು ಆಡುತ್ತಿದ್ದರು.  ಗಣಿತದ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು.

ಕೇನ್ ತನಕಾ

ಕೇನ್ ತನಕಾ

  • Share this:
ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗಿನ್ನೆಸ್‌ ದಾಖಲೆ ಬರೆದಿದ್ದ ಜಪಾನಿನ (Japan) ಮಹಿಳೆ ಕೇನ್ ತನಕಾ ಅವರು 19 ಏಪ್ರಿಲ್ 2022ರಂದು ತಮ್ಮ 119ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇನ್ ತನಕಾ (Kane Tanaka) ಸಾವಿನ ಸುದ್ದಿಯನ್ನು ಹಿರಿಯ ಜೆರೊಂಟಾಲಜಿ ಕನ್ಸಲ್ಟೆಂಟ್ ರಾಬರ್ಟ್ ಯಂಗ್ ಅವರು ದೃಢಪಡಿಸಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ (Instagram) ಕೇನ್ ತನಕಾ ಅವರ ಸಾವನ್ನು ಉಲ್ಲೇಖಿಸಿದ್ದು, ಸಂತಾಪ ಸೂಚಿಸಿದೆ. ಇವರು 2019ರಲ್ಲಿ ವಾಸಿಸುತ್ತಿರುವ ಅತ್ಯಂತ ಹಿರಿಯ ವ್ಯಕ್ತಿ ಮತ್ತು ಅತ್ಯಂತ ಹಿರಿಯ ವ್ಯಕ್ತಿ (World's oldest person) ಎಂದು ಗಿನ್ನೆಸ್ ವಿಶ್ವ ದಾಖಲೆಯ ಪುಟ ಸೇರಿದ್ದರು.

13 ಏಪ್ರಿಲ್ 2022 ರಂದು ಕೇನ್ ಅವರ ಕುಟುಂಬವು ಪೋಸ್ಟ್ ಮಾಡಿದ ಟ್ವೀಟ್ ಪ್ರಕಾರ, ಕೇನ್ ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಕೇನ್ ಕುಟುಂಬದವರು ಪೋಸ್ಟ್ ಮಾಡಿದ ಟ್ವೀಟ್‌ನಲ್ಲಿ, "ಹಲವು ಜನರ ಬೆಂಬಲ, ಪ್ರೀತಿಯಿಂದ ನಾನು ಇಲ್ಲಿಯವರೆಗೆ ಬರಲು ಸಾಧ್ಯವಾಯಿತು. ನೀವು ಖುಷಿಯಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ, ಯಾವಾಗಲೂ ಸಂತೋಷದಿಂದ ಮತ್ತು ಶಕ್ತಿಯುತವಾಗಿರಿ" ಎಂದು ಕೇನ್ ಹೇಳಿದ್ದರು.

ಏಳನೇ ಮಗುವಾಗಿ ಜನನ
ಕೇನ್ 2 ಜನವರಿ 1903 ರಂದು ಕುಮಾಕಿಚಿ ಮತ್ತು ಕುಮಾ ಓಟಾ ಅವರ ಏಳನೇ ಮಗುವಾಗಿ ಜಪಾನ್‌ನ ನೈಋತ್ಯ ಫುಕುವೋಕಾ ಪ್ರದೇಶದಲ್ಲಿ ಜನಿಸಿದರು. 19 ನೇ ವಯಸ್ಸಿನಲ್ಲಿ ಅಕ್ಕಿ ಅಂಗಡಿಯ ಮಾಲೀಕರೊಬ್ಬರನ್ನು ವಿವಾಹವಾದರು ಮತ್ತು ಅವರು 103 ವರ್ಷದವರೆಗೆ ಕುಟುಂಬದ ಅಂಗಡಿಯಲ್ಲಿ ಕೆಲಸ ಮಾಡಿದರು. ಕೇನ್ ಎರಡು ಬಾರಿ ಕ್ಯಾನ್ಸರ್‌ನಿಂದ ಬದುಕುಳಿದಿದ್ದು, ತನ್ನ ಜೀವಮಾನದಲ್ಲಿ ಎರಡು ವಿಶ್ವ ಯುದ್ಧಗಳು ಮತ್ತು 1918ರ ಸ್ಪ್ಯಾನಿಷ್ ಜ್ವರ, ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದಂತ ಭೀಕರ ಕಾಯಿಲೆಗಳಿಂದ ಪಾರಾಗಿದ್ದರು.

ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ
ಕೇನ್ ಜನವರಿ 2019ರಲ್ಲಿ 116 ವರ್ಷಕ್ಕೆ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇನ್ ಅವರು 122 ವರ್ಷ 164 ದಿನ ಬದುಕಿದ್ದ ಜೀನ್ ಲೂಯಿಸ್ ಕಾಲ್ಮೆಂಟ್ (ಫ್ರಾನ್ಸ್, ಬಿ. 21 ಫೆಬ್ರವರಿ 1875 - ಡಿ. 4 ಆಗಸ್ಟ್ 1997) ನಂತರ ಕೇನ್ ತನಕಾ ಎರಡನೇ ಅತಿ ಹಿರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು.

ದಿಟ್ಟ ಮಹಿಳೆ ಎಂಬ ಹೆಗ್ಗಳಿಕೆ
ಕೇನ್ ತನ್ನ ಜೀವನದುದ್ದಕ್ಕೂ ಹಲವಾರು ಮೈಲಿಗಲ್ಲುಗಳನ್ನು ಪ್ರವೇಶಿಸಿರುವ ದಿಟ್ಟ ಮಹಿಳೆ. ತನಕಾ ಅವರು ನರ್ಸಿಂಗ್ ಹೋಮ್‌ನಲ್ಲಿ ವಾಸಿಸುತ್ತಿದ್ದರು. ಅಲ್ಲಿ ಅವರು ಬೋರ್ಡ್ ಆಟಗಳನ್ನು ಆಡುತ್ತಿದ್ದರು.  ಗಣಿತದ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಇವರು ಟೋಕಿಯೋ 2020ರ ಒಲಂಪಿಕ್ ಟಾರ್ಚ್ ರಿಲೇಗಾಗಿ ಕೇನ್ ಅವರನ್ನು ಟಾರ್ಚ್ ಬೇರರ್‌ಗಳಲ್ಲಿ ಒಬ್ಬರಾಗಿ ಆಯ್ಕೆ ಮಾಡಲಾಯಿತು, ಆದರೆ COVID-19 ಕಾರಣದಿಂದಾಗಿ ಅವರ ಭಾಗವಹಿಸುವಿಕೆಯನ್ನು ರದ್ದುಗೊಳಿಸಲಾಯಿತು.

ಇದನ್ನೂ ಓದಿ: Court: ಕೇವಲ 31 ಪೈಸೆಗಾಗಿ ನ್ಯಾಯಾಧೀಶರಿಗೆ ಕೋಪ ತರಿಸುವಂತೆ ಮಾಡಿದ ಭಾರತೀಯ ಸ್ಟೇಟ್ ಬ್ಯಾಂಕ್; ಆಗಿದ್ದೇನು ಗೊತ್ತೆ..?

ಕೇನ್ ಚಾಕೊಲೇಟ್‌ಗಳನ್ನು ಹೆಚ್ಚು ಇಷ್ಟ ಪಡುತ್ತಿದ್ದರಂತೆ, ಆಕೆಯ ಅಧಿಕೃತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಮಾಣಪತ್ರವನ್ನು ಅವರಿಗೆ ಪ್ರಸ್ತುತಪಡಿಸಿದ ದಿನ, ಅವರಿಗೆ ಚಾಕೊಲೇಟ್‌ಗಳ ಪೆಟ್ಟಿಗೆಯನ್ನು ಸಹ ನೀಡಲಾಗಿತ್ತು, ಕೇನ್ ತಕ್ಷಣ ಚಾಕೊಲೇಟ್‌ ಬಾಕ್ಸ್ ತೆರೆದು ತಿನ್ನಲು ಪ್ರಾರಂಭಿಸಿದರು. ಆಕೆಯ ಕೊನೆಯ ದಿನಗಳಲ್ಲಿಯೂ ಸಹ ಆಕೆಗೆ ಇನ್ನೂ ಚಾಕೊಲೇಟ್ ಮತ್ತು ಕೋಲಾದ ಮೇಲೆ ಪ್ರೀತಿ ಇತ್ತು ಎಂದು ಆಕೆಯ ಕುಟುಂಬ ಹೇಳಿದೆ.

ಈ ಎಲ್ಲಾ ಮೈಲಿಗಲ್ಲಿಗೆ ಸಾಕ್ಷಿ
ಕೇನ್ ಹುಟ್ಟಿದ ವರ್ಷದಲ್ಲಿ, ಥಿಯೋಡರ್ ರೂಸ್‌ವೆಲ್ಟ್‌ US ಅಧ್ಯಕ್ಷರಾಗಿದ್ದರು ಮತ್ತು ಎಡ್ವರ್ಡ್ VII ಬ್ರಿಟಿಷ್ ರಾಜರಾಗಿದ್ದರು. ರೈಟ್ ಸಹೋದರರು ತಮ್ಮ ಮೋಟಾರ್ ಚಾಲಿತ ವಿಮಾನದ ಮೊದಲ ನಿಯಂತ್ರಿತ ಹಾರಾಟವನ್ನು ನಡೆಸಿದರು. ಟೂರ್ ಡಿ ಫ್ರಾನ್ಸ್ ಅನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಈ ಎಲ್ಲಾ ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದ ಕೇನ್ ಸಾವಿಗೆ ಎಲ್ಲರೂ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: Nuclear Power: ಚಂದ್ರನ ಮೇಲೆಯೇ ಅಣುಬಾಂಬ್ ಬಳಸಲು ಯೋಚಿಸಿದ್ದೇಕೆ ಅಮೇರಿಕಾ?

1897ರ ಏಪ್ರಿಲ್ 19 ರಂದು ಜನಿಸಿದ ಮತ್ತು 12 ಜೂನ್ 2013 ರಂದು 116 ವರ್ಷ 54 ದಿನಗಳ ವಯಸ್ಸಿನಲ್ಲಿ ನಿಧನರಾದ ಜಿರೋಮನ್ ಪುರುಷ ವಿಭಾಗದ ಅತ್ಯಂತ ಹಿರಿಯ ವ್ಯಕ್ತಿ ಎನ್ನಲಾಗಿದೆ. ಕೇನ್ ಸಾವಿನ ನಂತರ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗಿ 118 ವರ್ಷ ವಯಸ್ಸಿನ ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ ಗುರುತಿಸಿಕೊಂಡಿದ್ದಾರೆ.
Published by:guruganesh bhat
First published: