• Home
  • »
  • News
  • »
  • national-international
  • »
  • World's Oldest Dog: ವಿಶ್ವದ ಅತ್ಯಂತ ಹಿರಿಯ ನಾಯಿ ನಿಧನ; ಈ ಶ್ವಾನದ ದೀರ್ಘಾಯುಷ್ಯದ ಗುಟ್ಟು ರಟ್ಟು

World's Oldest Dog: ವಿಶ್ವದ ಅತ್ಯಂತ ಹಿರಿಯ ನಾಯಿ ನಿಧನ; ಈ ಶ್ವಾನದ ದೀರ್ಘಾಯುಷ್ಯದ ಗುಟ್ಟು ರಟ್ಟು

ವಿಶ್ವ ಅತ್ಯಂತ ಹಿರಿಯ ನಾಯಿ

ವಿಶ್ವ ಅತ್ಯಂತ ಹಿರಿಯ ನಾಯಿ

ಗ್ರೆಗೊರಿ ಅವರ ಪ್ರಕಾರ, ತನ್ನ ನಾಯಿಗೆ ಸಾಕಷ್ಟು ಪ್ರೀತಿ ಮತ್ತು ಕಾಳಜಿಯನ್ನು ನೀಡುವುದು ಅದರ ದೀರ್ಘಾಯುಷ್ಯಕ್ಕೆ ಕಾರಣವಾಗಿತ್ತಂತೆ.

  • Share this:

ವಿಶ್ವದ ಅತ್ಯಂತ ಹಿರಿಯ ನಾಯಿ (Worlds Oldest Dog) ಎಂಬ ಖ್ಯಾತಿಯ ಟಾಯ್ ಫಾಕ್ಸ್ ಟೆರಿಯರ್ ಪೆಬಲ್ಸ್  (Toy Fox Terrier) ನಿಧನ ಹೊಂದಿದೆ. 22 ವರ್ಷ ಸುದೀರ್ಘ ಜೀವನ ನಡೆಸಿದ್ದ ಪೆಬಲ್ಸ್‌ ಅಕ್ಟೋಬರ್ 3 ರಂದು ದಕ್ಷಿಣ ಕೆರೊಲಿನಾದಲ್ಲಿ ನಿಧನವಾಗಿದೆ. ಇದು ಹಿರಿಯ ನಾಯಿ ಎಂಬುದಾಗಿ ಗಿನ್ನೆಸ್ ವಿಶ್ವ ದಾಖಲೆ ಮಾಡಿತ್ತು. ಹೌದು, ವಿಶ್ವದ ಅತ್ಯಂತ ಹಿರಿಯ ನಾಯಿ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು (Guinness World Record) ಹೊಂದಿದ್ದ ಪೆಬಲ್ಸ್, ಟಾಯ್ ಫಾಕ್ಸ್ ಟೆರಿಯರ್ ದಕ್ಷಿಣ ಕೆರೊಲಿನಾದ ಟೇಲರ್ಸ್‌ನಲ್ಲಿ ನಿಧನವಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ ನ ಪ್ರಕಾರ, 23 ವರ್ಷ ತುಂಬುವ ಕೇವಲ ಐದು ತಿಂಗಳ ಮೊದಲು ಪೆಬಲ್ಸ್ ಸಾವಿಗೀಡಾಗಿದೆ. ಸಾಮಾನ್ಯವಾಗಿ ನಾಯಿಗಳು 10-15 ವರ್ಷ ಬದುಕುತ್ತವೆ. ಆದರೆ ಮಾರ್ಚ್ 28, 2000 ರಂದು ಜನಿಸಿದ್ದ ಪೆಬಲ್ಸ್‌ 22 ವರ್ಷ ಸುದೀರ್ಘ ಬದುಕು ಸಾಗಿಸಿತ್ತು.


ಅಮೆರಿಕದ ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿ ಜನಿಸಿದ ಈ ನಾಯಿಯನ್ನು ಬಾಬಿ ಮತ್ತು ಜೂಲಿ ಗ್ರೆಗೊರಿ ಎಂಬುವವರು ಸಾಕಿದ್ದರು ಎಂಬುದಾಗಿ ಗಿನ್ನಿಸ್‌ ವರ್ಡ್‌ ರೆಕಾರ್ಟ್‌ (GWR) ತಿಳಿಸಿದೆ.


ಸಾಕಿದವರು ಹೇಳೋದು ಹೀಗೆ
ಪೆಬಲ್ಸ್ ವಿಶ್ವದ ಅತ್ಯಂತ ಹಿರಿಯ ನಾಯಿ ಎಂಬ ಮಾಹಿತಿಯು ಸುದ್ದಿ ವೈರಲ್ ಆದಾಗ ಜಗತ್ತು ಆಶ್ಚರ್ಯ ಚಕಿತವಾಗಿತ್ತು ಎಂದು ಜಿಡಬ್ಲ್ಯೂಆರ್ ಹೇಳಿದೆ. ಇನ್ನು ಪೆಬಲ್ಸ್‌ ಸಾಕಿದ್ದಗ್ರೆಗೊರಿ ಹೇಳುವ ಪ್ರಕಾರ, ಜಗತ್ತಿನ ಅತ್ಯಂತ ಹಿರಿಯ ನಾಯಿ ಎಂಬ ಟೋಬಿಕೇತ್‌ ಆಗಿತ್ತು.


ಆದರೆ 21 ವರ್ಷದ ನಾಯಿ ಬಗ್ಗೆ ಸುದ್ದಿಗಳನ್ನು ಓದಿದ ಸ್ನೇಹಿತರು ಹಾಗೂ ಕುಟುಂಬದವರು ಮೆಸೇಜ್‌ ಗಳನ್ನ ತಮಗೆ ಕಳುಹಿಸೋಕೆ ಆರಂಭಿಸಿದರು. ಆ ಸುದ್ದಿಗಳನ್ನು ನಾನು ನೋಡಿದ ಮೇಲೆ ಗಿನ್ನಿಸ್‌ ರೆಕಾರ್ಡ್‌ ಗೆ ಅರ್ಜಿ ಸಲ್ಲಿಸಿದೆ ಎಂದಿದ್ದಾರೆ.


ಹೇಗಿತ್ತು ಪೆಬಲ್ಸ್‌ ಜೀವನಶೈಲಿ?
ಪೆಬಲ್ಸ್, ತುಂಬಾ ಸಂತೋಷದಿಂದ ಸುದೀರ್ಘ ಜೀವನ ನಡೆಸಿದೆ. ಆ ನಾಯಿ ನಮ್ಮ ಮನೆಯ ರಾಣಿಯಂತಿದ್ದಳು. ತನ್ನ ಸಂಗಾತಿಯಾಗಿದ್ದ ರಾಕಿಯಿಂದ 32 ನಾಯಿ ಮರಿಗಳಿಗೆ ಜನ್ಮ ನೀಡಿದೆ. ಈ ರಾಕಿ 2017 ರಲ್ಲಿ ತನ್ನ 16 ನೇ ವಯಸ್ಸಿನಲ್ಲಿ ನಿಧನವಾಗಿತ್ತು ಎಂದು ಗ್ರೆಗೊರಿ ಹೇಳ್ತಾರೆ.


ಸಂಗೀತ ಕೇಳುತ್ತಿದ್ದ ನಾಯಿ
ಇನ್ನು ಪೆಬಲ್ಸ್‌ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜೂಲಿ ಗ್ರೆಗೊರಿ, ಅವಳು (ನಾಯಿ) ಸಂಗೀತವನ್ನು ಕೇಳುತ್ತಾ ಆನಂದಿಸುತ್ತಾ ಇರುತ್ತಿದ್ದಳು ಎಂಬುದಾಗಿ ಹೇಳಿದ್ದಾರೆ.


ಅಲ್ಲದೇ ಹೊಸ ಆಹಾರಗಳನ್ನೂ ಪೆಬಲ್ಸ್‌ ಟ್ರೈ ಮಾಡ್ತಾ ಇದ್ದಳು. ಎಲ್ಲರ ಪ್ರೀತಿಯ ನಾಯಿಯಾಗಿತ್ತು. ಒಮ್ಮೆ 2012 ರಲ್ಲಿ ಬೆಕ್ಕಿನ ಆಹಾರವನ್ನು ಇದಕ್ಕೆ ನೀಡಲಾಯ್ತು. ಇದು ಹೆಚ್ಚಿನ ಮಾಂಸಾಧಾರಿತ ಪ್ರೋಟೀನ್‌ ಹೊಂದಿರುವ ಕಾರಣ ಪೆಬಲ್ಸ್‌ ಗೆ ನೀಡಿದ್ದೆವು.


ಇದನ್ನೂ ಓದಿ: Breaking News: ಬಂದ್ ಆಗುತ್ತಾ ಓಲಾ, ಉಬರ್ ಆಟೋ ಸೇವೆ?


ಅಲ್ಲದೇ ಇದರ ಹುಟ್ಟುಹಬ್ಬನ್ನೂ ಗ್ರ್ಯಾಂಡ್‌ ಆಗಿ ಆಚರಿಸಲಾಗುತ್ತಿತ್ತು ಎಂಬುದಾಗಿ ಹೇಳ್ತಾರೆ. ಇನ್ನು ಗ್ರೆಗೊರಿ ಅವರ ಪ್ರಕಾರ, ತನ್ನ ನಾಯಿಗೆ ಸಾಕಷ್ಟು ಪ್ರೀತಿ ಮತ್ತು ಕಾಳಜಿಯನ್ನು ನೀಡುವುದು ಅದರ ದೀರ್ಘಾಯುಷ್ಯಕ್ಕೆ ಕಾರಣವಾಗಿತ್ತಂತೆ.


ಫುಲ್ ಎಂಜಾಯ್ ಮಾಡ್ತಿತ್ತಂತೆ
ಅಲ್ಲದೇ ಹಳ್ಳಿಗಾಡಿನ ಸಂಗೀತ, ಬೇಸಿಗೆಯನ್ನು ಪೆಬಲ್ಸ್‌ ಎಂಜಾಯ್‌ ಮಾಡ್ತಿದ್ದ ರೀತಿ ಹಾಗೂ ಅದರ ವಿಶ್ವ ದಾಖಲೆಗಾಗಿ ಅವರು ಆ ನಾಯಿಯನ್ನು ನೆನೆಸಿಕೊಳ್ಳುತ್ತಾರೆ ಎಂಬುದಾಗಿ ಗ್ರೆಗೊರಿ ಹೇಳುತ್ತಾರೆ.


ಒಟ್ಟಾರೆ, ಚೆನ್ನಾಗಿ ನೋಡಿಕೊಂಡಿದ್ದಕ್ಕೋ ಅಥವಾ ಹೆಚ್ಚಿನ ಪ್ರೀತಿ ಕಾಳಜಿ ತೋರಿದ್ದಕ್ಕೋ ಅಥವಾ ಅದರ ಆಯುಷ್ಯ ಹೆಚ್ಚಾಗಿದ್ದದ್ದಕ್ಕೋ ಪೆಬಲ್ಸ್‌ ಅಷ್ಟು ದೀರ್ಘ ಕಾಲ ಬದುಕಿದೆ.


ಇದನ್ನೂ ಓದಿ: Baby Care: ನಿಮ್ಮ ಮಗು ಚೆನ್ನಾಗಿ ಊಟ ಮಾಡುತ್ತಿಲ್ಲವೇ? ಇಲ್ಲಿದೆ ಸಲಹೆ


ಇಷ್ಟು ವರ್ಷ ನೋಡಿಕೊಂಡ ಕುಟುಂಬದ ಸದಸ್ಯನಂತಾಗಿದ್ದ ಪೆಬಲ್ಸ್‌ ಕಳೆದುಕೊಂಡು ಗ್ರೆಗೊರಿ ಕುಟುಂಬ ಅದನ್ನು ಮಿಸ್‌ ಮಾಡಿಕೊಳ್ತಿದೆ. ಆದರೆ ಈ ನಾಯಿ ಯಾವುದೇ ಆರೋಗ್ಯ ತೊಂದರೆಯಿಲ್ಲದೇ ಸಹಜವಾಗಿ ಸಾವಿಗೀಡಾಯ್ತು ಅನ್ನೋದು ಸಮಾಧಾನದ ಸಂಗತಿ.

Published by:ಗುರುಗಣೇಶ ಡಬ್ಗುಳಿ
First published: