ನಮ್ಮ ಜಗತ್ತಲ್ಲಿ ಮದ್ಯಪಾನ ಪ್ರಿಯರಿಗೇನೂ ಕೊರತೆ ಇಲ್ಲ ಬಿಡಿ. ಎಷ್ಟು ಹಣ ಕೊಟ್ಟಾದರೂ ಬೇರೆ ಬೇರೆ ಬ್ರ್ಯಾಂಡ್ ಮದ್ಯ ಖರೀದಿಸಲು ಹಲವರು ಮುಂದಾಗುತ್ತಾರೆ. ಅದೇ ರೀತಿ ಹಳೆಯ ಮದ್ಯಕ್ಕೂ ಬೆಲೆ ಜಾಸ್ತಿ ಅಂತಾರೆ. ಈ ಸುದ್ದಿಯಲ್ಲೂ ಹೀಗೆ ಆಗಿದೆ ನೋಡಿ.. 1850 ರಲ್ಲಿ ವಿಸ್ಕಿಯನ್ನು ಬಾಟಲಿ ಮಾಡಲಾಗಿರುವ ಹಾಗೂ ಅದರೊಳಗಿನ ಮದ್ಯ ಬಾಟಲ್ಗೆ ಹಾಕುವುದಕ್ಕಿಂತ ಒಂದು ಶತಮಾನದಷ್ಟು ಹಳೆಯದಾಗಿರುವ ಅಂದರೆ ಸುಮಾರು 250 ವರ್ಷಗಳ ಹಳೆಯ ವಿಸ್ಕಿಯನ್ನು ಬಾಟಲ್ ಜತೆಗೆ ಹರಾಜು ಹಾಕಲಾಗಿದೆ. ಅಲ್ಲದೆ, ಈ ವಿಸ್ಕಿ ಬಾಟಲ್ ಒಮ್ಮೆ ಪ್ರಸಿದ್ಧ ಫೈನಾನ್ಶಿಯರ್ ಜೆ.ಪಿ. ಮೋರ್ಗನ್ ಅವರಿಗೆ ಸೇರಿತ್ತು ಎಂದು ತಿಳಿದುಬಂದಿದೆ. ಇಷ್ಟೆಲ್ಲ ವಿಶೇಷತೆ ಇರುವ ವಿಸ್ಕಿಯ ಮೂಲ ಬೆಲೆ ಬೆಲೆಯ 6 ಪಟ್ಟು ದರವನ್ನು ಹರಾಜಿನಲ್ಲಿ ಇರಿಸಲಾಗಿತ್ತು. ಅಂದ ಹಾಗೆ ಇದು ಎಷ್ಟು ಮೊತ್ತಕ್ಕೆ ಹರಾಜಾಯ್ತು ಅಂತೀರಾ..?
137,000 ಡಾಲರ್ ಅಂದರೆ ಭಾರತೀಯ ಕರೆನ್ಸಿ ಮೌಲ್ಯದಲ್ಲಿ ಬರೋಬ್ಬರಿ 1 ಕೋಟಿ ರೂ. ಗೂ ಅಧಿಕ. ಬಾಟಲಿಯ ಲೇಬಲ್ನಲ್ಲಿ ಈ ಬೌರ್ಬನ್ ಬಹುಶಃ 1865 ಕ್ಕಿಂತ ಮೊದಲು ತಯಾರಿಸಲ್ಪಟ್ಟಿದೆ ಮತ್ತು ಶ್ರೀ ಜಾನ್ ಪಿಯರ್ಪಾಯಿಂಟ್ ಮೋರ್ಗನ್ ಅವರ ನೆಲಮಾಳಿಗೆಗಳಲ್ಲಿತ್ತು, ಅವರ ಮರಣದ ನಂತರ ಅದನ್ನು ಅವರ ಎಸ್ಟೇಟ್ನಿಂದ ಸ್ವಾಧೀನಪಡಿಸಿಕೊಂಡಿತು" ಎಂದು ಉಲ್ಲೇಖಿಸಲಾಗಿದೆ.
ಸ್ಕಿನ್ನರ್ ಇಂಕ್ ಎಂಬ ಹರಾಜಿನ ಮನೆಯಿಂದ ಬಾಟಲಿಯನ್ನು 20,000 ಡಾಲರ್ ಮತ್ತು 40,000 ಡಾಲರ್ ನಡುವೆ ಪಡೆಯಲಾಗಿತ್ತು. ಆದರೆ, ನಂತರ ಅದನ್ನು ಮಿಡ್ಟೌನ್ ಮ್ಯಾನ್ಹಾಟನ್ನಲ್ಲಿರುವ ಮ್ಯೂಸಿಯಂ ಮತ್ತು ಸಂಶೋಧನಾ ಸಂಸ್ಥೆಯಾದ ದಿ ಮೋರ್ಗನ್ ಲೈಬ್ರರಿಗೆ 137,500 ಡಾಲರ್ ಬೆಲೆಗೆ ಮಾರಾಟ ಮಾಡಲಾಯಿತು. ಈ ಹರಾಜು ಜೂನ್ 30 ರಂದು ಕೊನೆಗೊಂಡಿದೆ ಎಂದು ತಿಳಿದುಬಂದಿದೆ.
ಮೋರ್ಗನ್ ಅವರ ನೆಲಮಾಳಿಗೆಯಲ್ಲಿ ಇರಿಸಲಾಗಿರುವ ಮೂರು ಗುಂಪಿನಿಂದ ಉಳಿದಿರುವ ಏಕೈಕ ಬಾಟಲಿ ಇದಾಗಿದೆ ಎಂದು ಭಾವಿಸಲಾಗಿದೆ. ಆದರೆ, ಈ ಎರಡು ಶತಮಾನಗಳಷ್ಟು ಹಳೆಯದಾದ ಮದ್ಯವನ್ನು ಈಗ ಕುಡಿಯುವುದು ಅಸಂಭವವಾಗಿದೆ. ಏಕೆಂದರೆ ವಿಸ್ಕಿ ಬಾಟಲಿಯಲ್ಲಿ ಹಾಗೆ ಇದ್ದರೆ 10 ವರ್ಷಗಳವರೆಗೆ ಮಾತ್ರ ಇರುತ್ತದೆ ಎಂದು ಡೈಲಿ ಮೇಲ್ ವರದಿಗಳು ಹೇಳುತ್ತವೆ.
ಬಾಟಲಿಯೊಳಗಿನ ದ್ರವವನ್ನು ಪರಿಶೀಲಿಸಿದ ನಂತರ ವಿಸ್ಕಿಯನ್ನು ಶೇಕಡಾ 53 ರಷ್ಟು ಬೌರ್ಬನ್ ಹೊಂದಿದೆ ಎಂದು ನಿರ್ಧರಿಸಲಾಗಿದೆ. ಹಾಗೆ, ಇದನ್ನು ಬಹುಶಃ 1763 ಮತ್ತು 1803 ರ ನಡುವೆ ತಯಾರಿಸಲಾಗಿದೆ. ಈ ದಿನಾಂಕಗಳನ್ನು ಐತಿಹಾಸಿಕ ಸಂದರ್ಭದಲ್ಲಿ ನೋಡಿದರೆ 1770 ರ ಆಸುಪಾಸಿನಲ್ಲಿ ನಡೆದ ಕ್ರಾಂತಿಕಾರಿ ಯುದ್ಧ ಮತ್ತು 1790 ರ ಆಸುಪಾಸಿನಲ್ಲಿ ನಡೆದ ವಿಸ್ಕಿ ದಂಗೆಯ ಸಮಯದಲ್ಲಿ ಈ ವಿಸ್ಕಿಯನ್ನು ತಯಾರಿಸಲಾಗಿದೆ ಎನ್ನಲಾಗಿದೆ.
ಇನ್ನೊಂದೆಡೆ, ಬಾಲ್ಟಿಕ್ ಸಮುದ್ರದ ಆಳದಲ್ಲಿ ಹಳೆಯ ಖನಿಜಯುಕ್ತ ನೀರಿನ ಬಾಟಲಿ ಕಂಡುಬಂದಿತ್ತು. ಈ ಬಾಟಲಿಯು 12 ಇಂಚು ಉದ್ದವಿದ್ದು, ಅದರ ಮೇಲೆ ‘ಸೆಲ್ಟರ್ಸ್’ ಎಂದು ಕೆತ್ತಲಾಗಿದೆ. ಕುತೂಹಲಕಾರಿಯಾಗಿ, ಸೆಲ್ಟರ್ಸ್ ಜರ್ಮನಿಯ ಐಷಾರಾಮಿ ನೀರಿನ ಬ್ರ್ಯಾಂಡ್ ಆಗಿದ್ದು, ಇಂದಿಗೂ ಮಾರಾಟವಾಗುತ್ತಿದೆ ಮತ್ತು 19 ನೇ ಶತಮಾನದಲ್ಲಿ ಜನಪ್ರಿಯತೆ ಗಳಿಸಿತ್ತು. ಪೋಲಿಷ್ ಪುರಾತತ್ತ್ವಜ್ಞರ ಗುಂಪೊಂದು ಬಾಟಲಿಯನ್ನು ಗಡಾನ್ಸ್ಕ್ ಕೊಲ್ಲಿಯಲ್ಲಿ ನೀರಿನಿಂದ 40 ಅಡಿ ಕೆಳಗೆ ಬಾಟಲಿ ಕಂಡುಕೊಳ್ಳಲಾಗಿದೆ. ಈ ಅತ್ಯಂತ ಅಪರೂಪದ ಬಾಟಲ್ ಉತ್ತಮ ಸ್ಥಿತಿಯಲ್ಲಿತ್ತು. 1806-1830ರ ನಡುವೆ ಬಾಟಲಿಯನ್ನು ಉತ್ಪಾದಿಸಲಾಗಿದೆ ಎಂದು ನಂಬಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ