Antarctica: ಅಂಟಾರ್ಟಿಕಾದಲ್ಲಿ ಬಿರುಕು ಬಿಟ್ಟ ಬೃಹತ್ ಹಿಮ ಬಂಡೆ, ಮುಂಬೈಗೆ ಕಾದಿದೆ ಭಾರೀ ಗಂಡಾಂತರ

Glaciers: ಅಂಟಾರ್ಟಿಕಾದ ಥ್ವೈಟ್ಸ್ ಗ್ಲೇಸಿಯರ್‌ನ ಭಾಗದಲ್ಲಿ ಭಾರೀ ಪ್ರಮಾಣದ ಬಿರುಕು ಪತ್ತೆಯಾಗಿದ್ದು, ಬಿರುಕುಂಟಾದ ಭಾಗವು ಅಮೆರಿಕದ ಫ್ಲೋರಿಡಾ ರಾಜ್ಯದಷ್ಟು ದೊಡ್ಡದಾಗಿದೆ.. ಇದರಿಂದ ಭಾರತದ ಮುಂಬೈಗೆ ಪ್ರವಾಹದ ಸಂಕಷ್ಟ ಇದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನದಿಂದ (Global warming) ಅಂಟ್ಲಾಟಿಕದಲ್ಲಿ(Antarctica) ಹಿಮ ಬಂಡೆಗಳು (Glaciers) ಬಿರುಕು ಬಿಡುತ್ತಿವೆ.. ಈಗಾಗಲೇ ಹಲವಾರು ಹಿಮ ಬಂಡೆಗಳು ಬಿರುಕುಬಿಟ್ಟಿದ್ದು ಯಾವಾಗ ಬೇಕಾದರೂ ಭಾರತದಲ್ಲಿ (India) ವಿಶ್ವದ ಹಲವು ರಾಷ್ಟ್ರಗಳಿಗೆ ಕಂಟಕ ಎದುರಾಗಬಹುದು.. ಪರಿಸ್ಥಿತಿ ಹೀಗಿರುವಾಗಲೇ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಂದಿದ್ದು ಅಂಟ್ಲಾಟಿಕ ಅತ್ಯಂತ ಅಪಾಯಕಾರಿ ಹಿಮನದಿಯಲ್ಲಿ ಬೃಹತ್ ಹಿಮ ಬಂಡೆ 5ವರ್ಷಗಳಲ್ಲಿ ಹೊಡೆಯಲಿದೆ ಯಂತೆ.. ಇದರಿಂದ ವಾಣಿಜ್ಯ ನಗರಿ ಮುಂಬೈಗೆ (Mumbai) ಸಂಪೂರ್ಣ ಪ್ರವಾಹದ ಭೀತಿ ಉಂಟಾಗಿದೆ..

  ಅಂಟಾರ್ಟಿಕಾದ ಥ್ವೈಟ್ಸ್ ಗ್ಲೇಸಿಯರ್‌ ಭಾಗದಲ್ಲಿ ಹಿಮ ಬಂಡೆ ಬಿರುಕು

  ಅಂಟಾರ್ಟಿಕಾದ ಥ್ವೈಟ್ಸ್ ಗ್ಲೇಸಿಯರ್‌ನ ಭಾಗದಲ್ಲಿ ಭಾರೀ ಪ್ರಮಾಣದ ಬಿರುಕು ಪತ್ತೆಯಾಗಿದ್ದು, ಬಿರುಕುಂಟಾದ ಭಾಗವು ಅಮೆರಿಕದ ಫ್ಲೋರಿಡಾ ರಾಜ್ಯದಷ್ಟು ದೊಡ್ಡದಾಗಿದೆ.. ಇದರಿಂದ ಭಾರತದ ಮುಂಬೈಗೆ ಪ್ರವಾಹದ ಸಂಕಷ್ಟ ಇದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಅಂಟಾರ್ಟಿಕಾದ 'ಡೂಮ್ಸ್ ಡೇ ಗ್ಲೇಸಿಯರ್' (Doomsday Glacier) ಮುಂಭಾಗದಲ್ಲಿ ಅಪಾಯಕಾರಿ ಬಿರುಕು ಕೇವಲ ಐದು ವರ್ಷಗಳಲ್ಲಿ ಒಡೆಯಬಹುದು.. ಇದು ಒಡೆದರೆ, ಪ್ರಪಂಚದ ಅನೇಕ ಭಾಗಗಳಲ್ಲಿ ದುರಂತ ಸಂಭವಿಸಬಹುದು. ಅತ್ಯಂತ ಅಪಾಯಕಾರಿ ಅಂಶವೆಂದರೆ ಸಮುದ್ರ ಮಟ್ಟ ಏರಿಕೆಯಿಂದಾಗಿ ಮುಂಬೈ ನಗರದ ಕರಾವಳಿ ಪ್ರದೇಶಗಳು ಮುಳುಗುವ ಅಪಾಯವು ಹೆಚ್ಚಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ..

  ಇದನ್ನೂ ಓದಿ: ಅಂಟಾರ್ಟಿಕಾದಲ್ಲಿ ಮುರಿದು ಬಿತ್ತು ಅಂಡಮಾನ್‌ನಷ್ಟು ದೊಡ್ಡ ಮಂಜಿನ ಗುಡ್ಡ

  4 ಪ್ರತಿಶತದಷ್ಟು ಏರಿಕೆಯಾಗಲಿದೆ ಸಮುದ್ರದ ನೀರು

  ಡೂಮ್ಸ್ ಡೇ ಗ್ಲೇಸಿಯರ್ ಮುಂಭಾಗದಲ್ಲಿ ಉಂಟಾಗಿರುವ, ಹಿಮ ಬಂಡೆಯ ಬಿರುಕು ಯಾವಾಗ ಬೇಕಾದರೂ ಹೊಡೆಯುವುದರಿಂದ ಸಮುದ್ರದಲ್ಲಿರುವ ಜಲಚರ ಪ್ರಾಣಿಗಳಿಗೆ ಭಾರಿ ಅಪಾಯ ಕಾದಿದ್ದು ವಿಶ್ವದ ಹಲವು ಮಹಾನಗರಗಳು ಮುಳುಗಡೆಯಾಗಲಿವೆ.. ಜೊತೆಗೆ ವಿಶ್ವದಲ್ಲಿನ ಸಮುದ್ರಮಟ್ಟ ಸುಮಾರು 4 ಪ್ರತಿಶತದಷ್ಟು ಏರಿಕೆಯಾಗಿ ಸಮುದ್ರತೀರದ ನಗರ ಮುಳುಗಡೆಯಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇನ್ನು , ಥ್ವೈಟ್ಸ್ ಈಸ್ಟರ್ನ್ ಐಸ್ ಶೆಲ್ಫ್ ಹಿಮನದಿಯನ್ನು ಉಳಿಸಿಕೊಳ್ಳಲು ಪಿನ್ನಿಂಗ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಇದರಲ್ಲಿ ಉಂಟಾಗುವ ಬಿರುಕುಗಳನ್ನು ಅಭಿವೃದ್ಧಿಪಡಿಸುವತ್ತ ಚಿಂತನೆ ನಡೆಸಲಾಗುತ್ತಿದೆ.

  ವೇಗವಾಗಿ ಕರಗುತ್ತಿರುವ ಹಿಮ ಬಂಡೆ

  ಸದ್ಯ ಈಗ ಅಂಟ್ಲಾಟಿಕ ಭಾಗದಲ್ಲಿಯೂ ಬಿರುಕು ಉಂಟಾಗಿರುವ ಹಿಮ ಬಂಡೆಯು ವೇಗವಾಗಿ ಕರಗುತ್ತಿತ್ತು, ಇದರಿಂದ ಸಾಕಷ್ಟು ಅಪಾಯ ಇದೆ. ಥ್ವೈಟ್ಸ್ ಗ್ಲೇಸಿಯರ್‌ನ ಪೂರ್ವ ಮೂರನೇ ಭಾಗವು ವೇಗವಾಗಿ ಕರಗುತ್ತಿದೆ ಎಂದು ಪ್ರೊಫೆಸರ್ ಟೆಡ್ ಸ್ಕ್ಯಾಂಬೋಸ್ ಸೈನ್ಸ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ, ಇದು ಕರಗುವ ದರವನ್ನು ಮೂರು ಪಟ್ಟು ಹೆಚ್ಚಿಸುತ್ತದೆ ಮತ್ತು ಕಡಿಮೆ ಸಮಯದಲ್ಲಿ ವಿಶ್ವದ ಸಮುದ್ರ ಮಟ್ಟವನ್ನು ಅಪಾಯಕಾರಿ ರೀತಿಯಲ್ಲಿ ಹೆಚ್ಚಿಸುತ್ತದೆ ಎಂದು ಹೇಳಿದರು.

  ಜಾಗತಿಕ ತಾಪಮಾನದಿಂದಲೇ ಇಷ್ಟೆಲ್ಲಾ ಅಪಾಯ.

  ಇನ್ನು ಅಂಟಾರ್ಟಿಕದಲ್ಲಿ ಆಗಾಗ ಹಿಮ ಬಂಡೆಗಳು ಒಡೆಯುತ್ತಿರುವ ಸುದ್ದಿ ಕೇಳಿ ಬರುತ್ತಲೇ ಇರುತ್ತದೆ.. ಟಕಿಲಾ ಪ್ರಮುಖ ಕಾರಣವೆಂದರೆ ಜಾಗತಿಕ ಮಟ್ಟದಲ್ಲಿ ಏರಿಕೆಯಾಗುತ್ತಿರುವ ತಾಪಮಾನ ಎಂದು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಜಾಗತಿಕ ತಾಪಮಾನದಿಂದಾಗಿ ಭೂಮಿಯ ಒಳಗಡೆ ಶಾಖ ಅಧಿಕವಾಗಿದ್ದು, ಇದರ ತಾಪಮಾನ ತಾಳಲಾರದೇ ಹಿಮ ಬಂಡೆಗಳು ಹೊಡೆದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

  ಇದನ್ನೂ ಓದಿ: ಅಂಟಾರ್ಟಿಕಾ ಹಿಮಗಡ್ಡೆಯ 3000 ಅಡಿ ಕೆಳಗೆ ಜೀವಿಗಳು ಪತ್ತೆ; ಶಾಕ್ ಆದ ವಿಜ್ಞಾನಿಗಳು

  ಈವರೆಗೂ ಕರಗಿರುವ 600 ಶತಕೋಟಿ ಟನ್ ಮಂಜುಗಡ್ಡ

  ಹಲವು ವರ್ಷಗಳ ಹಿಂದೆ ಟೈಮ್ಸ್ NASA ದ JPL ಡೇಟಾವನ್ನು ವಿಶ್ಲೇಷಿಸುವ ವರದಿಯನ್ನು ಪ್ರಕಟಿಸಿತ್ತು. ಈ ವರದಿಯ ಪ್ರಕಾರ 1980 ರಿಂದ ಇಲ್ಲಿಯವರೆಗೆ ಅಂಟಾರ್ಟಿಕಾದಲ್ಲಿ ಕನಿಷ್ಠ 600 ಶತಕೋಟಿಯಷ್ಟು ಮಂಜುಗಡ್ಡೆ ಕರಗಿದೆ.. ಜಾಗತಿಕ ತಾಪಮಾನದಲ್ಲಿ ಏರಿಕೆಯಾಗುತ್ತಿರುವುದದಿಂದ ಭೂಮಿಯ ಒಳಗಡೆ ಅನೇಕ ಬದಲಾವಣೆಗಳಾಗುತ್ತಿದ್ದು, ಇವುಗಳು ಹಿಮ ಬಂಡೆಯ ಬಿರುಕಿಗೆ ಕಾರಣವಾಗಿದೆ. ಇದರಿಂದ ಮತ್ತಷ್ಟು ಅಪಾಯ ಆಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ..
  Published by:ranjumbkgowda1 ranjumbkgowda1
  First published: