ಭಾರತದ ಎಂಜಿನಿಯರ್‌ಗಳು ಜಮ್ಮು ಕಾಶ್ಮೀರದ ಚೆನಬ್ ನದಿಗೆ ಪ್ರಪಂಚದ ಅತಿ ಎತ್ತರದ ರೈಲ್ವೆ ಬ್ರಿಡ್ಜ್ ಕಮಾನು ನಿರ್ಮಿಸುವ ಮೂಲಕ ಸೋಮವಾರ ಇತಿಹಾಸ ನಿರ್ಮಿಸಿದ್ದು, ಭಾರತದ ಪ್ರಸಿದ್ಧಿಯನ್ನು ಪ್ರಪಂಚದಾದ್ಯಂತ ಹರಡಿದ್ದಾರೆ. ಬ್ರಿಡ್ಜ್‌ನ ಈ ಕಮಾನು ಫ್ರಾನ್ಸ್‌ನಲ್ಲಿರುವ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ. ಈ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದ ಎಂಜಿನಿಯರ್‌ಗಳಿಗೆ ಬಹಳ ಸವಾಲಿನ ಯೋಜನೆಯಾಗಿತ್ತು. ಉದ್ದಮ್‍ಪುರ-ಶ್ರೀನಗರ-ಬಾರಾಮುಲ್ಲಾ ಈ ಯೋಜನೆಯನ್ನು 2004ರಲ್ಲಿ ಪ್ರಾರಂಭಿಸಿದಾಗ ಕಠಿಣ ಪರಿಸ್ಥಿತಿ ಎದುರಿಸಬೇಕಾಯಿತು ಎಂದು ಅಧಿಕಾರಿಗಳು ತಮ್ಮ ಅನುಭವ ಹಂಚಿಕೊಂಡರು.
ಈ ಕಮಾನು ಸ್ಫೋಟ ನಿರೋಧಕವಾಗಿದ್ದು, ಈ ಮೂಲಕ ಭಾರತದಿಂದ ಜಮ್ಮು ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯು ಸುಲಭವಾಗಲಿದೆ. 1.3ಕಿ.ಮಿ ಉದ್ದವಿರುವ ಈ ಸೇತುವೆ
1.3ಕಿ.ಮಿ ಉದ್ದವಿರುವ ಈ ಸೇತುವೆ ನಿರ್ಮಾಣದ ಉದ್ದೇಶ ಜಮ್ಮು ಕಾಶ್ಮೀರದ ಸಂಪರ್ಕ ವ್ಯವಸ್ಥೆಯು ಮತ್ತಷ್ಟು ಸುಲಭಗೊಳಿಸುವುದಾಗಿತ್ತು. ಉದ್ದಮ್‍ಪುರ- ಶ್ರೀನಗರ- -ಬಾರಾಮುಲ್ಲಾ ಯೋಜನೆ ಸೇರಿದಂತೆ ಒಟ್ಟು 1,486 ಕೋಟಿ ವೆಚ್ಚ ತಗುಲಿದೆ.
ಕಮಾನಿನ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಕಾಂಕ್ರೀಟ್‍ನ್ನು ಹೆಚ್ಚು ಬಳಸಲಾಗಿದೆ. ಈ ಕಮಾನಿನ ಭಾರ 10,619 ಮೆಟ್ರಿಕ್ ಟನ್ ಹೊಂದಿದೆ. ಕಮಾನನ್ನು ಮೊದಲ ಬಾರಿಗೆ ಓವರ್‌ಹೆಡ್ ಕೇಬಲ್ ಕ್ರೇನ್ ಬಳಸಿ ಪೂರ್ಣಗೊಳಿಸಲಾಗಿದೆ. ಇದು ಭಾರತದ ರೈಲ್ವೆ ಇಲಾಖೆಯಲ್ಲಿ ಮೊದಲ ಪ್ರಯತ್ನ ಎಂದು ಅಧಿಕಾರಿ ತಿಳಿಸಿದ್ದಾರೆ.
BSNL Recharge: ಏಕಾಏಕಿ ನಾಲ್ಕು ರೀಚಾರ್ಜ್ ಪ್ಲ್ಯಾನ್ ಸ್ಥಗಿತಗೊಳಿಸಿದ BSNL: ಹೊಸ ಆಫರ್ ಹೀಗಿದೆ..!
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದು, ಈ ಹೆಜ್ಜೆ ಭಾರತದ ಆಧುನಿಕ ನಿರ್ಮಾಣ ವ್ಯವಸ್ಥೆ ಹಾಗೂ ತಂತ್ರಜ್ಞಾನದಲ್ಲಿನ ಶಕ್ತಿ ಪ್ರದರ್ಶನದ ರೂಪ ಮಾತ್ರವಲ್ಲದೇ, ಕೆಲಸದ ಕ್ರಮದಲ್ಲಾದ ಬದಲಾವಣೆಗೆ ಉತ್ತಮ ನಿದರ್ಶನವಾಗಿ ನಿಂತಿದೆ. ಸಂಕಲ್ಪವೊಂದಿದ್ದರೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ ಎಂದು ತೋರಿಸಿಕೊಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕನಸೊಂದು ಇಷ್ಟು ಸುಂದರವಾಗಿ ಕಾರ್ಯರೂಪಕ್ಕೆ ಬರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ, ಆಲೋಚಿಸಿರಲಿಲ್ಲ. ಇದು ನಿಜವಾಗಿಯೂ ಅದ್ಭುತ ಎಂದು ಕಾಶ್ಮೀರದ ಗುಮ್ನಾಮಿ ಬಾಬಾ ಎಂಬುವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಉತ್ತರ ರೈಲ್ವೆ ವಿಭಾಗವು ಇತಿಹಾಸದಲ್ಲಿ ಬರೆದಿಡುವ ದಿನ. ಇದೊಂದು ಯುಎಸ್‍ಬಿಆರ್‍ಎಲ್‍ನ ಮೈಲಿಗಲ್ಲು. ಈ ಅಣೆಕಟ್ಟು ಒಂದು ವರ್ಷದಲ್ಲಿ ಮುಗಿಯಿತು. ನಂತರ ರೈಲ್ವೆ ಸಂಪರ್ಕಗಳ ಕಾರ್ಯ 2 ವರ್ಷ ಆರು ತಿಂಗಳೊಳಗೆ ಮುಗಿಯುತ್ತದೆ ಎಂದು ಉತ್ತರ ರೈಲ್ವೆ ಮಾರ್ಗದ ಜನರಲ್ ಮ್ಯಾನೇಜರ್ ಅಶುತೋಶ್ ಗಂಗಾಲ್ ಮಾಹಿತಿ ನೀಡಿದರು.
ಇದು ಭಾರತದ ಹೆಮ್ಮೆಯ ಕ್ಷಣ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಪರ್ಕ ಕಲ್ಪಿಸುವ ಕಮಾನು ನಿರ್ಮಾಣ ಪೂರ್ಣಗೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಟ್ವೀಟ್ ಮಾಡಿದ್ದಾರೆ. 5.6 ಮೀಟರ್‌ನ ಕೊನೆಯ ಕಬ್ಬಿಣದ ತುಂಡನ್ನು ಕಮಾನಿನ ತುತ್ತತುದಿಗೆ ಸೋಮವಾರ ಜೋಡಿಸಲಾಯಿತು ಎಂದು ರೈಲ್ವೆ ಸಚಿವಾಲಯ ತಿಳಿಸಿತು.
1.315 ಕಿ.ಮೀ ಉದ್ದವನ್ನು ಹೊಂದಿರುವ ಚೆನಾಬ್ ಸೇತುವೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಿದ್ದು, ಇದು ನದಿಯ ಮಟ್ಟಕ್ಕಿಂತ 359 ಮೀಟರ್ ಎತ್ತರದಲ್ಲಿದೆ ಮತ್ತು ಪ್ಯಾರಿಸ್ (ಫ್ರಾನ್ಸ್) ನಲ್ಲಿರುವ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರದಲ್ಲಿದೆ. ಇದರಲ್ಲಿ 28,660 ಮೆಟ್ರಿಕ್ ಟನ್ ಸ್ಟೀಲ್, 66,000 ಟನ್ ಕಾಂಕ್ರೀಟ್ ಬಳಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ