HOME » NEWS » National-international » WORLDS HAPPIEST COUNTRY SEEKS MIGRANTS STG KVD

ವಿಶ್ವದ ಅತ್ಯಂತ ಸಂತೋಷದಾಯಕ ದೇಶದಲ್ಲಿ ಭರ್ಜರಿ JOB ಆಫರ್.. ಹೋಗಲು ನೀವು ರೆಡಿನಾ..?

ಫಿನ್ಲ್ಯಾಂಡ್​​ನಲ್ಲಿ ಜೀವನದ ಗುಣಮಟ್ಟ, ಸ್ವಾತಂತ್ರ್ಯ ಮತ್ತು ಲಿಂಗ ಸಮಾನತೆಗಾಗಿ ಅಂತರರಾಷ್ಟ್ರೀಯ ಹೋಲಿಕೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದೆ. ಕಡಿಮೆ ಭ್ರಷ್ಟಾಚಾರ, ಅಪರಾಧ ಮತ್ತು ಮಾಲಿನ್ಯವನ್ನು ಹೊಂದಿದೆ.

Trending Desk
Updated:June 23, 2021, 9:45 PM IST
ವಿಶ್ವದ ಅತ್ಯಂತ ಸಂತೋಷದಾಯಕ ದೇಶದಲ್ಲಿ ಭರ್ಜರಿ JOB ಆಫರ್.. ಹೋಗಲು ನೀವು ರೆಡಿನಾ..?
ಪ್ರಾತಿನಿಧಿಕ ಚಿತ್ರ
  • Share this:
ವಿಶ್ವದಲ್ಲೇ ಅತ್ಯಂತ ಸಂತೋಷದಾಯಕ ರಾಷ್ಟ್ರ ಯಾವುದು ಅಂದ್ರೆ ಫಿನ್ಲೆಂಡ್‌ ಎಂದು ಅನೇಕರಿಗೆ ಗೊತ್ತಿದೆ. ಪ್ರತಿ ವರ್ಷ ಜೀವನಮಟ್ಟವನ್ನು ಲೆಕ್ಕ ಹಾಕಿದಾಗಲೂ ಸಂತೋಷದಾಯಕ ರಾಷ್ಟ್ರಗಳ ಪಟ್ಟಿಯಲ್ಲಿರುತ್ತೆ ಫಿನ್ಲೆಂಡ್. ಈ ಹಿನ್ನೆಲೆ ಈ ರಾಷ್ಟ್ರಕ್ಕೆ ಬೇರೆ ದೇಶಗಳಿಂದ ವಲಸೆ ಹೋಗಲು ಮುಗಿಬೀಳುತ್ತಾರೆ ಅನ್ಕೋಬೇಡಿ. ಏಕೆಂದರೆ, ವಾಸ್ತವವಾಗಿ ಈ ದೇಶ ತೀವ್ರವಾದ ಉದ್ಯೋಗಿಗಳ ಕೊರತೆಯನ್ನು ಎದುರಿಸುತ್ತಿದೆ. ಹೌದು, "ದೇಶಕ್ಕೆ ಬರಲು ನಮಗೆ ಅದ್ಭುತ ಸಂಖ್ಯೆಯ ಜನರು ಬೇಕು ಎಂದು ಈಗ ಒಪ್ಪಿಕೊಳ್ಳಲಾಗಿದೆ" ಎಂದು ಏಜೆನ್ಸಿ ಟ್ಯಾಲೆಂಟೆಡ್ ಸೊಲ್ಯೂಷನ್ಸ್‌ನ ರೆರ್ಕ್ಯೂಟರ್‌ ಸಕು ತಿಹವೆರೈನ್ ಎಎಫ್‌ಪಿಗೆ ತಿಳಿಸಿದರು. ವಯಸ್ಸಾದ ಪೀಳಿಗೆಯವರ ವೆಚ್ಚವನ್ನು ಭರಿಸಲು ಸಹಾಯ ಮಾಡಲು ಕಾರ್ಮಿಕರ ಅಗತ್ಯವಿದೆ ಎಂದು ಅವರು ವಿವರಿಸಿದರು.

ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚು ಎಂದು ನಾವು ಗೊಣಗುತ್ತಿರುತ್ತೇವೆ. ಆದರೆ, ಇಲ್ಲಿ ಉಲ್ಟಾ. ಫಿನ್ಲೆಂಡ್‌ ಮಾತ್ರವಲ್ಲ, ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಜನಸಂಖ್ಯೆಯ ಬೆಳವಣಿಗೆ ಕಡಿಮೆಯಾಗುತ್ತಿದೆ ಎಂಬ ಆತಂಕ ಎದುರಾಗಿದೆ. ಆದರೆ, ಫಿನ್ಲೆಂಡ್‌ನಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, ತೀವ್ರವಾಗಿ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ.

ಈ ದೇಶದಲ್ಲಿ 100 ದುಡಿಯುವ ವಯಸ್ಸಿನ ಜನರ ಪೈಕಿ 39.2 ಕ್ಕಿಂತ ಹೆಚ್ಚು ಜನರಿಗೆ 65 ಕ್ಕಿಂತ ಹೆಚ್ಚು ವಯಸ್ಸಾಗಿದೆ. ವಯಸ್ಸಾದ ಜನಸಂಖ್ಯೆಯ ವ್ಯಾಪ್ತಿಯಲ್ಲಿ ಜಪಾನ್‌ ಬಿಟ್ಟರೆ ಫಿನ್ಲೆಂಡ್‌ ಎರಡನೇ ಸ್ಥಾನದಲ್ಲಿದೆ ಎಂದು ಸ್ವತ: ಯುಎನ್ ಹೇಳಿದೆ. ಅಲ್ಲದೆ, 2030 ರ ವೇಳೆಗೆ "ವೃದ್ಧಾಪ್ಯ ಅವಲಂಬನೆ ಅನುಪಾತ" 47.5 ಕ್ಕೆ ಏರಿಕೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಈ ಹಿನ್ನೆಲೆ, 5.5 ಮಿಲಿಯನ್ ಜನಸಂಖ್ಯೆಯುಳ್ಳ ರಾಷ್ಟ್ರವು ಸಾರ್ವಜನಿಕ ಸೇವೆಗಳನ್ನು ನಿರ್ವಹಿಸಲು ಮತ್ತು ಪಿಂಚಣಿ ಕೊರತೆಯನ್ನು ಹೆಚ್ಚಿಸಲು ವರ್ಷಕ್ಕೆ 20,000-30,000 ಕ್ಕೆ ವಲಸೆ ಮಟ್ಟವನ್ನು ಪ್ರಾಯೋಗಿಕವಾಗಿ ದ್ವಿಗುಣಗೊಳಿಸುವ ಅಗತ್ಯವಿದೆ ಎಂದು ಫಿನ್ಲೆಂಡ್‌ ಸರ್ಕಾರ ಎಚ್ಚರಿಸಿದೆ.

ಫಿನ್ಲೆಂಡ್‌ ದೇಶದ ಜೀವನದ ಗುಣಮಟ್ಟ, ಸ್ವಾತಂತ್ರ್ಯ ಮತ್ತು ಲಿಂಗ ಸಮಾನತೆಗಾಗಿ ಅಂತಾರಾಷ್ಟ್ರೀಯ ಹೋಲಿಕೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದೆ, ಅಲ್ಲದೆ, ಕಡಿಮೆ ಭ್ರಷ್ಟಾಚಾರ, ಅಪರಾಧ ಮತ್ತು ಮಾಲಿನ್ಯವನ್ನು ಹೊಂದಿದೆ. ಇದು ಆಕರ್ಷಕವಾಗಿ ಕಾಣಿಸಬಹುದು. ಆದರೆ, ವಲಸೆ-ವಿರೋಧಿ ಮನೋಭಾವ ಮತ್ತು ಹೊರಗಿನವರನ್ನು ನೇಮಿಸಿಕೊಳ್ಳಲು ಹಿಂಜರಿಯುವುದು ಪಶ್ಚಿಮ ಯುರೋಪಿನ ಅತ್ಯಂತ ಏಕರೂಪದ ಸಮಾಜದಲ್ಲಿ ವ್ಯಾಪಕವಾಗಿ ಹರಡಿದೆ ಮತ್ತು ವಿರೋಧ ಪಕ್ಷದ ಬಲಪಂಥೀಯ ಫಿನ್ಸ್ ಪಕ್ಷವು ನಿಯಮಿತವಾಗಿ ಚುನಾವಣೆಯ ಸಮಯದಲ್ಲಿ ಸಾಕಷ್ಟು ಬೆಂಬಲವನ್ನು ಪಡೆಯುತ್ತದೆ.

ಫಿನ್ಲ್ಯಾಂಡ್​​ನಲ್ಲಿ ಜೀವನದ ಗುಣಮಟ್ಟ, ಸ್ವಾತಂತ್ರ್ಯ ಮತ್ತು ಲಿಂಗ ಸಮಾನತೆಗಾಗಿ ಅಂತರರಾಷ್ಟ್ರೀಯ ಹೋಲಿಕೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದೆ. ಕಡಿಮೆ ಭ್ರಷ್ಟಾಚಾರ, ಅಪರಾಧ ಮತ್ತು ಮಾಲಿನ್ಯವನ್ನು ಹೊಂದಿದೆ.

ಆದರೆ ವಲಸೆ-ವಿರೋಧಿ ಮನೋಭಾವ ಮತ್ತು ಹೊರಗಿನವರನ್ನು ನೇಮಿಸಿಕೊಳ್ಳಲು ಹಿಂಜರಿಯುವುದು ಪಶ್ಚಿಮ ಯುರೋಪಿನ ಅತ್ಯಂತ ಏಕರೂಪದ ಸಮಾಜದಲ್ಲಿ ವ್ಯಾಪಕವಾಗಿ ಹರಡಿದೆ ಮತ್ತು ವಿರೋಧ ಪಕ್ಷದ ಬಲಪಂಥೀಯ ಫಿನ್ಸ್ ಪಕ್ಷವು ಪ್ರತಿ ಚುನಾವಣೆಯ ಸಮಯದಲ್ಲಿ ಈ ವಿಚಾರದಲ್ಲಿ ಸಾಕಷ್ಟು ಬೆಂಬಲವನ್ನು ಪಡೆಯುತ್ತದೆ.ವಲಸಿಗರ ಅಗತ್ಯತೆ ತೀವ್ರ ಹೆಚ್ಚಿದೆ.

ಫಿನ್ಲೆಂಡ್‌ ಸರ್ಕಾರ ಮತ್ತು ಬ್ಯುಸಿನೆಸ್‌ ಕಂಪನಿಗಳು ಈಗ ಹೆಚ್ಚು ಸಮಸ್ಯೆಯನ್ನು ಗುರುತಿಸುತ್ತಿವೆ. ವಯಸ್ಸಾದವರ ಜನಸಂಖ್ಯೆಯಿಂದ ಉಂಟಾಗಿದೆ ಎಂದು ಫಿನ್ಲೆಂಡ್ ಅಕಾಡೆಮಿಯ ಸಂಶೋಧನಾ ಸಹೋದ್ಯೋಗಿ ಚಾರ್ಲ್ಸ್ ಮ್ಯಾಥೀಸ್ ಹೇಳಿದ್ದಾರೆ. ಸ್ಪೇನ್‌ನ ಆರೋಗ್ಯ ಕಾರ್ಯಕರ್ತರು, ಸ್ಲೋವಾಕಿಯಾದ ಲೋಹ ಕೆಲಸಗಾರರು ಮತ್ತು ರಷ್ಯಾ, ಭಾರತ ಮತ್ತು ಆಗ್ನೇಯ ಏಷ್ಯಾದ ಐಟಿ ಮತ್ತು ಕಡಲ ತಜ್ಞರನ್ನು ಫಿನ್ಲೆಂಡ್‌ಗೆ ವಲಸೆ ಮಾಡಿಕೊಳ್ಳಲು ಅಲ್ಲಿನ ಸರ್ಕಾರ "ಟ್ಯಾಲೆಂಟ್ ಬೂಸ್ಟ್" ಎಂಬ ಕಾರ್ಯಕ್ರಮ ನಡೆಸುತ್ತಿದೆ.

ಆದರೆ, ಈ ಹಿಂದೆ ಈ ರೀತಿಯ ಪ್ರಯತ್ನಗಳೂ ವಿಫಲವಾಗಿದೆ. 2013 ರಲ್ಲಿ, ಪಶ್ಚಿಮ ಪಟ್ಟಣವಾದ ವಾಸಾಗೆ ನೇಮಕಗೊಂಡ ಎಂಟು ಸ್ಪ್ಯಾನಿಷ್ ದಾದಿಯರಲ್ಲಿ ಐವರು ಕೆಲವು ತಿಂಗಳುಗಳ ನಂತರ ವಾಪಸ್‌ ತಮ್ಮ ದೇಶಕ್ಕೆ ಹೋದರು. ಅದಕ್ಕೆ ಕಾರಣ, ಫಿನ್ಲೆಂಡ್‌ನಲ್ಲಿ ಜೀವನ ಮಾಡಲು ಬೆಲೆಗಳು ಹೆಚ್ಚಿರುವುದು, ಸಿಕ್ಕಾಪಟ್ಟೆ ಚಳಿ ಎನ್ನುವಂತಹ ತಾಪಮಾನ ಮತ್ತು ಅಲ್ಲಿನ ಕಷ್ಟಕರ ಹಾಗೂ ಸಂಕೀರ್ಣವಾದ ಭಾಷೆ. ಕಳೆದ ದಶಕದಲ್ಲಿ ಫಿನ್ಲೆಂಡ್‌ ಬಿಟ್ಟು ಹೋಗುವವರಿಗಿಂತ ಹೆಚ್ಚಾಗಿ ಸಾವಿರಾರು ಜನರು ಈಗಾಗಲೇ ವಲಸೆ ಬಂದಿದ್ದಾರೆ. ಆದರೂ, ದೇಶ ಬಿಟ್ಟು ಹೋದವರ ಪೈಕಿ ಹೆಚ್ಚು ವಿದ್ಯಾವಂತರೇ ಇರುವುದು ಅಲ್ಲಿನ ಸರ್ಕಾರಕ್ಕೆ ಮತ್ತಷ್ಟು ತಲೆನೋವು ತಂದಿದೆ.

ಇದನ್ನೂ ಓದಿ: ಮನೆಯಲ್ಲಿ ಸುಲಭವಾಗಿ ಸಿಗುವ ಐಸ್​ಕ್ಯೂಬ್​​ ಮಸಾಜ್​​ನಿಂದ ಮುಖದ ತ್ವಚೆ ಹೊಳೆಯಲಿದೆ

ಫಿನ್ನಿಷ್ ಸ್ಟಾರ್ಟ್ಅಪ್‌ ಕಂಪನಿಗಳು ಸಹ ದೇಶದೊಳಗಿನ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆ ಬೇರೆ ದೇಶದ ಪ್ರತಿಭೆಗಳನ್ನು ಆಯ್ಕೆ ಮಾಡಲು ಜಂಟಿ ವೃತ್ತಿಜೀವನದ ತಾಣವನ್ನು ರಚಿಸುತ್ತಿವೆ.

ವ್ಯವಸ್ಥಿತ ಸಮಸ್ಯೆ
ಇನ್ನು, ವ್ಯಕ್ತಿಯು ಸಿಂಗಲ್ ಆಗಿರುವವರೆಗೆ ಅವರು ಜಗತ್ತಿನ ಯಾವ ದೇಶದವರಾದರೂ ಸರಿಯೇ, ಅವರು ಬಂದು ಹೆಲ್ಸಿಂಕಿಯಲ್ಲಿ ಕೆಲಸ ಮಾಡಬಹುದೆಂದು ನನಗೆ ಹೇಳಿದ್ದಾರೆ ಎಂದು ಫಿನ್ಲೆಂಡ್‌ ರಾಜಧಾನಿಯ ಮೇಯರ್‌ ಜಾನ್ ವಾಪಾವೂರಿ ಎಎಫ್‌ಪಿಗೆ ತಿಳಿಸಿದ್ದಾರೆ.
ಆದರೆ, ಬೇರೆ ದೇಶದವರನ್ನು ಆಯ್ಕೆ ಮಾಡುವಲ್ಲಿ ಫಿನ್ಲೆಂಡ್‌ ಪೂರ್ವಗ್ರಹವನ್ನು ಹೊಂದಿದೆ ಎಂದು ಹಲವು ವಿದೇಶಿಯರು ದೂರಿದ್ದಾರೆ.

ಈ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ರೆರ್ಕ್ಯೂಟರ್ ಸಕು ತಿಹವೆರೈನ್, ಸ್ಥಳೀಯ ಫಿನ್ನಿಷ್ ಕಾರ್ಮಿಕರನ್ನು ಮಾತ್ರ ನೇಮಿಸಿಕೊಳ್ಳಬೇಕೆಂಬ ಒತ್ತಾಯ ಈಗ ಕಡಿಮೆಯಾಗುತ್ತಿದೆ. ಆದರೂ ಫಿನ್ನಿಶ್‌ ಭಾಷೆಯನ್ನೇ ಬಳಸಬೇಕೆಂದು ಕಂಪನಿಗಳು ಹೆಚ್ಚು ಅಚಲವಾಗಿದೆ ಎಂದು ಹೇಳಿದರು.

ಆದ್ಯತೆಗಳನ್ನು ಬದಲಾಯಿಸುವುದು

ಯುಎನ್ ಶ್ರೇಯಾಂಕದಲ್ಲಿ ಫಿನ್ಲೆಂಡ್‌ ಸತತ ನಾಲ್ಕು ವರ್ಷಗಳ ಕಾಲ ವಿಶ್ವದ ಅತ್ಯಂತ ಸಂತೋಷದಾಯಕ ದೇಶವೆಂದು ಆಯ್ಕೆಯಾಗಿದ್ದರೂ, ಇದರಿಂದ ನಾವು ನಿರೀಕ್ಷಿಸಿದಷ್ಟು ಸಹಾಯವಾಗಿಲ್ಲ ಎಂದು ಹೆಲ್ಸಿಂಕಿ ಮೇಯರ್ ಜಾನ್ ವಾಪಾವೂರಿ ಹೇಳಿದ್ದಾರೆ.
ಭವಿಷ್ಯದಲ್ಲಿ ಏಷ್ಯಾದಿಂದ ಪ್ರತಿಭೆಗಳನ್ನು ಆಕರ್ಷಿಸುವ ಫಿನ್‌ಲ್ಯಾಂಡ್‌ನ ಸಾಮರ್ಥ್ಯದ ಬಗ್ಗೆ ಅವರು ಆಶಾವಾದಿಯಾಗಿದ್ದು, ಅಂತಾರಾಷ್ಟ್ರೀಯ ಚಲನಶೀಲತೆಯು ಕೊರೊನಾ ವೈರಸ್‌ ನಂತರದ ದಿನಗಳಲ್ಲಿ ಮತ್ತೆ ಹೆಚ್ಚಾದ ನಂತರ ಜನರ ಆದ್ಯತೆಗಳು ಬದಲಾಗುತ್ತವೆ ಎಂದು ಅವರು ನಂಬುತ್ತಾರೆ.

ಹೆಲ್ಸಿಂಕಿ ಸುರಕ್ಷಿತ, ಕ್ರಿಯಾತ್ಮಕ, ವಿಶ್ವಾಸಾರ್ಹ, ಊಹಿಸಬಹುದಾಗಿದೆ. ಆ ಮೌಲ್ಯಗಳು ಪ್ರಾಮುಖ್ಯತೆಯನ್ನು ಪಡೆದಿವೆ. ಸಾಂಕ್ರಾಮಿಕ ರೋಗದ ನಂತರ ನಮ್ಮ ಸ್ಥಾನವು ಮೊದಲಿಗಿಂತ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ." ಎಂದು ಸಹ ಹೆಲ್ಸಿಂಕಿ ಮೇಯರ್ ಜಾನ್ ವಾಪಾವೂರಿ ಹೇಳಿದರು.
Published by: Kavya V
First published: June 23, 2021, 9:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories