ವಿಶ್ವದ ಅತ್ಯಂತ ಎತ್ತರವಾದ 5 ಜಲಪಾತಗಳು ಹಾಗೂ ಅವುಗಳ ವಿಶೇಷತೆಗಳು ಇಲ್ಲಿದೆ...

ಪ್ರಕೃತಿಯ ಈ ವಿಶೇಷ ಕೊಡುಗೆಗಳು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಅದರಲ್ಲೂ ಅತ್ಯಂತ ಎತ್ತರದಿಂದ ಭೋರ್ಗರೆಯುತ್ತಾ ಧುಮುಕುವ ಜಲಪಾತಗಳನ್ನು ನೋಡುವುದೇ ಒಂದು ಅದೃಷ್ಟ. ಅತಂಹ ಜಗತ್ತಿನ ಅತ್ಯಂತ ಎತ್ತರದ 5 ಜಲಪಾತಗಳ ವಿವರ ಇಲ್ಲಿದೆ.

ಪ್ರಕೃತಿಯ ಈ ವಿಶೇಷ ಕೊಡುಗೆಗಳು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಅದರಲ್ಲೂ ಅತ್ಯಂತ ಎತ್ತರದಿಂದ ಭೋರ್ಗರೆಯುತ್ತಾ ಧುಮುಕುವ ಜಲಪಾತಗಳನ್ನು ನೋಡುವುದೇ ಒಂದು ಅದೃಷ್ಟ. ಅತಂಹ ಜಗತ್ತಿನ ಅತ್ಯಂತ ಎತ್ತರದ 5 ಜಲಪಾತಗಳ ವಿವರ ಇಲ್ಲಿದೆ.

ಪ್ರಕೃತಿಯ ಈ ವಿಶೇಷ ಕೊಡುಗೆಗಳು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಅದರಲ್ಲೂ ಅತ್ಯಂತ ಎತ್ತರದಿಂದ ಭೋರ್ಗರೆಯುತ್ತಾ ಧುಮುಕುವ ಜಲಪಾತಗಳನ್ನು ನೋಡುವುದೇ ಒಂದು ಅದೃಷ್ಟ. ಅತಂಹ ಜಗತ್ತಿನ ಅತ್ಯಂತ ಎತ್ತರದ 5 ಜಲಪಾತಗಳ ವಿವರ ಇಲ್ಲಿದೆ.

 • Share this:

  ಅತ್ಯಂತ ಎತ್ತರದಿಂದ ಭೋರ್ಗರೆಯುತ್ತಾ ಧುಮುಕುವ ಜಲಪಾತಗಳನ್ನು ನೋಡುವುದೇ ಒಂದು ಅದೃಷ್ಟ. ಅತಂಹ ಜಗತ್ತಿನ ಅತ್ಯಂತ ಎತ್ತರದ 5 ಜಲಪಾತಗಳ ವಿವರ ಇಲ್ಲಿದೆ.


  ಜಲಪಾತಗಳು ಈ ನಿಸರ್ಗದ ಅತ್ಯಂತ ಸುಂದರ ಹಾಗೂ ಅತ್ಯದ್ಭುತ ಸೃಷ್ಟಿಗಳಲ್ಲಿ ಒಂದು. ನಾವೆಲ್ಲರೂ ಅದಕ್ಕಾಗಿ ನಿಸರ್ಗಕ್ಕೆ ಖಂಡಿತಾ ಆಭಾರಿಗಳಾಗಿರಬೇಕು. ಜಗತ್ತಿನ ಎಲ್ಲೆಡೆ ಇಂತಹ ನಿಸರ್ಗದತ್ತ ಆಕರ್ಷಕ ಜಲಪಾತಗಳು ಇವೆ. ಅವು ಗಾತ್ರ, ಆಕಾರ , ಎತ್ತರ ಇತ್ಯಾದಿಗಳ ವಿಷಯದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿದೆ. ಪರಿಸರ ಪ್ರೇಮಿಗಳು ಈ ಸಹಜ ಸೌಂದರ್ಯವುಳ್ಳ, ಕಣ್ಣಿಗೆ ಹಬ್ಬವನ್ನು ಉಂಟು ಮಾಡುವ ಜಲಪಾತಗಳನ್ನು ನೋಡಲಿಕ್ಕಾಗಿ ಜಗತ್ತಿನ ವಿವಿಧೆಡೆಗೆ ಪ್ರವಾಸ ಹೋಗುತ್ತಾರೆ. ಮೊದಲೇ ಹೇಳಿದಂತೆ ಪ್ರಕೃತಿಯ ಈ ವಿಶೇಷ ಕೊಡುಗೆಗಳು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಅದರಲ್ಲೂ ಅತ್ಯಂತ ಎತ್ತರದಿಂದ ಭೋರ್ಗರೆಯುತ್ತಾ ಧುಮುಕುವ ಜಲಪಾತಗಳನ್ನು ನೋಡುವುದೇ ಒಂದು ಅದೃಷ್ಟ. ಅತಂಹ ಜಗತ್ತಿನ ಅತ್ಯಂತ ಎತ್ತರದ 5 ಜಲಪಾತಗಳ ವಿವರ ಇಲ್ಲಿದೆ.
  1. ಏಜಂಲ್ ಜಲಪಾತ (3212 ಅಡಿ) , ವೆನೆಜುವೆಲಾ
  ಏಜೆಂಲ್ಸ್ ಜಲಪಾತ, ಕೆರೆಪಕುಪೈ ಮೆರು ಎಂಬ ಮತ್ತೊಂದು ಹೆಸರಿನಿಂದಲೂ ಜನಪ್ರಿಯವಾಗಿದೆ. ವಿಶ್ವದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿರುವ ಇದರ ಎತ್ತರ 3212 ಅಡಿಗಳಷ್ಟಿದೆ! ಈ ಏಂಜಲ್ ಜಲಪಾತ ವೆನೆಜುವೆಲಾದ ಕೆನೈಮಾ ನ್ಯಾಶನಲ್ ಪಾರ್ಕ್‍ನಲ್ಲಿದೆ. ಅದು ದಕ್ಷಿಣ ಅಮೆರಿಕಾದ ಬೋಲಿವರ್ ರಾಜ್ಯದ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೂ ಹೌದು. ಈ ಪ್ರಕೃತಿಯ ಅತ್ಯಾಕರ್ಷಕ ಸೃಷ್ಟಿಯಾದ ಏಂಜಲ್ ಜಲಪಾತದ ಸೊಬಗನ್ನು ಸವಿಯಲು ಇಲ್ಲಿಗೆ ಪ್ರತಿ ವರ್ಷ ಒಂದು ಮಿಲಿಯನ್‍ಗಿಂತಲೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ ಎಂದು ನಂಬಲಾಗಿದೆ.
  ಏಜಂಲ್ ಜಲಪಾತ

  2. ಟ್ರೆಸ್ ಹೆರ್ಮನಸ್ ಜಲಪಾತ (2999 ಅಡಿ), ಪೆರು
  ಟ್ರೆಸ್ ಹೆರ್ಮನಸ್ ಜಲಪಾತವು ವಿಶ್ವದ ಮೂರನೆಯ ಅತ್ಯಂತ ಎತ್ತರದ ಜಲಪಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇದರ ಒಟ್ಟು ಎತ್ತರ 2999 ಅಡಿ (914ಮೀ). ಅತೀ ಎತ್ತರದಿಂದ ಭೋರ್ಗರೆಯುವ ಈ ಸುಂದರ ಜಲಪಾತವನ್ನು ನೋಡಬೇಕೆಂದರೆ, ಪೆರುವಿಯನ್ ಪ್ರಾಂತ್ಯದಲ್ಲಿರುವ ಜುನೀನ್‍ನಲ್ಲಿರುವ ಒಟಿಶಿ ನ್ಯಾಶನಲ್ ಪಾರ್ಕ್‍ಗೆ ಹೋಗಬೇಕು. ಸುತ್ತಲೂ ದಟ್ಟ ಕಾಡಿನಿಂದ ಆವೃತವಾತವಾದ ಪ್ರದೇಶದಲ್ಲಿರುವ ಈ ಸುಂದರ ಜಲಪಾತದ ಸೊಬಗನ್ನು ಸವಿಯುವುದು ಒಂದು ಉಲ್ಲಾಸದ ಅನುಭವ.
  ಟ್ರೆಸ್ ಹೆರ್ಮನಸ್ ಜಲಪಾತ

  3. ಓಲೋ ಉಪೇನಾ ಜಲಪಾತ (2953 ಅಡಿ), ಹವಾಯಿ
  ವಿಶ್ವದ ಅತೀ ಎತ್ತರ, ಕಡಲ ತೀರದ ಬಂಡೆಗಳಿಂದ ಧುಮ್ಮಿಕ್ಕುವ ಓಲೋ ಉಪೇನಾ ಜಲಪಾತ 2953 ಅಡಿ ಎತ್ತರವಿದ್ದು, ಹವಾಯಿಯಲ್ಲಿರುವ ದ್ವೀಪವಾದ ಮೋಲೋಕೈಯಲ್ಲಿದೆ. ಈ ಸುಂದರ ಜಲಪಾತ ಅತ್ಯಂತ ಆಳವಾಗಿ ಇರುವುದರಿಂದ ಅದನ್ನು ಸಾಗರದ ಮೂಲಕ ಅಥವಾ ವಾಯು ಮಾರ್ಗದ ಮೂಲಕವಷ್ಟೇ ನೋಡಬಹುದು.ಅದು ಕ್ವಾಜುಲ್ ಪ್ರಾಂತ್ಯದಲ್ಲಿರುವ ಡ್ರಾಕೆನ್ಸ್‍ಬರ್ಗ್ ಪರ್ವತದ ಸಮೀಪವಿರುವ ತುಗೇಲಾ ನದಿಯ ಮೂಲದಲ್ಲಿದೆ.
  ಓಲೋ ಉಪೇನಾ ಜಲಪಾತ

  4. ಯುಂಬಿಲ್ಲಾ ಜಲಪಾತ (2940 ಅಡಿ), ಪೆರು
  ಯುಂಬಿಲ್ಲಾ ಜಲಪಾತವು, ಅಮೇಜಾನ್‍ನ ಪೆರುವಿಯನ್ ಪ್ರಾಂತ್ಯದ ಕ್ಯೂಸ್ಪೆಸ್ ಪಟ್ಟಣದ ಬಳಿ ಇದ್ದು, 2940 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಇದು ವಿಶ್ವದ ಅತ್ಯಂತ ಎತ್ತರ ಮಾತ್ರವಲ್ಲ, ಅತ್ಯಂತ ಸುಂದರ ಜಲಪಾತಗಳಲ್ಲಿ ಕೂಡ ಒಂದು.ಜಲಪಾತಗಳು ಇರುವ ಭಾಗವು ಪೂರ್ವ ಪೆರುವಿಯನ್ ಅಂಡಿಸ್‍ನ ಭಾಗವಾಗಿದ್ದು, ಅದನ್ನು ಕಾರ್ಡಿಲ್ಲೆರಾ ಓರಿಯಂಟಲ್ ಎಂಬ ಹೆಸರಿನಿಂದ ಕೂಡ ಕರೆಯುತ್ತಾರೆ.
  ಯುಂಬಿಲ್ಲಾ ಜಲಪಾತ


  ಇದನ್ನೂ ಓದಿ: DMK -Congress: ರಾಜ್ಯಸಭಾ ಉಪಚುನಾವಣೆ: ಮೈತ್ರಿ ಪಕ್ಷ ಕಾಂಗ್ರೆಸ್​ಗೆ ಇಲ್ಲ ಅವಕಾಶ​; ಅಭ್ಯರ್ಥಿಗಳ ಘೋಷಿಸಿದ ಡಿಎಂಕೆ

  5. ವಿನ್ನುಪೊಸ್ಸೆನ್ ಜಲಪಾತ (2838 ಅಡಿ) , ನಾರ್ವೆ
  ಇದು ಇಡೀ ಯೂರೋಪಿನಲ್ಲಿಯೇ ಅತ್ಯಂತ ಎತ್ತರದ ಜಲಪಾತ! 2838 ಅಡಿಯಿಂದ ಧುಮ್ಮಿಕ್ಕುವ ಈ ಶ್ರೇಣೀಕೃತ ಹಾರ್ಸ್‍ಟೇಲ್ ಜಲಪಾತವು ಸುಂಡಲ್ಸೋರಾ ಎಂಬ ಹಳ್ಳಿಯಲ್ಲಿದೆ. ಈ ಜಲಪಾತಗಳು, ವಿನ್ನುಫ್‍ಜೆಲೆಟ್ ಪರ್ವತದಿಂದ ಹರಿಯುವ ವಿನ್ನು ನದಿಯ ಒಂದು ಭಾಗವಾಗಿದೆ.
  ವಿನ್ನುಪೊಸ್ಸೆನ್ ಜಲಪಾತ
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: