Sanskrit Film: ವಿಶ್ವದಲ್ಲೇ ಮೊದಲ ಬಾರಿಗೆ ಸಂಸ್ಕೃತದಲ್ಲಿ ವೈಜ್ಞಾನಿಕ ಸಾಕ್ಷ್ಯಚಿತ್ರ ಬರಲಿದೆಯಂತೆ....ಇಲ್ಲಿದೆ ನೋಡಿ ಡಿಟೈಲ್ಸ್

ಯಾನಂ ಎಂಬ ಹೆಸರನ್ನು ಹೊಂದಿರುವ ಈ 45 ನಿಮಿಷಗಳ ಡಾಕ್ಯುಮೆಂಟರಿ ಚಿತ್ರವು ಇಸ್ರೋದ ಮಾಜಿ ಮುಖ್ಯಸ್ಥರಾದ ಕೆ. ರಾಧಾಕೃಷ್ಣನ್ ಬರೆದಿರುವ 'ಮೈ ಒಡೆಸ್ಸಿ - ಮೆಮಾಯಿರ್ಸ್ ಆಫ್ ದಿ ಮ್ಯಾನ್ ಬಿಹೈಂಡ್ ದಿ ಮಂಗಲಯಾನ್ ಮಿಷನ್' ಪುಸ್ತಕದಿಂದ ಪ್ರಭಾವಿತವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಸ್ತುತ ದಿನಮಾನಗಳಲ್ಲಿ ಚಲನಚಿತ್ರರಂಗವು ಸಾಕಷ್ಟು ಅಭಿವೃದ್ಧಿ ಕಂಡಿದೆ. ಸಾಂಪ್ರದಾಯಿಕತೆ (Traditional) ತೊರೆದು ವೈವಿಧ್ಯಮಯ ವಿಷಯಗಳ ಮೇಲೂ ಸಹ ಹಲವು ಅದ್ಭುತ ಚಿತ್ರಗಳನ್ನು ನಿರ್ಮಿಸಲಾಗಿದೆ. ಇದರ ಮುಂದುವರಿದ ಭಾಗದಂತೆ ಇನ್ನೊಂದು ಪ್ರಪ್ರಥಮವಾದ ವಿಶೇಷ ಪ್ರಯತ್ನ ಮಾಡಲು ಚಿತ್ರರಂಗ (Cinema) ಮತ್ತೊಮ್ಮೆ ಮುಂದಾಗಿದೆ.ಜಗತ್ತಿನ ಪುರಾತನ ಭಾಷೆಗಳಲ್ಲೊಂದಾದ ಹಾಗೂ ಕ್ಲಾಸಿಕ್ ಭಾಷೆ ಎಂದು ಕರೆಯಲ್ಪಡುವ ಸಂಸ್ಕೃತದಲ್ಲಿ ವೈಜ್ಞಾನಿಕ ವಿಷಯವೊಂದರ ಕುರಿತು ಚಿತ್ರ ನಿರ್ಮಿಸುವ ಕುರಿತು ಸಿದ್ಧತೆ ಪ್ರಾರಂಭಗೊಂಡಿದೆ. ಅದರಲ್ಲೂ ವಿಶೇಷವಾಗಿ ಭಾರತದ ಐತಿಹಾಸಿಕ ಸಾಧನೆ ( Historical Achievement) ಎಂದೇ ಹೇಳಬಹುದಾದ ಪ್ರಸಿದ್ಧ ಮಂಗಳಯಾನ ( Mars journey) ಕುರಿತಂತೆ ಹಲವು ವಿಷಯಗಳು ಈ ಚಿತ್ರದಲ್ಲಿ ದಾಖಲಾಗಲಿವೆ. ಹಾಗಾಗಿ ಸಂಸ್ಕೃತದಲ್ಲಿ ಇಂದಿನ ವೈಜ್ಞಾನಿಕ ಅದರಲ್ಲೂ ನಭೋ (Nabho Mandala) ಮಂಡಲ ಹಾಗೂ ರಾಕೆಟ್, ಉಪಗ್ರಹ ಕುರಿತಂತೆ ತಾಂತ್ರಿಕ ಪದಗಳನ್ನು ಕೇಳಲು ಸಜ್ಜಾಗಿ.

ಮಂಕರಾ ಸಂಸ್ಕೃತ ಭಾಷೆ
ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಣಕಾರರಾಗಿರುವ ವಿನೋದ್ ಮಂಕರಾ ಈ ಕುರಿತಂತೆ ಸಂಸ್ಕೃತ ಭಾಷೆಯಲ್ಲಿ ಡಾಕ್ಯುಮೆಂಟರಿ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ಮಂಕರಾ ಸಂಸ್ಕೃತ ಭಾಷೆಯನ್ನು ಮತ್ತೆ ಜನಪ್ರಿಯಗೊಳಿಸುವತ್ತ ತಮ್ಮ ಪ್ರಯತ್ನಗಳಿಗೆ ಈಗಾಗಲೇ ಹೆಸರುವಾಸಿಯಾಗಿದ್ದಾರೆ. ಈ ಚಿತ್ರದ ಮೂಲಕ ಅವರು ಮತ್ತೆ ತಮ್ಮ ಪ್ರಯತ್ನವನ್ನು ಭಾಷೆಗಾಗಿ ಮುಂದುವರೆಸಿದ್ದಾರೆ.

ಇದನ್ನೂ ಓದಿ: New Planet: ಈ ಗ್ರಹದಲ್ಲಿ 16 ಗಂಟೆಗೆ ಒಂದು ವರ್ಷ! NASA ಹುಡುಕಿದ ಹೊಸಾ ಗ್ರಹದಲ್ಲಿ ಇನ್ನೇನಿದೆ?

ಯಾನಂ ಎಂಬ ಹೆಸರನ್ನು ಹೊಂದಿರುವ ಈ 45 ನಿಮಿಷಗಳ ಡಾಕ್ಯುಮೆಂಟರಿ ಚಿತ್ರವು ಇಸ್ರೋದ ಮಾಜಿ ಮುಖ್ಯಸ್ಥರಾದ ಕೆ. ರಾಧಾಕೃಷ್ಣನ್ ಬರೆದಿರುವ 'ಮೈ ಒಡೆಸ್ಸಿ - ಮೆಮಾಯಿರ್ಸ್ ಆಫ್ ದಿ ಮ್ಯಾನ್ ಬಿಹೈಂಡ್ ದಿ ಮಂಗಲಯಾನ್ ಮಿಷನ್' ಪುಸ್ತಕದಿಂದ ಪ್ರಭಾವಿತವಾಗಿದೆ.

ಮುಂದಿನ ವರ್ಷ ಫೆಬ್ರವರಿಯಲ್ಲಿ ಚಿತ್ರೀಕರಣ
ಮಂಕಾರಾ ಹೇಳುವಂತೆ ಈ ಚಿತ್ರವು ಸಂಪೂರ್ಣವಾಗಿ ಸಂಸ್ಕೃತಮಯವಾಗಿದ್ದು ಸ್ಕ್ರಿಪ್ಟ್, ಡೈಲಾಗ್ ಎಲ್ಲವೂ ಸಂಸ್ಕೃತವೇ ಆಗಿದೆ. ಈಗಾಗಲೇ ಈ ಚಿತ್ರದ ಪ್ರಾಥಮಿಕ ಕೆಲಸಗಳು ನಡೆಯುತ್ತಿದ್ದು ಚಿತ್ರದ ಚಿತ್ರೀಕರಣವು ಮುಂದಿನ ವರ್ಷ ಫೆಬ್ರವರಿಯಿಂದ ನಡೆಯಲಿದ್ದು ಏಪ್ರಿಲ್ ತಿಂಗಳಿನಲ್ಲಿ ಪ್ರದರ್ಶನದ ಕುರಿತು ಯೋಜಿಸಲಾಗಿದೆ ಎಂದು ಹೇಳುತ್ತಾರೆ.

ಈ ಮುಂಚೆ, ಈ ನಿರ್ದೇಶಕರ ಪ್ರಿಯಾಮನಸಂ ಚಿತ್ರವು ಜಗತ್ತಿನಲ್ಲೇ ಮೂರನೇ ಸಂಸ್ಕೃತ ಚಿತ್ರವಾಗಿದ್ದು ಆ ಭಾಷೆಯ ಕೆಟಗರಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದಿತ್ತು. ಅಲ್ಲದೆ ಈ ಚಿತ್ರ 2015ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಮೊದಲ ಚಿತ್ರ ಎಂಬ ಖ್ಯಾತಿಗೂ ಪಾತ್ರವಾಗಿತ್ತು.

ಯಾನಂ ವೃತ್ತಿಪರ ಸಾಕ್ಷ್ಯಚಿತ್ರ
"ಯಾನಂ ಸಿದ್ಧಗೊಂಡ ನಂತರ ಇದು ಜಗತ್ತಿನಲ್ಲೆ ಸಂಸ್ಕೃತ ಭಾಷೆಯಲ್ಲಿ ನಿರ್ಮಿತ ಮೊದಲ ಸಂಪೂರ್ಣ ವೃತ್ತಿಪರ ಸಾಕ್ಷ್ಯಚಿತ್ರವಾಗಲಿದೆ. ಇಂದು ವಿಜ್ಞಾನ ಹಾಗೂ ಸಂಸ್ಕೃತದ ಬೇಸುಗೆ ಕೊಂಚ್ ವಿರೋಧಾಭಾಸ ಅನಿಸಿದರೂ ಈ ಎರಡು ಅಂಶಗಳನ್ನು ಒಂದೆ ಬೇಸುಗೆಯಲ್ಲಿ ಬೆಸೆಯಲು ನನ್ನದೇ ಆದ ಕಾರಣಗಳಿವೆ" ಎಂದು ಪಿಟಿಐನೊಂದಿಗೆ ಮಾತನಾಡುತ್ತಿದ್ದ ಮಂಕಾರಾ ಹೇಳುತ್ತಾರೆ.

ಭಾರತೀಯ ಸಂಸ್ಕೃತ ಹಾಗೂ ಸಂಪ್ರದಾಯದಿಂದ ಸಾಕಷ್ಟು ಪ್ರಭಾವಿತರಾಗಿರುವ ಮಂಕಾರಾ ಪ್ರಕಾರ, ಭಾರತವು ತನ್ನ ಸಂಸ್ಕೃತ ಭಾಷೆ ಹಾಗೂ ನಭೋಮಂಡಲದ ಸಾಧನೆಗಳ ಬಗ್ಗೆ ಜಗತ್ತಿನಲ್ಲಿ ಹೆಮ್ಮೆಪಡುವಂತಿದ್ದು ಇದನ್ನು ಎಲ್ಲರಿಗೂ ಅನಾವರಣಗೊಳಿಸಬೇಕಾಗಿದೆ ಎನ್ನುತ್ತಾರೆ.

ಅಂತಾರಾಷ್ಟ್ರೀಯ ಸಮುದಾಯಕ್ಕೆ ಪ್ರದರ್ಶಿಸುವ ಉದ್ದೇಶ
ಈ ಭಾರತೀಯ ಉಪಖಂಡದ ಹಲವು ಪುರಾತನ ಭಾಷೆಗಳು ಹಾಗೂ ನಭೋಮಂಡಲದ ಹಲವು ವಿಷಯಗಳನ್ನು ಮೂಲವಾಗಿ ಸಂಸ್ಕೃತದಲ್ಲೇ ಬರೆಯಲಾಗಿದೆ. ಇಷ್ಟು ಶ್ರೀಮಂತಿಕೆ ಹೊಂದಿರುವ ನಾವು ನಮ್ಮ ಶ್ರೀಮಂತ ಭಾಷೆಯ ಮೂಲಕವೇ ನಮ್ಮ ಸಂಸ್ಕೃತಿ ಹಾಗೂ ವಿಜ್ಞಾನದ ಶ್ರೀಮಂತಿಕೆಯನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ತೋರಿಸುವ ಉದ್ದೇಶ ಈ ಚಿತ್ರ ಹೊಂದಿದೆ ಎಂದು ವಿನೋದ್ ನುಡಿಯುತ್ತಾರೆ.

ಖಗೋಳಶಾಸ್ತ್ರ, ಕಾಸ್ಮಾಲಾಜಿ ಮುಂತಾದವುಗಳು ಭಾರತಕ್ಕೆ ಏಲಿಯನ್ ಅಂಶಗಳಂತೂ ಅಲ್ಲವೇ ಅಲ್ಲ. ನಮ್ಮ ಸಂಸ್ಕೃತದ ಪುರಾತನ ಸೂರ್ಯ ಸಿದ್ಧಾಂತದಲ್ಲಿ ಈ ಬಗ್ಗೆ ಉಲ್ಲೇಖವಿರುವುದಾಗಿ ವಿನೋದ್ ಹೇಳುತ್ತಾರೆ. ಈ ಸಿದ್ಧಾಂತದಲ್ಲಿ ಸೌರ ಮಂಡಲ ಹಾಗೂ ಅದರಲ್ಲಿರುವ ಗ್ರಹಗಳ ಚಲನೆ ಹಾಗೂ ಅವುಗಳನ್ನು ಹೇಗೆ ಲೆಕ್ಕ ಹಾಕಬೇಕೆಂಬುದರ ಕುರಿತು ವಿಧಾನಗಳನ್ನು ವಿವರಿಸಲಾಗಿದ್ದು ಇವೆಲ್ಲವೂ ನಮ್ಮ ಪೂರ್ವಜರಿಗಿದ್ದ ಅಗಾಧ ಜ್ಞಾನದ ಮಿತಿ ತೋರಿಸುತ್ತದೆ.

ರಾಧಾಕೃಷ್ಣನ್ ಅವರು ಬರೆದ ಪುಸಕ್ತ
ಇನ್ನು ಪುಸ್ತಕ ವಿಚಾರಕ್ಕೆ ಸಂಬಂಧಿಸಿದಂತೆ ವಿನೋದ್, ಮಾಜಿ ಇಸ್ರೋ ಮುಖ್ಯಸ್ಥರಾದ ರಾಧಾಕೃಷ್ಣನ್ ಬರೆದಿರುವ 'ಮೈ ಒಡೆಸ್ಸಿ - ಮೆಮಾಯಿರ್ಸ್ ಆಫ್ ದಿ ಮ್ಯಾನ್ ಬಿಹೈಂಡ್ ದಿ ಮಂಗಲಯಾನ್ ಮಿಷನ್' ಪುಸ್ತಕ ಬಲು ಅದ್ಭುತವಾಗಿದೆ. ಈ ಮೂಲಕ ಇಸ್ರೋ ಸಂಸ್ಥೆಯ ಇತಿಹಾಸವನ್ನೂ ಸಹ ಈ ಚಿತ್ರದಲ್ಲಿ ಪರೋಕ್ಷವಾಗಿ ನೋಡಬಹುದಾಗಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: Explainer: ಭಾರತೀಯ ಬಾಹ್ಯಾಕಾಶ ಸಂಘ ಎಂದರೇನು? ಬಾಹ್ಯಾಕಾಶ ಕ್ಷೇತ್ರಕ್ಕೆ ಇದು ಹೇಗೆ ಮಹತ್ವದ್ದಾಗಿದೆ?

ಒಟ್ಟಿನಲ್ಲಿ ಚಿತ್ರಪ್ರೇಮಿಗಳೊಂದಿಗೆ ವಿಜ್ಞಾನ ಪ್ರಿಯರಿಗೂ ಸಹ ಈ ಚಿತ್ರ ಕುತೂಹಲ ಮೂಡಿಸಿದೆ ಎಂದರೆ ತಪ್ಪಾಗಲಾರದು. ನಮ್ಮ ಸಂಸ್ಕೃತಿ, ನಮ್ಮ ಪುರಾತನ ಸಂಸ್ಕೃತ ಭಾಷೆ ಮುಂತಾದ ನಮ್ಮ ತನವನ್ನು ಎತ್ತಿ ಹಿಡಿಯುವ ಇಂತಹ ಚಿತ್ರಗಳು ಬರುತ್ತಿರಬೇಕೆಂಬ ಆಶಯವೂ ನಮ್ಮದಾಗಿದೆ.
Published by:vanithasanjevani vanithasanjevani
First published: