ನಾಳಿನ ಸೂರ್ಯ ಗ್ರಹಣ ಮನುಷ್ಯರಿಗಿಂತ ಪೆಂಗ್ವಿನ್​ಗಳಿಗೇ ಹೆಚ್ಚು ಕಾಣಲಿದೆ ಯಾಕೆ ಗೊತ್ತೇ?

news18
Updated:July 12, 2018, 6:11 PM IST
ನಾಳಿನ ಸೂರ್ಯ ಗ್ರಹಣ ಮನುಷ್ಯರಿಗಿಂತ ಪೆಂಗ್ವಿನ್​ಗಳಿಗೇ ಹೆಚ್ಚು ಕಾಣಲಿದೆ ಯಾಕೆ ಗೊತ್ತೇ?
news18
Updated: July 12, 2018, 6:11 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಜುಲೈ 12): 2018ರ 2ನೇ ಸೂರ್ಯಗ್ರಹಣಕ್ಕೆ ನಾಳಿನ ಮುಂಜಾವು ಸಾಕ್ಷಿಯಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ನಾಳೆ ಮುಂಜಾನೆ ಸಂಭವಿಸಲಿರುವ ಸೂರ್ಯಗ್ರಹಣ ಬಹುತೇಕ ಸಮುದ್ರದ ಮೇಲ್ಭಾಗದಲ್ಲಿಯೇ ಘಟಿಸುವುದರಿಂದ ಬಹುತೇಕರಿಗೆ ಇದನ್ನು ನೋಡಲು ಸಾಧ್ಯವಿಲ್ಲ. ಅದಕ್ಕಿಂತ ಮುಖ್ಯವೆಂದರೆ ಈ ಬಾರಿಯ ಗ್ರಹಣವನ್ನು ಮನುಷ್ಯರಿಗಿಂತ ಪೆಂಗ್ವಿನ್​​ಗಳು ಹೆಚ್ಚಾಗಿ ನೋಡಲಿವೆ.

ಅಂಟಾರ್ಟಿಕ ಮತ್ತು ಆಸ್ಟ್ರೇಲಿಯಾ ಖಂಡಗಳ ಸೂರ್ಯನ ಗ್ರಹಣ ಹೆಚ್ಚಾಗಿ ಬೀಳಲಿದ್ದು, ಇತರೆ ಭಾಗಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಅಂಟಾರ್ಟಿಕ ಮತ್ತು ಆಸ್ಟ್ರೇಲಿಯಾ ಖಂಡಗಳು ಹೆಚ್ಚು ಹಿಮಾವೃತ ಪ್ರದೇಶಗಳನ್ನು ಹೊಂದಿದ್ದು, ಪೆಂಗ್ವಿನ್​ಗಳ ನೆಚ್ಚಿನ ವಾಸಸ್ಥಾನಗಳು ಅನಿಸಿಕೊಂಡಿವೆ. ಇದಕ್ಕಾಗಿಯೇ ಈ ಬಾರಿ ಸೂರ್ಯ ಗ್ರಹಣವನ್ನು ಹೆಚ್ಚು ಪೆಂಗ್ವಿನ್​ಗಳು ನೋಡಲಿವೆ.

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುವುದರಿಂದ ಘಟಿಸುವ ಸೂರ್ಯಗ್ರಹಣದಲ್ಲಿ ನಾಳೆ ಸೂರ್ಯನ ಒಂದು ಭಾಗವನ್ನು ಚಂದ್ರ ಆವರಿಸಿಕೊಳ್ಳಲಿದ್ದಾನೆ. ನಾಳೆ ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 7.18ಕ್ಕೆ ಗ್ರಹಣ ಸಂಭವಿಸಬಹುದೆಂದು ಅಂದಾಜಿಸಲಾಗಿದೆ.

ಆದರೆ, ನಾಳೆ ಸಂಭವಿಸಲಿರುವ ಭಾಗಶಃ ಸೂರ್ಯಗ್ರಹಣದ ಪರಿಣಾಮ ಬಹಳ ಪ್ರಭಾವಶಾಲಿಯಾಗಿರಲಿದೆ. ಹಾಗಾಗಿ, ಇದನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವೇ ಇಲ್ಲ. ಅದೃಷ್ಟವಶಾತ್​, ನಾಳಿನ ಸೂರ್ಯಗ್ರಹಣ ಅಂಟಾರ್ಟಿಕ್​ ಮತ್ತು ಆಸ್ಟ್ರೇಲಿಯಾ ದೇಶಗಳ ನಡುವೆ ಹರಡಿಕೊಂಡಿರುವ ಸಮುದ್ರದ ಒಂದು ಭಾಗದಲ್ಲಿ ಹೆಚ್ಚಿನ ಪ್ರಭಾವ ಬೀರಲಿದೆ. ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್​ ಸಾಗರ ಸೇರುವ ಈ ಸ್ಥಳದಲ್ಲಿ ಚಂದ್ರನ ನೆರಳು ಬೀಳುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ದಕ್ಷಿಣ ಆಸ್ಟ್ರೇಲಿಯ ಮತ್ತು ವಿಕ್ಟೋರಿಯದಲ್ಲಿ ವಾಸಿಸುವ ಜನರಿಗೆ ಸೂರ್ಯನನ್ನು ನಿಧಾನವಾಗಿ ಆಕ್ರಮಿಸಿಕೊಳ್ಳುವ ಚಂದ್ರ ಕಾಣುತ್ತಾನೆ. ಹಾಗೇ, ತಸ್ಮಾನಿಯಾದ ಐಸ್​ಲ್ಯಾಂಡ್​, ನ್ಯೂಜಿಲೆಂಡ್​, ಅಂಟಾರ್ಟಿಕಾದ ಕೆಲ ಭಾಗಗಳಲ್ಲಿನ ಜನರಿಗೆ ಸೂರ್ಯಗ್ರಹಣದ ಅನುಭವವಾಗಲಿದೆ. ಈ ಭಾಗದಲ್ಲಿ ಶೇ. 10ರಷ್ಟು ಸೂರ್ಯಗ್ರಹಣದ ದರ್ಶನವಾಗಲಿದೆ. ಮೆಲ್ಬೋರ್ನ್​, ಆಸ್ಟ್ರೇಲಿಯದಲ್ಲಿ ಕೇವಲ ಶೇ. 2.5ರಷ್ಟು ಸೂರ್ಯಗ್ರಹಣ ಸಂಭವಿಸಲಿದೆ. ಹಾಗಾಗಿ, ಈ ಭಾಗದ ಜನರು ಮಾತ್ರ ನಾಳಿನ ಸೂರ್ಯಗ್ರಹಣವನ್ನು ನೋಡಲು ಸಾಧ್ಯವಿದೆ. (ನಮ್ಮ ದೇಶದಲ್ಲಿ ನಾಳೆ ಮುಂಜಾನೆ ಅನುಭವಕ್ಕೆ ಬರುವ ಸೂರ್ಯಗ್ರಹಣ ಆಸ್ಟ್ರೇಲಿಯ, ಮೆಲ್ಬೋರ್ನ್​ ಮುಂತಾದ ಭಾಗಗಳ ಕಾಲಮಾನದ ಪ್ರಕಾರ ಇಂದು ರಾತ್ರಿಯೇ ಸಂಭವಿಸಲಿದೆ).

ನಾಳೆ ಅಮವಾಸ್ಯೆಯೂ ಇರುವುದರಿಂದ ಭೂ ಮೇಲ್ಮೈನ ಅಲ್ಪ ಭಾಗವನ್ನು ಸೂರ್ಯಗ್ರಹಣ ಆವರಿಸಿಕೊಳ್ಳಲಿದೆ. ಬೇರೆ ಸಂದರ್ಭಗಳಲ್ಲಾದರೆ ಗ್ರಹಣದ ಪ್ರಭಾವ ಇನ್ನಷ್ಟು ಪ್ರದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿತ್ತು.
Loading...

ಭಾರತೀಯರೂ ಕಣ್ತುಂಬಿಕೊಳ್ಳಬಹುದು:

ಭಾರತದಲ್ಲಿ ನಾಳಿನ ಸೂರ್ಯಗ್ರಹಣ ಕಾಣದಿದ್ದರೂ ಭಾರತೀಯರು ನಾಸಾ ವೆಬ್​ಸೈಟ್​ನ ಲೈವ್ ಸ್ಟ್ರೀಮಿಂಗ್​ನಲ್ಲಿ, ಹಾಗೂ ಯೂಟ್ಯೂಬ್​ ಮೂಲಕ ಕಣ್ತುಂಬಿಕೊಳ್ಳಬಹುದು. ಬೆಳಗ್ಗೆ 7.18ರಿಂದ 9.43ರವರೆಗೆ ಲೈವ್​ ವೆಬ್​ಕ್ಯಾಮ್​ ಮೂಲಕ ನೋಡಬಹುದು. ಜಗತ್ತಿನ ಬೇರೆ ದೇಶಗಳಲ್ಲಿಯೂ ಈ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಲಾಗುವುದಿಲ್ಲ. ಹಾಗೇನಾದರೂ ಬರಿಗಣ್ಣಿನಿಂದ ನೋಡಿದರೆ ದರಷ್ಟಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ ಎಂದು ನ್ಯೂಯಾರ್ಕ್​ನ ಹೇಯ್ಡೆನ್​ ಪ್ಲಾನೆಟೇರಿಯಂನ ಸಹಾಯಕ ಜೋ ರಾವ್​ ತಿಳಿಸಿದ್ದಾರೆ.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...