Mission Paani: ಜಾಗತಿಕ ವೇದಿಕೆಯಲ್ಲಿ ಮಿಷನ್​ ಪಾನಿ ಅಭಿಯಾನ

ಅಭಿಯಾನದ ಮೂಲ ಉದ್ದೇಶ ಜಲ ಸಂರಕ್ಷಣೆ. ಈಗಾಗಲೇ ಹಲವು ಬಾಲಿವುಡ್‌ ಸ್ಟಾರ್‌ಗಳು ಮಿಷನ್ ಪಾನಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

Latha CG | news18
Updated:August 29, 2019, 7:40 PM IST
Mission Paani: ಜಾಗತಿಕ ವೇದಿಕೆಯಲ್ಲಿ ಮಿಷನ್​ ಪಾನಿ ಅಭಿಯಾನ
ಮಿಷನ್​ ಪಾನಿ ಅಭಿಯಾನ
Latha CG | news18
Updated: August 29, 2019, 7:40 PM IST
ಹಾರ್ಪಿಕ್‌ ಹಾಗೂ ನ್ಯೂಸ್ 18 ಕನ್ನಡ ಸಹಯೋಗದಲ್ಲಿ ಮಿಷನ್ ಪಾನಿ ಮೆಗಾ ಅಭಿಯಾನ ನಡೆಯುತ್ತಿದೆ. ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಆಗಸ್ಟ್​​ 27ರಂದು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅಭಿಯಾನದ ಮೂಲ ಉದ್ದೇಶ ಜಲ ಸಂರಕ್ಷಣೆ. ಈಗಾಗಲೇ ಹಲವು ಬಾಲಿವುಡ್‌ ಸ್ಟಾರ್‌ಗಳು ಮಿಷನ್ ಪಾನಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಈ ಮಿಷನ್​ ಪಾನಿ ಅಭಿಯಾನವನ್ನು ಜಾಗತಿಕ ವೇದಿಕೆಗೆ ತೆಗೆದುಕೊಂಡು ಹೋಗುವ ಹೊಸ ಚಿಂತನೆ ನಡೆದಿದೆ. ದೇಶಾದ್ಯಂತ ಸುಮಾರು 600 ಮಿಲಿಯನ್​ಗೂ ಹೆಚ್ಚಿನ ಜನ, ಅತಿಯಾದ ನೀರಿನ ಕೊರತೆ ಅನುಭವಿಸುತ್ತಿದ್ದಾರೆ. ಇನ್ನು ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರು ಸಿಗದ ಕಾರಣ, ಪ್ರತಿ ವರ್ಷ ಸುಮಾರು ಎರಡು ಲಕ್ಷ ಜನರು ಬಲಿಯಾಗುತ್ತಿದ್ದಾರೆ.

Mission Paani: ಎಲ್ಲಾ ಜೀವರಾಶಿಗಳಿಗಾಗಿ ನದಿಗಳ ರಕ್ಷಣೆಯಾಗಬೇಕಿದೆ: ಸದ್ಗುರು ಜಗ್ಗಿ ವಾಸುದೇವ್​

ನೀರಿನ ಪ್ರತಿ ಹನಿಯೂ ಅತ್ಯಂತ ಅಮೂಲ್ಯ. ಇಂದು ನೀರಿನ ಪ್ರಮಾಣ ದಿನೇದಿನೇ ಕಡಿಮೆ ಆಗುತ್ತಲೇ ಹೋಗುತ್ತಿದೆ. ಸದ್ಯ ಅತ್ಯಂತ ಜಾಗೃತಿಯಿಂದ ನೀರು ಬಳಕೆ ಮಾಡಬೇಕಿದೆ. ಹಾಗಾಗಿ ನೀರನ್ನು ಉಳಿಸಬೇಕೆಂದು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ, ನ್ಯೂಸ್​​-18 ಸಂಸ್ಥೆ ಮಿಷನ್​ ಪಾನಿ ಎಂಬ ಅಭಿಯಾನ ಶುರು ಮಾಡಿದೆ. 'ನಾಳೆಯ ಒಳಿತಿಗಾಗಿ ಜಲ ಸಂರಕ್ಷಣೆ (ಮಿಷನ್​​ ಪಾನಿ)' ಎಂಬ ಹೆಸರಿನಲ್ಲಿ ಕ್ಯಾಂಪೇನ್​​ ಮಾಡಲಾಗುತ್ತಿದೆ.

ಮಿಷನ್​ ಪಾನಿ ಅಭಿಯಾನ ಉದ್ಘಾಟಿಸಿದ ಬಿಗ್​ ಬಿ ಅಮಿತಾಭ್​ ಬಚ್ಚನ್​ ನ್ಯೂಸ್​18 ಒಂದು ಉತ್ತಮ ಕಾರ್ಯಕ್ರಮ ಆರಂಭಿಸಿದೆ, ಇದು ಒಂದು ಐತಿಹಾಸಿಕ ಹೆಜ್ಜೆ ಎಂದು ಹೇಳಿದ್ದರು. ಜಲಜಾಗೃತಿಯಿಂದ ದೇಶದ ಅಭಿವೃದ್ಧಿಯಾಗುತ್ತದೆ. ದೇಶದ ಪ್ರಗತಿಗಾಗಿ ಇಂತಹ ಅಭಿಯಾನಗಳು ಬೇಕು. ಜಲಜಾಗೃತಿಗಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಕರೆ ನೀಡಿದ್ದರು.

ಮಿಷನ್​ ಪಾನಿ ಆಂದೋಲನದ ಪ್ರಚಾರ ರಾಯಭಾರಿ ಅಮಿತಾಭ್​ ಬಚ್ಚನ್​, ದಕ್ಷಿಣಾ ಏಷ್ಯಾದ ಆರ್​ಬಿ ಹೈಜಿನ್​ ಮತ್ತು ಹೋಮ್​ನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ನರಸಿಂಹನ್​ ಈಶ್ವರ್​, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತೀನ್​ ಗಡ್ಕರಿ, ಸಚಿವ ಗಂಜೇಂದ್ರ ಸಿಂಗ್​, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಇಶಾ ಫೌಂಡೇಶನ್​ ಸ್ಥಾಪಕ ಜಗ್ಗಿ ವಾಸುದೇವ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

First published:August 29, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...