World Water Week 2021: ವಿಶ್ವ ಜಲವಾರ ಎಂದರೇನು? ಭಾರತದ 5 ಕಲುಷಿತ ನದಿಗಳು ಯಾವುವು ಗೊತ್ತಾ?

Polluted Rivers: ಭಾರತದಲ್ಲಿ ಸಹ ನೀರಿನ ಹಲವು ಸಮಸ್ಯೆಗಳಿವೆ. ವಾಟರ್ ಏಡ್ ನ ನೀರಿನ ಗುಣಮಟ್ಟ ಸೂಚ್ಯಂಕದ ಪ್ರಕಾರ, ಭಾರತವು ಪ್ರಪಂಚದಾದ್ಯಂತ  ನೀರಿನ ಗುಣಮಟ್ಟದಲ್ಲಿ 122 ದೇಶಗಳ ಪಟ್ಟಿಯಲ್ಲಿ 120 ನೇ ಸ್ಥಾನದಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹವಾಮಾನ ಬಿಕ್ಕಟ್ಟು(climate crisis) ನಿಜಕ್ಕೂ ಚಿಂತೆಯ ವಿಚಾರ. ಜಗತ್ತಿನಲ್ಲಿ ಈಗಾಗಲೇ ಹಲವಾರು ಸಮಸ್ಯೆಗಳು ಉಂಟಾಗಿದೆ.  ಕಾಡ್ಗಿಚ್ಚು, ಪ್ರವಾಹಗಳು ಹೆಚ್ಚು ಪರಿಣಾಮ ಬೀರಿದೆ. ಇನ್ನು ಈ ಹವಾಮಾನ ವೈಪರಿತ್ಯ ಜಾಗತಿಕವಾಗಿ ನೀರಿನ ಸಮಸ್ಯೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಇದು ವಿಶ್ವ ಜಲ ವಾರ. ಈ ಸಮಯದಲ್ಲಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.  

ವಿಶ್ವ ಜಲ ವಾರ ಎಂದರೇನು?

ಸ್ಟಾಕ್‌ಹೋಮ್‌ನಲ್ಲಿ ವಿಶ್ವ ಜಲ ವಾರವನ್ನು ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ವಾಟರ್ ಇನ್‌ಸ್ಟಿಟ್ಯೂಟ್ (SIWI) 1991 ರಲ್ಲಿಆರಂಭಿಸಿತು. ಐದು ದಿನಗಳ ಕಾರ್ಯಕ್ರಮದಲ್ಲಿ  ನೀರು, ಅಭಿವೃದ್ಧಿ ಮತ್ತು ನೀರಿನ ಸಮಸ್ಯೆಗಳು ಮತ್ತು ಅಂತರಾಷ್ಟ್ರೀಯ ಅಭಿವೃದ್ಧಿಯ ಸಂಬಂಧಿತ  ಮಾಹಿತಿಗಳನ್ನು ತಿಳಿಸಿ, ಅರಿವು ಮೂಡಿಸಲಾಗುತ್ತದೆ.

ಇನ್ನು ಭಾರತದಲ್ಲಿ ಸಹ ನೀರಿನ ಹಲವು ಸಮಸ್ಯೆಗಳಿವೆ. ವಾಟರ್ ಏಡ್ ನ ನೀರಿನ ಗುಣಮಟ್ಟ ಸೂಚ್ಯಂಕದ ಪ್ರಕಾರ, ಭಾರತವು ಪ್ರಪಂಚದಾದ್ಯಂತ  ನೀರಿನ ಗುಣಮಟ್ಟದಲ್ಲಿ 122 ದೇಶಗಳ ಪಟ್ಟಿಯಲ್ಲಿ 120 ನೇ ಸ್ಥಾನದಲ್ಲಿದೆ. ಇದು ಭಾರತದಲ್ಲಿ ನೀರಿನ ಗುಣಮಟ್ಟ ಎಷ್ಟು ಕಳಪೆಯಾಗಿದೆ ಎಂಬುದನ್ನ ತೋರಿಸುತ್ತದೆ. ಇನ್ನು ಭಾರತದಲ್ಲಿ ಹೆಚ್ಚು ಕಲುಷಿತಗೊಂಡಿರುವ ನದಿಗಳ ಪಟ್ಟಿ ಇಲ್ಲಿದೆ.

ಗಂಗಾ: ಧಾರ್ಮಿಕ ನಂಬಿಕೆಯ ಪ್ರಕಾರ ಗಂಗಾ ನದಿಯನ್ನು ಪವಿತ್ರ ಮತ್ತು ಧಾರ್ಮಿಕ ಎಂದು ಪರಿಗಣಿಸಲಾಗಿದೆ.ಆದರೆ ಅದರ ಪರಿಣಾಮವಾಗಿ, ಲಕ್ಷ, ಲಕ್ಷ ಜನರು ಪವಿತ್ರ ನೀರಿನಲ್ಲಿ ಸ್ನಾನ ಮಾಡಲು ಮತ್ತು ಪ್ರಾರ್ಥನೆ ಮಾಡಲು ಹೋಗುತ್ತಾರೆ. ಇದು ನೀರು ಕಲುಷಿತಗೊಳ್ಳಲು ಕಾರಣವಾಗಿದೆ.ಹಾಗಾಗಿ  ಪ್ರಪಂಚದ ದೃಷ್ಟಿಯಲ್ಲಿ ವಿಶ್ವದ ಅತ್ಯಂತ ಕಲುಷಿತ ನದಿಗಳಲ್ಲಿ ಒಂದು.  ಸರಿಸುಮಾರು 1100 ಕೈಗಾರಿಕಾ ಸಂಸ್ಥೆಗಳು ಚರಂಡಿ ತ್ಯಾಜ್ಯ ಮತ್ತು ಮಾಲಿನ್ಯಕಾರಕಗಳನ್ನು ಈ  ನದಿಗೆ ಎಸೆಯುತ್ತವೆ. ಈ ನದಿ ಹೊರಹಾಕುವ 25% ಮಾಲಿನ್ಯಕಾರಕಗಳು ನದಿ ಹರಿಯುವ ಸ್ಥಳಗಳಲ್ಲಿ ಒಂದಾದ ವಾರಣಾಸಿಯಲ್ಲಿ ಮಾತ್ರ ಸಿಗುತ್ತದೆ. ಅಷ್ಟರ ಮಟ್ಟಿಗೆ ಈ ನದಿ ಕಲುಷಿತಗೊಂಡಿದೆ.

ಇದನ್ನೂ ಓದಿ: ಭಾರತದಲ್ಲಿ ಸುಮಾರು 1 ಲಕ್ಷ ಶಿಶುಗಳು ಕೊರೋನಾ ಪ್ರೇರಿತ ಆರ್ಥಿಕ ಕುಸಿತದಿಂದ ಸಾವು; ವಿಶ್ವಬ್ಯಾಂಕ್ ವರದಿ

ಯಮುನಾ: ಯಮುನಾ ಗಂಗೆಯಂತೆಯೇ ಕಲುಷಿತವಾದ ನದಿಯಾಗಿದ್ದು ನಿಧಾನವಾಗಿ ನಶಿಸಿ ಹೋಗುತ್ತಿದೆ. ನದಿ ಕಲುಷಿತಗೊಳ್ಳಲು ಮುಖ್ಯ ಕಾರಣ ಈ ನದಿ ದೆಹಲಿಯ ಮೂಲಕ ವಜೀರ್‌ಪುರದ ಪಲ್ಲಾ ಹಳ್ಳಿಯಿಂದ ಓಖ್ಲಾಕ್ಕೆ ಹಾದುಹೋಗುತ್ತದೆ. ಅದರ ಹಾದಿಯಲ್ಲಿ, ಸಂಸ್ಕರಿಸದ ಮನೆಯ ತ್ಯಾಜ್ಯ, ಕೈಗಾರಿಕಾ ರಾಸಾಯನಿಕಗಳು ಮತ್ತು ಬೂದಿಗಳು ಯಮುನಾ ನದಿಯನ್ನು ಸೇರುತ್ತದೆ. ಈ ಹಿನ್ನೆಲೆಯಲ್ಲಿ ಯಮುನಾ ನದಿ ಹೆಚ್ಚು ಕಲುಷಿತಗೊಂಡಿದೆ. ಇದು ಸಮರ್ಥನೀಯವಲ್ಲ. ಏಕೆಂದರೆ ಅದರ ಸ್ವಯಂ-ಶುದ್ಧೀಕರಣವನ್ನು ಪ್ರೇರೇಪಿಸುವ ಮುಕ್ತ ಹರಿವು ಕೂಡ ನಗರ ಬೆಳವಣಿಗೆಗಳಿಂದ ಅಡ್ಡಿಯಾಗುತ್ತಿದೆ. ಅಲ್ಲದೆ ಧಾರ್ಮಿಕ ನಂಬಿಕೆಯ ಕಾರಣದಿಂದ ಜನರು ನದಿಗೆ ವಸ್ತುಗಳನ್ನು ಹಾಕುತ್ತಿರುವುದು ಕೂಡ ನದಿ ಕಲುಷಿತಗೊಳ್ಳಲು ಮತ್ತೊಂದು ಮುಖ್ಯ ಕಾರಣ.

ಬ್ರಹ್ಮಪುತ್ರ: ಅಸ್ಸಾಂನ ಜೀವನಾಡಿಯು ತಾನು ಹರಿಯುವ ವಿಷಕಾರಿ ಪರಿಸರದಲ್ಲಿ ಉಸಿರಾಡಲು ಕಷ್ಟಪಡುತ್ತಿದೆ. 2900 ಕಿಲೋಮೀಟರ್‌ಗಳಷ್ಟು ವಿಸ್ತಾರವಾಗಿ ಹರಿಯುವ ಬ್ರಹ್ಮಪುತ್ರಾ ನದಿಯು ವಿವಿಧ ತ್ಯಾಜ್ಯ, ರಾಸಾಯನಿಕ ಮತ್ತು ವಿವಿಧ ಮಾಲಿನ್ಯಕಾರಕ ವಸ್ತುಗಳಿಂದ ಕಲುಷಿತಗೊಂಡು ಪರದಾಡುತ್ತಿದೆ.

ದಾಮೋದರ್: ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಮೂಲಕ ಹರಿಯುತ್ತಿರುವ ದಾಮೋದರ್  ದೇಶದ ಅತ್ಯಂತ ಕಲುಷಿತ ನದಿಗಳಲ್ಲಿ ಒಂದಾಗಿದೆ. ನದಿಯ ಅತ್ಯಂತ ಕಲುಷಿತ ಸ್ಥಿತಿಗೆ ಮುಖ್ಯ ಕಾರಣವೆಂದರೆ ನದಿಯ  ದಡದಲ್ಲಿ ಸ್ಥಾಪಿಸಲಾಗಿರುವ ಬಹು ಕಲ್ಲಿದ್ದಲು ಕೈಗಾರಿಕೆಗಳು. ಇನ್ನೊಂದು ಭಯಾನಕ ಘಟನೆಯೆಂದರೆ 1990 ರಲ್ಲಿ ಅಂದಾಜು 2 ಲಕ್ಷ ಲೀಟರ್ ಫರ್ನೇಸ್ ಆಯಿಲ್ ನದಿಯನ್ನು ಸೇರಿದ್ದ ಕಾರಣ ನದಿ ಕಲುಷಿತಗೊಂಡಿದೆ.

ಬಾಗಮತಿ: ಬಾಗಮತಿ ನೇಪಾಳದ ಕಠ್ಮಂಡುವಿನ ಮೂಲಕ ಹರಿದು ಭಾರತದ ಬಿಹಾರದ ಕೋಶಿ ನದಿಯನ್ನು ಸೇರುತ್ತದೆ. ಇದನ್ನು ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಈ ನದಿಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಅದರ ಹೊರತಾಗಿಯೂ, ನದಿಯು ದುರ್ವಾಸನೆ ಬೀರುವ, ಹೆಚ್ಚು ಕೈಗಾರಿಕೀಕರಣಗೊಂಡ ಚರಂಡಿಯಂತೆ ಆಗಿದೆ. ಇದು ಕುಡಿಯಲು ಹಾಗೂ ನೀರಾವರಿ ಎರಡಕ್ಕೂ ಅಸುರಕ್ಷಿತ ಎಂದು ಗುರುತಿಸಲಾಗಿದೆ.
Published by:Sandhya M
First published: