• Home
  • »
  • News
  • »
  • national-international
  • »
  • World Tourism Day 2022: ಪ್ರವಾಸೋದ್ಯಮವು ಆರ್ಥಿಕತೆ ಜೊತೆಗೆ ಉದ್ಯೋಗವಕಾಶ ಸೃಷ್ಟಿಸುವಲ್ಲಿ ಹೇಗೆ ಸಹಕಾರಿಯಾಗಿದೆ?

World Tourism Day 2022: ಪ್ರವಾಸೋದ್ಯಮವು ಆರ್ಥಿಕತೆ ಜೊತೆಗೆ ಉದ್ಯೋಗವಕಾಶ ಸೃಷ್ಟಿಸುವಲ್ಲಿ ಹೇಗೆ ಸಹಕಾರಿಯಾಗಿದೆ?

ವಿಶ್ವ ಪ್ರವಾಸೋದ್ಯಮ ದಿನ 2022

ವಿಶ್ವ ಪ್ರವಾಸೋದ್ಯಮ ದಿನ 2022

ಪ್ರವಾಸೋದ್ಯಮವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸರ್ಕಾರಗಳೂ ಕೂಡ ಯಾವಾಗಲು ಬದ್ಧವಾಗಿರುತ್ತವೆ. ಅದಕ್ಕಾಗಿಯೇ ಈ ಬಗ್ಗೆ ಜಾಗೃತಿ ಮೂಡಿಸಲು ಸೆಪ್ಟೆಂಬರ್ 27ರಂದು ಈ ದಿನವನ್ನು ಪ್ರವಾಸೋದ್ಯಮ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರವಾಸೋದ್ಯಮದ ಕುರಿತು ಪುನರ್‌ವಿಮರ್ಶೆ ಅಥವಾ ಮರು ಅವಲೋಕನ ಈ ವರ್ಷದ ಘೋಷವಾಕ್ಯವಾಗಿದೆ. 

ಮುಂದೆ ಓದಿ ...
  • Share this:

ವಿಶ್ವ ಪ್ರವಾಸೋದ್ಯಮ ದಿನವನ್ನು (World Tourism Day) ಸೆಪ್ಟೆಂಬರ್ 27ರಂದು ಆಚರಿಸಲಾಗುತ್ತದೆ. ದೇಶದ ಆದಾಯದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುವ ಪ್ರವಾಸೋದ್ಯಮವನ್ನು ಅಭಿವೃದ್ಧಿಯತ್ತ (Development) ಕೊಂಡೊಯ್ಯಲು ಸರ್ಕಾರಗಳೂ ಕೂಡ ಯಾವಾಗಲು ಬದ್ಧವಾಗಿರುತ್ತವೆ. ಅದಕ್ಕಾಗಿಯೇ ಈ ಬಗ್ಗೆ ಜಾಗೃತಿ ಮೂಡಿಸಲು ಸೆಪ್ಟೆಂಬರ್ 27ರಂದು ಈ ದಿನವನ್ನು ಪ್ರವಾಸೋದ್ಯಮ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರವಾಸೋದ್ಯಮದ ಕುರಿತು ಪುನರ್‌ವಿಮರ್ಶೆ ಅಥವಾ ಮರು ಅವಲೋಕನ (Review) ( ರೀಥಿಂಕಿಂಗ್‌ ಟೂರಿಸಮ್) ಈ ವರ್ಷದ ಘೋಷವಾಕ್ಯವಾಗಿದೆ. ವಿಶ್ವಸಂಸ್ಥೆಯ ವರ್ಲ್ಡ್‌ ಟೂರಿಸಂ ಆರ್ಗನೈಜೇಷನ್‌(ಯುಎನ್‌ಡಬ್ಲ್ಯುಟಿಒ) (World Tourism Organization) 1970 ಸೆಪ್ಟೆಂಬರ್‌ 27ರಂದು ಮೊದಲ ಬಾರಿಗೆ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲು ಶಾಸನಗಳನ್ನು ರಚಿಸಿತು. ‌


ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ
ಈ ಒಂದು ಮೈಲಿಗಲ್ಲಿನ ನೆನಪಿಗಾಗಿ ಸೆಪ್ಟೆಂಬರ್‌ 27ರಂದು 1980 ರಿಂದ ವಿಶ್ವ ಪ್ರವಾಸೋದ್ಯಮ ದಿನವನ್ನು ವಾರ್ಷಿಕವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಪ್ರವಾಸೋದ್ಯಮ ದಿನದ ಉದ್ದೇಶ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯಗಳ ಮೇಲೆ ಪರಿಣಾಮ ಬೀರುವ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.


UNWTO ಕಾರ್ಯದರ್ಶಿ-ಜನರಲ್ ಜುರಾಬ್ ಪೊಲೊಲಿಕಾಶ್ವಿಲಿ ಪ್ರಕಟಣೆಯಲ್ಲಿ : “ಪ್ರವಾಸೋದ್ಯಮದ ಸಾಮರ್ಥ್ಯವು ಅಗಾಧವಾಗಿದೆ ಮತ್ತು ಅದನ್ನು ಸಂಪೂರ್ಣವಾಗಿ ಅರಿತುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಾವು ಹಂಚಿಕೆಯ ಜವಾಬ್ದಾರಿಯನ್ನು ಹೊಂದಿದ್ದೇವೆ. ವಿಶ್ವ ಪ್ರವಾಸೋದ್ಯಮ ದಿನ 2022 ರಂದು, ಪ್ರತಿಯೊಬ್ಬರೂ ನಾವು ಏನು ಮಾಡುತ್ತೇವೆ ಮತ್ತು ನಾವು ಅದನ್ನು ಹೇಗೆ ಮಾಡುತ್ತೇವೆ ಎಂಬುದನ್ನು ಪ್ರತಿಬಿಂಬಿಸಲು ಮತ್ತು ಮರುಚಿಂತನೆ ಮಾಡಲು ಕರೆ ನೀಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.


ಉದ್ಯೋಗ ಸೃಷ್ಟಿಗೆ ದೊಡ್ಡ ಕೊಡುಗೆ
ಪ್ರವಾಸೋದ್ಯಮ ಕೇವಲ ದೇಶದ ಆರ್ಥಿಕತೆಗೆ ಮಾತ್ರ ಸಂಬಂಧಿಸಿಲ್ಲ. ಇದು ಉದ್ಯೋಗವಕಾಶಗಳನ್ನು ಸಹ ಸೃಷ್ಟಿಸಿರುವ ಕ್ಷೇತ್ರ. ಪ್ರಪಂಚದಾದ್ಯಂತ ಪ್ರತಿ 10 ಜನರಲ್ಲಿ ಒಬ್ಬರು ಪ್ರವಾಸೋದ್ಯಮದಲ್ಲಿ ಕೆಲಸ ಮಾಡುತ್ತಾರೆ, ಈ ಮೂಲಕ ನೂರಾರು ಮಿಲಿಯನ್ ಜನರಿಗೆ ಜೀವನೋಪಾಯವನ್ನು ಒದಗಿಸುತ್ತದೆ.


ಇದನ್ನೂ ಓದಿ: Memorial of Love: ಐತಿಹಾಸಿಕ ಬಾವಿಗಳಿಗೆ ಮೆಟ್ಟಿಲುಗಳು ಏಕಿರುತ್ತವೆ? ಇವುಗಳ ಹಿಂದಿದೆ ಇಂಟ್ರೆಸ್ಟಿಂಗ್ ಕಥೆ


ಕೊರೊನಾ ಕಾರಣದಿಂದಾಗಿ ಅಳಿವಿನಂಚಿಗೆ ಸೇರಿದ್ದ ಪ್ರವಾಸೋದ್ಯಮ ಸದ್ಯ ಮತ್ತೆ ಚೇತರಿಸಿಕೊಳ್ಳುತ್ತಿದೆ. ಯುಎನ್ ವೆಬ್‌ಸೈಟ್ ಪ್ರಕಾರ, 2022ರ ಮೊದಲ ಐದು ತಿಂಗಳಲ್ಲಿ ಸುಮಾರು 250 ಮಿಲಿಯನ್ ಅಂತರರಾಷ್ಟ್ರೀಯ ಆಗಮನಗಳು ದಾಖಲಾಗಿದ್ದು, ಅಂತರರಾಷ್ಟ್ರೀಯ ಪ್ರವಾಸೋದ್ಯಮವು ಉತ್ತಮವಾಗಿ ಚಿಗೊರೊಡೆದಿದೆ ಎಂದು ತಿಳಿದು ಬಂದಿದೆ.


ಭಾರತದಲ್ಲಿ ಪ್ರವಾಸೋದ್ಯಮ
ವರ್ಲ್ಡ್ ಟ್ರಾವೆಲ್ ಅಂಡ್ ಟೂರಿಸಂ ಕೌನ್ಸಿಲ್ (ಡಬ್ಲ್ಯೂಟಿಟಿಸಿ) ಸಂಶೋಧನೆಯ ಪ್ರಕಾರ, ಭಾರತೀಯ ಆರ್ಥಿಕತೆಗೆ ಟೂರಿಸಂ ಕ್ಷೇತ್ರದ ಕೊಡುಗೆಯು ಕೊರೋನಾಗಿಂತ ಮುಂಚೆ ಇದ್ದ ಮಟ್ಟವನ್ನು ಮೀರಬಹುದು ಎಂದು ತಿಳಿಸಿದೆ.


ವರ್ಷದಿಂದ ವರ್ಷಕ್ಕೆ 20.7 ಪ್ರತಿಶತದಷ್ಟು ಬೆಳವಣಿಗೆಯನ್ನು ಈ ಕ್ಷೇತ್ರ ಹೊಂದಿದೆ. ಡಬ್ಲ್ಯೂಟಿಟಿಸಿಯ ಇತ್ತೀಚಿನ "ಎಕಾನಾಮಿಕ್‌ ಇಂಪ್ಯಾಕ್ಟ್‌ ರಿಪೋರ್ಟ್" (EIR) ‌ ಮುನ್ಸೂಚನೆಯು ರಾಷ್ಟ್ರದ ಆರ್ಥಿಕತೆಗೆ ವಲಯದ ಕೊಡುಗೆಯು 2022 ರಲ್ಲಿ ಸುಮಾರು ₹15.9 ಟ್ರಿಲಿಯನ್ ($215 ಶತಕೋಟಿ) ತಲುಪಬಹುದು ಎಂದು ಅಂದಾಜಿಸಿದೆ.


ಇದನ್ನೂ ಓದಿ:  Beauty of Shivamogga: ಮಲೆನಾಡಿನ ಪ್ರಕೃತಿ ಸೌಂದರ್ಯವಷ್ಟೇ ರೋಚಕವಾಗಿದೆ ಅಲ್ಲಿನ ಇತಿಹಾಸ ಮತ್ತು ಸಂಸ್ಕೃತಿ


ಆರ್ಥಿಕತೆ ಜೊತೆಗೆ ಉದ್ಯೋಗ ಸೃಷ್ಟಿಯಲ್ಲೂ ಪ್ರಗತಿ ಕಾಣಲಿದ್ದು, ಈ ವರ್ಷ ಸುಮಾರು 35 ಮಿಲಿಯನ್‌ ಉದ್ಯೋಗ ಹೆಚ್ಚಳವಾಗುವ ನಿರೀಕ್ಷೆಯಿದೆ. ಮುಂದಿನ ದಶಕದಲ್ಲಿ, ಭಾರತದ ಪ್ರಯಾಣ ಮತ್ತು ಪ್ರವಾಸೋದ್ಯಮದ ಜಿಡಿಪಿ ವಾರ್ಷಿಕವಾಗಿ ಸರಾಸರಿ 7.8 ಪ್ರತಿಶತದಷ್ಟು ಬೆಳೆಯಬಹುದೆಂದು ಅಂದಾಜು ಮಾಡಲಾಗಿದೆ. ಇದು ಭಾರತದ ಒಟ್ಟಾರೆ ಆರ್ಥಿಕತೆಯ 6.7 ಪ್ರತಿಶತಕ್ಕೆ ಹೋಲಿಸಿದರೆ ಸುಮಾರು ₹33.8 ಟ್ರಿಲಿಯನ್ ತಲುಪುತ್ತದೆ - ಇದು ಒಟ್ಟು ಆರ್ಥಿಕತೆಯ 7.2 ಪ್ರತಿಶತವನ್ನು ಪ್ರತಿನಿಧಿಸುತ್ತದೆ.


ಥೀಮ್ - ರೀಥಿಂಕಿಂಗ್‌ ಟೂರಿಸಂ
ಪ್ರತಿ ವರ್ಷ ಒಂದೊಂದು ಥೀಮ್‌ ಇಟ್ಟುಕೊಂಡು ಒಂದು ನಿರ್ದಿಷ್ಟ ದೇಶವು ಪ್ರವಾಸೋದ್ಯಮ ದಿನವನ್ನು ಆಯೋಜಿಸುತ್ತದೆ. ಈ ವರ್ಷ Rethinking Tourism ಎಂಬ ಥೀಮ್‌ನಡಿ ವರ್ಲ್ಡ್‌ ಟೂರಿಸಮ್‌ ಡೇ 2022 ಆಚರಿಸಲಾಗುತ್ತಿದೆ.


1980 ರಲ್ಲಿ ನಡೆದ ಮೊದಲ ವಿಶ್ವ ಪ್ರವಾಸೋದ್ಯಮ ದಿನದ ಥೀಮ್‌ ಎಂದರೆ "ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಶಾಂತಿ ಮತ್ತು ಪರಸ್ಪರ ತಿಳುವಳಿಕೆಗೆ ಪ್ರವಾಸೋದ್ಯಮದ ಕೊಡುಗೆ". 2019 ರಲ್ಲಿ, ಭಾರತವು "ಪ್ರವಾಸೋದ್ಯಮ ಮತ್ತು ಉದ್ಯೋಗಗಳು" ಎಂಬ ಥೀಮ್‌ ಜೊತೆ ಈ ದಿನವನ್ನು ಆಯೋಜಿಸಿತ್ತು.


ಈ ವರ್ಷ ಇಂಡೋನೇಷ್ಯಾ ಆತಿಥೇಯ ದೇಶ
ಈ ವರ್ಷ ವಿಶ್ವ ಪ್ರವಾಸೋದ್ಯಮ ದಿನದ ಆತಿಥೇಯ ದೇಶ ಇಂಡೋನೇಷ್ಯಾವಾಗಿದ್ದು, ರೀಥಿಂಕಿಂಗ್‌ ಟೂರಿಸಂ ಎಂಬ ಥೀಮ್‌ನಡಿ ಬಾಲಿಯಲ್ಲಿ ಆಯೋಜಿಸಲಾಗಿದೆ.


ಬಹುತೇಕ ದೇಶಗಳಿಗೆ ಪ್ರವಾಸೋದ್ಯಮವೇ ಆಧಾರ, ಪ್ರವಾಸೋದ್ಯಮವೇ ಆರ್ಥಿಕತೆ. ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಗೆ ಪ್ರಮುಖ ಆಧಾರಸ್ತಂಭವೆಂದು ಗುರುತಿಸುವ ಮೂಲಕ ಅಭಿವೃದ್ಧಿಗಾಗಿ ಪ್ರವಾಸೋದ್ಯಮದ ಮರು ಅವಲೋಕನವೆಂಬ ಘೋಷವಾಕ್ಯವನ್ನು ಇದೇ ಕಾರಣಕ್ಕೆ ಈ ವರ್ಷ ಇಡಲಾಗಿದೆ.


ಹೇಗೆ ಆಚರಿಸಲಾಗುತ್ತದೆ?
ಪ್ರತಿ ಸೆಪ್ಟೆಂಬರ್‌ನಲ್ಲಿ, ಅನೇಕ ದೇಶಗಳು ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗುತ್ತವೆ. ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮದ ಕೊಡುಗೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತವೆ.


ಇದನ್ನೂ ಓದಿ:  Packing Tips: ದಸರಾ ರಜೆಗೆ ಟ್ರಿಪ್​ ಹೊರಟ್ರಾ? ಈ ವಸ್ತುಗಳನ್ನು ಮಿಸ್​ ಮಾಡ್ದೆ ಪ್ಯಾಕ್​ ಮಾಡಿಕೊಳ್ಳಿ


ಈ ದಿನದಂದು, ಪ್ರವಾಸಿಗರಿಗೆ ಹೂವುಗಳನ್ನು ನೀಡಲಾಗುತ್ತದೆ ಮತ್ತು ಜಾನಪದ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ಇತ್ಯಾದಿಗಳನ್ನು ಆಯೋಜಿಸಲಾಗುತ್ತದೆ. ಕೆಲವು ಕಡೆ ಈ ದಿನದಂದು ಸ್ಮಾರಕಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ನೋಡಲು ಪ್ರವೇಶ ಶುಲ್ಕವನ್ನು ಸಹ ಮನ್ನಾ ಮಾಡುತ್ತವೆ. ಸರ್ಕಾರಿ ಸಂಸ್ಥೆಗಳು ಮತ್ತು ಪ್ರಯಾಣ ಏಜೆನ್ಸಿಗಳು ವಿಮಾನಗಳು ಮತ್ತು ಹೋಟೆಲ್‌ಗಳಲ್ಲಿ ಉತ್ತಮ ಆಫರ್‌ ನೀಡುತ್ತವೆ.

Published by:Ashwini Prabhu
First published: