• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • El Nino: ಮತ್ತೆ ಬರಲಿರುವ ಎಲ್‌ ನಿನೋ ವಿದ್ಯಮಾನಕ್ಕೆ ಜಗತ್ತು ಸಜ್ಜಾಗಬೇಕಿದೆ: ವಿಶ್ವ ಹವಾಮಾನ ಸಂಸ್ಥೆ

El Nino: ಮತ್ತೆ ಬರಲಿರುವ ಎಲ್‌ ನಿನೋ ವಿದ್ಯಮಾನಕ್ಕೆ ಜಗತ್ತು ಸಜ್ಜಾಗಬೇಕಿದೆ: ವಿಶ್ವ ಹವಾಮಾನ ಸಂಸ್ಥೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಿಶ್ವ ಹವಾಮಾನ ಸಂಸ್ಥೆ (WMO) ಯ ಹೊಸ ಅಪ್‌ಡೇಟ್ ಪ್ರಕಾರ, ಮುಂಬರುವ ತಿಂಗಳುಗಳಲ್ಲಿ ಎಲ್ ನಿನೊ ತಾಪಮಾನವು ಹೆಚ್ಚಾಗಬಹುದು. ಇದು ಪ್ರಪಂಚದ ವಿವಿಧ ಭಾಗಗಳಲ್ಲಿ ತಾಪಮಾನ ಮತ್ತು ಮಳೆಯ ಮಾದರಿಗಳ ಮೇಲೆ ಪ್ರಭಾವ ಬೀರುವ ಸಾಕಷ್ಟು ಅಂಶಗಳನ್ನು ಹೊಂದಿದೆ ಎಂದು ತಿಳಿಸಿದೆ.

  • Share this:

ವಿಶ್ವ ಹವಾಮಾನ ಸಂಸ್ಥೆ (WMO) ಯ ಹೊಸ ಅಪ್‌ಡೇಟ್ ಪ್ರಕಾರ, ಮುಂಬರುವ ತಿಂಗಳುಗಳಲ್ಲಿ ಎಲ್ ನಿನೊ ತಾಪಮಾನವು ಹೆಚ್ಚಾಗಬಹುದು. ಇದು ಪ್ರಪಂಚದ ವಿವಿಧ ಭಾಗಗಳಲ್ಲಿ ತಾಪಮಾನ ಮತ್ತು ಮಳೆಯ ಮಾದರಿಗಳ ಮೇಲೆ ಪ್ರಭಾವ ಬೀರುವ ಸಾಕಷ್ಟು ಅಂಶಗಳನ್ನು ಹೊಂದಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (WMO ) ಬುಧವಾರ ಹೇಳಿಕೆ ನೀಡಿದೆ.


ದಕ್ಷಿಣ ಏಷ್ಯಾ, ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ತೀವ್ರ ಬರಗಾಲ ಮತ್ತು ತೀವ್ರ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಎಲ್‌ ನಿನೋ ನೇರ ಕಾರಣವಾಗಿದೆ. ಎಲ್‌ ನಿನೋ ಪರಿಣಾಮಗಳಿಗೆ ಮುಂಬರುವ ದಿನಗಳಲ್ಲಿ ಜಗತ್ತು ಸಿದ್ಧವಾಗಬೇಕಾದ ಅಗತ್ಯ ಖಂಡಿತವಿದೆ ಎಂದು ವಿಶ್ವ ಹವಾಮಾನ ಸಂಸ್ಥೆಯು ಮುನ್ನೆಚ್ಚರಿಕೆಯನ್ನು ನೀಡಿದೆ. ಹಾಗಿದ್ರೆ ಈ ಎಲ್‌ ನಿನೋ ವಿದ್ಯಮಾನ ಅಂದ್ರೇನು ನೋಡೋಣ ಬನ್ನಿ.


ಎಲ್‌ ನಿನೊ ವಿದ್ಯಮಾನ ಎಂದರೇನು?


ಎಲ್ ನಿನೊ ಇದು ಪೂರ್ವ ಸಮಭಾಜಕ ಪೆಸಿಫಿಕ್, ಸೈಕ್ಲಿಕಲ್ ನ ನೀರಿನ ತಾಪಮಾನ ಏರಿಕೆಗೆ ಸಂಬಂಧಿಸಿದ ಒಂದು ವಿದ್ಯಮಾನವಾಗಿದೆ, ಇದು ಪ್ರತಿ ಮೂರು ಅಥವಾ ಎಂಟು ವರ್ಷಗಳಿಗೊಮ್ಮೆ ಸಂಭವಿಸುತ್ತದೆ ಮತ್ತು 8-10 ತಿಂಗಳುಗಳವರೆಗೆ ಇರುತ್ತದೆ.


ಇದನ್ನೂ ಓದಿ: ಮೆಟ್ರೋದಲ್ಲಿ ಹಸ್ತಮೈಥುನ ಮಾಡಿದವನ ಪತ್ತೆಗೆ ಸಾರ್ವಜನಿಕರ ಮೊರೆ ಹೋದ ಪೊಲೀಸರು!


ವಿಶ್ವ ಹವಾಮಾನ ಸಂಸ್ಥೆ ಬಿಡುಗಡೆ ಮಾಡಿದ ಈ ವರ್ಷದ ನಕ್ಷೆಯಲ್ಲಿ ಎಲ್‌ ನಿನೋ ಪರಿಣಾಮದ ಭಾಗವಾಗಿ ಉತ್ತರ, ಈಶಾನ್ಯ, ವಾಯುವ್ಯ ಮತ್ತು ಮಧ್ಯ ಭಾರತದ ಬಹುತೇಕ ಭಾಗಗಳಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮಾನ್ಸೂನ್ ಋತುವಿನಲ್ಲಿ ತೀವ್ರ ಬರಗಾಲದ ಸ್ಥಿತಿಯನ್ನು ಎದುರಿಸುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ.


ಇನ್ನು ಪೆನಿನ್ಸುಲರ್ ಪ್ರದೇಶದಲ್ಲಿ ಅಂದರೆ ಈಶಾನ್ಯ ಭಾಗಗಳಲ್ಲಿ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಮಾನ್ಸೂನ್‌ ಋತುವಿನಲ್ಲಿ ತೀವ್ರ ಚಳಿಗಾಲದ ಸ್ಥಿತಿಯನ್ನು ಎದುರಿಸುವ ಸಾಧ್ಯತೆ ಇದೆ ಎಂದು ಹೇಳಿದೆ.


ಭಾರತಕ್ಕೆ ಮೂಲ ಆಧಾರವೆಂದರೆ ಮಾನ್ಸೂನ್‌ ಋತುಗಾಲ


ಪ್ರತಿ ವರ್ಷದಂತೆ ಭಾರತದಲ್ಲಿ ಮಾನ್ಸೂನ್‌ ಆರಂಭವಾಗುವುದೇ ಜೂನ್‌ ತಿಂಗಳಲ್ಲಿ ಆಗಿದೆ. ಈ ಮಾನ್ಸೂನ್‌ ಭಾರತದ ಕೃಷಿಗೆ ಅತ್ಯಂತ ಪ್ರಮುಖ ಘಟ್ಟ. ದೇಶದ ಆರ್ಥಿಕತೆಗೂ ಮಾನ್ಸೂನ್‌ ಬಹಳ ಮುಖ್ಯ. ಇದು ಭಾರತದ ವಾರ್ಷಿಕ ಮಳೆಯ 70% ಅನ್ನು ತರುತ್ತದೆ. ಈ ಮಾನ್ಸೂನ್‌ ಕೃಷಿ ಉತ್ಪನ್ನವನ್ನು ಹೆಚ್ಚಿಸುತ್ತದೆ. ಮಾನ್ಸೂನ್ ಮಳೆಯು ದೇಶದ ಸುಮಾರು 60% ನಿವ್ವಳ ಸಾಗುವಳಿ ಪ್ರದೇಶಕ್ಕೆ ಜೀವನಾಡಿಯಾಗಿದೆ.


ಪ್ರಪಂಚದಾದ್ಯಂತ ಎಲ್ ನಿನೊದ ಪರಿಣಾಮಗಳು ಮಳೆಯ ಮಾದರಿಗಳನ್ನು ಬದಲಾಯಿಸುತ್ತವೆ ಎಂದು WMO ಹೇಳಿದೆ. ಒಂದು ಎಲ್‌ ನಿನೋ ಕ್ಕಿಂತ ಇನ್ನೊಂದು ಎಲ್‌ ನಿನೋ ಸ್ವಲ್ಪ ಮಟ್ಟಿಗೆ ಬದಲಾಗುತ್ತವೆಯಾದರೂ, ಇದರಿಂದ ಬಹಳಷ್ಟು ಬದಲಾವಣೆಯಾಗುತ್ತವೆಯಾದರೂ, ಕೆಲವು ಪ್ರದೇಶಗಳು ಮತ್ತು ಋತುಗಳಲ್ಲಿ ಸ್ಥಿರವಾದ ಪರಿಣಾಮಗಳನ್ನು ಹೊಂದಿರುತ್ತವೆ ಎಂದು WMO ಹೇಳಿದೆ.


ಸಾಂಕೇತಿಕ ಚಿತ್ರ


ಭಾರತೀಯ ಹವಾಮಾನ ಇಲಾಖೆಯ (IMD) ಮಹಾನಿರ್ದೇಶಕ ಎಂ. ಮೊಹಪಾತ್ರ ಮಾತನಾಡಿ, ಡಬ್ಲ್ಯುಎಂಒ ಹವಾಮಾನಶಾಸ್ತ್ರ ಅಥವಾ ದೀರ್ಘಾವಧಿಯ ವಾತಾವರಣದ ಪರಿಸ್ಥಿತಿಗಳ ಅಧ್ಯಯನವನ್ನು ಉಲ್ಲೇಖಿಸುತ್ತದೆ. ಈ ಅಧ್ಯಯನದ ಪ್ರಕಾರ ಎಲ್‌ ನಿನೋ ವಿದ್ಯಮಾನವು ಈಶಾನ್ಯ ಮಾನ್ಸೂನ್‌ ಗೆ ಉತ್ತಮ ಆದರೆ ನೈಋತ್ಯ ಮಾನ್ಸೂನ್‌ಗೆ ಉತ್ತಮವಲ್ಲ ಎಂದಿದೆ.


ಎಲ್‌ ನಿನೋ ಮೇ ಅಂತ್ಯದ ವೇಳೆಗೆ ಆಗಮನವಾಗುವ ಸಾಧ್ಯತೆ ಇದ್ದು, IMD ತನ್ನ ಮಾನ್ಸೂನ್ ಮುನ್ಸೂಚನೆಯ ಕುರಿತು ನವೀಕರಣವನ್ನು ನೀಡುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.


WMO ಸೆಕ್ರೆಟರಿ-ಜನರಲ್ ಪೆಟ್ಟೆರಿ ತಾಲಾಸ್ ಅವರು “ಎಲ್ ನಿನೋವು ಹಾರ್ನ್ ಆಫ್ ಆಫ್ರಿಕಾದಲ್ಲಿನ ಬರ ಮತ್ತು ಇತರ ಲಾ ನಿನಾ-ಸಂಬಂಧಿತ ಪರಿಣಾಮಗಳಿಂದ ಅಲ್ಪ ವಿರಾಮವನ್ನು ತರಬಹುದು ಆದರೆ ಹೆಚ್ಚು ತೀವ್ರವಾದ ಪರಿಣಾಮಗಳಿಗೆ ಕಾರಣವಾಗಬಹುದು. ಜನರನ್ನು ಸುರಕ್ಷಿತವಾಗಿಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಯುಎನ್ ಯು ಸೂಚಿಸಿದೆ” ಎಂದಿದ್ದಾರೆ.
ಈ ಮಾನ್ಸೂನ್ ಋತುವಿನಲ್ಲಿ ಎಲ್ ನಿನೋ ಬೆಳವಣಿಗೆಯ ಸಾಧ್ಯತೆ ಹೆಚ್ಚುತ್ತಿದೆ ಎಂದು WMO ಹೇಳಿದೆ. ಇದು ದೀರ್ಘಾವಧಿಯ ಲಾ ನಿನಾ ಗೂ ಕಾರಣವಾಗುವ ಸಾಧ್ಯತೆ ಇದೆ. ಇದರಿಂದ ಪ್ರಪಂಚದ ಹಲವು ಪ್ರದೇಶಗಳಲ್ಲಿ ಹವಾಮಾನದ ಮಾದರಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ ಮತ್ತು ಹೆಚ್ಚಿನ ಜಾಗತಿಕ ತಾಪಮಾನಕ್ಕೂ ಕಾರಣವಾಗುತ್ತದೆ ಎಂದು ಹೇಳಿದೆ.


ಸುದ್ದಿ ಮಾಧ್ಯಮವಾದ ಹಿಂದೂಸ್ತಾನ್‌ ಟೈಮ್ಸ್‌ ಸೋಮವಾರದಂದು “ಭಾರತದಲ್ಲಿ ಬೇಸಿಗೆಯಲ್ಲಿ ಅಸಾಧಾರಣವಾದ ಚಳಿಯ ಆರಂಭವಾಗಿದೆ. ಇದು ಇನ್ನು ಕೆಲವು ವಾರಗಳವರೆಗೆ ಮುಂದುವರಿಯಲಿದೆ. ಇದರಿಂದ ಮಾನ್ಸೂನ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ.

First published: