World Rose Day 2020: ಇಂದು ವಿಶ್ವ ಗುಲಾಬಿ ದಿನ; ಕ್ಯಾನ್ಸರ್ ರೋಗಿಗಳನ್ನು ನೋಡುವ ದೃಷ್ಟಿ ಬದಲಾಯಿಸಿಕೊಳ್ಳೋಣ..!
ಗುಲಾಬಿ ಮೃದುತ್ವ, ಪ್ರೀತಿ ಮತ್ತು ಕಾಳಜಿಯ ಸಂಕೇತವಾಗಿದೆ. ವಿಶ್ವ ಗುಲಾಬಿ ದಿನದಂದು ಕ್ಯಾನ್ಸರ್ ರೋಗಿಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆ ಎಂದು ತಿಳಿಸುವ ಪ್ರಯತ್ನ ಮಾಡಲಾಗುತ್ತದೆ.
ಇಂದು ವಿಶ್ವ ಗುಲಾಬಿ ದಿನ. ಈ ದಿನವನ್ನು ವಿಶೇಷವಾಗಿ ಕ್ಯಾನ್ಸರ್ ವಿರುದ್ಧವಾಗಿ ಹೋರಾಡುತ್ತಿರುವ ಜನರಲ್ಲಿ ಭರವಸೆ ಮತ್ತು ಉಲ್ಲಾಸವನ್ನು ಮೂಡಿಸಲು ಮೀಸಲಿಡಲಾಗಿದೆ. ಹೀಗಾಗಿ ಪ್ರತೀ ವರ್ಷ ಸೆಪ್ಟೆಂಬರ್ 22ರಂದು ವಿಶ್ವ ಗುಲಾಬಿ ದಿನವನ್ನಾಗಿ ಆಚರಿಸಲಾಗುತ್ತದೆ. ಕ್ಯಾನ್ಸರ್ ರೋಗಿಗಳಿಗೆ ನೀಡಲಾಗುವ ಚಿಕಿತ್ಸೆ ತೀರಾ ಕಠಿಣವಾಗಿರುತ್ತದೆ. ಅವರ ಮೇಲೆ ಮಾನಸಿಕ ಪರಿಣಾಮ ಬೀರುತ್ತದೆ. ಹೀಗಾಗಿ ಕ್ಯಾನ್ಸರ್ ಪೀಡಿತ ರೋಗಿಗಳನ್ನು ಉಲ್ಲಾಸದಿಂದ ಇಡಬೇಕಿರುವುದು ಬಹಳ ಮುಖ್ಯ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಪ್ರತಿದಿನ ಅವರಿಗೆ ಗುಲಾಬಿ ದಿನವಾಗಿರಬೇಕು. ಹಾಗಾಗಿ ಕ್ಯಾನ್ಸರ್ ರೋಗಿಗಳ ಜೀವನದಲ್ಲಿ ಸಂತೋಷವನ್ನು ತರಲು ಪ್ರತೀ ವರ್ಷ ಸೆಪ್ಟೆಂಬರ್ 22ನ್ನು ವರ್ಲ್ಡ್ ರೋಸ್ ಡೇ ಅಥವಾ ವಿಶ್ವ ಗುಲಾಬಿ ದಿನ ಎಂದು ಆಚರಿಸಲಾಗುತ್ತದೆ. ಜೊತೆಗೆ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದಿನವೂ ಸಹ ಆಗಿದೆ.
ನಾವು ಕ್ಯಾನ್ಸರ್ ರೋಗಿಗಳನ್ನು ನೋಡುವ ದೃಷ್ಟಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಕ್ಯಾನ್ಸರ್ನ್ನು ಹೆಚ್ಚಾಗಿ ಸಿ ಎಂಬ ಪದದಿಂದ ಕರೆಯಲಾಗುತ್ತದೆ. ಇತ್ತೀಚೆಗೆ ಕ್ಯಾನ್ಸರ್ ರೋಗಿಗಳಿಗೆ ಸುಧಾರಿತ ಚಿಕಿತ್ಸೆಗಳನ್ನು ನೀಡುತ್ತಿರುವುದರಿಂದ ಈ ಪದವನ್ನು ಹೆಚ್ಚಾಗಿ ಬಳಸುತ್ತಿಲ್ಲ.
ವಿಶ್ವ ಗುಲಾಬಿ ದಿನದಂದು ನಾವು ಮುಖ್ಯವಾಗಿ ಬಿಡುವು ಮಾಡಿಕೊಂಡು ಕ್ಯಾನ್ಸರ್ ರೋಗಗಳೊಂದಿಗೆ ಸಮಯ ಕಳೆಯುವುದು ಬಹಳ ಮುಖ್ಯವಾಗುತ್ತದೆ. ಗುಲಾಬಿ ಮೃದುತ್ವ, ಪ್ರೀತಿ ಮತ್ತು ಕಾಳಜಿಯ ಸಂಕೇತವಾಗಿದೆ. ವಿಶ್ವ ಗುಲಾಬಿ ದಿನದಂದು ಕ್ಯಾನ್ಸರ್ ರೋಗಿಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆ ಎಂದು ತಿಳಿಸುವ ಪ್ರಯತ್ನ ಮಾಡಲಾಗುತ್ತದೆ. ಹೀಗಾಗಿ ವಿಶ್ವ ಗುಲಾಬಿ ದಿನದಂದು ಕ್ಯಾನ್ಸರ್ ರೋಗಿಗಳಿಗೆ ಗುಲಾಬಿ ಹೂಗಳನ್ನು ನೀಡಲಾಗುತ್ತದೆ.
Published by:Latha CG
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ