• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • World Press Freedom Day: ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 161 ನೇ ಸ್ಥಾನ ಪಡೆದುಕೊಂಡ ಭಾರತ; ದೇಶದಲ್ಲಿ ಪತ್ರಕರ್ತರ ಭದ್ರತೆಗಿಲ್ಲ ಗ್ಯಾರಂಟಿ!

World Press Freedom Day: ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 161 ನೇ ಸ್ಥಾನ ಪಡೆದುಕೊಂಡ ಭಾರತ; ದೇಶದಲ್ಲಿ ಪತ್ರಕರ್ತರ ಭದ್ರತೆಗಿಲ್ಲ ಗ್ಯಾರಂಟಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪತ್ರಿಕಾ ಸ್ವಾತಂತ್ರ್ಯದಲ್ಲಿ ನಾರ್ವೆ, ಐರ್ಲೆಂಡ್ ಮತ್ತು ಡೆನ್ಮಾರ್ಕ್ ಮೊದಲ ಮೂರು ಸ್ಥಾನಗಳನ್ನು ಪಡೆದರೆ, ವಿಯೆಟ್ನಾಂ, ಚೀನಾ ಮತ್ತು ಉತ್ತರ ಕೊರಿಯಾ ಕೆಳಗಿನ ಮೂರು ಸ್ಥಾನಗಳಲ್ಲಿವೆ.

 • Trending Desk
 • 2-MIN READ
 • Last Updated :
 • New Delhi, India
 • Share this:

ಜಾಗತಿಕ ಮಾಧ್ಯಮ ವಾಚ್‌ಡಾಗ್ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ, 2023 ರ ವರ್ಲ್ಡ್ ಪ್ರೆಸ್ ಫ್ರೀಡಮ್ ಇಂಡೆಕ್ಸ್‌ನಲ್ಲಿ (World Press Freedom Index) ಭಾರತದ ಶ್ರೇಯಾಂಕ(Ranking) 180 ದೇಶಗಳಲ್ಲಿ 161 ಕ್ಕೆ ಕುಸಿದಿದೆ.


ಪಾಕ್‌ಗೆ ಹೋಲಿಸಿದಾಗ ಈ ಹಿಂದೆ 157 ನೇ ಸ್ಥಾನದಲ್ಲಿದ್ದ ದೇಶ 150 ಕ್ಕೆ ಬಂದಿದೆ. 2022ರಲ್ಲಿ ಭಾರತ 150ನೇ ಸ್ಥಾನದಲ್ಲಿತ್ತು. ಶ್ರೀಲಂಕಾವು ಸೂಚ್ಯಂಕದಲ್ಲಿ ಗಮನಾರ್ಹ ಸುಧಾರಣೆಯನ್ನು ಮಾಡಿದೆ, 2022 ರಲ್ಲಿ 146 ನೇ ಸ್ಥಾನದಲ್ಲಿದ್ದರೆ ಈ ವರ್ಷ 135 ನೇ ಸ್ಥಾನದಲ್ಲಿದೆ.


ಮಾಧ್ಯಮ ಸ್ವಾತಂತ್ರ್ಯದ ರಕ್ಷಣೆ ಹಾಗೂ ಉತ್ತೇಜನ ಗುರಿಯಾಗಿದೆ


ಪತ್ರಿಕಾ ಸ್ವಾತಂತ್ರ್ಯದಲ್ಲಿ ನಾರ್ವೆ, ಐರ್ಲೆಂಡ್ ಮತ್ತು ಡೆನ್ಮಾರ್ಕ್ ಮೊದಲ ಮೂರು ಸ್ಥಾನಗಳನ್ನು ಪಡೆದರೆ, ವಿಯೆಟ್ನಾಂ, ಚೀನಾ ಮತ್ತು ಉತ್ತರ ಕೊರಿಯಾ ಕೆಳಗಿನ ಮೂರು ಸ್ಥಾನಗಳಲ್ಲಿವೆ.


ರಿಪೋಟರ್ಸ್ ವಿದೌಟ್ ಬಾರ್ಡರ್ಸ್ (RSF) ಪ್ರತಿ ವರ್ಷ ಪತ್ರಿಕಾ ಸ್ವಾತಂತ್ರ್ಯದ ಜಾಗತಿಕ ಶ್ರೇಯಾಂಕ ವರದಿಯನ್ನು ಹೊರತರುತ್ತದೆ. ಆರ್‌ಎಸ್‌ಎಫ್ ಅಂತರಾಷ್ಟ್ರೀಯ ಎನ್‌ಜಿಒ ಆಗಿದ್ದು, ಮಾಧ್ಯಮ ಸ್ವಾತಂತ್ರ್ಯವನ್ನು ರಕ್ಷಿಸುವುದು ಮತ್ತು ಉತ್ತೇಜಿಸುವುದು ಇದರ ಸ್ವಯಂ ಘೋಷಿತ ಗುರಿಯಾಗಿದೆ.
ಪತ್ರಿಕಾ ಸ್ವಾತಂತ್ರ್ಯದ ಮಟ್ಟವನ್ನು ಅವಲೋಕಿಸುವುದು


ಪ್ಯಾರಿಸ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇದು ವಿಶ್ವಸಂಸ್ಥೆಯೊಂದಿಗೆ ವೃತ್ತಿಪರ ಸಮಾಲೋಚಕ ಒಗ್ಗೂಡಿಕೆಯನ್ನು ಹೊಂದಿದೆ. ಪ್ರತಿ ವರ್ಷ ಬಿಡುಗಡೆ ಮಾಡುವ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ಉದ್ದೇಶವು 180 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಪತ್ರಕರ್ತರು ಮತ್ತು ಮಾಧ್ಯಮಗಳಿಗಿರುವ ಪತ್ರಿಕಾ ಸ್ವಾತಂತ್ರ್ಯದ ಮಟ್ಟವನ್ನು ಅವಲೋಕಿಸುವುದು ಎಂದಾಗಿದೆ.


ಇದನ್ನೂ ಓದಿ: Cyclone Mocha: ಅಪ್ಪಳಿಸಲಿದೆ ಈ ವರ್ಷದ ಮೊದಲ ಚಂಡಮಾರುತ, ಯಾವೆಲ್ಲಾ ರಾಜ್ಯಗಳಲ್ಲಿ 'ಮೋಚಾ' ಎಫೆಕ್ಟ್​?


RSF ಪತ್ರಿಕಾ ಸ್ವಾತಂತ್ರ್ಯವನ್ನು ತನ್ನದೇ ವ್ಯಾಖ್ಯಾನಗಳ ಮೂಲಕ ವಿವರಿಸಿದ್ದು ಇದು ರಾಜಕೀಯ, ಆರ್ಥಿಕ, ಕಾನೂನು ಮತ್ತು ಸಾಮಾಜಿಕ ಹಸ್ತಕ್ಷೇಪದಿಂದ ಮುಕ್ತವಾಗಿದೆ ಮತ್ತು ಪತ್ರಕರ್ತರ ದೈಹಿಕ ಮತ್ತು ಮಾನಸಿಕ ಸುರಕ್ಷತೆಗೆ ಬೆದರಿಕೆಗಳ ಅನುಪಸ್ಥಿತಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯಲ್ಲಿ ಸುದ್ದಿಗಳನ್ನು ಆಯ್ಕೆ ಮಾಡಲು, ಉತ್ಪಾದಿಸಲು ಮತ್ತು ಪ್ರಸಾರ ಮಾಡಲು ವ್ಯಕ್ತಿಗಳು ಮತ್ತು ಸಾಮೂಹಿಕವಾಗಿ ಪತ್ರಕರ್ತರ ಸಾಮರ್ಥ್ಯ ಎಂದು ವ್ಯಾಖ್ಯಾನಿಸುತ್ತದೆ.


ಪತ್ರಕರ್ತರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಭಾರತ ವಿಫಲ


ಪತ್ರಕರ್ತರ ಸ್ಥಿತಿ ತುಂಬಾ ಗಂಭೀರವಾಗಿದ್ದು ಎಂದು ಆರ್‌ಎಸ್‌ಎಫ್ ಗುರುತಿಸಿರುವ ದೇಶಗಳಲ್ಲಿ ಇದೀಗ ಭಾರತ ಕೂಡ ಒಂದಾಗಿದ್ದು ದೇಶದಲ್ಲಿ ಪತ್ರಕರ್ತರಿಗೆ ರಕ್ಷಣೆ ಇಲ್ಲವೇ ಎಂಬ ಕಳವಳಕ್ಕೆ ಕಾರಣವಾಗಿದೆ.


ಭಾರತವನ್ನು ಈ ರೀತಿ ಏಕೆ ವರ್ಗೀಕರಿಸಲಾಗಿದೆ ಎಂಬುದರ ಕುರಿತು ತನ್ನ ಆರಂಭಿಕ ಹೇಳಿಕೆಗಳಲ್ಲಿ ಆರ್‌ಎಸ್‌ಎಫ್ ಅಭಿಪ್ರಾಯ ಮಂಡಿಸಿದ್ದು, ಪತ್ರಕರ್ತರ ಮೇಲಿನ ಹಿಂಸಾಚಾರ, ರಾಜಕೀಯ ಪಕ್ಷಪಾತದ ಮಾಧ್ಯಮ ಮತ್ತು ಮಾಧ್ಯಮ ಮಾಲೀಕತ್ವದ ಏಕಾಗ್ರತೆ ಇವೆಲ್ಲವೂ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಸ್ವಾತಂತ್ರ್ಯ ಬಿಕ್ಕಟ್ಟಿನಲ್ಲಿದೆ ಎಂಬುದನ್ನು ಸೂಚಿಸುತ್ತದೆ ಎಂದು ತಿಳಿಸಿದೆ.


ಐದು ಅಂಶಗಳ ಮೇಲೆ ಶ್ರೇಯಾಂಕ ನಿರ್ಧಾರ


ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವು ಐದು ಅಂಶಗಳನ್ನು ಒಳಗೊಂಡಿದ್ದು ಇದಕ್ಕಾಗಿ ಅಂಕಗಳನ್ನು ಪರಿಗಣಿಸಲಾಗುತ್ತದೆ ತದನಂತರ ದೇಶಗಳನ್ನು ಶ್ರೇಣೀಕರಿಸಲಾಗುತ್ತದೆ. ಈ ಐದು ಅಂಶಗಳೆಂದರೆ ರಾಜಕೀಯ ಸೂಚಕ, ಆರ್ಥಿಕ ಸೂಚಕ, ಶಾಸಕಾಂಗ ಸೂಚಕ, ಸಾಮಾಜಿಕ ಸೂಚಕ ಮತ್ತು ಭದ್ರತಾ ಸೂಚಕ ಎಂದಾಗಿದೆ.


ಇದನ್ನೂ ಓದಿ: Shocking News: ಸೋಲೊ ಟ್ರಿಪ್​ಗೆ ಹೊರಟ ಬಾಲಕಿ ಕಿಡ್ನಾಪ್​! 4 ತಿಂಗಳಲ್ಲಿ 2 ಬಾರಿ ಮಾರಾಟ, ತಪ್ಪಿಸಿಕೊಂಡು ಬಂದದ್ದೇ ರೋಚಕ


ಭಾರತ ಭದ್ರತೆಯ ವಿಷಯದಲ್ಲಿ ಕುಸಿತ ಕಂಡಿದೆ

top videos


  ಭಾರತಕ್ಕೆ ಕಳವಳಕಾರಿಯಾಗಿರುವ ಕುಸಿತವು ಭದ್ರತಾ ಸೂಚಕ ವರ್ಗದಲ್ಲಿದೆ. ಇಲ್ಲಿ ಇದರ ಅಂಕ 172 ಎಂದೆನಿಸಿದೆ. 180 ದೇಶಗಳ ಪೈಕಿ ಉಳಿದ ಎಂಟು ರಾಷ್ಟ್ರಗಳಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸೂಕ್ತ ರಕ್ಷಣೆ ಇಲ್ಲ ಅಂತೆಯೇ ಚೀನಾ, ಮೆಕ್ಸಿಕೊ, ಇರಾನ್, ಪಾಕಿಸ್ತಾನ, ಸಿರಿಯಾ, ಯೆಮೆನ್, ಉಕ್ರೇನ್ ಮತ್ತು ಮ್ಯಾನ್ಮಾರ್ ಹೊರತುಪಡಿಸಿ ವಿಶ್ವದ ಪತ್ರಕರ್ತರ ಭದ್ರತೆಯನ್ನು ಖಾತ್ರಿಪಡಿಸುವ ವಿಷಯದಲ್ಲಿ ಭಾರತ ಎಲ್ಲಕ್ಕಿಂತ ಕೆಟ್ಟದಾಗಿದೆ ಎಂದಾಗಿದೆ.

  First published: