World Photography Day 2021: ವಿಶ್ವ ಫೋಟೋಗ್ರಫಿ ದಿನದ ಇತಿಹಾಸ ಕೇಳಿದ್ದೀರಾ? ಇಲ್ಲಿದೆ ನೋಡಿ

World Photography Day 2021: ಸೆಲ್ಫಿ ತೆಗೆದುಕೊಳ್ಳುವುದರಿಂದ ಹಿಡಿದು, ನಮ್ಮ ಜೀವನದಲ್ಲಿ ನಡೆಯುವ ಘಟನೆಗಳ ಚಿತ್ರಗಳನ್ನು ಪೋಸ್ಟ್​ ಮಾಡುವವರೆಗೆ ಕ್ಯಾಶಯಯಲ್ ಫೋಟೋಗ್ರಫಿ ನಮ್ಮ ಜೀವನದ ಪ್ರಮುಖ ಭಾಗವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇಂದು ವಿಶ್ವ ಫೋಟೋಗ್ರಫಿ ದಿನ. ಪ್ರತೀ ವರ್ಷ ಆಗಸ್ಟ್​ 19ರಂದು ವಿಶ್ವ ಛಾಯಾಗ್ರಹಣ ದಿನವನ್ನಾಗಿ ಆಚರಿಸಲಾಗುತ್ತದೆ. ಫೋಟೋಗ್ರಫಿಯ ಕಲೆ, ಕರಕುಶಲ, ಇತಿಹಾಸ ಮತ್ತು ವಿಜ್ಞಾನವನ್ನು ತಿಳಿಸಲು ವಿಶ್ವಾದ್ಯಂತ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

    ಯಾವುದೇ ಒಂದು ಕಥೆ ಹೇಳುವಾಗ ಫೋಟೋಗ್ರಫಿ ಅತೀ ಪ್ರಮುಖ ಮಾಧ್ಯಮವಾಗುತ್ತದೆ. ಒಂದು ಫೋಟೋ ಇಡೀ ಪರಿಸ್ಥಿತಿಯನ್ನು ಬಿಚ್ಚಿಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಭಾವನೆಗಳನ್ನು ಪದಗಳಿಗಿಂತ ಬೇಗನೇ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ತಿಳಿಸುತ್ತದೆ. ಒಂದು ಫೋಟೋಗ್ರಫಿ ಸ್ಥಳ, ಭಾವನೆ, ಅನುಭವ, ಕಲ್ಪನೆ ಮತ್ತು ಒಂದು ಕ್ಷಣವನ್ನು ಸೆರೆ ಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.

    ವಿಶ್ವ ಫೋಟೋಗ್ರಫಿ ದಿನದ ಇತಿಹಾಸ:

    ವಿಶ್ವ ಫೋಟೋಗ್ರಫಿ ದಿನಕ್ಕೂ ಒಂದು ಇತಿಹಾಸವಿದೆ. 1830ರಲ್ಲಿ ಲೂಯಿಸ್ ಡಾಗುರೆ ‘ಡಾಗುರೋಟೈಪ್​‘ನ್ನು ಆವಿಷ್ಕರಿಸುವ ಮೂಲಕ, ಫೋಟೋಗ್ರಫಿ ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸಿದರು. ಅಂದಿನಿಂದ ಪ್ರತೀ ವರ್ಷ ವಿಶ್ವ ಫೋಟೋಗ್ರಫಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ಲಾನೆಟಾ.ಕಾಂ ಪ್ರಕಾರ, ಫ್ರೆಂಚ್ ಅಕಾಡೆಮಿ ಆಫ್​ ಸೈನ್ಸಸ್​ 1839ರ ಜನವರಿ 9ರಂದು ಈ ಪ್ರಕ್ರಿಯೆಯನ್ನು ಘೋಷಿಸಿತು. ಅದರ ನಂತರ ಫ್ರೆಂಚ್ ಸರ್ಕಾರವು 1839 ರ ಆಗಸ್ಟ್​ 9ರಂದು ಈ ಹೊಸ ಆವಿಷ್ಕಾರವನ್ನು ಜಗತ್ತಿಗೆ ಉಚಿತ ಉಡುಗೊರೆಯನ್ನಾಗಿ ನೀಡಿತು. ಅಂದಿನಿಂದ ಪ್ರತೀ ವರ್ಷ ಆಗಸ್ಟ್​ 19ನ್ನು ವಿಶ್ವ ಫೋಟೋಗ್ರಫಿ ದಿನವನ್ನಾಗಿ ಆಚರಿಸಲಾಗುತ್ತದೆ.

    ಇದನ್ನೂ ಓದಿ:Afghan Crisis- ಆಫ್ಘಾನಿಸ್ತಾನ-ಭಾರತ ಮಧ್ಯೆ ಆಮದು ರಫ್ತು ಸ್ಥಗಿತ

    ವಿಶ್ವ ಫೋಟೋಗ್ರಫಿ ದಿನದ ಮಹತ್ವ:

    ಈ ಮೊದಲೇ ಹೇಳಿದಂತೆ ಫೋಟೋಗ್ರಫಿ ಕಥೆ ಹೇಳುವಲ್ಲಿ ಪ್ರಮುಖವಾದ ಮಾಧ್ಯಮವಾಗಿದೆ. ಒಂದು ಉತ್ತಮ ಫೋಟೋಗ್ರಫಿ ಸಾಮಾನ್ಯವಾಗಿ ಕಾಲಾತೀತವಾಗಿರುತ್ತದೆ. ಅದನ್ನು ಕ್ಲಿಕ್​ ಮಾಡಿದ ದಿನ ಮತ್ತು 50 ವರ್ಷಗಳ ನಂತರವೂ ಅದನ್ನು ಪ್ರಶಂಸಿಸಬಹುದು.

    ಫೋಟೋಗ್ರಫಿ ದೃಶ್ಯ ಮಾಧ್ಯಮವಾಗಿರುವುದರಿಂದ ಇದು ನಾವು ವಾಸಿಸುವ ಪ್ರಪಂಚದ ಬಗ್ಗೆ ಹೆಚ್ಚು ತಿಳುವಳಿಕೆ ನೀಡುತ್ತದೆ.

    ವಿಶ್ವ ಛಾಯಾಗ್ರಹಣ ದಿನವು ಫೋಟೋಗ್ರಫಿ ಕಲೆಯ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಇದು ಕಲೆಯ ಉತ್ಸಾಹವನ್ನು ಹಂಚಿಕೊಳ್ಳುವ ಜನರನ್ನು ಒಟ್ಟುಗೂಡಿಸುತ್ತದೆ.

    ಈ ದಿನ ವಿಶ್ವ ಫೋಟೋಗ್ರಫಿ ದಿನದ ಇತಿಹಾಸವನ್ನು ನೆನಪಿಸಿಕೊಳ್ಳುವುದರ ಜೊತೆಗೆ, ಜಾಗೃತಿಯನ್ನು ಮೂಡಿಸುತ್ತದೆ. ಫೋಟೋಗ್ರಫಿ ಕ್ಷೇತ್ರದ ಬಗ್ಗೆ ಕೆಲ ಸೂಕ್ಷ್ಮ ವಿಚಾರಗಳನ್ನು ತಿಳಿದುಕೊಳ್ಳಬೇಕಿದೆ. ಇದು ಪ್ರಸ್ತುತ ಮತ್ತು ಕೆಲವು ಐತಿಹಾಸಿಕ ಚಿತ್ರಗಳನ್ನು ಫೋಟೋಗ್ರಫಿ ಪ್ರಿಯರಿಗೆ ತೋರಿಸುತ್ತದೆ.

    ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಇನ್ನೂ 2 ದಿನ ಮಳೆ; ಇಂದು ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಇಲ್ಲಿದೆ ಮಾಹಿತಿ

    ಸೆಲ್ಫಿ ತೆಗೆದುಕೊಳ್ಳುವುದರಿಂದ ಹಿಡಿದು, ನಮ್ಮ ಜೀವನದಲ್ಲಿ ನಡೆಯುವ ಘಟನೆಗಳ ಚಿತ್ರಗಳನ್ನು ಪೋಸ್ಟ್​ ಮಾಡುವವರೆಗೆ ಕ್ಯಾಶಯಯಲ್ ಫೋಟೋಗ್ರಫಿ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಕ್ಯಾಮೆರಾಗಳು ಈಗ ನಿಮ್ಮ ಜೇಬಿಗೆ ಹಿಡಿಸುವ ಪೆನ್ನಿನಷ್ಟು ಚಿಕ್ಕದಾಗಿವೆ. ಹಿಡನ್ ಕ್ಯಾಮೆರಾಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ.

    ಡಿಜಿಟಲ್​ ಯುಗದ ಆಗಮನದೊಂದಿಗೆ, ಕ್ಯಾಮೆರಾಗಳು ಹೈಟೆಕ್​ ಸಾಧನಗಳಾಗಿ ವಿಕಸನಗೊಂಡಿವೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
    Published by:Latha CG
    First published: