World Oceans Day 2021: ಸಮುದ್ರವನ್ನು ಪ್ರೀತಿಸು, ಅದು ಯಾವತ್ತೂ ನಿನಗೆ ದ್ರೋಹ ಮಾಡಲ್ಲ...!

ಸಮುದ್ರ

ಸಮುದ್ರ

World Oceans Day: ಸಾಗರಗಳು ನಮ್ಮ ಭೂಮಿಯ ಶ್ವಾಸಕೋಶಗಳು ಎಂದು ಎಲ್ಲರಿಗೂ ನೆನಪಿಸಲು ಈ ದಿನವನ್ನು ಆಚರಿಸಲಾಗುತ್ತದೆ

  • Share this:

ನವದೆಹಲಿ(ಜೂ.08): ಇಂದು ವಿಶ್ವ ಸಾಗರಗಳ ದಿನ(World Oceans Day). ಪ್ರತೀ ವರ್ಷ ಜೂನ್ 8ನ್ನು ವಿಶ್ವ ಸಾಗರಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಬೇರೆ ಬೇರೆ ಮಾಲಿನ್ಯಗಳಿಂದ ನೀರನ್ನು ಸಂರಕ್ಷಿಸಲು ಇಡೀ ವಿಶ್ವಕ್ಕೆ ಮನವಿ ಮಾಡಲಾಗುತ್ತದೆ. ಜೊತೆಗೆ ನಮ್ಮ ಜೀವನದಲ್ಲಿ ಸಮುದ್ರಗಳ ಮಹತ್ವ ಏನು ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಮಾನವನ ಕ್ರಿಯೆಗಳು ಸಾಗರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದರ ಬಗ್ಗೆಯೂ ತಿಳಿಸುವ ಪ್ರಯತ್ನ ಮಾಡಲಾಗುತ್ತದೆ.


ಸಾಗರವನ್ನು ಪ್ರೀತಿಸು, ಅದು ನಿನಗೆ ಯಾವತ್ತೂ ದ್ರೋಹ ಮಾಡುವುದಿಲ್ಲ‘ ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ ಮಾನವ ಸಾಗರವನ್ನು ಪ್ರೀತಿಸುವುದರ ಜೊತೆಗೆ ತನ್ನ ಕೆಟ್ಟ ಚಟುವಟಿಕೆಗಳಿಂದ ಅದನ್ನು ಮಲಿನ ಮಾಡುತ್ತಿದ್ದಾನೆ. ಇದರಿಂದಾಗಿ ಸಮುದ್ರಜೀವಿಗಳ ಪ್ರಾಣಹಾನಿಯಾಗುತ್ತಿದೆ.


ಭೂಮಿ ಶೇ.70ರಷ್ಟು ನೀರಿನಿಂದ ಆವೃತವಾಗಿದ್ದರೆ, ಕೇವಲ ಶೇ.30 ರಷ್ಟು ಮಾತ್ರ ಮನುಷ್ಯರು ಬದುಕಲು ಯೋಗ್ಯವಾಗಿದೆ. ಸಾಗರಗಳು ಜೀವನಾಧಾರವಾಗಿವೆ. ಜೊತೆಗೆ ಭೂಮಿಯ ಶೇ.50ರಷ್ಟು ಆಕ್ಸಿಜನ್​ನ್ನು ಉತ್ಪಾದಿಸುವ ಮೂಲಕ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೆ ಸಹಕಾರಿಯಾಗುತ್ತಿವೆ. ಆದರೆ ಈ ಸಮುದ್ರಗಳನ್ನು ಮಾನವ ಹಾಳುಗೆಡವುತ್ತಿದ್ದಾನೆ. ಸಮುದ್ರದಿಂದ ಎಲ್ಲಾ ಲಾಭಗಳನ್ನು ಪಡೆದು ಅದನ್ನು ಅವನತಿಯ ಅಂಚಿಗೆ ತಳ್ಳುತ್ತಿದ್ದಾನೆ. ಈಗ ಸಮುದ್ರಗಳು ಬೆಂಬಲ ಕೇಳುತ್ತಿವೆ. ಶೇ.50ರಷ್ಟು ಹವಳ ದಿಬ್ಬಗಳು ನಾಶವಾಗಿವೆ. ಶೇ 90ರಷ್ಟು ದೈತ್ಯ ಮೀನುಗಳ ಸಂತತಿ ಅವನತಿ ಹೊಂದಿವೆ. ಹೀಗಾಗಿ ಸಮುದ್ರ ಸಹಾಯ ಕೇಳುವ ಪರಿಸ್ಥಿತಿಗೆ ಬಂದಿದೆ.


ಇದನ್ನೂ ಓದಿ:ಕಾರವಾರ| ಎಂಡೋಸಲ್ಫಾನ್ ಬಾಧಿತರ ಸ್ಥಿತಿ ಕಂಗಾಲು; ಚಿಕಿತ್ಸೆ‌ ನಿಲ್ಲಿಸಿದ ಸರ್ಕಾರ!


ವಿಶ್ವ ಸಾಗರ ದಿನದ ಮಹತ್ವ:


ವಿಶ್ವ ಸಾಗರ ದಿನದ ಬಗ್ಗೆ ಮೊದಲ ಬಾರಿಗೆ 1992ರಲ್ಲಿ ರಿಯೊ ಡಿ ಜಜೈರೊದಲ್ಲಿ ನಡೆದ ಭೂ ಶೃಂಗಸಭೆಯಲ್ಲಿ​ ಪ್ರಸ್ತಾಪ ಮಾಡಲಾಯಿತು. ಇದರ ಹಿಂದಿನ ಉದ್ದೇಶವೆಂದರೆ, ವಿಶಾಲವಾದ ಜಲಮೂಲ ಹಾಗೂ ಅದರಿಂದಾಗುವ ಪ್ರಯೋಜನಗಳನ್ನು ಆಚರಿಸುವುದು ಮಾತ್ರವಲ್ಲದೇ, ಅದನ್ನು ಸುಸ್ಥಿರ ಅಭಿವೃದ್ಧಿ ಭಾಗವಾಗಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು ಸಹ ಮುಖ್ಯವಾಗಿದೆ. ಹೀಗಾಗಿ 2008ರ ಡಿಸೆಂಬರ್​ 5ರಂದು ವಿಶ್ವಸಂಸ್ಥೆಯ ಪ್ರಧಾನ ಸಭೆ ಈ ದಿನವನ್ನು ಗೊತ್ತುಪಡಿಸುವ ನಿರ್ಣಯವನ್ನು ಅಂಗೀಕರಿಸಿತು.


ವಿಶ್ವ ಸಾಗರ ದಿನದ ಮಹತ್ವ


ಸಾಗರಗಳು ನಮ್ಮ ಭೂಮಿಯ ಶ್ವಾಸಕೋಶಗಳು ಎಂದು ಎಲ್ಲರಿಗೂ ನೆನಪಿಸಲು ಈ ದಿನವನ್ನು ಆಚರಿಸಲಾಗುತ್ತದೆ ಅಂತ ಯುನೆಸ್ಕೋ ಹೇಳುತ್ತದೆ. ನಮ್ಮ ಕೆಟ್ಟ ಹಾಗೂ ಅಸಡ್ಡೆ ಚಟುವಟಿಕೆಗಳಿಂದ ಸಮುದ್ರಕ್ಕೆ ಉಂಟಾಗುವ ಹಾನಿಯನ್ನು ಹೇಗೆ ತಡೆಯುವುದು, ಸಮುದ್ರವನ್ನು ಹೇಗೆ ಸಂರಕ್ಷಿಸುವುದು ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಕಾರಣಕ್ಕಾಗಿ ಜಗತ್ತಿನಾದ್ಯಂತ ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ.


ಇದನ್ನೂ ಓದಿ:Karnataka Weather Today: ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಇಂದಿನಿಂದ ಜೂನ್ 11ರವರೆಗೆ ಮಳೆಯ ಆರ್ಭಟ


ವಿಶ್ವ ಸಾಗರ ದಿನದ ಥೀಮ್ ಏನು?


ಈ ವರ್ಷ ವಿಶ್ವ ಸಾಗರ ದಿನದ ವಿಷಯವೆಂದರೆ, ‘ಸಾಗರ-ಜೀವನ ಮತ್ತು ಜೀವನೋಪಾಯ‘ ಎಂಬುದಾಗಿದೆ. ಸದ್ಯ ಕೊರೋನಾ ಮಹಾಮಾರಿ ಜಗತ್ತನ್ನು ಬೆಂಬಿಡದೆ ಕಾಡುತ್ತಿರುವುದರಿಂದ ವರ್ಚುಯಲ್​ ಆಗಿ ಈ ಸಾಗರ ದಿನವನ್ನು ಆಚರಿಸಲಾಗುತ್ತದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

top videos
    First published: