ಸ್ವಲ್ಪ ನಿರಾಳ ಅಂತ ಆಗೋವಾಗ, ಮತ್ತೆ ವಿಶ್ವದಾದ್ಯಂತ ಹಲವಾರು ನಗರಗಳಲ್ಲಿ (City) ವಾಸಿಸುವ ಜನರನ್ನು ಕಾಡಲು ಶುರು ಮಾಡಿದೆ ಈ ಕೋವಿಡ್-19 (Covid 19) ವೈರಸ್ ಅಂತ ಹೇಳಬಹುದು. ಈ ವೈರಸ್ (Virus) ಮಾತ್ರ ತನ್ನ ಅಟ್ಟಹಾಸ ಸಂಪೂರ್ಣವಾಗಿ (Complete) ಕಡಿಮೆ ಮಾಡುತ್ತಲೇ ಇಲ್ಲ, ಸಾಮೂಹಿಕವಾಗಿ ಇನ್ನೂ ಹರಡುತ್ತಲೇ ಇದೆ. ಜನರಲ್ಲಿ ಈಗ ಮತ್ತೊಂದು ಸಾಂಕ್ರಾಮಿಕ (Viral) ಅಲೆಯ ಭಯವು ಕಡಿಮೆಯಾಗಿಲ್ಲ, ಈ ಸಂದರ್ಭದಲ್ಲಿ ಮಾರಣಾಂತಿಕ ವೈರಸ್ ಸೋಂಕಿಗೆ (Deadly Virus) ಒಳಗಾಗುವ ಜನರಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸಮುದಾಯ ವ್ಯವಸ್ಥೆಯಲ್ಲಿ ಎಂದರೆ ನಗರಗಳಲ್ಲಿರುವ ಅಪಾರ್ಟ್ಮೆಂಟ್ ಗಳಲ್ಲಿರುವ ಜನರು ತಪ್ಪದೆ ಹೊರಗೆ ಹೋಗುವಾಗ ಮುಖಕ್ಕೆ ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ -19 ಕುರಿತಂತೆ ಚಿಕಿತ್ಸೆಗಳು ಮತ್ತು ಕ್ಲಿನಿಕಲ್ ನಿರ್ವಹಣೆ ಮಾರ್ಗಸೂಚಿಗಳನ್ನು ನವೀಕರಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಪ್ರತ್ಯೇಕತೆಯ ಅವಧಿ
ಕೋವಿಡ್-19 ರೋಗಿಗಳು ವೈರಸ್ ನ ರೋಗಲಕ್ಷಣಗಳನ್ನು ಪ್ರದರ್ಶಿಸುತ್ತಿದ್ದರೆ, ರೋಗಲಕ್ಷಣಗಳು ಪ್ರಾರಂಭವಾದ ದಿನಾಂಕದಿಂದ ಕನಿಷ್ಠ10 ದಿನಗಳವರೆಗೆ ಅವರನ್ನು ಪ್ರತ್ಯೇಕಿಸಬೇಕಾಗುತ್ತದೆ ಎಂದು ಡಬ್ಲ್ಯುಎಚ್ಒ ಹೇಳಿದೆ.
ಕೋವಿಡ್-19 ರೋಗಲಕ್ಷಣಗಳನ್ನು ಪ್ರದರ್ಶಿಸಿದ ಕೋವಿಡ್-19 ರೋಗಿಗಳನ್ನು ರೋಗಲಕ್ಷಣಗಳು ಪ್ರಾರಂಭವಾದ 10 ದಿನಗಳ ನಂತರ ಹೊರಗೆ ಬಿಡುಗಡೆ ಮಾಡಬೇಕು ಮತ್ತು ರೋಗಲಕ್ಷಣಗಳು ಕಣ್ಮರೆಯಾದ ನಂತರ ಕನಿಷ್ಠ 3 ದಿನಗಳ ಜಾಗರೂಕತೆಯನ್ನು ಅವರು ವಹಿಸಬೇಕು ಎಂದು ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳು ತಿಳಿಸಿದ್ದವು.
ಮಾಸ್ಕ್ ಧರಿಸುವುದು
ಜಾಗತಿಕವಾಗಿ ಕೋವಿಡ್-19 ರ ಪ್ರಸ್ತುತ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ಮಾಸ್ಕ್ ಗಳ ಬಳಕೆಯನ್ನು ಡಬ್ಲ್ಯುಎಚ್ಒ ಶಿಫಾರಸ್ಸು ಮಾಡಿದೆ.
ಮಾರಣಾಂತಿಕ ವೈರಸ್ ತಡೆಗಟ್ಟುವಿಕೆಯ ವಿರುದ್ಧ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಇನ್ನೂ ಪ್ರಮುಖವಾಗಿದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ:Covid19: ಲಾಂಗ್ ಕೋವಿಡ್ ಜೊತೆ ಕಳಂಕ, ತಾರತಮ್ಯ, ನಿಂದನೆ ಫಿಕ್ಸ್! ಅಧ್ಯಯನ ಹೇಳೋದೇನು?
ಇಂತಹ ಪರಿಸ್ಥಿತಿಗಳಲ್ಲಿ ಜನರು ಮಾಸ್ಕ್ ಧರಿಸಬೇಕು ಎಂದು ಡಬ್ಲ್ಯುಎಚ್ಒ ಹೇಳುತ್ತದೆ ನೋಡಿ:
- ಇತ್ತೀಚೆಗೆ ಕೋವಿಡ್-19 ರೋಗ ಬಂದಿದ್ದವರು ಮತ್ತು ಈಗಾಗಲೇ ಕೋವಿಡ್-19 ನಿಂದ ಬಳಲಿದವರು ಹೊರಗೆ ಹೋದರೆ ಮಾಸ್ಕ್ ಹಾಕಿಕೊಳ್ಳಬೇಕು.
- ಯಾರಿಗಾದರೂ ಕೋವಿಡ್-19 ರೋಗ ಇದೆ ಅಂತ ಅನುಮಾನ ಬಂದಾಗ ಮಾಸ್ಕ್ ಹಾಕಿಕೊಳ್ಳುವುದು ಬೆಸ್ಟ್.
- ಯಾರಾದರೂ ತೀವ್ರವಾದ ಕೋವಿಡ್-19 ನ ಹೆಚ್ಚಿನ ಅಪಾಯದಲ್ಲಿದ್ದಾಗ ಮಾಸ್ಕ್ ಹಾಕಿಕೊಳ್ಳುವುದು ಒಳ್ಳೆಯದು.
- ಜನದಟ್ಟಣೆಯಲ್ಲಿ ಮತ್ತು ಕಡಿಮೆ ಗಾಳಿಯಾಡುವ ಸ್ಥಳದಲ್ಲಿ ಇರುವಾಗ ಮಾಸ್ಕ್ ಧರಿಸುವುದು ಸೂಕ್ತ.
ಕೋವಿಡ್-19 ಚಿಕಿತ್ಸೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?
ನಿರ್ಮಟ್ರೆಲ್ವಿರ್-ರಿಟೊನವಿರ್ ಬಳಕೆಗೆ ಡಬ್ಲ್ಯುಎಚ್ಒ ಬಲವಾಗಿ ಶಿಫಾರಸ್ಸು ಮಾಡಿದೆ. ಡಬ್ಲ್ಯುಎಚ್ಒ ಇತರ ಎರಡು ಔಷಧಿಗಳಾದ ಸೊಟ್ರೊವಿಮಾಬ್ ಮತ್ತು ಕ್ಯಾಸಿರಿವಿಮಾಬ್-ಇಮ್ಡೆವಿಮಾಬ್ ಕುರಿತ ಪುರಾವೆಗಳನ್ನು ಪರಿಶೀಲಿಸಿದ್ದು ಕೋವಿಡ್-19 ಚಿಕಿತ್ಸೆಗೆ ಅವುಗಳ ಬಳಕೆಯನ್ನು ಸಹ ಬಲವಾಗಿ ಶಿಫಾರಸ್ಸು ಮಾಡಿದೆ ಅಂತ ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ