World Food Safety Day 2021: ಕೋವಿಡ್​-19 ಬಿಕ್ಕಟ್ಟಿನ ನಡುವೆ ವಿಶ್ವ ಆಹಾರ ಸುರಕ್ಷತಾ ದಿನದ ಮಹತ್ವವೇನು?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಆಹಾರ ಸುರಕ್ಷತೆಯು ಕ್ರಮೇಣ ರಾಷ್ಟ್ರೀಯ ಮತ್ತು ಜಾಗತಿಕ ಬೆಳವಣಿಗೆ ಮೇಲೆ, ಆರ್ಥಿಕತೆ ಮತ್ತು ಜನರ ಯೋಗಕ್ಷೇಮದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂಬುದು ವಿಶ್ವಸಂಸ್ಥೆಯ ನಂಬಿಕೆ.

  • Share this:

ಇಂದು ವಿಶ್ವ ಆಹಾರ ಸುರಕ್ಷತಾ ದಿನ. ಪ್ರತೀ ವರ್ಷ ಜೂನ್​ 7ನ್ನು ವಿಶ್ವ ಆಹಾರ ಸುರಕ್ಷತಾ ದಿನವನ್ನಾಗಿ ಆಚರಿಸಲಾಗುತ್ತದೆ. ಶುದ್ಧ ಮತ್ತು ಆರೋಗ್ಯಕರ ಆಹಾರದ ಮಹತ್ವವನ್ನು ಸಾರಲು ಈ ದಿನವನ್ನು ಗುರುತಿಸಲಾಗಿದೆ. ಇಂದು ಜನರು ಸುರಕ್ಷಿತ ಆಹಾರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಜೊತೆಗೆ ಮೂಲಭೂತ ಅವಶ್ಯಕತೆಯೂ ಆಗಿದೆ. ಈ ದಿನ ಸಾಮಾನ್ಯವಾಗಿ ಶುದ್ಧ ಆಹಾರದ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಕಳಪೆ ಆಹಾರದಿಂದ ಹರಡುವ ರೋಗಗಳನ್ನು ಕಡಿಮೆ ಮಾಡಲು ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ವಿಶ್ವ ಆಹಾರ ಸುರಕ್ಷತಾ ದಿನದಂದು ಅದರ ಇತಿಹಾಸ, ಮಹತ್ವ ಹಾಗೂ ಥೀಮ್​ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇದರ ಬಗ್ಗೆ ಇಲ್ಲಿದೆ ಮಾಹಿತಿ.


ವಿಶ್ವ ಆಹಾರ ಸುರಕ್ಷತಾ ದಿನದ ಥೀಮ್ ಏನು?


ವಿಶ್ವ ಆಹಾರ ಸುರಕ್ಷತಾ ದಿನ-2021ರ ಅಧಿಕೃತ ಥೀಮ್ ಏನೆಂದರೆ, ’ಆರೋಗ್ಯಕರ ನಾಳೆಗಾಗಿ ಇಂದು ಶುದ್ಧ ಆಹಾರ‘. ಈ ವಿಷಯದೊಂದಿಗೆ ವಿಶ್ವಸಂಸ್ಥೆಯು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ವಿಷಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದಾರೆ. ಹೀಗಾಗಿ ಜನರಿಗೆ ಶುದ್ಧ ಆಹಾರ ಮತ್ತು ನೀರನ್ನು ಒದಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಸರ್ಕಾರಗಳು, ಗ್ರಾಹಕರು ಮತ್ತು ಉತ್ಪಾದಕರು ಕೈಜೋಡಿಸಿದಾಗ ಹಾಗೂ ಆಹಾರದಿಂದ ಹರಡುವ ರೋಗಗಳನ್ನು ತಡೆಗಟ್ಟಲು ಮುಂದಾಗುವ ಕೆಲಸ ಮಾಡಿದಾಗ ಮಾತ್ರ ನಿಶ್ಚಿತ ಗುರಿಯನ್ನು ಸಾಧಿಸಬಹುದಾಗಿದೆ ಎಂದು ವಿಶ್ವಸಂಸ್ಥೆ ನಂಬಿದೆ.


ಇದನ್ನೂ ಓದಿ:ಕಾರವಾರದಲ್ಲೊಬ್ಬ ಭಗೀರಥ; ಏಕಾಂಗಿಯಾಗಿ ಬಾವಿ ತೋಡಿ ಊರ ಜನರ ದಾಹ ನೀಗಿಸಿದ ವ್ಯಕ್ತಿ


ವಿಶ್ವ ಆಹಾರ ಸುರಕ್ಷತಾ ದಿನದ ಇತಿಹಾಸ


ವಿಶ್ವ ಸಂಸ್ಥೆಯು 2018ರಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕ ವಿಶ್ವ ಆಹಾರ ಸುರಕ್ಷತಾ ದಿನವನ್ನು ಮೊದಲ ಬಾರಿಗೆ ಜೂನ್ 2019ರಲ್ಲಿ ಆಚರಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆ(WHO), ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO)ಯ ಸಹಭಾಗಿತ್ವದೊಂದಿಗೆ ಈ ಕಾರ್ಯಕ್ರಮವನ್ನು ಆಚರಿಸಲಾಯಿತು. ಅಲ್ಲಿಂದ ಪ್ರತೀ ವರ್ಷ ಜಗತ್ತಿನಾದ್ಯಂತ ಜೂನ್​ 7ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.


ಆಹಾರ ಸುರಕ್ಷತೆಯು ಕ್ರಮೇಣ ರಾಷ್ಟ್ರೀಯ ಮತ್ತು ಜಾಗತಿಕ ಬೆಳವಣಿಗೆ ಮೇಲೆ, ಆರ್ಥಿಕತೆ ಮತ್ತು ಜನರ ಯೋಗಕ್ಷೇಮದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂಬುದು ವಿಶ್ವಸಂಸ್ಥೆಯ ನಂಬಿಕೆ.


ಇದನ್ನೂ ಓದಿ:Lockdown Effect: ಮಂಡ್ಯದ ಹಲವೆಡೆ ಕದ್ದು ಮುಚ್ಚಿ ಮದುವೆ; ವಧು, ವರ ಮತ್ತು ಪುರೋಹಿತರು ಅರೆಸ್ಟ್​


ವಿಶ್ವ ಆಹಾರ ಸುರಕ್ಷತಾ ದಿನದ ಮಹತ್ವ


ವಿಶ್ವಸಂಸ್ಥೆಯು ಮೊದಲ ಬಾರಿಗೆ ವಿಶ್ವ ಆಹಾರ ಸುರಕ್ಷತಾ ದಿನವನ್ನು ಘೋಷಿಸಿದಾಗ, ಆರೋಗ್ಯಕರ ಜಗತ್ತನ್ನು ಸೃಷ್ಟಿಸುವುದು ನಮ್ಮ ಉದ್ದೇಶ ಎಂದು ಹೇಳಿತ್ತು. ಈ ವಿಷಯದಲ್ಲಿ ಪ್ರತಿಯೊಬ್ಬರ ಪಾತ್ರವೂ ಮಹತ್ವವಾದದ್ದು. ಆದ್ದರಿಂದ ಸುರಕ್ಷತೆಯೇ ಮೊದಲ ಆದ್ಯತೆಯಾಗಬೇಕಿದೆ. ಇದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ವಿಶ್ವ ಆಹಾರ ಸುರಕ್ಷತಾ ದಿನಾಚರಣೆಯೊಂದಿಗೆ ವಿಶ್ವದ ಹಲವು ಭಾಗಗಳಲ್ಲಿ ಆಹಾರ ಸಂಬಂಧಿತ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರಯತ್ನಿಸುತ್ತಿದೆ.


ಪ್ರಸ್ತುತ ಇಡೀ ವಿಶ್ವವೇ ಕೋವಿಡ್​-19 ಸಾಂಕ್ರಾಮಿಕ ರೋಗದಿಂದ ನಲುಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದೆ. ಕೊರೋನಾ ಕಾರಣದಿಂದಾಗಿ ಈ ವರ್ಷ ಈ ದಿನವನ್ನು ವರ್ಚುಯಲ್ ಮಾಧ್ಯಮದ ಮೂಲಕ, ಸೋಶಿಯಲ್ ಮೀಡಿಯಾ ಜಾಗೃತಿ ಅಭಿಯಾನಗಳು ಹಾಗೂ ಪೋಸ್ಟ್​ಗಳ ಮೂಲಕ ಆಚರಿಸಲಾಗುತ್ತಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿ ಯೊಬ್ಬರು ಕೈ ಜೋಡಿಸಬೇಕು.

First published: