Rath Yatra 2021: ಒಡಿಶ್ಶಾದ ಜಗನ್ನಾಥ ರಥಯಾತ್ರೆ.. ಹೇಗೆ ನಡೆಯುತ್ತೆ ಈ ಆಚರಣೆ? ಇದರ ಮಹತ್ವೇನು?

Rath Yatra 2021: ಯಾತ್ರೆಯ ರಥಗಳನ್ನು ಪ್ರತೀ ವರ್ಷ ನಿರ್ಮಿಸಲಾಗುತ್ತಿದ್ದು ಒಂದೇ ಒಂದು ಲೋಹದ ತುಂಡನ್ನು ರಥದ ನಿರ್ಮಾಣಕ್ಕೆ ಬಳಸುವುದಿಲ್ಲ.ಸಂಪೂರ್ಣ ರಥವನ್ನು ಮರದಿಂದ ತಯಾರಿಸಲಾಗುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

Rath Yatra 2021: ಭಾರತವು ಶ್ರೀಮಂತ ಪರಂಪರೆ ಮತ್ತು ಐತಿಹಾಸಿಕ ವೈವಿಧ್ಯತೆಗಳನ್ನು ಹೊಂದಿರುವ ದೇಶ. ಭಾರತದಲ್ಲಿ ವಾಸಿಸುತ್ತಿರುವ ಜನರು, ಇಲ್ಲಿರುವ ಧರ್ಮಗಳು, ಭಾಷೆಗಳು ಮೊದಲಾದವುಗಳೊಂದಿಗೆ ಇದು ವಿಶಾಲ ವೈವಿಧ್ಯತೆಯನ್ನು ಹೊಂದಿರುವ ದೇಶವಾಗಿದೆ. ಇತರ ದೇಶಗಳಿಂದ ಭಾರತವನ್ನು ಪ್ರತ್ಯೇಕಗೊಳಿಸುವ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಇಲ್ಲಿ ಆಚರಿಸುವ ಹಬ್ಬಗಳು, ಆಚರಣೆಗಳು ಮತ್ತು ಉತ್ಸಾಹವಾಗಿದೆ. ನಮ್ಮ ದೇಶದಲ್ಲಿ ಹಲವಾರು ಹಬ್ಬಗಳ ಆಚರಣೆ ಇದ್ದರೂ ಪ್ರತಿಯೊಂದು ಹಬ್ಬವನ್ನು ಸಮಾನ ಹುರುಪು ಮತ್ತು ಉತ್ಸಾಹದೊಂದಿಗೆ ಆಚರಿಸಲಾಗುತ್ತದೆ. ನಾವು ಮೊದಲೇ ತಿಳಿಸಿರುವಂತೆ ಅನೇಕ ಉತ್ಸಾಹಭರಿತ ಹಬ್ಬಗಳಲ್ಲಿ ರಥ ಯಾತ್ರೆ ಹಬ್ಬ ಕೂಡ ಒಂದು. ಒರಿಸ್ಸಾದ ಪುರಿಯಲ್ಲಿ ಈ ಹಬ್ಬವನ್ನು ಸ್ಥಳೀಯವಾಗಿ ಆಚರಿಸುತ್ತಾರೆ ಅಂತೆಯೇ ಭಾರತದಾದ್ಯಂತ ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ಹಬ್ಬದ ಆಚರಣೆಗಳನ್ನು ಟಿವಿಯಲ್ಲಿ ಕೂಡ ವೀಕ್ಷಿಸಬಹುದಾಗಿದೆ. ಕೃಷ್ಣನ ಅವತಾರವಾದ ಜಗನ್ನಾಥ ದೇವರನ್ನು ಈ ಹಬ್ಬದಂದು ಸಂಭ್ರಮದಿಂದ ಪೂಜಿಸಲಾಗುತ್ತದೆ.


ರಥಯಾತ್ರೆ ಉತ್ಸವದ ಪೌರಾಣಿಕ ಮಹತ್ವ


ಒಂದಾನೊಂದು ಕಾಲದಲ್ಲಿ, ಶ್ರೀಕೃಷ್ಣನ ರಾಣಿಯರು ಕೃಷ್ಣ ಲೀಲ ಕಥೆಯನ್ನು ಹೇಳುವಂತೆ ರೋಹಿಣಿಯನ್ನು ವಿನಂತಿಸಿದರು. ಕಥೆಯನ್ನು ಹೇಳಲು ರೋಹಿಣಿ ಹಿಂಜರಿದಳು, ಆದರೆ ತುಂಬಾ ಒತ್ತಾಯಮಾಡಿದ ನಂತರ ಕೃಷ್ಣ ಲೀಲ ಕಥೆಯನ್ನು ಹೇಳಲು ರೋಹಿಣಿ ಒಪ್ಪಿದಳು. ಕಥೆಯನ್ನು ಹೇಳಬೇಕೆಂದು ಆಕೆ ನಿರ್ಧರಿಸಿದಾಗ ದ್ವಾರವನ್ನು ಕಾಯುವಂತೆ ಆಕೆ ಸುಭದ್ರೆಯನ್ನು ಕೇಳಿಕೊಂಡಳು. ಒಂದೊಂದೇ ಕಥೆಯನ್ನು ರುಕ್ಮಿಣಿ ಹೇಳುತ್ತಾ ಹೋದಂತೆ, ದ್ವಾರವನ್ನು ಕಾಯುತ್ತಿದ್ದ ಸುಭದ್ರೆಯನ್ನೂ ಒಳಗೊಂಡಂತೆ ಕೊಠಡಿಯಲ್ಲಿದ್ದ ಎಲ್ಲರನ್ನೂ ರುಕ್ಮಿಣಿ ಹೇಳುತ್ತಿದ್ದ ಕಥೆಯು ತಲ್ಲೀನಗೊಳಿಸಿತು.


ಈ ಸಮಯದಲ್ಲಿ ಬಲರಾಮ ಮತ್ತು ಕೃಷ್ಣ ದೇವರು ಅಲ್ಲಿಗೆ ಬಂದಾರು, ಅದನ್ನು ಗಮನಿಸಿದ ಆಕೆ ಅವರನ್ನು ತಡೆಯಲು ಯತ್ನಿಸಿದಳು. ಆದರೆ ಅವರೆಲ್ಲರೂ ಕಥೆಯಲ್ಲಿ ಮಗ್ನರಾದರು ಮತ್ತು ಜೊತೆಯಾಗಿ ನಿಂತುಕೊಂಡು ಸಂತೋಷದಿಂದ ಕಥೆಯನ್ನು ಆಲಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ನಾರದ ಮುನಿಗಳು ಮೂವರು ಒಡಹುಟ್ಟಿದವರು ಜೊತೆಯಾಗಿರುವುದನ್ನು ನೋಡಿದರು ಹಾಗೂ ಭಕ್ತರಿಗೆ ದರ್ಶನವನ್ನು ನೀಡುವಂತೆ ವಿನಂತಿಸಿದರು. ಅವರ ಕೋರಿಕೆಯನ್ನು ಮನ್ನಿಸಿದ ಮೂವರೂ ತದನಂತರ ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ಶಾಶ್ವತವಾಗಿ ಜೊತೆಯಾಗಿ ನೆಲೆಯಾದರು.


ಒಡಹುಟ್ಟಿದವರ ಬಾಂಧವ್ಯದ ಮಹತ್ವವನ್ನು ತಿಳಿಸುವ ರಕ್ಷಾ ಬಂಧನಕ್ಕೆ ಈ ಹಬ್ಬವು ಸಮಾನವಾಗಿದೆ!


ಮುಖ್ಯ ಅಂಶ:-ಯಾತ್ರೆಯ ರಥಗಳನ್ನು ಪ್ರತೀ ವರ್ಷ ನಿರ್ಮಿಸಲಾಗುತ್ತಿದ್ದು ಒಂದೇ ಒಂದು ಲೋಹದ ತುಂಡನ್ನು ರಥದ ನಿರ್ಮಾಣಕ್ಕೆ ಬಳಸುವುದಿಲ್ಲ.ಸಂಪೂರ್ಣ ರಥವನ್ನು ಮರದಿಂದ ತಯಾರಿಸಲಾಗುತ್ತದೆ.ರಥ ಯಾತ್ರೆ2021ದಿನಾಂಕಗಳು


ಚಂದ್ರಮಾನ ಕ್ಯಾಲೆಂಡರ್ ಪ್ರಕಾರ ರಥ ಯಾತ್ರೆ ದಿನಾಂಕಗಳು ಆಷಾಢದ ಎರಡನೇ ಚಂದ್ರಮಾನದಂದು ಆರಂಭಗೊಳ್ಳುತ್ತದೆ ಮತ್ತು ಮುಂದಿನ ಎಂಟು ದಿನಗಳವರೆಗೆ ಆಚರಣೆಗಳು ನಡೆಯುತ್ತವೆ.


ತಿಥಿ ಆರಂಭ– ಜುಲೈ 11 2021 ರಂದು ಬೆಳಗ್ಗೆ 07:47


ತಿಥಿ ಮುಕ್ತಾಯ– ಜುಲೈ 12, 2021 ರಂದು ಬೆಳಗ್ಗೆ 08:19


ಮುಖ್ಯಅಂಶ:ಭಕ್ತರನ್ನು ನೋಡಲು ದೇವರುಗಳನ್ನು ದೇವಾಯದಿಂದ ಹೊರಗೆ ಕರೆದೊಯ್ಯುವ ಏಕಮಾತ್ರ ಸ್ಥಳ ರಥ ಯಾತ್ರೆಯಾಗಿದೆ!ರಥ ಯಾತ್ರೆಯ ನಿಯಮಗಳು ಮತ್ತು ಆಚರಣೆಗಳು


ಹಗ್ಗದಿಂದ ರಥವನ್ನು ಎಳೆಯುವುದು ರಥ ಯಾತ್ರೆಯ ಮುಖ್ಯ ಅಂಶವಾಗಿದೆ. ಹಬ್ಬಕ್ಕೂ ಒಂದೆರಡು ದಿನಗಳ ಮೊದಲು ರಥವನ್ನು ತಯಾರಿಸಲಾಗುತ್ತದೆ.


ಯಾತ್ರೆಯಲ್ಲಿ ನಂದಿಘೋಷ, ತಾಳಧ್ವಜ ಮತ್ತು ದೇವದಳನ ಹೆಸರಿನ ಮೂರು ರಥಗಳನ್ನು ಬಳಸಲಾಗುತ್ತದೆ. ಇವುಗಳು ಕೃಷ್ಣ, ಬಲರಾಮ ಮತ್ತು ಸುಭದ್ರಾರ ರಥಗಳಾಗಿವೆ.


ರಥಗಳು ಹೊರಡುವ ಮೊದಲು ಕೆಲವು ಆಚರಣೆಗಳನ್ನು ನಡೆಸಲಾಗುತ್ತದೆ. ಮೂವರೂ ದೇವತೆಗಳನ್ನು ಮುಂಜಾನೆ ಸ್ನಾನ ಮಾಡಿಸಲಾಗುತ್ತದೆ, ಮತ್ತು ನಂತರ ಮೆರವಣಿಗೆ ಪ್ರಾರಂಭವಾಗುವವರೆಗೆ ಅವುಗಳನ್ನು ಇಡಲಾಗುತ್ತದೆ.


ಅದರ ನಂತರ, ಚೇರಾ ಪಹರಾ ಎಂಬ ಆಚರಣೆಯನ್ನು ನಡೆಸಲಾಗುತ್ತದೆ, ಈ ಆಚರಣೆಯಂತೆ ಒಡಿಸ್ಸಾದ ರಾಜನು ರಥವನ್ನು ಮತ್ತು ಮೆರವಣಿಗೆ ಹೋಗುವ ಮಾರ್ಗವನ್ನು ಸ್ವಚ್ಛಗೊಳಿಸುತ್ತಾನೆ. ಈ ಆಚರಣೆಯು ಸ್ವಾಮಿಯ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂಬುದನ್ನು ಸೂಚಿಸುತ್ತದೆ. ಅವನು ತನ್ನ ಮಕ್ಕಳ ನಡುವೆ ವ್ಯತ್ಯಾಸವನ್ನು ತೋರಿಸುವುದಿಲ್ಲ.
ರಾಜನು ದೇವಾಲಯದ ಒಳಗಿನಿಂದ ದೇವತೆಗಳನ್ನು ಹೊತ್ತುಕೊಂಡು ಬಂದು ಆಯಾ ರಥಗಳಲ್ಲಿ ಇರಿಸುತ್ತಾನೆ. ದೇವರುಗಳು ತಮ್ಮ ಅತ್ತೆಯನ್ನು ನೋಡಲು ಹೊರಡುತ್ತಾರೆ ಮತ್ತು ಅಲ್ಲಿಯೇ ಒಂಬತ್ತು ದಿನಗಳ ಕಾಲ ನೆಲೆಸುತ್ತಾರೆ ಎಂಬ ಪ್ರತೀತಿ ಇದೆ. ಅದರ ನಂತರ ಅವರು ಗುಂಡಿಚ ದೇವಸ್ಥಾನದಿಂದ ಜಗನ್ನಾಥ ದೇವಸ್ಥಾನಕ್ಕೆ ಹಿಂತಿರುಗುತ್ತಾರೆ. ಅವರ ಸ್ವಾಗತವನ್ನು ಹೆಚ್ಚಿನ ಉತ್ಸಾಹದಿಂದ ಆಚರಿಸಲಾಗುತ್ತದೆ, ಮತ್ತು ಹಿಂತಿರುಗುವ ಪ್ರಯಾಣವನ್ನು ಬಹುಡಾ ಯಾತ್ರೆ ಎಂದು ಕರೆಯಲಾಗುತ್ತದೆ. ಈ ರಥಯಾತ್ರೆಯ ಶುಭ ಸಂದರ್ಭದಲ್ಲಿ, ನಿಮಗೆ ಅಪಾರ ಸಂತೋಷ, ಸಮೃದ್ಧಿ ಮತ್ತು ಆರೋಗ್ಯವನ್ನು ನಾವು ಕೋರುತ್ತೇವೆ!

Published by:Soumya KN
First published: