• Home
  • »
  • News
  • »
  • national-international
  • »
  • Shocking: ಇನ್ನೆರಡು ವರ್ಷ ಕಳೆದರೆ ಭಾರತದಲ್ಲಿ ಬದುಕೋಕೆ ಕಷ್ಟ ಆಗುತ್ತಂತೆ! ಕಾರಣವೇನು?

Shocking: ಇನ್ನೆರಡು ವರ್ಷ ಕಳೆದರೆ ಭಾರತದಲ್ಲಿ ಬದುಕೋಕೆ ಕಷ್ಟ ಆಗುತ್ತಂತೆ! ಕಾರಣವೇನು?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಡಿಜಿಟಲ್ ಅಸಮಾನತೆ ಮತ್ತು ಜೀವನ ವೆಚ್ಚದ ಬಿಕ್ಕಟ್ಟು ಮತ್ತು ನೈಸರ್ಗಿಕ ವಿಕೋಪಗಳು ಭಾರತಕ್ಕೆ ಅಲ್ಪಾವಧಿಯಲ್ಲಿ ಮತ್ತು ಮಧ್ಯಮಾವಧಿಯಲ್ಲಿ ಪ್ರಮುಖ ಅಪಾಯಗಳಾಗಿವೆ ಎಂದು ವರದಿ ಹೇಳಿದೆ. ಆದರೆ ಮುಂದಿನ ಎರಡು ವರ್ಷಗಳಲ್ಲಿ, ಜೀವನ ವೆಚ್ಚದ ಬಿಕ್ಕಟ್ಟು ದೊಡ್ಡ ಅಪಾಯಗಳಲ್ಲಿ ಒಂದಾಗಲಿದೆ ಎಂದು ವರದಿ ಹೇಳಿದೆ.

ಮುಂದೆ ಓದಿ ...
  • Trending Desk
  • Last Updated :
  • New Delhi, India
  • Share this:

ಈಗಾಗಲೇ ಸಾಂಕ್ರಾಮಿಕ ಕೋವಿಡ್(Corona Virus)‌ ಜಗತ್ತನ್ನೇ ಕಂಗೆಡಿಸಿದೆ. ಇದರ ಜೊತೆಗೆ ಹವಾಮಾನ ಬದಲಾವಣೆ, ಆರ್ಥಿಕ ಬಿಕ್ಕಟ್ಟು(Economy Crisis), ಆರ್ಥಿಕ ಹಿಂಜರಿತದಂಥ ಜಾಗತಿಕ ಸಮಸ್ಯೆಗಳು(Global Problems) ಎದುರಾಗಿದೆ. ಈ ಮಧ್ಯೆ ಭಾರತದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಜೀವನ ವೆಚ್ಚವು ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಲಿದೆ.


ವರ್ಲ್ಡ್‌ ಎಕನಾಮಿಕ್‌ ಫೋರಮ್‌ ಇತ್ತೀಚಿಗೆ ಈ ಕುರಿತ ವರದಿಯನ್ನು ಬಿಡುಗಡೆ ಮಾಡಿದೆ. "ಗ್ಲೋಬಲ್ ರಿಸ್ಕ್ ರಿಪೋರ್ಟ್ 2023" ಎಂಬ ಶೀರ್ಷಿಕೆಯ ಈ ವರದಿಯ ಪ್ರಕಾರ ಭಾರತದಲ್ಲಿ ಜೀವನ ವೆಚ್ಚದ ಬಿಕ್ಕಟ್ಟು ಹೊರಹೊಮ್ಮಬಹುದು ಎಂಬುದಾಗಿ ಹೇಳಲಾಗಿದೆ.


ಅಲ್ಪ ಹಾಗೂ ಮಧ್ಯಮ ಅವಧಿಯ ಅಪಾಯಗಳು


ಡಿಜಿಟಲ್ ಅಸಮಾನತೆ ಮತ್ತು ಜೀವನ ವೆಚ್ಚದ ಬಿಕ್ಕಟ್ಟು ಮತ್ತು ನೈಸರ್ಗಿಕ ವಿಕೋಪಗಳು ಭಾರತಕ್ಕೆ ಅಲ್ಪಾವಧಿಯಲ್ಲಿ ಮತ್ತು ಮಧ್ಯಮಾವಧಿಯಲ್ಲಿ ಪ್ರಮುಖ ಅಪಾಯಗಳಾಗಿವೆ ಎಂದು ವರದಿ ಹೇಳಿದೆ. ಆದರೆ ಮುಂದಿನ ಎರಡು ವರ್ಷಗಳಲ್ಲಿ, ಜೀವನ ವೆಚ್ಚದ ಬಿಕ್ಕಟ್ಟು ದೊಡ್ಡ ಅಪಾಯಗಳಲ್ಲಿ ಒಂದಾಗಲಿದೆ ಎಂದು ವರದಿ ಹೇಳಿದೆ.


ಅಲ್ಪಾವಧಿ ಅಪಾಯಗಳು


ನೈಸರ್ಗಿಕ ವಿಕೋಪಗಳು ಮತ್ತು ಹವಾಮಾನ ವೈಪರೀತ್ಯಗಳು, ಭೌಗೋಳಿಕ-ಆರ್ಥಿಕ ಮುಖಾಮುಖಿಗಳು, ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿ ವಿಫಲವಾಗುವುದು ಮತ್ತು ದೊಡ್ಡ ಪ್ರಮಾಣದ ಪರಿಸರ ಹಾನಿಯಂಥ ಘಟನೆಗಳು ಮುಂತಾದವು ಭಾರತಕ್ಕೆ ಕೆಲವು ಅಲ್ಪಾವಧಿಯ ಅಪಾಯಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.


ಇದನ್ನೂ ಓದಿ: Union Budget: ಬಜೆಟ್​ನಲ್ಲಿ ಈ 5 ಪ್ರಮುಖ ಘೋಷಣೆ ಮೇಲಿದೆ ಎಲ್ಲರ ಕಣ್ಣು!


ದೀರ್ಘಾವಧಿಯ ಅಪಾಯಗಳು


ಅದೇ ಸಮಯದಲ್ಲಿ, ದೀರ್ಘಾವಧಿಯ ಆಧಾರದ ಮೇಲೆ, ಅಂದರೆ 10 ವರ್ಷಗಳ ಅವಧಿಯಲ್ಲಿ ಹವಾಮಾನ ಬದಲಾವಣೆ, ಜೀವವೈವಿಧ್ಯದ ನಷ್ಟ, ದೊಡ್ಡ ಪ್ರಮಾಣದ ವಲಸೆ, ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಿಕ್ಕಟ್ಟುಗಳನ್ನು ತಗ್ಗಿಸುವಲ್ಲಿ ವಿಫಲವಾಗುವಿಕೆಯ ಅಪಾಯಗಳನ್ನು ಎದುರಿಸಬಹುದು ಎಂದು ಹೇಳಲಾಗಿದೆ.


ಮತ್ತೆ ಮರುಕಳಿಸುತ್ತಿವೆ ಹಳೆಯ ಜಾಗತಿಕ ಬಿಕ್ಕಟ್ಟುಗಳು


ಪ್ರಪಂಚವು ಸಂಪೂರ್ಣವಾಗಿ ಹೊಸ ಮತ್ತು ಹಳೆಯ ಸಮಸ್ಯೆಗಳನ್ನು ಮತ್ತೆ ಎದುರಿಸುತ್ತಿದೆ. ಹೌದು, ನಾವು ಜಾಗತಿಕವಾಗಿ "ಹಳೆಯ" ಅಪಾಯಗಳು ಮತ್ತೆ ಮರಳಿರುವುದನ್ನು ನೋಡುತ್ತಿದ್ದೇವೆ.


ಅದರಲ್ಲೂ ಪ್ರಮುಖವಾಗಿ ಹಣದುಬ್ಬರ, ಜೀವನ ವೆಚ್ಚದ ಬಿಕ್ಕಟ್ಟು, ವ್ಯಾಪಾರ ಯುದ್ಧಗಳು, ಉದಯೋನ್ಮುಖ ಮಾರುಕಟ್ಟೆಗಳಿಂದ ಬಂಡವಾಳದ ಹೊರಹರಿವು, ವ್ಯಾಪಕವಾದ ಸಾಮಾಜಿಕ ಅಶಾಂತಿ, ಭೌಗೋಳಿಕ ರಾಜಕೀಯ ಮುಖಾಮುಖಿ ಮತ್ತು ಪರಮಾಣು ಯುದ್ಧದ ಭೀತಿಯಂಥ ಅಪಾಯಗಳನ್ನು ಮತ್ತೆ ನೋಡುತ್ತಿದ್ದೇವೆ.


ಅಲ್ಲದೇ ಸಾಲದ ಹೆಚ್ಚಳ, ಕಡಿಮೆ ಅಭಿವೃದ್ಧಿ, ಕಡಿಮೆ ಜಾಗತಿಕ ಹೂಡಿಕೆ, ದಶಕಗಳ ಪ್ರಗತಿಯ ನಂತರ ಮಾನವ ಅಭಿವೃದ್ಧಿಯಲ್ಲಿ ಕುಸಿತ ಮುಂತಾದ ಅಂಶಗಳಿಂದ ಈ ಅಪಾಯಗಳು ಹೆಚ್ಚಾಗುತ್ತದೆ ಎಂಬುದಾಗಿ ವರದಿ ಹೇಳಿದೆ.


ಭೌಗೋಳಿಕ ರಾಜಕೀಯ ಪೈಪೋಟಿಗಳು ಮತ್ತು ಆಂತರಿಕ ನಿಲುವುಗಳು ಆರ್ಥಿಕ ನಿರ್ಬಂಧಗಳನ್ನು ಹೆಚ್ಚಿಸುತ್ತವೆ. ಇದರಿಂದ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಅಪಾಯಗಳು ಇನ್ನಷ್ಟು ಹೆಚ್ಚಾಗುತ್ತದೆ ಎಂಬುದಾಗಿ ಹೇಳಲಾಗಿದೆ.


ಹವಾಮಾನ ಬದಲಾವಣೆ ಪ್ರಮುಖ ಅಪಾಯ!


ಹವಾಮಾನ ಬದಲಾವಣೆಯು ಜಾಗತಿಕ ಆರ್ಥಿಕತೆ ಎದುರಿಸುತ್ತಿರುವ ಪ್ರಮುಖ ಅಪಾಯಗಳಲ್ಲಿ ಒಂದಾಗಿದೆ ಎಂಬುದಾಗಿ ವರದಿಯಲ್ಲಿ ಹೇಳಲಾಗಿದೆ.


"ಪ್ರಕೃತಿಯ ನಷ್ಟ ಮತ್ತು ಹವಾಮಾನ ಬದಲಾವಣೆಯು ಅಂತರ್ಗತವಾಗಿ ಪರಸ್ಪರ ಸಂಬಂಧ ಹೊಂದಿದೆ. ಪ್ರಕೃತಿಯ ನಾಶವಾದರೆ ಹವಾಮಾನದಲ್ಲಿ ಏರಿಳಿವಾಗುತ್ತದೆ.


ಹವಾಮಾನ ಬದಲಾವಣೆಯ ಪರಿಣಾಮಗಳು, ಜೀವವೈವಿಧ್ಯದ ನಷ್ಟ ಮುಂತಾದವು ಪರಿಸರ ವ್ಯವಸ್ಥೆಯ ಕುಸಿತವನ್ನು ವೇಗಗೊಳಿಸುತ್ತದೆ.



ಹವಾಮಾನವು ದುರ್ಬಲ ಆರ್ಥಿಕತೆಗಳಲ್ಲಿ ಆಹಾರ ಸರಬರಾಜು ಮತ್ತು ಜೀವನೋಪಾಯಗಳು, ನೈಸರ್ಗಿಕ ವಿಪತ್ತುಗಳ ಪರಿಣಾಮಗಳನ್ನು ಹೆಚ್ಚಿಸುತ್ತದೆ" ಎಂದೂ ವರದಿಯಲ್ಲಿ ಹೇಳಲಾಗಿದೆ.


ಒಟ್ಟಾರೆಯಾಗಿ ಭಾರತದಲ್ಲಿ ಜೀವನ ವೆಚ್ಚ ದೊಡ್ಡ ಬಿಕ್ಕಟ್ಟಾದರೆ ಜಾಗತಿಕವಾಗಿಯೂ ಅನೇಕ ಸಮಸ್ಯೆಗಳು ದೊಡ್ಡ ಬಿಟ್ಟಕ್ಕಾಗುತ್ತಿವೆ. ಆದ್ದರಿಂದ ನಮ್ಮಲ್ಲಿ ಜೀವನ ವೆಚ್ಚ ದುಬಾರಿಯಾಗಿರುವುದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ.


ದೊಡ್ಡ ದೊಡ್ಡ ನಗರಗಳಲ್ಲಿ ಜನರು ಅದರ ಬಿಸಿಯನ್ನು ಅನುಭವಿಸುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅದು ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸುವುದರಿಂದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಈಗಿನಿಂದಲೇ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

Published by:Latha CG
First published: