World Coconut Day 2020 – ಇವತ್ತು ವಿಶ್ವ ತೆಂಗು ದಿನ – ಕಲ್ಪವೃಕ್ಷದ ವಿಶೇಷತೆಗಳೇನು?

ತೆಂಗಿನ ಮರ

ತೆಂಗಿನ ಮರ

ಇಂಡೋನೇಷ್ಯಾದಲ್ಲಿ ಹುಟ್ಟಿ ಭಾರತ ಹಾಗೂ ಇತರ ದೇಶಗಳ ಮೂಲಕ ವಿಶ್ವಾದ್ಯಂತ ಇವತ್ತು ತೆಂಗು ಹರಡಿದೆ. ಬಹುತೇಕ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಭಾರತೀಯರ ಪಾಲಿಗೆ ಅಕ್ಷರಶಃ ಕಲ್ಪವೃಕ್ಷವಾಗಿದೆ.

  • News18
  • 3-MIN READ
  • Last Updated :
  • Share this:

ಸೆಪ್ಟೆಂಬರ್ 2 – ವಿಶ್ವ ತೆಂಗು ದಿನವಾಗಿ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ದಕ್ಷಿಣ ಏಷ್ಯಾ ಮತ್ತು ಮಧ್ಯಪೂರ್ವ ಏಷ್ಯನ್ ದೇಶಗಳಲ್ಲಿ ಜನ್ಮತಳೆದ ತೆಂಗು ಇವತ್ತು ಜಗತ್ತಿನ ಬಹುತೇಕ ದೇಶಗಳಲ್ಲಿ ಹರಡಿ ಹೋಗಿದೆ. ಜನಜೀವನದ ಭಾಗವಾಗಿದೆ. ಅನೇಕ ರೈತರ ಜೀವನಕ್ಕೆ ಆಧಾರವಾಗಿದೆ. ವಿಶಿಷ್ಟ ಬಗೆಯ ಭಕ್ಷ್ಯ ಭೋಜನಗಳಿಗೆ ಬಳಕೆಯಾಗುತ್ತದೆ.


ಭಾರತದಲ್ಲಿ ತೆಂಗಿನಮರಕ್ಕೆ ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ. ಇದರ ಒಂದೊಂದು ಭಾಗವೂ ಕೂಡ ಬಹಳ ಉಪಯುಕ್ತವಾದುದು. ತೆಂಗಿನ ಗರಿಯಿಂದ ಹಿಡಿ ಎಳನೀರು, ಕಾಯಿಯವರೆಗೂ ಪ್ರತಿಯೊಂದೂ ಉಪಯೋಗಕ್ಕೆ ಬರುತ್ತದೆ. ತೆಂಗಿನ ಮರದಿಂದ ಎಳನೀರು ಮತ್ತು ತೆಂಗಿನಕಾಯಿ ನೇರವಾಗಿ ಸಿಗುವ ಫಲ. ಮರದಿಂದ ಗಟ್ಟಿಯಾದ ದಾರ ಸೇರಿ ಹಲವು ವಸ್ತುಗಳನ್ನ ತಯಾರಿಸಬಹುದು. ತೆಂಗಿನ ಗರಿಗಳು ತೋರಣ, ಗುಡಿಸಲು ಇತ್ಯಾದಿ ನಿರ್ಮಾಣಕ್ಕೆ ಬಳಕೆಯಾಗುತ್ತವೆ. ಒಣಗಿದ ಗರಿಗಳು ಹಳ್ಳಿಗಳಲ್ಲಿ ತೀರಾ ಇತ್ತೀಚಿನವರೆಗೂ ಸೌದೆಯಾಗಿ ಬಳಕೆಯಾಗುತ್ತಿದ್ದವು. ಈಗಲೂ ಕೆಲ ಕಡೆ ಇವುಗಳನ್ನ ಒಲೆಗೆ ಬಳಸುತ್ತಾರೆ.


ಇದನ್ನೂ ಓದಿ: ಕಮಲದ ಹೂ ಬಿಟ್ಟು ಕೈ ಹಿಡಿಯಲು ಹೋದರಾ ಸ್ಯಾಂಡಲ್ವುಡ್ ಚೆಲುವೆ ತುಪ್ಪದ ಹುಡುಗಿ?


ತೆಂಗಿನ ಎಣ್ಣೆ, ತೆಂಗಿನ ಹಾಲು, ತೆಂಗಿನ ಕಾಯಿ ಇವು ಭಾರತ ಸೇರಿ ಹಲವು ಏಷ್ಯನ್ ದೇಶಗಳ ಅಡುಗೆಯಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಕರಾವಲಿ ಪ್ರದೇಶಗಳಲ್ಲಿ ಅಡುಗೆಗೆ ತೆಂಗಿನ ಎಣ್ಣೆಯನ್ನೇ ಬಳಸುತ್ತಾರೆ. ತೆಂಗಿನ ಎಣ್ಣೆ ತಲೆಗೂ ಹಚ್ಚಿಕೊಳ್ಳುತ್ತಾರೆ. ಅಂತೆಯೇ, ತೆಂಗಿನ ಮರಕ್ಕೆ ಕಲ್ಪ ವೃಕ್ಷ ಎಂದೇ ಬಣ್ಣಿಸುವುದುಂಟು.


ದಕ್ಷಿಣ ಭಾರತ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ತೆಂಗಿನ ಮರ ಹೆಚ್ಚು ಬೆಳೆಯುತ್ತಾರೆ. ತುಮಕೂರು ಜಿಲ್ಲೆಯಲ್ಲಿ ರೈತರು ಅತಿ ಹೆಚ್ಚು ತೆಂಗು ಬೆಳೆಯುತ್ತಾರೆ. ಇದೇ ಕಾರಣಕ್ಕೆ ತುಮಕೂರಿಗೆ ಕಲ್ಪತರು ನಾಡು ಎನ್ನುತ್ತಾರೆ.

First published: