• Home
  • »
  • News
  • »
  • national-international
  • »
  • Karnataka: ಕರ್ನಾಟಕದ ಜಲಾನಯನ ಮಾದರಿ ಅಭ್ಯಸಿಸಲು ಬರಲಿದ್ದಾರೆ ಸಬ್-ಸಹಾರನ್ ಅಧಿಕಾರಿಗಳು; ರಾಜ್ಯದ ಮಾದರಿಗೆ ವಿಶ್ವಬ್ಯಾಂಕ್ ಫಿದಾ!

Karnataka: ಕರ್ನಾಟಕದ ಜಲಾನಯನ ಮಾದರಿ ಅಭ್ಯಸಿಸಲು ಬರಲಿದ್ದಾರೆ ಸಬ್-ಸಹಾರನ್ ಅಧಿಕಾರಿಗಳು; ರಾಜ್ಯದ ಮಾದರಿಗೆ ವಿಶ್ವಬ್ಯಾಂಕ್ ಫಿದಾ!

REWARD ಯೋಜನೆ ಅನುಷ್ಠಾನ

REWARD ಯೋಜನೆ ಅನುಷ್ಠಾನ

ವಿಶ್ವ ಬ್ಯಾಂಕಿನಿಂದ ಅಧಿಕಾರಿಗಳ ತಂಡವೊಂದು ಜನವರಿ 9 ರಿಂದ 11ರ ವರೆಗೆ ರಾಜ್ಯಕ್ಕೆ ಭೇಟಿ ನೀಡಿದ್ದು ಇಲ್ಲಿ REWARD ಯೋಜನೆಯನ್ನು ಯಾವ ರೀತಿ ಅನುಷ್ಠಾನಗೊಳಿಸಲಾಗಿದೆ ಎಂಬುದರ ಬಗ್ಗೆ ರಾಜ್ಯ ಅಧಿಕಾರಿಗಳಿಂದ ಮಾಹಿತಿ ಪಡೆದಿರುವುದಾಗಿ ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತಾರಾದ ಎಂ.ವಿ. ವೆಂಕಟೇಶ್ ಅವರು ತಿಳಿಸಿದ್ದಾರೆ.

ಮುಂದೆ ಓದಿ ...
  • Trending Desk
  • 2-MIN READ
  • Last Updated :
  • Share this:

ಕೃಷಿ ಎಂಬುದು (Agriculture) ಭಾರತದ ಬೆನ್ನೆಲುಬಾದ ಕ್ಷೇತ್ರವಾಗಿದೆ, ಅಂತೆಯೇ ಭಾರತವನ್ನು (India) ಕೃಷಿ ಪ್ರಧಾನ ದೇಶ ಎಂದು ಕರೆಯುವುದನ್ನು ನಾವೆಲ್ಲಾ ಕೇಳಿಯೇ ಇರುತ್ತೇವೆ. ಆದರೆ, ಕೃಷಿಯಲ್ಲಿ ನೀರಾವರಿ (Watershed Model) ಕೃಷಿ ಭೂಮಿ ಹಾಗೂ ಮಳೆ ಅವಲಂಬಿತ ಕೃಷಿ ಭೂಮಿ (Agriculture Land) ಇರುವುದನ್ನು ಕಾಣಬಹುದು. ನೀರಾವರಿ ಕೃಷಿ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯಲು ನೀರಿನ ಸೌಕರ್ಯವಿರುತ್ತದೆ, ಆದರೆ ಮಳೆ ಅವಲಂಬಿತ ಪ್ರದೇಶದಲ್ಲಿ ಮಳೆನೀರು ಹಾಗೂ ಆ ಮೂಲಕ ಜಲಾನಯನ ಪ್ರದೇಶಗಳು ಭರ್ತಿಯಾದಾಗ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತವೆ.


ಆದರೆ ಈ ನಿಟ್ಟಿನಲ್ಲಿ ಕೃಷಿಯಲ್ಲಿ ಹೆಚ್ಚಿನ ಚುರುಕು ಅಥವಾ ಕೃಷಿಯನ್ನು ಇನ್ನಷ್ಟು ಚೇತರಿಕೆಗೊಳ್ಳುವಂತಹ ಪಥದಲ್ಲಿ ಸಾಗಿಸಲು ಕರ್ನಾಟಕವು ರೆಜುವಿನೇಟಿಂಗ್ ವಾಟರ್ಶೆಡ್ ಫಾರ್ ಅಗ್ರಿಕಲ್ಚರಲ್ ರೆಸಿಲಿಯೆನ್ಸ್ ಥ್ರೂ ಇನ್ನೊವೇಟಿವ್ ಡೆವೆಲಪ್ಮೆಂಟ್ (REWARD) ಯೋಜನೆಯಡಿಯಲ್ಲಿ ಸಾಕಷ್ಟು ಅದ್ಭುತವಾದ ಕೆಲಸ ಮಾಡುತ್ತಿದೆ ಎನ್ನಬಹುದು.


ಕರ್ನಾಟಕದ ಯೋಜನೆಯಿಂದ ವಿಶ್ವ ಬ್ಯಾಂಕ್ ಪ್ರಭಾವಿತ


ಸದ್ಯ, ಕೃಷಿ ಚೇತರಿಕೆ ಅಥವಾ ಪ್ರಗತಿಗಾಗಿ ನವೀನವಾಗಿ ಅಭಿವೃದ್ಧಿಪಡಿಸಲಾದ ಕಾರ್ಯತಂತ್ರಗಳ ಮೂಲಕ ಜಲಾನಯನ ಪ್ರದೇಶಗಳನ್ನು ಪುನರುಜ್ಜೀವನ ಗೊಳಿಸುವಂತಹ ಕರ್ನಾಟಕದ ಯೋಜನೆಯಿಂದ ವಿಶ್ವ ಬ್ಯಾಂಕ್ ಸಾಕಷ್ಟು ಪ್ರಭಾವಿತಗೊಂಡಿದೆ.


REWARD ಯೋಜನೆ ಅನುಷ್ಠಾನ


ಅಷ್ಟೇ ಅಲ್ಲದೆ, ಅದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಉಪ-ಸಹಾರಾ ದೇಶಗಳ ಕೃಷಿ ಅಧಿಕಾರಿಗಳು ತಿಳಿದುಕೊಳ್ಳುವಂತೆ ಅವರನ್ನು ಕರ್ನಾಟಕಕ್ಕೆ ಕಳುಹಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.


REWARD ಯೋಜನೆಯ ಮಾಹಿತಿ ಪಡೆಯಲಿದ್ದಾರೆ ವಿಶ್ವ ಬ್ಯಾಂಕ್ ಅಧಿಕಾರಿಗಳು


ಈಗಾಗಲೇ ಈ ನಿಟ್ಟಿನಲ್ಲಿ ಬ್ಯಾಂಕ್ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎನ್ನಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವ ಬ್ಯಾಂಕಿನಿಂದ ಅಧಿಕಾರಿಗಳ ತಂಡವೊಂದು ಜನವರಿ 9 ರಿಂದ 11ರ ವರೆಗೆ ರಾಜ್ಯಕ್ಕೆ ಭೇಟಿ ನೀಡಿದ್ದು ಇಲ್ಲಿ REWARD ಯೋಜನೆಯನ್ನು ಯಾವ ರೀತಿ ಅನುಷ್ಠಾನಗೊಳಿಸಲಾಗಿದೆ ಎಂಬುದರ ಬಗ್ಗೆ ರಾಜ್ಯ ಅಧಿಕಾರಿಗಳಿಂದ ಮಾಹಿತಿ ಪಡೆದಿರುವುದಾಗಿ ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತಾರಾದ ಎಂ.ವಿ. ವೆಂಕಟೇಶ್ ಅವರು ತಿಳಿಸಿದ್ದಾರೆ.


ಇದನ್ನೂ ಓದಿ: Uttara Kannada: ಕರಾವಳಿ ಕೃಷಿಕರೇ ಇಲ್ನೋಡಿ, ಆ್ಯಪಲ್ ಬೇರ್​ ಬೆಳೆಸಿ ಭಾರೀ ಲಾಭ ಗಳಿಸಿ!


ವಿಶ್ವ ಬ್ಯಾಂಕ್ ಅಧಿಕಾರಿಗಳ ತಂಡವು ಸದ್ಯ ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲಾದ ಮಾದರಿಯ ಬಗ್ಗೆ ಸಮಗ್ರವಾಗಿ ತಿಳಿದುಕೊಂಡಿದ್ದು ಇದು ಉಪ ಸಹಾರಾವಲಯದ ದೇಶಗಳದ ರೈತರಿಗೆ ಹೆಚ್ಚು ಅನುಕೂಲಕರವಾಗಿ ಪರಿಣಮಿಸಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ವೆಂಕಟೇಶ್ ತಿಳಿಸಿದ್ದಾರೆ.


ಆಹಾರ ಕೊರತೆಯಿಂದಾಗಿ ಬಳಲುತ್ತಿವೆ  ಹಲವು ದೇಶಗಳು


ಏಕೆಂದರೆ, ಆ ವಲಯದ ದೇಶಗಳು ಸಾಕಷ್ಟು ಪ್ರಮಾಣದ ಕೃಷಿ ಚಟುವಟಿಕೆ ಹಾಗೂ ಆ ಮೂಲಕ ಬೆಳೆಗಳಿಲ್ಲದೆ ಆಹಾರ ಕೊರತೆಯಿಂದಾಗಿ ಬಳಲುತ್ತಿವೆ ಎಂಬುದು ಬ್ಯಾಂಕ್ ತಂಡದ ಅನಿಸಿಕೆಯಾಗಿದೆ ಎಂದು ವೆಂಕಟೇಶ್ ಹೇಳಿದ್ದಾರೆ.


ದಿ ಹಿಂದು ಪತ್ರಿಕೆಯೊಂದಿಗೆ ಮಾತನಾಡುತ್ತ ಆಯುಕ್ತಾರಾದ ಡಾ. ವೆಂಕಟೇಶ್ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ವಿಶ್ವ ಬ್ಯಾಂಕ್ ಅಧಿಕಾರಿಗಳ ತಂಡವು ರಾಜ್ಯದ ವಿಜ್ಞಾನ ಆಧಾರಿತ ವಿಧಾನಗಳ ಮೂಲಕ ಜಲಾನಯನ ಪುನರುಜ್ಜೀವನಗೊಳಿಸುವ ಮಾದರಿ ಹಾಗೂ ಹವಾಮಾನ ಆಧಾರಿತ ಕೃಷಿ ಅಭ್ಯಾಸಗಳ ಅನುಷ್ಠಾನವನ್ನು ಕಂಡು ಸಾಕಷ್ಟು ಪ್ರಭಾವಿತರಾಗಿರುವುದಾಗಿ ಹೇಳಿದ್ದಾರೆ.


ಈಗಾಗಲೇ, ವಿಶ್ವಬ್ಯಾಂಕ್, ವಿಜ್ಞಾನಾಧಾರಿತ ಜಲಾಯನಯನ ಅಭಿವೃದ್ಧಿಯ ಮಾದರಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯವನ್ನು "ಲೈಟ್ ಹೌಸ್ ಪಾಲುದಾರ" ಎಂದು ಗುರುತಿಸಿದೆ.


REWARD ಯೋಜನೆ ಅನುಷ್ಠಾನ


ಕೃಷಿಯಲ್ಲಿ ಜಲಾನಯನ ಪ್ರದೇಶಗಳ ನಿರ್ವಹಣೆ


ಅಲ್ಲದೆ, ಕರ್ನಾಟಕ ರಾಜ್ಯವು ಈ ರಿವಾರ್ಡ್ ಯೋಜನೆಯಡಿ ಬರುವ 14 ಲಕ್ಷ ಹೆಕ್ಟೇರ್ ಭೂಮಿಯ ಸಕಲ ವಿವರಗಳನ್ನೊಳಗೊಂಡ ಲ್ಯಾಂಡ್ ರಿಸೌರ್ಸ್ ಇನ್ವೆಂಟರಿಯನ್ನು ಅಭಿವೃದ್ಧಿಪಡಿಸಿರುವ ಮೊದಲ ರಾಜ್ಯವಾಗಿದೆ ಎಂದು ವೆಂಕಟೇಶ್ ತಿಳಿಸುತ್ತಾರೆ.


ಮುಂದುವರೆಯುತ್ತ ಅವರು, ಇನ್ನು ಲ್ಯಾಂಡ್ ರಿಸೌರ್ಸ್ ಇನ್ವೆಂಟರಿ ಎಂಬುದು ಕೈಪಿಡಿ ಎಂಬಂತಿದ್ದು ಹಲವು ಉಪಯುಕ್ತ ಮಾಹಿತಿಗಳನ್ನು ಒಳಗೊಂಡಿದೆ.


ಉದಾಹರಣೆಗೆ, ಕೃಷಿ ಚಟುವಟಿಕೆ, ಲಭ್ಯವಿರುವ ಅಂತರ್ಜಲದ ಪ್ರಮಾಣ, ಬೆಳೆಯಲಾಗುವ ಬೆಳೆಗಳ ಪ್ರಕಾರಗಳು, ಮಣ್ಣಿನ ಗುಣಮಟ್ಟ, ಯಾವ ರೀತಿಯ ಅಥವಾ ಪ್ರಕಾರದ ಭೂಮಿ ಹಾಗೂ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಯಾವ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸುತ್ತದೆ ಎಂದು ವಿವರಿಸುತ್ತಾರೆ.


ಇದನ್ನೂ ಓದಿ: Dakshina Kannada: ಅಡಿಕೆ, ತೆಂಗು ಕೊಯ್ಯೋದು ಇನ್ಮೇಲೆ ಸುಲಭ, ಕೃಷಿ ಕಾರ್ಮಿಕರ ಕೊರತೆಗೆ ರೈತರಿಂದಲೇ ಪರಿಹಾರ!


ಕೃಷಿಯಲ್ಲಿ ಜಲಾನಯನ ಪ್ರದೇಶಗಳ ನಿರ್ವಹಣೆ ಪ್ರಮುಖವಾದ ಅಂಶವಾಗಿದೆ. ಇದರ ಮಹತ್ವವನ್ನು ಅರಿತಿರುವ ಕರ್ನಾಟಕ ರಾಜ್ಯವು ಈಗಾಗಲೇ ಅದಕ್ಕಾಗಿಯೇ ಸೆಂಟರ್ ಫಾರ್ ಎಕ್ಸಲೆನ್ಸ್ ಅನ್ನು ಸ್ಥಾಪಿಸಿದೆ.


ಈ ಕೇಂದ್ರದ ಮೂಲಕ ಇತರೆ ರಾಜ್ಯಗಳ ಅಧಿಕಾರಿಗಳಿಗೂ ಜಲಾನಯನ ಪ್ರದೇಶಗಳ ನಿರ್ವಹಣೆ ತರಬೇತಿಗಳನ್ನು ಒದಗಿಸಲಾಗುತ್ತದೆ. ಬೆಂಗಳೂರಿನ ಯುನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಆವರಣದಲ್ಲಿ ಪ್ರಸ್ತುತ ಈ ಕೇಂದ್ರವು ಉಪಸ್ಥಿತವಿದೆ.


ಸಬ್-ಸಹಾರನ್ ದೇಶಗಳೆಂದರೆ ಯಾವುವು?


ಸಹಾರಾ ಎಂಬುದು ಒಂದು ದೊಡ್ಡ ಮರಭೂಮಿ ಪ್ರದೇಶವಾಗಿದ್ದು ಆಫ್ರಿಕಾ ಖಂಡದಲ್ಲಿ ಉಪಸ್ಥಿತವಿದೆ. ಈ ಮರಭೂಮಿಯ ದಕ್ಷಿಣದಲ್ಲಿರುವ ಹಲವಾರು ದೇಶಗಳನ್ನು ಉಪ-ಸಹಾರಾ ವಲಯದ ಅಥವಾ ಸಬ್ ಸಹಾರನ್ ದೇಶಗಳೆಂದು ಕರೆಯುತ್ತಾರೆ. ಅಂಗೋಲಾ, ಬೆನಿನ್, ಬೊಟ್ಸ್ ವಾನಾ, ಕ್ಯಾಮರೂನ್, ಬುರುಂಡಿ ಮುಂತಾದ ಹಲವಾರು ದೇಶಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ.

Published by:Sumanth SN
First published: