AIDS Day : ಡಿ.1 ವಿಶ್ವ ಏಡ್ಸ್ ದಿನ , ಅಸಮಾನತೆ ಕೊನೆಗೊಳಿಸಿ, ಏಡ್ಸ್ ನಿರ್ಮೂಲನೆ ಮಾಡಿ

World AIDS Day Importance :ಪ್ರತಿ ವರ್ಷ ವಿಶ್ವ ಏಡ್ಸ್ ದಿನವನ್ನ ಒಂದೊಂದು ಘೋಷವಾಕ್ಯ ಇಟ್ಟುಕೊಂಡು ಆಚರಣೆ ಮಾಡಲಾಗುತ್ತದೆ. ಅದರಂತೆ ಈ ವರ್ಷ ‘ಅಸಮಾನತೆಗಳನ್ನು ಕೊನೆಗೊಳಿಸಿ. ಏಡ್ಸ್ ಅನ್ನು ಕೊನೆಗೊಳಿಸಿ’ ಎಂಬುದು ವಿಶ್ವ ಏಡ್ಸ್ ದಿನದ ವಿಷಯವಾಗಿದೆ.

ಏಡ್ಸ್

ಏಡ್ಸ್

 • Share this:
  ಶತಶತಮಾನಗಳಿಂದ ಮನುಕುಲವನ್ನು ಅನೇಕ ಸಾಂಕ್ರಾಮಿಕ ರೋಗ(Epidemic) ರುಜಿನಗಳು ಕಾಡುತ್ತಿವೆ. ಪ್ಲೇಗ್, (Plague,)ಸಿಡುಬು, ಕಾಲರಾ,( cholera) ಕ್ಷಯ, ಕ್ಯಾನ್ಸರ್,( cancer,) ಗೊನೆರಿಯಾ, ಸಿಪಿಲಿಸ್, ಮಲೇರಿಯಾ (Malaria)ಡೆಂಘಿ (Dengue)ಇತ್ತೀಚೆಗೆ ಭಯ ಹುಟ್ಟಿಸುತ್ತಿರುವ ಕೊರೋನಾ ಮಹಾಮಾರಿ ಸೇರಿ ಇತ್ಯಾದಿ ಕಾಯಿಲೆಗಳು ನಮ್ಮನ್ನ ಬೆಚ್ಚಿ ಬೀಳಿಸಿವೆ. ಈ ಕಾಯಿಲೆಗಳು ಮಾನವನ ಅಸ್ವಿತ್ವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದವು. ಇವುಗಳಲ್ಲಿ ತುಂಬಾ ಹೃದಯ ವಿದ್ರಾವಕ ಮತ್ತು ಮಾರಕ ರೋಗವೆಂದರೆ ಏಡ್ಸ್(AIDS)..ಹೌದು ಹೆಸರು ಕೇಳಿದರೇ ಬೆಚ್ಚಿ ಬೀಳುವ ಏಡ್ಸ್ ಗುಣವಾಗದ, ಮಾರಣಾಂತಿಕ ಕಾಯಿಲೆ ಎಂಬ ಕುಖ್ಯಾತಿ ಇದರದ್ದು. ಎನ್ನುವಂತೆ ಸಮಾಜ ಕಾಣುತ್ತದೆ. ಮನಸೋಇಚ್ಚೆಯ ಜೀವನಶೈಲಿ ಮತ್ತು ಸ್ವೇಚ್ಛಾಚಾರದ ಮಂದಿಗೆ ಈ ಭಯಾನಕ ರೋಗ ಅಮರಿಕೊಳ್ಳುತ್ತದೆ. ಏಡ್ಸ್ ಪಾಪದ ರೋಗ ಎಂದೂ ಸಹ ಪರಿಗಣಿಸಲಾಗಿದೆ. ಈ ರೋಗದ ಪ್ರಭಾವದಿಂದ ರೋಗಿಗಳು ತಾರತಮ್ಯ, ತಾತ್ಸಾರ ಮತ್ತು ನಿರಾಕರಣೆಗೆ ಒಳಗಾಗುತ್ತಾರೆ. ಏಡ್ಸ್ ಕಾಯಿಲೆ ಹೊಂದಿರುವವರನ್ನು ಸಮಾಜ ಕಡೆಗಣ್ಣಿನಿಂದ ನೋಡುತ್ತದೆ. ಅವರನ್ನು ಅಸ್ಪೃಶ್ಯರಂತೆ ಕಾಣುತ್ತದೆ ಹೀಗಾಗಿ ಏಡ್ಸ್ ರೋಗಿಗಳಿಗೂ ಸಮಾನತೆ ಕಲ್ಪಿಸಿ ಅವರು ನಮ್ಮೊಳಗೆ ಒಬ್ಬರು ಎನ್ನುವ ಸಂದೇಶವನ್ನ ಸಾರುವ ಸಲುವಾಗಿ ಇಂದು ವಿಶ್ವ ಏಡ್ಸ್ ದಿನವನ್ನ (World AIDS Day)ಪ್ರಪಂಚದಾದ್ಯಂತ ಆಚರಣೆ ಮಾಡಲಾಗುತ್ತಿದೆ..

  ಏನಿದು ಏಡ್ಸ್ (HIV) ರೋಗ..?

  ಅಕ್ವೈರ್ಡ್ ಇಮ್ಯುನೋ ಡಿಫಿಷಿಯೆನ್ಸಿ ಸಿಂಡ್ರೋಮ್ ಹೃಸ್ವ ರೂಪವೇ ಏಡ್ಸ್ (Acquired immune deficiency syndrome.) ಇದನ್ನು ರೋಗ ಅನ್ನುವಂತಕ್ಕಿಂತ ರೋಗಗಳ ಸರಮಾಲೆ ಎಂದು ಕರೆಯಬಹುದು. ಇದನ್ನು ಮೊಟ್ಟ ಮೊದಲ ಬಾರಿಗೆ 1981ರಲ್ಲಿ ಅಮೆರಿಕದಲ್ಲಿ ಗುರುತಿಸಲಾಯಿತು. ಭಾರತದಲ್ಲಿ 1986ರಲ್ಲಿ ಭಾರತದ ಚೆನ್ನೈನಲ್ಲಿ ಪತ್ತೆ ಮಾಡಲಾಯಿತು. ಏಡ್ಸ್ ಗೆ ಕಾರಣವಾದ ವೈರಸ್ ಹೆಚ್‍ಐವಿ (Human Immuno Deficiency Virus) ಇದನ್ನು ಮೊಟ್ಟ ಮೊದಲ ಬಾರಿಗೆ 1983ರಲ್ಲಿ ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು. 1984ರಲ್ಲಿ ಅಮೆರಿಕಾದ ವಿಜ್ಞಾನಿಗಳು ಏಡ್ಸ್ ಗೆ ಕಾರಣವಾಗುವ ವೈರಸ್ ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ಇನ್ನೂ ಭಾರತದಲ್ಲಿ 1987ರಲ್ಲಿ ಭಾರತದಲ್ಲಿ ಮೊದಲ ಏಡ್ಸ್ ಪ್ರಕರಣ ಪತ್ತೆಯಾಯಿತು. 1990ರಿಂದ ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರ ಮಾರಕ ಕಾಯಿಲೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.

  ಇದನ್ನೂ ಓದಿ :ಔಷಧ ಇಲ್ಲದೇ ಈ ವ್ಯಕ್ತಿಯಲ್ಲಿ ಎಚ್​ಐವಿ ಸೋಂಕು ತಾನಾಗೇ ಗುಣವಾಗಿಬಿಟ್ಟಿದೆ, ವೈದ್ಯರಿಗೇ ಆಶ್ಚರ್ಯ!

  ಏಡ್ಸ್ ರೋಗದ ಪ್ರಾಥಮಿಕ ಲಕ್ಷಣಗಳು

  ಎಚ್‌ಐವಿ ರೋಗ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾದರೂ ಸೋಂಕಿನ ಮೊದಲ ಚಿಹ್ನೆಗಳು ಸಾಮಾನ್ಯವಾಗಿ ಮೊದಲ 1-2 ತಿಂಗಳುಗಳಲ್ಲಿ ಕಾಣಿಸಿಕೊಳ್ಳುತ್ತವೆ.
  *ಜ್ವರ
  *ಆಯಾಸ & ತೀವ್ರ ತಲೆನೋವು
  *ಕೀಲು ನೋವು
  *ಚರ್ಮದಲ್ಲಿ ದದ್ದು
  *ವಾಂತಿ ಅತಿಸಾರ
  *ಹಲವು ದಿನಗಳ ಕಾಲ ಒಣಕೆಮ್ಮು
  *ತೂಕ ನಷ್ಟ

  ಏಡ್ಸ್ ರೋಗದ ದ್ವೀತಿಯ ಹಂತ ಲಕ್ಷಣಗಳು

  *ರೋಗ ನಿರೋಧಕ ಶಕ್ತಿ ಪೂರ್ಣವಾಗಿ ಕುಂದಿರುತ್ತದೆ.
  *ಪ್ರತಿ ತಿಂಗಳು 10% ತೂಕ ಕಡಿಮೆ ಆಗುತ್ತದೆ.
  *ಚರ್ಮದಲ್ಲಿ ತುರಿಕೆ, ಉಸಿರ್ನಾಳದಲ್ಲಿ ಉರಿಯೂತ, ಕೆಮ್ಮು ಹಾಗು ಕಫ ಉಂಟಾಗುವಿಕೆ
  *ನಿರಂತರವಾಗಿ ತೀವ್ರ ಧಣಿವಾಗುವುದು.
  *ಒಂದು ತಿಂಗಳಿಗೂ ದೀರ್ಘಕಾಲ ಉಳಿಯುವ ಜ್ವರ
  *ಬಾಯಿಯಲ್ಲಿ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುಬವುದು.
  *ಒಂದು ತಿಂಗಳಿಗೂ ಅಧಿಕ ಕಾಲ ಅತಿಸಾರ ಭೇದಿಯಾಗುದವುದು.
  *ವ್ಯಕ್ತಿಯ ನೆನಪಿನನ ಶಕ್ತಿ ಕುಂದುತ್ತದೆ.

  ಏಡ್ಸ್ ಹೇಗೆ ಹರಡುತ್ತದೆ

  *ಸೋಂಕಿತ ವ್ಯಕ್ತಿಯ ವಿರ್ಯಾಣು, ರಕ್ತ, ಯೋನಿ, ಗುದ ಭಾಗದ ಮತ್ತು ಎದೆ ಹಾಲಿನ ದ್ರವದಲ್ಲಿ ಎಚ್ಐವಿ ರೋಗಾಣು ಇರುತ್ತದೆ. ಇವುಗಳ ಮೂಲಕ ಎಚ್ಐವಿ ಹರಡುವ ಸಾಧ್ಯತೆ ಇದೆ
  * ಸೋಂಕಿತರಿಂದ ಅಸುರಕ್ಷತಾ ರಹಿತ ಲೈಂಗಿಕ ಕ್ರಿಯೆ.
  *ಸೋಂಕಿತರಿಗಾಗಿ ಬಳಸಾದ ಇಂಜೆಕ್ಷನ್, ಅಥವಾ ಆಪರೇಶನ್ ಪರಿಕರಗಳ ಮರು ಬಳಕೆ
  *ಎಚ್ಐವಿ ಸೋಂಕಿತ ಗರ್ಭಿಣಿಯಿಂದ ಮಗುವಿಗೆ ಮತ್ತು ಪ್ರಸವದ ನಂತರ ಸ್ತನ ಪಾನದ ಮೂಲಕವೂ ಮಗುವಿಗೆ ಹರಡಬಹುದು.
  *ರಕ್ತ ದಾನ ಮತ್ತು ದೇಹದ ಇತರ ಭಾಗಗಳನ್ನು ದಾನ ಮಾಡುವವರು ಎಚ್ಐವಿ ಸೋಂಕಿತರಾಗಿದ್ದರೆ, ಅದನ್ನು ಪಡೆಯುವ ವ್ಯಕ್ತಿಗಳಿಗೆ ಹರಡುವ ಸಾದ್ಯತೆ ಇದೆ.

  ಈ ರೀತಿಯಿಂದ ಏಡ್ಸ್ ಕಾಯಿಲೆ ಬರುವುದಿಲ್ಲ

  ಸ್ಪರ್ಶ
  ಚುಂಬನ
  ಪಾತ್ರೆ ತೊಳೆಯುವುದು
  *ಏಡ್ಸ್ ರೋಗಿಗಳು ಬಳಸಿದ ಟಾಯ್ಲೆಟ್ ಸೀಟ್ ಬಳಸುವುದು
  *ಏಡ್ಸ್ ರೋಗಿಗಳ ಮಾಡಿದ ಅಡುಗೆ ಸೇವನೆ ಮಾಡುವುದರಿಂದ
  *ಕೀಟಗಳ ಕಡಿತ

  ಇದನ್ನೂ ಓದಿ : ಅಸ್ಸಾಂನ ಒಂದೇ ಜಿಲ್ಲೆಯ ಎರಡು ಜೈಲಿನಲ್ಲಿ 85 ಜನ ಕೈದಿಗಳಲ್ಲಿ ಏಡ್ಸ್ ಕಾಯಿಲೆ ಪತ್ತೆ!

  ವಿಶ್ವ ಏಡ್ಸ್ ದಿನದಂದು ಜಾಗೃತಿ

  ಆರಂಭದಲ್ಲಿ ವಿಶ್ವ ಏಡ್ಸ್ ದಿನವು ಕುಟುಂಬಗಳ ಮೇಲೆ ಏಡ್ಸ್ ಪ್ರಭಾವದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ತರಲು ಮಕ್ಕಳು ಮತ್ತು ಯುವಕರ ಮೇಲೆ ಹೆಚ್ಚು ಕೇಂದ್ರೀಕರಿಸಿತ್ತು. 1996 ರಿಂದ, ವಿಶ್ವ ಏಡ್ಸ್ ದಿನದ ಕಾರ್ಯಾಚರಣೆಗಳನ್ನು HIV/AIDS ಕುರಿತ ಜಂಟಿ ಕಾರ್ಯಕ್ರಮವನ್ನು ವಿಶ್ವಸಂಸ್ಥೆ ವಹಿಸಿಕೊಂಡಿದೆ. ಇದು ಯೋಜನೆಯ ವ್ಯಾಪ್ತಿಯನ್ನು ವರ್ಷಪೂರ್ತಿ ತಡೆಗಟ್ಟುವಿಕೆ ಮತ್ತು ಶಿಕ್ಷಣ ಅಭಿಯಾನಕ್ಕೆ ವಿಸ್ತರಿಸಿದೆ. ಜೊತೆಗೆ ಈ ಬಾರಿ ಡಿಸೆಂಬರ್ 1, 2021ರಂದು ರಾಷ್ಟ್ರೀಯ ಮಹಿಳಾ ಮತ್ತು ಬಾಲಕಿಯರಲ್ಲಿ HIV/AIDS ಜಾಗೃತಿ, ಇತಿಹಾಸ ಮತ್ತು ಈ ದಿನದ ಮಹತ್ವ ಮಹಿಳೆಯರ ಮೇಲೆ HIVಯ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಬೆಂಬಲವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.

  ೨೦೨೧ ವಿಶ್ವ ಏಡ್ಸ್ ದಿನದ ಥೀಮ್

  ಪ್ರತಿ ವರ್ಷ ವಿಶ್ವ ಏಡ್ಸ್ ದಿನವನ್ನ ಒಂದೊಂದು ಘೋಷವಾಕ್ಯ ಇಟ್ಟುಕೊಂಡು ಆಚರಣೆ ಮಾಡಲಾಗುತ್ತದೆ. ಅದರಂತೆ ಈ ವರ್ಷ ‘ಅಸಮಾನತೆಗಳನ್ನು ಕೊನೆಗೊಳಿಸಿ. ಏಡ್ಸ್ ಅನ್ನು ಕೊನೆಗೊಳಿಸಿ’ ಎಂಬುದು ವಿಶ್ವ ಏಡ್ಸ್ ದಿನದ ವಿಷಯವಾಗಿದೆ.ಆರೋಗ್ಯ ಸೇವೆಗಳಲ್ಲಿ ಎಲ್ಲರಿಗೂ ಸಮಾನ ಪ್ರವೇಶ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯ ಮಟ್ಟ ಬಲಪಡಿಸುವುದನ್ನು ತಿಳಿಸುವ ಉದ್ದೇಶವಾಗಿದೆ. ಎಚ್‌ಐವಿ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ವಿಶೇಷ ಒತ್ತು ನೀಡುವುದು, ಜೊತೆಗೆ ಎಚ್‌ಐವಿ/ಏಡ್ಸ್‌ಗೆ ಹೆಚ್ಚು ದುರ್ಬಲವಾಗಿರುವ ಜನರನ್ನು ತಲುಪಲು ಸಮುದಾಯಗಳೊಂದಿಗೆ ಕೆಲಸವನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.
  Published by:ranjumbkgowda1 ranjumbkgowda1
  First published: