ಏಕಕಾಲದಲ್ಲಿ ಗರ್ಭಿಣಿಯರಾದ ಒಂದೇ ಆಸ್ಪತ್ರೆಯ 16 ಮಂದಿ ನರ್ಸ್​ಗಳು!

news18
Updated:August 21, 2018, 11:44 AM IST
ಏಕಕಾಲದಲ್ಲಿ ಗರ್ಭಿಣಿಯರಾದ ಒಂದೇ ಆಸ್ಪತ್ರೆಯ 16 ಮಂದಿ ನರ್ಸ್​ಗಳು!
news18
Updated: August 21, 2018, 11:44 AM IST
ನ್ಯೂಸ್ 18 ಕನ್ನಡ

ವಾಷಿಂಗ್ಟನ್‌ (ಆಗಸ್ಟ್ 21) : ಅಮೆರಿಕದ ಅರಿಜೋನಾ ರಾಜ್ಯದ ಮೆಸ್ಸಾದಲ್ಲಿರುವ ಬ್ಯಾನರ್‌ ಡೆಸರ್ಟ್‌ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ದಾದಿಯರು ಗರ್ಭಿಣಿಯಾಗಿದ್ದಾರೆ.

ಅರೇ, ವಿವಾಹಿತ ಮಹಿಳೆಯರು ಗರ್ಭಿಣಿಯರಾಗುವುದರಲ್ಲಿ ವಿಶೇಷ ಏನೆಂದು ಚಕಿತರಾಗಬೇಡಿ. ಏಕೆಂದರೆ ಈ ಆಸ್ಪತ್ರೆಯಲ್ಲಿ ಕೆಲಸ ಮಾಡುವ 16 ಮಂದಿ ದಾದಿಯರು ಏಕಕಾಲದಲ್ಲಿಯೇ ಗರ್ಭ ಧರಿಸಿದ್ದಾರೆ.

ಈ ಘಟನೆ ಕಾಕತಾಳೀಯವಾಗಿ ನಡೆದಿರುವುದಿಲ್ಲ. ಎಲ್ಲವೂ ಪೂರ್ವನಿಯೋಜಿತವಾಗಿಯೇ ಜರುಗಿರುವಂತಹದ್ದು. ಆಸ್ಪತ್ರೆಯಲ್ಲಿ ಕೆಲಸ ಮಾಡುವ ದಾದಿಯರು ಫೇಸ್​ಬುಕ್ ಗ್ರೂಪ್​ನಲ್ಲಿ ನಿತ್ಯ ಚಾಟ್​ ಮಾಡುತ್ತಿದ್ದರು. ಅದರಂತೆ ಒಂದು ದಿನ ಎಲ್ಲರೂ ಮಗು ಹೊಂದಲು  ಯಾರೆಲ್ಲ ಸಿದ್ಧರಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ. ಅದರಂತೆ ಮೊದಲೇ ತೀರ್ಮಾನಿಸಿ, ಒಂದೇ ಘಟಕದಲ್ಲಿ ಕೆಲಸ ಮಾಡುವ ಎಲ್ಲಾ 16 ಮಂದಿ ದಾದಿಯರು ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ ಗರ್ಭಿಣಿಯರಾಗಿದ್ದಾರೆ. ಈ ದಾದಿಯರು ಈ ವರ್ಷದ ಅಕ್ಟೋಬರ್‌ನಿಂದ ಜನವರಿ ತಿಂಗಳ ಅವಧಿಯಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ.

ಏಕಕಾಲದಲ್ಲೇ ಒಂದೇ ಆಸ್ಪತ್ರೆಯಲ್ಲಿ ಇಷ್ಟೊಂದು ಮಂದಿ ಶುಶ್ರೂಷಕಿಯರು ಗರ್ಭಿಣಿಯರಾಗಿರುವುದನ್ನು ನೋಡಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ದಾದಿಯರ ಅನುಪಸ್ಥಿತಿಯಲ್ಲಿ ಬೇರೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಆಸ್ಪತ್ರೆ ಮಂಡಳಿ ಈಗಾಗಲೇ ವ್ಯವಸ್ಥೆ ಮಾಡಿಕೊಂಡಿದೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626