Indian Mobile Congress 2021: 5ಜಿ ತಂತ್ರಜ್ಞಾನವನ್ನು ಸರಿಯಾಗಿ ಹೊರತರಲು ಒಗ್ಗಟ್ಟಾಗಿ ಕೆಲಸ ಮಾಡಿ- ಟೆಲಿಕಾಂ ಕಂಪನಿಗಳಿಗೆ ಮೋದಿ ಮನವಿ

Indian Mobile Congress: ಅಲ್ಲದೇ ನಾವು ಕೆಲವು ವರ್ಷಗಳಷ್ಟು ಹಳೆಯದಾದ ಮೊಬೈಲ್ ಅಪ್ಲಿಕೇಶನ್‌ಗಳು ದಶಕಗಳಿಂದ ಪ್ರಸ್ತುತವಾಗಿರುವ ಕಂಪನಿಗಳ ಮೌಲ್ಯವನ್ನು ಮೀರಿಸುವ ಯುಗದಲ್ಲಿದ್ದೇವೆ ಇದು ಭಾರತದಲ್ಲಿನ ಯುವ ನವೋದ್ಯಮಿಗಳಿಗೆ ಉತ್ತಮ ಸಂಕೇತವಾಗಿದೆ" ಎಂದು ಮೋದಿ ಹೇಳಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
5G ತಂತ್ರಜ್ಞಾನವನ್ನು(Technology) ಸಮಯೋಚಿತವಾಗಿ ಹೊರತರಲು ಮತ್ತು ಟೆಲಿಕಾಂ(Telecom) ಉಪಕರಣಗಳು, ವಿನ್ಯಾಸ, ಅಭಿವೃದ್ಧಿ(Development) ಮತ್ತು ಉತ್ಪಾದನೆಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡಲು ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಮಂಗಳವಾರ ಟೆಲಿಕಾಂ ಉದ್ಯಮದ ನಾಯಕರಲ್ಲಿ ಮನವಿ ಮಾಡಿದ್ದಾರೆ. "ಕ್ಷಿಪ್ರ ತಂತ್ರಜ್ಞಾನದ ಪ್ರಗತಿಯೊಂದಿಗೆ ಭವಿಷ್ಯದಲ್ಲಿ ಟೆಲಿಕಾಂ ಉದ್ಯಮ ಉತ್ತಮ ಸಾಮರ್ಥ್ಯವನ್ನು ಹೊಂದಿದೆ. ಭವಿಷ್ಯದಲ್ಲಿ ಲೀಪ್‌ಫ್ರಾಗ್ ಮಾಡಲು ಮತ್ತು ಲಕ್ಷಾಂತರ ಭಾರತೀಯರನ್ನು ಸಬಲೀಕರಣಗೊಳಿಸಲು 5G ಯ ​​ಸಮಯೋಚಿತವಾಗಿ ಮತ್ತು ಉತ್ತಮವಾಗಿ ಹೊರತರಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ, ”ಎಂದು ಪ್ರಧಾನಿ ಹೇಳಿದ್ದಾರೆ.

ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಹಳ್ಳಿಯೂ ಹೈಸ್ಪೀಡ್ ಫೈಬರ್-ಆಪ್ಟಿಕ್ ಸಂಪರ್ಕವನ್ನು ಹೊಂದುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ, ಅಲ್ಲದೇ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಈಗಾಗಲೇ ಫೈಬರ್ ಆಪ್ಟಿಕ್ ಕೇಬಲ್‌ನೊಂದಿಗೆ ಅಳವಡಿಸಲಾಗಿದೆ ಎಂದಿದ್ದಾರೆ.

ಇಂಡಿಯಾ ಮೊಬೈಲ್ ಕಾಂಗ್ರೆಸ್ 2020 ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತಾಂತ್ರಿಕ ಉನ್ನತೀಕರಣದಿಂದಾಗಿ ಹ್ಯಾಂಡ್‌ಸೆಟ್‌ಗಳು ಮತ್ತು ಗ್ಯಾಜೆಟ್‌ಗಳನ್ನು ಆಗಾಗ್ಗೆ ಬದಲಾಯಿಸುವ ಸಂಸ್ಕೃತಿ ಇರುವುದು ಎಲ್ಲರಿಗೂ ತಿಳಿದಿದೆ ಹಾಗಾಗಿ ಮುಂದಿನ ದಿನಗಳಲ್ಲಿ ಉತ್ತಮ ಯೋಜನೆಗಳ ಕುರಿತು ಯೋಚಿಸಲು ಕಾರ್ಯಪಡೆಯನ್ನು ರಚಿಸುವತ್ತ ಗಮನಹರಿಸುವಂತೆ ಉದ್ಯಮಿಗಳನ್ನು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಡಿಜಿಟಲ್ ಕ್ರಾಂತಿಯ ಮಹತ್ವ ಸಾರಿದ ರಿಲಯನ್ಸ್​ ಮುಖ್ಯಸ್ಥ ಮುಖೇಶ್ ಅಂಬಾನಿ

ಮುಖ್ಯವಾಗಿ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಮೊದಲು ಯೋಚಿಸಬೇಕು ಎಂದಿದ್ದಾರೆ.  ಸಂಪರ್ಕ ವ್ಯವಸ್ಥೆಯು ಸುಧಾರಿಸುತ್ತಿರುವ ವೇಗದ ಅನುಭವ ನಮಗಿದೆ. ಇದೀಗ ಸಂಪರ್ಕ ವ್ಯವಸ್ಥೆಯಲ್ಲಿ ವೇಗ ಪ್ರಾರಂಭವಾಗಿದೆ ಎಂದು ನಮಗೆ ತಿಳಿದಿದೆ. ಮುಂಬರುವ ತಂತ್ರಜ್ಞಾನ ಕ್ರಾಂತಿಯೊಂದಿಗೆ ನಾವು ಜೀವನವನ್ನು ಹೇಗೆ ಸುಧಾರಿಸಬಹುದು ಎಂದು ಯೋಚಿಸುವುದು ಮತ್ತು ಯೋಜಿಸುವುದು ಮುಖ್ಯವಾಗಿದೆ. ಉತ್ತಮ ಆರೋಗ್ಯ ರಕ್ಷಣೆ, ಉತ್ತಮ ಶಿಕ್ಷಣ, ನಮ್ಮ ರೈತರಿಗೆ ಉತ್ತಮ ಮಾಹಿತಿ ಮತ್ತು ಅವಕಾಶಗಳು, ಸಣ್ಣ ಉದ್ಯಮಗಳಿಗೆ ಉತ್ತಮ ಮಾರುಕಟ್ಟೆ ಪ್ರವೇಶ ಇವುಗಳು ನಾವು ಕೆಲಸ ಮಾಡಬಹುದಾದ ಕೆಲವು ಗುರಿಗಳಾಗಿವೆ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ಅಲ್ಲದೇ, ನಾವು ಕೆಲವು ವರ್ಷಗಳಷ್ಟು ಹಳೆಯದಾದ ಮೊಬೈಲ್ ಅಪ್ಲಿಕೇಶನ್‌ಗಳು ದಶಕಗಳಿಂದ ಪ್ರಸ್ತುತವಾಗಿರುವ ಕಂಪನಿಗಳ ಮೌಲ್ಯವನ್ನು ಮೀರಿಸುವ ಯುಗದಲ್ಲಿದ್ದೇವೆ, ಇದು ಭಾರತದಲ್ಲಿನ ಯುವ ನವೋದ್ಯಮಿಗಳಿಗೆ ಉತ್ತಮ ಸಂಕೇತವಾಗಿದೆ" ಎಂದು ಮೋದಿ ಹೇಳಿದ್ದಾರೆ.

ಬಹಳಷ್ಟು ಯುವ ಟೆಕ್ಕಿಗಳು ಉತ್ಪನ್ನವನ್ನು ವಿಶೇಷವಾಗಿಸುವುದು ಕೋಡ್ ಎಂದು ನನಗೆ ಹೇಳುತ್ತಾರೆ. ಕೆಲವು ಉದ್ಯಮಿಗಳು ಇದು ಹೆಚ್ಚು ಮುಖ್ಯವಾದ ಪರಿಕಲ್ಪನೆ ಎಂದು ತಿಳಿಸಿದ್ದಾರೆ. ಉತ್ಪನ್ನವನ್ನು ಅಳೆಯಲು ಬಂಡವಾಳವು ಮುಖ್ಯವಾಗಿದೆ ಎಂದು ಹೂಡಿಕೆದಾರರು ಸೂಚಿಸುತ್ತಾರೆ. ಆದರೆ ಆಗಾಗ ಯುವಜನರು ತಮ್ಮ ಉತ್ಪನ್ನದ ಮೇಲೆ ಹೊಂದಿರುವ ಕನ್ವಿಕ್ಷನ್ ಹೆಚ್ಚು ಮುಖ್ಯವಾಗಿರುತ್ತದೆ.

ಇದನ್ನೂ ಓದಿ: 5ಜಿ ತಂತ್ರಜ್ಞಾನ ಭಾರತದ ಆದ್ಯತೆಯಾಗಬೇಕು; ಮುಖೇಶ್​ ಅಂಬಾನಿ

ಭಾರತವು ಶತಕೋಟಿ ಫೋನ್ ಬಳಕೆದಾರರನ್ನು ಮತ್ತು 750 ದಶಲಕ್ಷಕ್ಕೂ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ, ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ಒಟ್ಟು ಅರ್ಧದಷ್ಟು ಇಂಟರ್ನೆಟ್ ಬಳಕೆದಾರರನ್ನು ಸೇರಿದ್ದಾರೆ. ಹಾಗೆಯೇ ಒಟ್ಟು ಇಂಟರ್ನೆಟ್ ಬಳಕೆದಾರರಲ್ಲಿ ಅರ್ಧದಷ್ಟು ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ ಎಂದು ಮೋದಿ ಹೇಳಿದ್ದಾರೆ. “ನಮ್ಮ ಡಿಜಿಟಲ್ ಗಾತ್ರ ಮತ್ತು ನಮ್ಮ ಡಿಜಿಟಲ್ ಬಗ್ಗೆ ವಿರುವ ಆಸಕ್ತಿ ಅಭೂತಪೂರ್ವವಾಗಿದೆ. ವಿಶ್ವದಲ್ಲೇ ಅತ್ಯಂತ ಕಡಿಮೆ ಸುಂಕ ಇರುವ ದೇಶ ನಮ್ಮದು. ನಮ್ಮದು ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಅಪ್ಲಿಕೇಶನ್ ಮಾರುಕಟ್ಟೆಗಳಲ್ಲಿ ಒಂದಾಗಿದೆ, ”ಎಂದು ಅವರು ಹೇಳಿದರು.
Published by:Sandhya M
First published: