HOME » NEWS » National-international » WORK FROM HOME STUDY SAYS EMPLOYEES WORKING MORE AFTER WORK FROM HOME FACILITY AVAILABILITY STG SCT

ಕೊರೊನಾ ಎಫೆಕ್ಟ್: ವರ್ಕ್ ಫ್ರಂ ಹೋಂ ಹೆಸರಲ್ಲಿ ಉದ್ಯೋಗಿಗಳ ಕೆಲಸದ ಸಮಯ ವಿಸ್ತರಣೆ?

Work from Home: ಅನೇಕ ದೇಶಗಳಲ್ಲಿ ವರ್ಕ್ ಫ್ರಂ ಹೋಂ ಮಾಡುತ್ತಿರುವ ನೌಕರರು, ಕೊರೊನಾ ಬರುವ ಮೊದಲಿಗಿಂತ ಹೆಚ್ಚು ಗಂಟೆಗಳಲ್ಲಿ ಕೆಲಸಕ್ಕಾಗಿ ತೊಡಗಿಸಿಕೊಂಡಿದ್ದಾರೆ ಎಂದು ಕೊರೋನಾ ಸಮಯದಲ್ಲಿ ನಡೆಸಿದ ಹೊಸ ಸಂಶೋಧನೆ ಎತ್ತಿ ತೋರಿಸುತ್ತದೆ.

news18-kannada
Updated:February 6, 2021, 11:22 AM IST
ಕೊರೊನಾ ಎಫೆಕ್ಟ್: ವರ್ಕ್ ಫ್ರಂ ಹೋಂ ಹೆಸರಲ್ಲಿ ಉದ್ಯೋಗಿಗಳ ಕೆಲಸದ ಸಮಯ ವಿಸ್ತರಣೆ?
ಸಾಂದರ್ಭಿಕ ಚಿತ್ರ
  • Share this:
ಮನೆಯಿಂದ ಕೆಲಸ ಮಾಡುವಾಗ ಹೆಚ್ಚು ಫ್ರೀ ಟೈಂ ಅನ್ನು ಆನಂದಿಸುತ್ತಿದ್ದೀರಾ? ಪ್ರಾಯಶಃ ಇಲ್ಲ. ವರ್ಕ್ ಫ್ರಂ ಹೋಂ ಅಂತ ಮನೆಯಲ್ಲೇ ಕೆಲಸ ಮಾಡಿದರೂ ಮನೆಯವರ ಜತೆ ಟೈಂ ಕೊಡೋಕಾಗ್ತಿಲ್ಲ. ಆಫೀಸ್​ಗಿಂತ ಮನೆಯಲ್ಲೇ ಹೆಚ್ಚು ಕೆಲಸ. ಕೆಲಸ ಮುಗಿಯೋವಷ್ಟರಲ್ಲಿ ರಾತ್ರಿ ತಡವಾಗುತ್ತದೆ ಅನ್ನೋದು ಹಲವರ ದೂರು. ಇದನ್ನೇ ಸಂಶೋಧನೆಯೊಂದು ಎತ್ತಿ ಹಿಡಿದಿದೆ.

ಯುನೈಟೆಡ್ ಕಿಂಗ್​ಡಮ್, ಆಸ್ಟ್ರಿಯಾ, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿ ಅನೇಕ ದೇಶಗಳಲ್ಲಿ ವರ್ಕ್ ಫ್ರಂ ಹೋಂ ಮಾಡುತ್ತಿರುವ ನೌಕರರು, ಕೊರೊನಾ ಬರುವ ಮೊದಲಿಗಿಂತ ಹೆಚ್ಚು ಗಂಟೆಗಳಲ್ಲಿ ಕೆಲಸಕ್ಕಾಗಿ ತೊಡಗಿಸಿಕೊಂಡಿದ್ದಾರೆ ಎಂದು ಕೊರೋನಾ ಸಮಯದಲ್ಲಿ ನಡೆಸಿದ ಹೊಸ ಸಂಶೋಧನೆ ಎತ್ತಿ ತೋರಿಸುತ್ತದೆ.

ಮನೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಆ ದೇಶಗಳಲ್ಲಿ ಒಂದು ದಿನಕ್ಕೆ ಸರಾಸರಿ 2.5 ಗಂಟೆಗಳ ಸಮಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ನ್ಯೂಯಾರ್ಕ್ ಮೂಲದ ನಾರ್ಡ್ವಿಪಿಎನ್ ಟೀಂಗಳು (NordVPN Teams) ಬಹಿರಂಗಪಡಿಸಿದೆ. ಈ ವಿಪಿಎನ್ ಟೀಂಗಳು ಮನೆಯಲ್ಲೇ ಕೆಲಸ ಮಾಡಲು ಅನುಕೂಲವಾಗುವಂತೆ ವರ್ಚುವಲ್ ಖಾಸಗಿ ನೆಟ್​ವರ್ಕ್​ಗಳನ್ನು (ವಿಪಿಎನ್) ಒದಗಿಸುತ್ತವೆ.

ಇದನ್ನೂ ಓದಿ: ಸಾವಯವ ಕೃಷಿಕನಿಂದ ತನ್ನದೇ ಮಾರುಕಟ್ಟೆ ಸೃಷ್ಟಿ; ಇದು ಕಲಬುರ್ಗಿ ರೈತನ ಯಶೋಗಾಥೆ

ಇಂಗ್ಲೆಂಡ್ ಮತ್ತು ನೆದರ್ಲೆಂಡ್​ನಲ್ಲಂತೂ ರಾತ್ರಿ 8 ಗಂಟೆಯವರೆಗಂತೂ ಕೆಲಸ ಮಾಡುತ್ತಾರೆ. ಆ ದಿನದ ಕೆಲಸ, ಟಾರ್ಗೆಟ್ ಮುಗಿಸಲು ಹೆಚ್ಚು ಕೆಲಸ ಮಾಡುತ್ತಿದ್ದು, ಲೇಟಾಗಿ ಲಾಗ್ ಆಫ್ ಆಗುತ್ತಾರೆ" ಎಂದೂ ವಿಪಿಎನ್ ಹೇಳಿದೆ.

ಆದರೆ, ಡೆನ್ಮಾರ್ಕ್, ಬೆಲ್ಜಿಯಂ ಮತ್ತು ಸ್ಪೇನ್​ನಲ್ಲಿನ ಉದ್ಯೋಗಿಗಳು ಕೊರೊನಾ ಆರಂಭದಲ್ಲಿ ಕೆಲಸದ ಸಮಯದಲ್ಲಿ ಹೆಚ್ಚಳ ದಾಖಲಿಸಿತ್ತು. ಆದರೆ, ಕ್ರಮೇಣವಾಗಿ ಸಹಜ ಸ್ಥಿತಿಗೆ ಅಂದರೆ ಸಾಂಕ್ರಾಮಿಕ ಪೂರ್ವ ವೇಳಾಪಟ್ಟಿಗೆ ಮರಳಿದ್ದಾರೆ ಎಂದು ನಾರ್ಡ್​ವಿಪಿಎನ್ ಟೀಂಗಳು ಹೇಳಿಕೆಯಲ್ಲಿ ತಿಳಿಸಿವೆ.

10,000 ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಕೆಲಸ ಮಾಡುವ ನಾರ್ಡ್​ವಿಪಿಎನ್ ಟೀಂಗಳು, ನೌಕರರ ಕೆಲಸದ ಸಮಯವನ್ನು ಲೆಕ್ಕ ಹಾಕಲು ಸರ್ವರ್ಗಳ ಮೂಲಕ ಕಳುಹಿಸುವ ಡೇಟಾವನ್ನು ನೋಡಿದೆ.

ಅಲ್ಲದೆ, ''ಊಟದ ಸಮಯದಲ್ಲೂ ಬ್ಯುಸಿನೆಸ್ ವಿಪಿಎನ್ ಬಳಕೆಯ ಗಮನಾರ್ಹ ಕುಸಿತ ಕಂಡು ಬಂದಿಲ್ಲ. ವರ್ಕ್ ಫ್ರಂ ಹೋಂನಿಂದ ಲಂಚ್ ಟೈಂ ವಿರಾಮದ ಸಮಯ ಸಹ ಕಡಿಮೆಯಾಗಿದೆ ಎಂಬುದನ್ನು ಇದು ಸೂಚಿಸುತ್ತದೆ'' ಎಂದು ನಾರ್ಡ್ವಿಪಿಎನ್ ಟೀಂಗಳು ಬಹಿರಂಗಪಡಿಸಿದೆ.
Published by: Sushma Chakre
First published: February 6, 2021, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories