• Home
  • »
  • News
  • »
  • national-international
  • »
  • Viral News: ಸ್ನಾನ ಮಾಡಿದ್ದಕ್ಕೆ ಸತ್ತ ವ್ಯಕ್ತಿ? 60 ವರ್ಷ ಕೊಳಕಾಗಿ ನೆಮ್ಮದಿಯಾಗೇ ಇದ್ದ, ಪಾಪ!

Viral News: ಸ್ನಾನ ಮಾಡಿದ್ದಕ್ಕೆ ಸತ್ತ ವ್ಯಕ್ತಿ? 60 ವರ್ಷ ಕೊಳಕಾಗಿ ನೆಮ್ಮದಿಯಾಗೇ ಇದ್ದ, ಪಾಪ!

ಇವರೇ ಆ ವ್ಯಕ್ತಿ

ಇವರೇ ಆ ವ್ಯಕ್ತಿ

ಹಾಜಿ ಅನಾರೋಗ್ಯಕ್ಕೆ ಒಳಗಾಗುವ ಭಯದಿಂದ ಸ್ನಾನ ಮಾಡುವುದನ್ನು ತಪ್ಪಿಸಿದ್ದರು. ಆದರೂ ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ ಗ್ರಾಮಸ್ಥರು ಅವರ ದೇಹವನ್ನು ತೊಳೆಯಲು ಸ್ನಾನಗೃಹಕ್ಕೆ ಕರೆದೊಯ್ದಿದ್ದರು.

  • News18 Kannada
  • Last Updated :
  • New Delhi, India
  • Share this:

    ಇರಾನ್: ದಶಕಗಳಿಂದ ಸ್ನಾನ ಮಾಡದ ಕಾರಣಕ್ಕಾಗಿ "ವಿಶ್ವದ ಅತ್ಯಂತ ಕೊಳಕು ಮನುಷ್ಯ" ಎಂಬ (Words Ugliest Man) ಅಡ್ಡಹೆಸರು ಹೊಂದಿರುವ ಇರಾನ್ ವ್ಯಕ್ತಿಯೊಬ್ಬರು ನಿಧನರಾಗಿದ್ದಾರೆ. 94 ವರ್ಷದ ಅಮೌ ಹಾಜಿ ಎಂದು (Amou Haji) ಕರೆಯಲ್ಪಟ್ಟ ವ್ಯಕ್ತಿಯೇ ಮೃತಪಟ್ಟ ವ್ಯಕ್ತಿ. ಅಮೌ ಹಾಜಿ ಅವರ ನಿಜವಾದ ಹೆಸರಲ್ಲದಿದ್ದರೂ ಇರಾನ್​ನಲ್ಲಿ (Iran)  ವಯಸ್ಸಾದವರಿಗೆ ಕರೆಯುವ ಪ್ರೀತಿಯ ಅಡ್ಡಹೆಸರಾಗಿದೆ.  ಭಾನುವಾರ ದೇಜ್ಗಾ ಗ್ರಾಮದಲ್ಲಿ ನಿಧನರಾದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.


    IRNA (ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿ) ಪ್ರಕಾರ ಹಾಜಿ ಅನಾರೋಗ್ಯಕ್ಕೆ ಒಳಗಾಗುವ ಭಯದಿಂದ ಸ್ನಾನ ಮಾಡುವುದನ್ನು ತಪ್ಪಿಸಿದ್ದರು. ಆದರೂ ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ ಗ್ರಾಮಸ್ಥರು ಅವರ ದೇಹವನ್ನು ತೊಳೆಯಲು ಸ್ನಾನಗೃಹಕ್ಕೆ ಕರೆದೊಯ್ದಿದ್ದರು.


    ಇಟ್ಟಿಗೆ ಗುಡಿಸಲು, ನೆಲದ ರಂಧ್ರದಲ್ಲಿ ನಿದ್ದೆ
    ಹಾಜಿ ಅವರು ತಮ್ಮ ಜೀವನದ ಬಹುಪಾಲು ತೆರೆದ ಇಟ್ಟಿಗೆ ಗುಡಿಸಲಿನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಅವರು ನೆಲದ ರಂಧ್ರದಲ್ಲಿ ಮಲಗಲು ಪ್ರಾರಂಭಿಸಿದ್ದರು.


    ಏಕೆ ಹೀಗೆ ವಾಸಿಸುತ್ತಿದ್ದರು?
    ಸ್ಥಳೀಯರು ಹಾಜಿಯ ವಿಲಕ್ಷಣತೆಗೆ ಅವರ ಯೌವನದಲ್ಲಿ ನಡೆದ ಭಾವನಾತ್ಮಕ ಆಘಾತವೇ ಕಾರಣ ಎಂದು ಅಂದಾಜಿಸಿದ್ದಾರೆ. 2014 ರಲ್ಲಿ ಹಾಜಿ ತಾಜಾ ಆಹಾರ ಸೇವನೆಯನ್ನು ತಪ್ಪಿಸಿ ಬದಲಿಗೆ ಕೊಳೆತ ಮುಳ್ಳುಹಂದಿಯನ್ನು ಸೇವಿಸಲು ಆರಂಭಿಸಿದರು. ವರದಿಗಳ ಪ್ರಕಾರ 2013 ರಲ್ಲಿ ಅವರ ಜೀವನದ ಬಗ್ಗೆ "ದಿ ಸ್ಟ್ರೇಂಜ್ ಲೈಫ್ ಆಫ್ ಅಮೌ ಹಾಜಿ" ಎಂಬ ಕಿರು ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ.


    ಇದನ್ನೂ ಓದಿ: Bank Strike: ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ; ನವೆಂಬರ್ 19ಕ್ಕೆ ಬ್ಯಾಂಕ್ ಮುಷ್ಕರ


    ಕರುಳಿನ ಕ್ಯಾನ್ಸರ್​; ಉದ್ಯಮಿ ಕಿರಣ್ ಮಜುಮ್ದಾರ್ ಶಾ ಪತಿ ಜಾನ್ ಶಾ ನಿಧನ
    ಪ್ರಖ್ಯಾತ ಉದ್ಯಮಿ ಕಿರಣ್ ಮಜುಮ್ದಾರ್ ಶಾ (Kiran Mazumdar Shaw Husband) ಅವರ ಪತಿ ಜಾನ್ ಶಾ ಅವರು (John Shaw Passed Away) ನಿಧನರಾಗಿದ್ದಾರೆ. ಕರುಳಿನ ಕ್ಯಾನ್ಸರ್​ನಿಂದ ಜಾನ್ ಶಾ ಅವರು ಬಳಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಜಾನ್ ಶಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಲ್ಸನ್ ಗಾರ್ಡನ್ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ಜರುಗಲಿದೆ ಎಂದು ವರದಿಗಳು ತಿಳಿಸಿವೆ. ಬಯೋಕಾನ್ (Biocon) ಕಂಪನಿಯ ಸಲಹಾ ಸಮೀತಿಯ ಜವಾಬ್ದಾರಿ ನಿಭಾಯಿಸುತ್ತಿದ್ದರು.


    ಇದನ್ನೂ ಓದಿ: Viral Story: ಹೆಬ್ಬಾವಿನ ಹೊಟ್ಟೆಯಿಂದ ಜೀವಂತವಾಗಿ ಬದುಕಿ ಬಂದ ಮಹಿಳೆ!


    ಬಯೋಕಾನ್ ಗ್ರೂಪ್ ಕಂಪನಿಗಳ ಸಲಹಾ ಮಂಡಳಿಯ ಸದಸ್ಯರಾಗಿದ್ದ ಜಾನ್ ಶಾ
    ಅವರು ಮಧುರಾ ಕೋಟ್ಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷರಾಗಿದ್ದರು. ಜೊತೆಗೆ ಕೋಟ್ಸ್ ವಿಯೆಲ್ಲಾ ಗ್ರೂಪ್‌ನ ಮಾಜಿ ಹಣಕಾಸು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬಯೋಕಾನ್ ಸಂಸ್ಥೆಯ ವೆಬ್​ಸೈಟ್​ನಲ್ಲಿರುವ ಮಾಹಿತಿಯ ಪ್ರಕಾರ ಜಾನ್ ಶಾ ಹಲವಾರು ಬಯೋಕಾನ್ ಗ್ರೂಪ್ ಕಂಪನಿಗಳ ಸಲಹಾ ಮಂಡಳಿಯ ಸದಸ್ಯರಾಗಿದ್ದರು. 1999 ರಿಂದ ಅವರು ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ.


    ಬಯೋಕಾನ್ ಹಿಂದಿನ ಬೆನ್ನೆಲುಬು
    ಬಯೋಕಾನ್ 2001 ರಲ್ಲಿ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಅಣುವನ್ನು ತಯಾರಿಸಲು US ಆಹಾರ ಮತ್ತು ಔಷಧ ಆಡಳಿತದಿಂದ (FDA) ಅನುಮೋದಿಸಿದ ಮೊದಲ ಭಾರತೀಯ ಕಂಪನಿಯಾಗಿದೆ.


    ಪ್ರಖ್ಯಾತ ಗೋಲ್ಡ್ಸ್‌ ಜಿಮ್ ಮಾಲೀಕ ದುರ್ಮರಣ, ವಿಮಾನ ಅಪಘಾತದಲ್ಲಿ 6 ಮಂದಿ ಸಾವು
    ವಿಶ್ವದಾದ್ಯಂತ ಪ್ರಖ್ಯಾತವಾಗಿರುವ ಗೋಲ್ಡ್ಸ್ ಜಿಮ್‌ನ ಮಾಲೀಕ ಜರ್ಮನಿಯ ಪ್ರಸಿದ್ಧ ಉದ್ಯಮಿ ರೈನರ್ ಸ್ಕಾಲರ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರೈನರ್ ಸ್ಕಾಲರ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಇನ್ನೂ 5 ಮಂದಿ ಇದ್ದರು. ಆದರೆ ಎಲ್ಲರೂ ಕಣ್ಮರೆಯಾಗಿದ್ದರು. ಇದೀಗ ಅವರ ವಿಮಾನ ಅಪಘಾತಕ್ಕೆ ಒಳಗಾಗಿದೆ ಎನ್ನಲಾಗಿದ್ದು, ರೈನರ್ ಸ್ಕಾಲರ್ ಸೇರಿದಂತೆ ವಿಮಾನದಲ್ಲಿ ಇದ್ದ ಎಲ್ಲರೂ ಸಾವನ್ನಪ್ಪಿದ್ದಾಗಿ ಮೂಲಗಳು ತಿಳಿಸಿವೆ.

    Published by:ಗುರುಗಣೇಶ ಡಬ್ಗುಳಿ
    First published: