Mamata Banerjee| ಭಾರತವನ್ನು ತಾಲಿಬಾನ್-ಪಾಕಿಸ್ತಾನ ಆಗಲು ನಾವು ಅವಕಾಶ ನೀಡುವುದಿಲ್ಲ; ಮಮತಾ ಬ್ಯಾನರ್ಜಿ

ನಾನು ಯಾವತ್ತೂ ಸಮುದಾಯಗಳ ನಡುವೆ ಭಿನ್ನತೆಯನ್ನು ಹೊಂದಿಲ್ಲ. ಆದರೆ, ಸಮುದಾಯಗಳ ನಡುವೆ ಸಹೋದರತ್ವ ಮತ್ತು ಸಾಮಾಜಿಕ ರಚನೆಯನ್ನು ನಾಶಪಡಿಸುವುದು ಬಿಜೆಪಿ ಕೆಲಸ ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ಮಮತಾ ಬ್ಯಾನರ್ಜಿ.

ಮಮತಾ ಬ್ಯಾನರ್ಜಿ.

 • Share this:
  ಕೋಲ್ಕತ್ತಾ (ಸೆಪ್ಟೆಂಬರ್​ 17); ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆ (By-Election) ಮತ್ತೊಂದು ಬಾರಿ ಬಿಜೆಪಿ (BJP) ಮತ್ತು ತೃಣಮೂಲ ಕಾಂಗ್ರೆಸ್ (TMC)​ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಈ ಕ್ಷೇತ್ರದಲ್ಲಿ ಗೆದ್ದರೆ ಮಾತ್ರ ಮಮತಾ ಬ್ಯಾನರ್ಜಿ (Mamata Banerjee) ಸಿಎಂ ಸ್ಥಾನದಲ್ಲಿ ಮುಂದುವರೆ ಯಲು ಸಾಧ್ಯವಾಗುತ್ತದೆ. ಹೀಗಾಗಿ ಈ ಚುನಾವಣೆ ಟಿಎಂಸಿ ಪಾಲಿಗೆ ಮಹತ್ವದ್ದಾಗಿದೆ. ಆದರೆ, ಇದನ್ನು ಟೀಕಿಸಿರುವ ಬಿಜೆಪಿ ನಾಯಕರು "ಭವಾನಿಪುರದಲ್ಲಿ (Bhavanipura) ಮಮತಾ ಬ್ಯಾನರ್ಜಿ ಗೆದ್ದರೆ, ಇಡೀ ಕ್ಷೇತ್ರ ತಾಲಿಬಾನ್ ಅಥವಾ ಪಾಕಿಸ್ತಾನವನ್ನಾಗಿ ಬದಲಾಗಿಬಿಡುತ್ತದೆ" ಎಂದು ಟೀಕಿಸಿದ್ದರು. ಆದರೆ, ಇಂದು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ನಾವು ಭಾರತವನ್ನು ತಾಲಿಬಾನ್ (Taliban) ಅಥವಾ ಪಾಕಿಸ್ತಾನವನ್ನಾಗಿಸಲು (Pakistan) ಅವಕಾಶ ನೀಡುವುದಿಲ್ಲ" ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.  ಇತ್ತೀಚೆಗೆ ಸಿಎಂ ಮಮತಾ ಬ್ಯಾನರ್ಜಿ ಮಸೀದಿಗೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿದ್ದ ಬಿಜೆಪಿ, ಮಮತಾ ಬ್ಯಾನರ್ಜಿ ಮಸೀದಿಗೆ ಧಿಡೀರ್‌ ಭೇಟಿ ನೀಡಿ, ಎಲ್ಲರನ್ನೂ ಓಲೈಸುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೊ ತುಣುಕೊಂದನ್ನು ವೈರಲ್ ಮಾಡಿತ್ತು. ಅಲ್ಲದೆ, ಮಮತಾ ಬ್ಯಾನರ್ಜಿ ಗೆದ್ದರೆ ಇಡೀ ಕ್ಷೇತ್ರ ತಾಲಿಬಾನ್ ಅಥವಾ ಪಾಕಿಸ್ತಾನವನ್ನಾಗಿ ಬದಲಾಗಿಬಿಡುತ್ತದೆ ಎಂದು ಕಟು ಶಬ್ಧಗಳಿಂದ ಆಕ್ರೋಶ ವ್ಯಕ್ತಪಡಿಸಲಾಗಿತ್ತು.

  ಇದಕ್ಕೆ ಇಂದು ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, "ನಾನು ಬಿಜೆಪಿಯ ನೀತಿಗಳು ಮತ್ತು ರಾಜಕೀಯವನ್ನು ಇಷ್ಟಪಡುವುದಿಲ್ಲ. ಅವರು ಜನರನ್ನು ಧಾರ್ಮಿಕ ನೆಲೆಯಲ್ಲಿ ವಿಭಜಿಸುವ ರಾಜಕೀಯವನ್ನು ಮಾತ್ರ ಅನುಸರಿಸುತ್ತಾರೆ. ಈ ಹಿಂದೆ ವಿಧಾನಸಬಾ ಚುನಾವಣೆ ಸಂದರ್ಭದಲ್ಲಿ ಅವರು ನಂದಿಗ್ರಾಮದಲ್ಲಿ ಟಿಎಂಸಿ ಗೆದ್ದರೆ ಇಡೀ ಕ್ಷೇತ್ರ ಪಾಕಿಸ್ತಾನವಾಗುತ್ತದೆ ಎಂದು ಆರೋಪಿಸಿದ್ದರು. ಇದೀಗ ಭವಾನಿಪುರ ಉಪ ಚುನಾವಣೆಯಲ್ಲೂ ಅದೇ ಪ್ರಚಾರವನ್ನು ನಡೆಸುತ್ತಿದ್ದಾರೆ. ನನ್ನ ದೇಶ ಪಾಕಿಸ್ತಾನವಾಗಿ ಬದಲಾಗುತ್ತದೆ ಎಂದು ಹೇಳುವ ಬಿಜೆಪಿ ನಾಯಕರ ಮಾತು. ನಾಚಿಕೆಗೇಡಿನ ಸಂಗತಿ" ಎಂದು ಮಮತಾ ಬ್ಯಾನರ್ಜಿ ವಿಷಾಧಿಸಿದ್ದಾರೆ.

  "ನನ್ನ ದೇಶವು ಸಧೃಡವಾಗಿರಬೇಕೆಂದು ನಾನು ಬಯಸುತ್ತೇನೆ ಮತ್ತು ನನ್ನ ತಾಯ್ನಾಡನ್ನು ನನ್ನ ಎಲ್ಲಾ ಶಕ್ತಿಯಿಂದ ರಕ್ಷಿಸುತ್ತೇನೆ. ಭಾರತವು ಮತ್ತೊಂದು ತಾಲಿಬಾನ್ ಅಥವಾ ಪಾಕಿಸ್ತಾ ಆಗಲು ನಾವು ಬಯಸುವುದಿಲ್ಲ. ನಾನು ಮಸೀದಿಗೆ ಭೇಟಿ ನೀಡಿದ್ದೇನೆ, ನಾನು ಗುರುದ್ವಾರಕ್ಕೂ ಭೇಟಿ ನೀಡಿದ್ದೇನೆ ಮತ್ತು ಬಿಜೆಪಿ ಎರಡರಲ್ಲೂ ಸಮಸ್ಯೆ ಇದೆ. ನಾನು ಧರ್ಮವನ್ನು ರಾಜಕೀಯಕ್ಕೆ ತರುವುದಿಲ್ಲ, ವಿಭಜಕ ರಾಜಕೀಯದ ಭಾಷೆಯನ್ನು ಮಾತ್ರ ಅರ್ಥಮಾಡಿಕೊಳ್ಳುವ ಬಿಜೆಪಿ ನಾಯಕರಿಗೆ ಇದು ಅರ್ಧವಾಗುವುದಿಲ್ಲ.

  ನಾನು ಯಾವತ್ತೂ ಸಮುದಾಯಗಳ ನಡುವೆ ಭಿನ್ನತೆಯನ್ನು ಹೊಂದಿಲ್ಲ. ಆದರೆ, ಸಮುದಾಯಗಳ ನಡುವೆ ಸಹೋದರತ್ವ ಮತ್ತು ಸಾಮಾಜಿಕ ರಚನೆಯನ್ನು ನಾಶಪಡಿಸುವುದು ಬಿಜೆಪಿ ಕೆಲಸ. ನಾನು ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದಾಗ ಬಿಜೆಪಿಯವರಿಗೆ ಸಮಸ್ಯೆ ಉಂಟಾಗುತ್ತದೆ.

  ವಿಧಾನಸಭಾ ಚುನಾವಣೆಗೆ ಮುನ್ನವೂ ನಂದಿಗ್ರಾಮದಲ್ಲಿ ನನ್ನನ್ನು ಸೋಲಿಸಲು ಪಿತೂರಿ ನಡೆಸಲಾಯಿತು. ಟಿಎಂಸಿ ಗೆದ್ದರೆ ಮಿನಿ ಪಾಕಿಸ್ತಾನ ಆಗುತ್ತದೆ ಎಂದರು. ಈಗ ಮತ್ತೆ ಭವಾನಿಪುರದಲ್ಲಿ ಧರ್ಮದ ಬಣ್ಣ ಬಳಿಯುತ್ತಿದ್ದಾರೆ. ಆದರೆ, ನಾನು ಭಾರತವನ್ನು ತಾಲಿಬಾನ್ ಅಥವಾ ಪಾಕಿಸ್ತಾನವಾಗಲು ಬಿಡುವುದಿಲ್ಲ"  ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

  ಇದನ್ನೂ ಓದಿ: Ashok Gehlot| ರಸ್ತೆ ಅಫಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಿದರೆ 5,000 ರೂ ಬಹುಮಾನ-ಪ್ರಮಾಣಪತ್ರ; ರಾಜಸ್ತಾನ ಸರ್ಕಾರ

  ಭವಾನಿಪುರದ ಬಂಗಾಳಿ ಸಮುದಾಯದವರಲ್ಲದ ಮತದಾರರು, ಒಟ್ಟು ಶೇ.40 ರಷ್ಟಿದ್ದಾರೆ. ಇವರ ಮತಗಳನ್ನು ಪಡೆಯಲು ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪ್ರಯತ್ನಿಸುತ್ತಿವೆ. ಸಿಖ್ ಮತದಾರರ ಬೆಂಬಲವನ್ನು ಪಡೆಯಲು ಮಮತಾ ಬ್ಯಾನರ್ಜಿ ಬುಧವಾರ ಭವಾನಿಪುರದ ಗುರುದ್ವಾರಕ್ಕೆ ಭೇಟಿ ನೀಡಿದ್ದರು. ಜೊತೆಗೆ ಗುರುವಾರ ಭವಾನಿಪುರದ ಲೇಡೀಸ್ ಪಾರ್ಕ್‌ನಲ್ಲಿ ಗುಜರಾತಿ ಮತದಾರರೊಂದಿಗೆ ಸಂವಾದ ನಡೆಸಿದ್ದರು.

  ಇತ್ತ, ಮಾದರಿ ನೀತಿ ಸಂಹಿತೆ ಮತ್ತು ಕೊರೋನಾ ನಿಯಮಾವಳಿಗಳ ಉಲ್ಲಂಘನೆಗಾಗಿ ಚುನಾವಣಾ ಆಯೋಗದಿಮದ ನೋಟಿಸ್ ಪಡೆದಿರುವ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್, “ಗುರುದ್ವಾರಕ್ಕೆ ಭೇಟಿ ನೀಡಿದಾಗ ಮಮತಾ ಬ್ಯಾನರ್ಜಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಮತ್ತು ಕೋವಿಡ್ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

  ಇದನ್ನೂ ಓದಿ: Raj Kundra| 'Hot Shots' ಆ್ಯಪ್ ಮೂಲಕ ಪೋರ್ನ್ ಹಂಚಲು ರಾಜ್ ಕುಂದ್ರಾ ಪ್ಲ್ಯಾನ್: ಖಾಕಿ ಮುಂದೆ ಬಾಯ್ಬಿಟ್ಟ ಬಿಸಿನೆಸ್ ಪಾರ್ಟ್​ನರ್

  2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕೇಂದ್ರದಿಂದ ಕಿತ್ತೊಗೆಯುವಂತೆ ವಿಪಕ್ಷಗಳನ್ನು ಒತ್ತಾಯಿಸಿದ್ದಾರೆ. ದೇಶದ ಹಿತದೃಷ್ಟಿಯಿಂದ ನಾವು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಹೇಳಿದ್ದಾರೆ.
  Published by:MAshok Kumar
  First published: