ಬಂಗಾಳವನ್ನು ದೆಹಲಿಯಾಗಲು ಬಿಡುವುದಿಲ್ಲ, ಇಲ್ಲಿರುವ ಪ್ರತಿ ಬಾಂಗ್ಲಾದೇಶಿಯರು ಭಾರತದ ಪ್ರಜೆಗಳೆ; ಮಮತಾ ಬ್ಯಾನರ್ಜಿ

ದೆಹಲಿ ಗಲಭೆಯ ಬಗ್ಗೆ ಮಾತನಾಡಿದ ಮಮತಾ ಬ್ಯಾನರ್ಜಿ, 42 ಜನರ ಸಾವಿಗೆ ಕಾರಣವಾದ ದೆಹಲಿ ಹಿಂಸಾಚಾರ ತಡೆಗಟ್ಟುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರದ ಹರಿಹಾಯ್ದರು. ದೆಹಲಿಯಲ್ಲಿ ನಡೆದ ಹಿಂಸಾಚಾರ ಬಂಗಾಳದಲ್ಲಿ ನಡೆಯಲು ಬಿಡುವುದಿಲ್ಲ. ನೆನಪಿರಲಿ ಇದು ಬಂಗಾಳ ಎಂದು ಗುಡುಗಿದ್ದಾರೆ.

ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

 • Share this:
  ಕೋಲ್ಕತ್ತ: ಬಾಂಗ್ಲಾದೇಶದಿಂದ ವಲಸೆ ಬಂದು ಪಶ್ಚಿಮಬಂಗಾಳದಲ್ಲಿ ನೆಲೆಸಿ, ಮತದಾನ ಮಾಡಿರುವ ಎಲ್ಲರೂ  ಭಾರತದ ಪ್ರಜೆಗಳೇ ಆಗಿದ್ದಾರೆ. ಅವರು ಹೊಸದಾಗಿ ಪೌರತ್ವಕ್ಕೆ ಅರ್ಜಿ ಹಾಕುವ ಅವಶ್ಯಕತೆ ಇಲ್ಲ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ.

  ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಿಎಂ ಬ್ಯಾನರ್ಜಿ, ಯಾರೆಲ್ಲಾ  ಬಾಂಗ್ಲಾದೇಶದಿಂದ ಬಂದಿದ್ದಾರೋ ಅವರೆಲ್ಲ ಭಾರತೀಯ ನಾಗರಿಕರೇ ಆಗಿದ್ಧಾರೆ. ಅವರು ಹೊಸದಾಗಿ ಪೌರತ್ವ ಪಡೆಯಲು ಅರ್ಜಿ ಹಾಕುವ ಅವಶ್ಯಕತೆ ಇಲ್ಲ. ನೀವುಗಳು ಹಲವಾರು ವರ್ಷಗಳಿಂದ ಇಲ್ಲಿ ಮತದಾನ ಮಾಡುತ್ತಾ ಬಂದಿದ್ದೀರಾ. ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯನ್ನು ಆಯ್ಕೆ ಮಾಡುತ್ತಿದ್ದೀರಾ. ಅವರು ಈಗ ನೀವು ಭಾರತೀಯರಲ್ಲ ಎಂದು ಹೇಳುತ್ತಿದ್ದಾರೆ. ಅವರನ್ನು ನಂಬಬೇಡಿ. ನಾನು ಒಬ್ಬ ವ್ಯಕ್ತಿಯನ್ನು ಸಹ ಬಂಗಾಳದಿಂದ ಹೊರ ಹಾಕಲು ಬಿಡುವುದಿಲ್ಲ. ರಾಜ್ಯದಲ್ಲಿರುವ ನಿರಾಶ್ರಿತರನ್ನು ಪೌರತ್ವ ವಂಚಿತರಾಗಲು ಬಿಡುವುದಿಲ್ಲ ಎಂದು ಹೇಳಿದರು.

  ದೆಹಲಿ ಗಲಭೆಯ ಬಗ್ಗೆ ಮಾತನಾಡಿದ ಅವರು, 42 ಜನರ ಸಾವಿಗೆ ಕಾರಣವಾದ ದೆಹಲಿ ಹಿಂಸಾಚಾರ ತಡೆಗಟ್ಟುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರದ ಹರಿಹಾಯ್ದ ಬ್ಯಾನರ್ಜಿ, ದೆಹಲಿಯಲ್ಲಿ ನಡೆದ ಹಿಂಸಾಚಾರ ಬಂಗಾಳದಲ್ಲಿ ನಡೆಯಲು ಬಿಡುವುದಿಲ್ಲ. ನೆನಪಿರಲಿ ಇದು ಬಂಗಾಳ. ನಾವು ಬಂಗಾಳವನ್ನು ಮತ್ತೊಂದು ದೆಹಲಿ ಅಥವಾ ಉತ್ತರ ಪ್ರದೇಶವಾಗಲು ಬಿಡುವುದಿಲ್ಲ ಎಂದು ಗುಡುಗಿದರು.

  ಇದನ್ನು ಓದಿ: ‘ಸೋಷಿಯಲ್​​ ಮೀಡಿಯಾ ಕೋಡಂಗಿ ಆಟ ಬಿಡಿ, ಕೊರೋನಾ ವೈರಸ್​​ ಬಗ್ಗೆ ಮಾತಾಡಿ: ಮೋದಿಗೆ ರಾಹುಲ್​​ ಗಾಂಧಿ ತಪರಾಕಿ
  First published: