CAA: ಸಿಎಎ ಕಾನೂನು ಜಾರಿ ಸಾಧ್ಯವಿಲ್ಲ; ಕೇಂದ್ರ ಸರ್ಕಾರಕ್ಕೆ ಸ್ಪಷ್ಟೀಕರಣ ನೀಡಿದ ಕೇರಳ ಸಿಎಂ

ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿರುವ ಅಮಿತ್ ಶಾ, ಮಟುವಾ ಸಮುದಾಯವನ್ನು ಉದ್ದೇಶಿಸಿ "ಹೊಸ ಪೌರತ್ವ ಕಾನೂನನ್ನು ತರುವುದಾಗಿ ಮೋದಿ ಸರ್ಕಾರ 2018 ರಲ್ಲಿ ಭರವಸೆ ನೀಡಿತ್ತು. ಹಾಗಾಗಿ 2019 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗ ಅದನ್ನು ಕಾನೂನಾಗಿಯೂ ಮಾಡಿತ್ತು.

ಕೇರಳ ಸಿಎಂ ಪಿಣರಾಯಿ ವಿಜಯನ್.

ಕೇರಳ ಸಿಎಂ ಪಿಣರಾಯಿ ವಿಜಯನ್.

 • Share this:
  ಕೊಚ್ಚಿ (ಫೆಬ್ರವರಿ 14); ಲೋಕಸಭಾ ಅಧಿವೇಶನದಲ್ಲಿ ಇಂದು ಮತ್ತೆ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಕುರಿತು ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಕೊರೋನಾ ಲಸಿಕಾ ಅಭಿಯಾನ ಮುಗಿದ ನಂತರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಜಾರಿ ಮಾಡುತ್ತೇವೆ" ಎಂದು ಹೇಳಿಕೆ ನೀಡಿದ್ದರು. ಆದರೆ, ಕೇಂದ್ರ ಗೃಹಮಂತ್ರಿ ಅಮಿತ್ ಶಾ ಹೇಳಿಕೆ ಬೆನ್ನಲ್ಲೇ ಸಿಎಎ ವಿರುದ್ಧ ಕಿಡಿಕಾರಿರುವ ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, "ತಮ್ಮ ರಾಜ್ಯದಲ್ಲಿ ಸಿಎಎ ಕಾನೂನನ್ನು ಜಾರಿ ಮಾಡುವುದಿಲ್ಲ" ಎಂದು ಅಮಿತ್ ಶಾ ಮತ್ತು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಉತ್ತರ ನೀಡಿದ್ದಾರೆ.

  ಈ ಕುರಿತು ವಿಧಾನಸಭಾ ಚುನಾವಣಾ ಪ್ರಚಾರದಲ್ಲೇ ಸ್ಪಷ್ಟ ಉತ್ತರ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, "ಕೋವಿಡ್ ಲಸಿಕೆ ಅಭಿಯಾನ ಮುಗಿದ ನಂತರ ಸಿಎಎ ಕಾನೂನನ್ನು ಜಾರಿಗೆ ತರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ, ನಾವು ಈಗಾಗಲೇ ಕೇರಳ ಈ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಕೇರಳದಲ್ಲಿ ಈ ಅನಾಹುತವನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಅನುಮತಿಸುವುದಿಲ್ಲ" ಎಂದು ತಿಳಿಸಿದ್ದಾರೆ.

  ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿರುವ ಅಮಿತ್ ಶಾ, ಮಟುವಾ ಸಮುದಾಯವನ್ನು ಉದ್ದೇಶಿಸಿ "ಹೊಸ ಪೌರತ್ವ ಕಾನೂನನ್ನು ತರುವುದಾಗಿ ಮೋದಿ ಸರ್ಕಾರ 2018 ರಲ್ಲಿ ಭರವಸೆ ನೀಡಿತ್ತು. ಹಾಗಾಗಿ 2019 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗ ಅದನ್ನು ಕಾನೂನಾಗಿಯೂ ಮಾಡಿತ್ತು. ಆದರೆ 2020 ರಲ್ಲಿ ದೇಶವು COVID-19 ಸಾಂಕ್ರಾಮಿಕಕ್ಕೆ ಒಳಗಾದ ನಂತರ ಸಿಎಎ ಅನುಷ್ಠಾನವನ್ನು ತಡೆಹಿಡಿಯಬೇಕಾಯಿತು. ಕೊರೋನಾ ಲಸಿಕಾ ಅಭಿಯಾನ ಮುಗಿದ ನಂತರ ದೇಶದಾದ್ಯಂತ ಸಿಎಎ ಜಾರಿ ಮಾಡಲಾಗುವುದು" ಎಂದು ತಿಳಿಸಿದ್ದರು.

  ಇದನ್ನೂ ಓದಿ : Petrol Diesel Price: ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಯಾವ್ಯಾವ ನಗರಗಳಲ್ಲಿ ಎಷ್ಟೆಷ್ಟಿದೆ ರೇಟು?

  ಸಿಎಎ ಜಾರಿಯನ್ನು ವಿರೋಧಿಸಿ 2019 ರಲ್ಲಿ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದವು. ಸಿಎಎ ಜಾರಿಯನ್ನು ಕಾನೂನಾತ್ಮಕವಾಗಿ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ ಮೊದಲ ರಾಜ್ಯ ಕೇರಳ.

  ಸಿಎಎ ಮತ್ತು ಎನ್‌ಆರ್‌ಸಿ ಜಾರಿಯಾದರೆ ಭಾರತದಲ್ಲಿರುವ ಮುಸ್ಲಿಮರು ಮಾತ್ರವಲ್ಲದೇ ಅನೆಕರು ಪೌರತ್ವವನ್ನು ಕಳೆದುಕೊಳ್ಳುತ್ತಾರೆ. ಅಷ್ಟೆ ಅಲ್ಲದೇ ಈ ಕಾಯ್ದೆಯು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಹಲವಾರು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ, ಈ ಸಿಎಎ ಕಾನೂನಿನ ವಿರುದ್ಧ ದೇಶದಾದ್ಯಂತ ಎಷ್ಟೇ ಹೋರಾಟ ನಡೆದರೂ ಸಹ ಕೇಂದ್ರ ಸರ್ಕಾರ ಮಾತ್ರ ಈ ಕಾನೂನನ್ನು ಯಾವುದೇ ಕಾರಣಕ್ಕೂ ಹಿಂತೆಗೆಯುವುದಿಲ್ಲ ಎಂದು ಈಗಾಗಲೇ ತಿಳಿಸಿದೆ.
  Published by:MAshok Kumar
  First published: