• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದು ಅವಮಾನಕಾರಿ ಕ್ರಮ: ಒಮರ್ ಅಬ್ದುಲ್ಲಾ

ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದು ಅವಮಾನಕಾರಿ ಕ್ರಮ: ಒಮರ್ ಅಬ್ದುಲ್ಲಾ

ಒಮರ್ ಅಬ್ದುಲ್ಲಾ

ಒಮರ್ ಅಬ್ದುಲ್ಲಾ

ನರೇಂದ್ರ ಮೋದಿ ಆರ್ಟಿಕಲ್ 370 ಮತ್ತು 35ಎ ಅನ್ನು ತೆಗೆದುಹಾಕಿದ್ದು ನನಗೆ ತೀರಾ ಅಚ್ಚರಿ ಎನಿಸಲಿಲ್ಲ. ಆದರೆ, ಈ ರಾಜ್ಯವನ್ನು ಎರಡು ಕೇಂದ್ರಾಡಳಿತವನ್ನಾಗಿ ಇಳಿಸಿದ್ದು ಮಾತ್ರ ಆಘಾತಕಾರಿ ಆಗಿತ್ತು ಎಂದು ಒಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

  • Share this:

ಶ್ರೀನಗರ(ಜುಲೈ 27): ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಇರುವವರೆಗೂ ತಾನು ಯಾವುದೇ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫೆರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಪಣತೊಟ್ಟಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಒಮರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


“ಬಹಳ ಪ್ರಬಲ ವಿಧಾನಸಭೆಯ ಸದಸ್ಯನಾಗಿ, ಅದರಲ್ಲೂ ಆರು ವರ್ಷ ಸಿಎಂ ಆಗಿದ್ದ ನನಗೆ ಇಷ್ಟು ದುರ್ಬಲ ವಿಧಾನಸಭೆಯ ಸದಸ್ಯನಾಗಿರಲು ಸಾಧ್ಯವೇ ಇಲ್ಲ” ಎಂದು ಒಮರ್ ಅಬ್ದುಲ್ಲಾ ಅವರು ಅಭಿಪ್ರಾಯಪಟ್ಟಿದ್ದಾರೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದು ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆಯಲ್ಲಿ ಒಮರ್ ಅಬ್ದುಲ್ಲಾ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.


ನರೇಂದ್ರ ಮೋದಿ ಆರ್ಟಿಕಲ್ 370 ಮತ್ತು 35ಎ ಅನ್ನು ತೆಗೆದುಹಾಕಿದ್ದು ನನಗೆ ತೀರಾ ಅಚ್ಚರಿ ಎನಿಸಲಿಲ್ಲ. ಆದರೆ, ಈ ರಾಜ್ಯವನ್ನು ಎರಡು ಕೇಂದ್ರಾಡಳಿತವನ್ನಾಗಿ ಇಳಿಸಿದ್ದು ಮಾತ್ರ ಆಘಾತಕಾರಿ ಆಗಿತ್ತು ಎಂದವರು ಈ ಲೇಖನದಲ್ಲಿ ಬರೆದಿದ್ದಾರೆ.


ಇದನ್ನೂ ಓದಿ: Unlock 3.0 Guidelines : ಅನ್​ಲಾಕ್​​ -3.0 ಮಾರ್ಗಸೂಚಿಯ ಅಂತಿಮ ಹಂತದ ತಯಾರಿ ಆರಂಭ : ಏನಿರುತ್ತೆ? ಏನಿರಲ್ಲ?


ಇದು ಜಮ್ಮು-ಕಾಶ್ಮೀರದ ಮೇಲೆ ಹೇರಿದ ಅವಮಾನವಾಗಿದೆ. ಕೇಂದ್ರಾಡಳಿತವನ್ನಾಗಿ ಮಾಡುವ ಅಗತ್ಯವಾದರೂ ಏನಿತ್ತು ಎಂದು ಅರ್ಥವಾಗುತ್ತಿಲ್ಲ. ಇಲ್ಲಿನ ಜನರಿಗೆ ಶಿಕ್ಷೆ ಕೊಡುವುದು ಬಿಟ್ಟರೆ ಬೇರೆ ಉದ್ದೇಶ ಕಾಣುತ್ತಿಲ್ಲ ಎಂದಿದ್ದಾರೆ.


“ಲಡಾಖ್​ನಲ್ಲಿ ಬೌದ್ಧರಿಂದ ಬೇಡಿಕೆ ಇದ್ದರಿಂದ ಲಡಾಖ್ ಅನ್ನ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಯಿತು ಎಂಬುದು ಕಾರಣವಾಗುವುದಾದರೆ, ಜಮ್ಮುವಿನ ಜನರ ಪ್ರತ್ಯೇಕ ರಾಜ್ಯದ ಬೇಡಿಕೆ ಇನ್ನೂ ಹಳೆಯದಾಗಿದೆ… ಧರ್ಮಾಧಾರಿತವಾಗಿ ಈ ಕ್ರಮ ತೆಗೆದುಕೊಂಡಿದ್ದಾಗಿದ್ದರೆ ಲೇಹ್ ಮತ್ತು ಕಾರ್ಗಿಲ್ ಪ್ರದೇಶಗಳು ಮುಸ್ಲಿಮ್ ಬಾಹುಳ್ಯವಾಗಿದ್ದು, ಜಮ್ಮು-ಕಾಶ್ಮೀರದಿಂದ ಪ್ರತ್ಯೇಕಗೊಳ್ಳಲು ಅಲ್ಲಿನ ಜನರ ತೀವ್ರ ವಿರೋಧ ಇದೆ” ಎಂದು ನ್ಯಾಷನಲ್ ಕಾನ್ಫೆರೆನ್ಸ್ ಉಪಾಧ್ಯಕ್ಷರೂ ಆದ ಒಮರ್ ಅಬ್ದುಲ್ಲಾ ಹೇಳಿದ್ಧಾರೆ.


ಸಂವಿಧಾನದ 370ನೇ ಪರಿಚ್ಛೇದವನ್ನು ತೆಗೆದುಹಾಕಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದು ಯಾವುದೇ ಉದಾರ ಧೋರಣೆಯಾಗಿರಲಿಲ್ಲ. ಅದು ಇಲ್ಲಿನ ಜನರ ಹಕ್ಕಾಗಿತ್ತು ಎಂದವರು ಪ್ರತಿಪಾದಿಸಿದ್ಧಾರೆ.


ಇದನ್ನೂ ಓದಿ: Vande Bharat Mission: ಆಗಸ್ಟ್​ 1ರಿಂದ 5ನೇ ಹಂತದ ವಂದೇ ಭಾರತ್ ಮಿಷನ್ ಆರಂಭ; 15ಕ್ಕೂ ಹೆಚ್ಚು ದೇಶಗಳಿಗೆ ವಿಮಾನ ವ್ಯವಸ್ಥೆ


“ಈ ರಾಜ್ಯವು ಭಾರತದೊಂದಿಗೆ ಸೇರಲು ಇದೇ ಮೂಲಾಧಾರ. ಈ ಭದ್ರತೆಗೆ ಯಾವುದೇ ಸಮಯಾವಧಿ ನಿಗದಿಯಾಗಿರಲಿಲ್ಲ. ಭಾರತದ ಜೊತೆ ಇರುವವರೆಗೂ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಇರುತ್ತದೆ ಎಂಬುದು ಗೊತ್ತಿದ್ದ ಸಂಗತಿ” ಎಂದು ಅಬ್ದುಲ್ಲಾ ವಿವರಿಸಿದ್ಧಾರೆ.


ಕಳೆದ ವರ್ಷ ಕೇಂದ್ರ ಸರ್ಕಾರ ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ತೆಗೆದುಹಾಕಿತ್ತು. ಜೊತೆಗೆ, ಕಣಿವೆ ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು. ಜಮ್ಮು-ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ಕೇವಲ ತಾತ್ಕಾಲಿಕ ಮಾತ್ರವಾಗಿದ್ದು ಮುಂದಿನ ದಿನಗಳಲ್ಲಿ ಸಂಪೂರ್ಣ ರಾಜ್ಯ ಸ್ಥಾನಮಾನ ಕೊಡುವುದಾಗಿ ಪ್ರಧಾನಿ ಮತ್ತು ಗೃಹ ಸಚಿವರು ಆಶ್ವಾಸನೆಗಳನ್ನ ನೀಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

top videos
    First published: