ಆದಷ್ಟೂ ಬೇಗ ಹೊರಬನ್ನಿ: ಲಿಬಿಯಾದಲ್ಲಿ ಅಳಿದುಳಿದಿರುವ ಭಾರತೀಯರಿಗೆ ಸುಷ್ಮಾ ಸ್ಮರಾಜ್ ಕರೆ

ಲಿಬಿಯಾದಿಂದ ಈಗಲೇ ಹೊರಬಂದರೆ ಬಚಾವ್. ಆಮೇಲೆ ಕಷ್ಟವಾಗಬಹುದು: ಅರಬ್ ನಾಡಿನಲ್ಲಿರುವ 500ಕ್ಕೂ ಹೆಚ್ಚು ಭಾರತೀಯರನ್ನು ಎಚ್ಚರಿಸಿದ ಭಾರತ ಸರಕಾರ.

Vijayasarthy SN | news18
Updated:April 19, 2019, 10:37 PM IST
ಆದಷ್ಟೂ ಬೇಗ ಹೊರಬನ್ನಿ: ಲಿಬಿಯಾದಲ್ಲಿ ಅಳಿದುಳಿದಿರುವ ಭಾರತೀಯರಿಗೆ ಸುಷ್ಮಾ ಸ್ಮರಾಜ್ ಕರೆ
ಸುಷ್ಮಾ ಸ್ವರಾಜ್
Vijayasarthy SN | news18
Updated: April 19, 2019, 10:37 PM IST
ನವದೆಹಲಿ(ಏ. 19): ಅರಬ್ ನಾಡಿನ ಭಾಗವಾಗಿರುವ ಹಾಗೂ ನಿರಂತರ ಯುದ್ಧದಿಂದ ಜರ್ಝರಿತವಾಗಿರುವ ಲಿಬಿಯಾ ದೇಶದಲ್ಲಿ ಹಿಂಸಾಚಾರಗಳು ನಿಂತೇ ಇಲ್ಲ. ಹಿಂದೆ ಇರಾಕ್​ನಲ್ಲಿ ಅನೇಕ ಭಾರತೀಯರು ಉಗ್ರರಿಗೆ ಬಲಿಯಾದಂತೆ ಲಿಬಿಯಾದಲ್ಲೂ ಅದು ಪುನಾವರ್ತನೆಯಾಗದಂತೆ ಭಾರತ ಸರಕಾರ ಎಚ್ಚರಿಕೆ ವಹಿಸುತ್ತಿದೆ. ಲಿಬಿಯಾದಿಂದ ಬಹಳಷ್ಟು ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲು ಹಲವು ಕ್ರಮ ಕೈಗೊಳ್ಳಲಾಗಿದೆ. ಅದರಲ್ಲಿ ಬಹುತೇಕ ಯಶಸ್ವಿಯಾಗಿದೆ. ಇಷ್ಟಾದರೂ ಲಿಬಿಯಾದ ರಾಜಧಾನಿ ಟ್ರಿಪೋಲಿಯಲ್ಲಿ 500ಕ್ಕೂ ಹೆಚ್ಚು ಭಾರತೀಯರು ಉಳಿದುಕೊಂಡಿದ್ದಾರೆ. ಈ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾರತೀಯರಿಗೆ ವಾಪಸ್ ಬರುವಂತೆ ಟ್ವೀಟ್ ಮಾಡಿ ಕರೆ ನೀಡಿದ್ಧಾರೆ.

ಇದನ್ನೂ ಓದಿ: ನನ್ನ ಶಾಸ್ತ್ರ ಮಿಸ್​​ ಆಗಲ್ಲ, ಜೆಡಿಎಸ್ ಅಭ್ಯರ್ಥಿಗಳು ಗೆಲ್ತಾರೆ: ರೇವಣ್ಣ ಭವಿಷ್ಯ

ಟ್ರಿಪೋಲಿಯಲ್ಲಿ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ. ಸದ್ಯಕ್ಕೆ ವಿಮಾನಗಳ ಸಂಪರ್ಕ ಚಾಲನೆಯಲ್ಲಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೋ ಗೊತ್ತಿಲ್ಲ. ಸಿಲುಕಿಕೊಂಡವರನ್ನು ಬಿಡಿಸಿಕೊಂಡು ಬರುವುದು ಕಷ್ಟವಾಗಬಹುದು. ಟ್ರಿಪೋಲಿಯಲ್ಲಿರುವ ನಿಮ್ಮ ಸ್ನೇಹಿತರು ಅಥವಾ ಸಂಬಂದಿಗಳಿಗೆ ಕೂಡಲೇ ಹೊರಬರುವಂತೆ ಹೇಳಿ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಇದೇ ವೇಳೆ, ಲಿಬಿಯಾದಲ್ಲಿರುವ ಭಾರತೀಯ ನಾಗರಿಕರು ಅತೀವ ಎಚ್ಚರಿಕೆ ವಹಿಸಬೇಕು. ಹಿಂಸಾಚಾರ ನಡೆಯುವ ಪ್ರದೇಶಗಳಿಂದ ದೂರ ಇರಬೇಕು ಎಂದು ಸುಷ್ಮಾ ಸ್ವರಾಜ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 'ಮುಂಬೈ ದಾಳಿಯ ಹುತಾತ್ಮ ಹೇಮಂತ್​ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ'; ಸಾಧ್ವಿ ಪ್ರಗ್ಯಾ ವಿವಾದಾತ್ಮಕ ಹೇಳಿಕೆ

ಲಿಬಿಯಾದಲ್ಲಿರುವ ಭಾರತೀಯರಿಗೆಂದೇ ವಾಟ್ಸಾಪ್ ಗ್ರೂಪ್​ಗಳನ್ನ ರಚಿಸಲಾಗಿದೆ. ಈ ಗ್ರೂಪ್​ಗಳಲ್ಲಿ ಎಲ್ಲರೂ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕೆಂದೂ ತಿಳಿಹೇಳಲಾಗಿದೆ.
Loading...

ಲಿಬಿಯಾದಲ್ಲಿ ಕಳೆದ 2 ವಾರದಲ್ಲಿ ಅತೀವ ಹಿಂಸಾಚಾರಗಳು ನಡೆದು 200ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ವಿಶ್ವಸಂಸ್ಥೆ ಬೆಂಬಲಿತ ಪ್ರಧಾನಿ ಫಾಯೆಜ್ ಅಲ್-ಸರ್ರಾಜ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮಿಲಿಟರಿ ಕಮಾಂಡರ್ ಖಲೀಫಾ ಹಫ್ತಾರ್ ಅವರ ಸೇನೆ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಅದರಲ್ಲೂ ರಾಜಧಾನಿ ಟ್ರಿಪೋಲಿಯಲ್ಲಿ ತೀವ್ರ ಮಟ್ಟದಲ್ಲಿ ಹಿಂಸಾಚಾರ ಘಟನೆಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಖಲೀಫಾ ಸೇನೆಯ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆ ಇದ್ದು ಅಪಾರ ಸಾವುನೋವು ಸಂಭವಿಸುವ ಅಪಾಯವಿದೆ.
First published:April 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...