ಸೆಮಿಫೈನಲ್​ನಲ್ಲಿ ಮುಗ್ಗರಿಸಿದ ಮಹಿಳಾ ಹಾಕಿ ತಂಡ; ಅರ್ಜೈಂಟೀನಾ ಎದುರು ಸೋಲು; ಕಂಚಿನ ಆಸೆ ಜೀವಂತ

ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ಎದುರು ಭರ್ಜರಿ ಜಯಗಳಿಸಿದ ಭಾರತದ ಕುಸ್ತಿಪಟು ರವಿ ದಹಿಯಾ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಖಚಿತವಾಗಿದೆ.

ಭಾರತೀಯ ಮಹಿಳಾ ಹಾಕಿ ತಂಡ

ಭಾರತೀಯ ಮಹಿಳಾ ಹಾಕಿ ತಂಡ

 • Share this:
  ಮೊದಲ ಬಾರಿಗೆ ಭಾರತೀಯ ಮಹಿಳೆಯರ ಹಾಕಿ ತಂಡ ಇತಿಹಾಸ ನಿರ್ಮಿಸಿಲಿದೆ ಎನ್ನುವ ಆಸೆ ಕಮರಿದ್ದು, ಬುಧವಾರ ನಡೆದ ಟೋಕಿಯೋ ಒಲಂಪಿಕ್ಸ್‌ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡವು ಅರ್ಜೈಂಟೀನಾ ಎದುರು 2-1 ಅಂತರದಲ್ಲಿ ಸೋಲು ಅನುಭವಿಸಿತು. ಇದರೊಂದಿಗೆ ಚಿನ್ನ, ಬೆಳ್ಳಿಯ ಆಸೆ ಕಮರಿದ್ದು, ಕಂಚಿನ ಪದಕಕ್ಕಾಗಿ ಬಲಿಷ್ಟ ಇಂಗ್ಲೆಂಡ್​ ತಂಡದ ಎದುರು ಭಾರತೀಯ ವನಿತೆಯರು ಸೆಣಸಬೇಕಿದೆ.

  ಪಂದ್ಯದ ಆರಂಭದ 4ನೇ ನಿಮಿಷದಲ್ಲಿಯೇ ಭಾರತದ ಪರವಾಗಿ ಪೆನಾಲ್ಟಿ ಕಾರ್ನರ್‌ನಲ್ಲಿ ಗುರ್ಜಿತ್ ಕೌರ್ ಮೊದಲ ಗೋಲು ಗಳಿಸಿದರು. ತದನಂತರ ಆಕ್ರಮಣಕಾರಿ ಆಟವಾಡಿದ ಅರ್ಜೈಂಟೀನಾ ತಂಡದ ನೋಯೆಲ್ ಬ್ಯಾರಿಯೊನ್ಯೂವೊ ಪೆನಾಲ್ಟಿ ಶೂಟೌಟ್‌ನಲ್ಲಿ ಎರಡು ಗೋಲು ಗಳಿಸುವ ಮೂಲಕ ಅರ್ಜೇಂಟಿನಾಕ್ಕೆ ಮುನ್ನಡೆ ಗಳಿಸಿಕೊಟ್ಟರು. ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡ ಅರ್ಜೇಂಟಿನಾ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.

  ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 1-0 ಅಂತರದಿಂದ ಸದೆಬಡಿದಿದ್ದ ಮಹಿಳಾ ಹಾಕಿ ತಂಡ ಚಿನ್ನ ಗೆಲ್ಲುವ ಹಾಟ್​ ಫೇವರಿಟ್​​ ತಂಡಗಳಲ್ಲಿ ಒಂದಾಗಿತ್ತು. ಇಂಗ್ಲೆಂಡ್​ ವಿರುದ್ದ ಕಂಚು ಗೆದ್ದರೂ ಭಾರತೀಯ ಮಹಿಳಾ ಹಾಕಿ ತಂಡ ಇತಿಹಾಸ ನಿರ್ಮಿಸಿಲಿದೆ.

  ಪುರುಷರ ತಂಡಕ್ಕೂ ಸೆಮಿ ಫೈನಲ್​ನಲ್ಲಿ ಸೋಲು

  ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದಶಕಗಳ ನಂತರ ಸೆಮಿಫೈನಲ್ ತಲುಪಿದ್ದ ಭಾರತದ ಪುರುಷರ ಹಾಕಿ ತಂಡ ಫೈನಲ್ ತಲುಪುವ ಸುವರ್ಣಾವಕಾಶದಿಂದ ವಂಚಿತಗೊಂಡಿತು. ಬೆಲ್ಜಿಯಂ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 2-5 ಗೋಲುಗಳಿಂದ ಸೋಲನುಭವಿಸಿತು. ಪಂದ್ಯದ ಮುಕ್ಕಾಲು ಅವಧಿ ಸಮಬಲದ ಪೈಪೋಟಿ ನೀಡಿದ್ದ ಭಾರತ ತಂಡ ಕೊನೆಯ ಅವಧಿಯಲ್ಲಿ ಎದುರಾಳಿಗಳಿಗೆ ದಿಢೀರ್ ಮೂರು ಗೋಲು ಬಿಟ್ಟುಕೊಟ್ಟು ಸೋಲಪ್ಪಿತು. ಕಳೆದ ಬಾರಿಯ ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಬೆಲ್ಜಿಯಂ ತಂಡ ಈ ಗೆಲುವಿನೊಂದಿಗೆ ಸತತ ಎರಡನೇ ಬಾರಿ ಫೈನಲ್ ತಲುಪಿತು.

  ಭಾರತ ಈ ಸೆಮಿಫೈನಲ್ ಸೋತರೂ ಅದರ ಕಂಚಿನ ಪದಕದ ಆಸೆ ಜೀವಂತವಾಗಿದೆ. ಮತ್ತೊಂದು ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ಮತ್ತು ಜರ್ಮನಿ ತಂಡಗಳು ಮುಖಾಮುಖಿಯಾಗಲಿವೆ. ಇದರಲ್ಲಿ ಗೆದ್ದ ತಂಡವು ಚಿನ್ನದ ಪದಕಕ್ಕಾಗಿ ಬೆಲ್ಜಿಯಂ ತಂಡವನ್ನ ಎದುರುಗೊಳ್ಳಲಿದೆ. ಸೋತ ತಂಡದ ವಿರುದ್ಧ ಭಾರತ ಕಂಚಿನ ಪದಕಕ್ಕಾಗಿ ಸೆಣಸಲಿದೆ.

  ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ಎದುರು ಭರ್ಜರಿ ಜಯಗಳಿಸಿದ ಭಾರತದ ಕುಸ್ತಿಪಟು ರವಿ ದಹಿಯಾ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಖಚಿತವಾಗಿದೆ.

  ಇದನ್ನೂ ಓದಿ: ಆರು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ 680 ಸಿಎಪಿಎಫ್ ಸಿಬ್ಬಂದಿ: ರಾಜ್ಯಸಭೆಗೆ ಮಾಹಿತಿ ನೀಡಿದ ಸರ್ಕಾರ

  ಮತ್ತೊಬ್ಬ ಭಾರತದ ಕುಸ್ತಿಪಟು ದೀಪಕ್ ಪುನಿಯಾ ಪುರುಷರ ಫ್ರೀಸ್ಟೈಲ್ 86 ಕೆಜಿ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಅಮೆರಿಕದ ಡೇವಿಡ್ ಟೈಲರ್‌ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: